ಬುಧವಾರ, ಆಗಸ್ಟ್ 12, 2015

ಅಮೇರಿಕ ಸಂಯುಕ್ತ ಸಂಸ್ಥಾನ – USA


     
ಇತಿಹಾಸ-   ಮೂಲ ಅಮೆರಿಕನ್ನರು ಮತ್ತು ಯುರೋಪಿಯನ್ ನೆಲಸಿಗರು- ಸಂಯುಕ್ತ ಸಂಸ್ಥಾನದ ಮುಖ್ಯ ಭೂಪ್ರದೇಶದ ಸ್ಥಳೀಯರು ಹಾಗೂ ಅಲಾಸ್ಕಾದ ಮೂಲನಿವಾಸಿಗಳು ಏಷ್ಯಾದಿಂದ ವಲಸೆ ಬಂದವರೆಂದು ಹೇಳಲಾಗುತ್ತದೆ. ಅವರು ಕನಿಷ್ಠ ಪಕ್ಷ 12,000ದಿಂದ 40,000 ವರ್ಷಗಳಷ್ಟು ಹಿಂದಿನಿಂದಲೇ ವಲಸೆ ಬರಲಾರಂಭಿಸಿದ್ದರು. ಕೆಲವು, ಕೊಲಂಬಿಯನ್ ಪೂರ್ವದ ಮಿಸ್ಸಿಸ್ಸಿಪ್ಪಿಯನ್ ಸಂಸ್ಕೃತಿಯಂಥವು ಸುಧಾರಿತ ಕೃಷಿಗಾರಿಕೆ, ವೈಭವದ ವಾಸ್ತುಕಲೆ ಮತ್ತು ರಾಷ್ಟ್ರಮಟ್ಟದ ಸಮಾಜಗಳನ್ನು ಅಭಿವೃದ್ಧಿಪಡಿಸಿದವು. ಯುರೋಪಿಯನ್ನರು ಅಮೆರಿಕಾದಲ್ಲಿ ನೆಲೆಸಲಾರಂಭಿಸಿದ ನಂತರ ಅಲ್ಲಿಂದ ಅಮದಾದ ಸಿಡುಬಿನಂತಹ ಸಾಂಕ್ರಾಮಿಕ ಖಾಯಿಲೆಗಳಿಗೆ ತುತ್ತಾಗಿ ಲಕ್ಷಾಂತರ ಸ್ಥಳೀಯ ಅಮೆರಿಕನ್ನರು ಪ್ರಾಣ ಕಳೆದುಕೊಂಡರು. 1942ರಲ್ಲಿ ಜಿನೋವಾದ ಅನ್ವೇಷಕ ಕ್ರಿಸ್ಟೋಫರ್ ಕೊಲಂಬಸ್ನು ಸ್ಪಾನಿಷ್ ಅಧಿಪತ್ಯದ ಗುತ್ತಿಗೆಯಡಿಯಲ್ಲಿ ಹಲವು ಕೆರೆಬಿಯನ್ ದ್ವೀಪಗಳನ್ನು ತಲುಪಿ, ಸ್ಥಳೀಯ ನಿವಾಸಿಗಳೊಂದಿಗೆ ಮೊತ್ತಮೊದಲ ಸಂಪರ್ಕ ಸಾಧಿಸಿದನು. ಏಪ್ರಿಲ್ 2,1513ರಂದು ಸ್ಪಾನಿಷ್ ದಿಗ್ವಿಜಯಕಾರ ಜಾನ್ ಪೋನ್ಸ್ ಡಿ ಲಿಯೋನ್, ಯುರೋಪಿಯನ್ನನ ಆಗಮನವನ್ನು ದಾಖಲಿಸಿದ, ಯು.ಎಸ್. ಮುಖ್ಯ ಪ್ರದೇಶವಾಗಿರುವ ಲಾ ಫ್ಲೋರಿಡಾ" ಮೇಲೆ ಕಾಲಿರಿಸಿದನು.ಸ್ಪಾನಿಷ್ ನೆಲೆಗಳು ಇಂದಿನ ನೈರುತ್ಯ ಸಂಯುಕ್ತ ಸಂಸ್ಥಾನ ಭಾಗದಲ್ಲಿ ಮುಂದುವರೆಯಿತು ಮತ್ತು ಸಾವಿರಾರು ಜನರನ್ನು ಮೆಕ್ಸಿಕೋ ಮುಖಾಂತರ ಕರೆಸಿಕೊಂಡಿತು. ಫ್ರೆಂಚ್ ತುಪ್ಪುಳ ವ್ಯಾಪಾರಿಗಳು ಗ್ರೇಟ್ ಲೇಕ್ಸ್ ಸುತ್ತ ನ್ಯೂ ಫ್ರಾನ್ಸ್ನ್ನು ಸ್ಥಾಪಿಸಿದರು. ಕ್ರಮೇಣ ಫ್ರಾನ್ಸ್ ಉತ್ತರ ಅಮೆರಿಕಾದ ಒಳನಾಡಿನಿಂದ ಕೆಳಗೆ ಮೆಕ್ಸಿಕೋ ಕೊಲ್ಲಿಯವರೆಗೂ ತನ್ನ ಹಿಡಿತ ಸಾಧಿಸಿತು.ಮೊಟ್ಟಮೊದಲ ಯಶಸ್ವೀ ಬ್ರಿಟಿಷ್ ವಸಾಹತುಗಳೆಂದರೆ, 1607ರಲ್ಲಿ ಸ್ಥಾಪಿತವಾದ ಜೇಮ್ಸ್ಟೌನ್ ನಲ್ಲಿನವರ್ಜೀನಿಯಾ ಕಾಲೊನಿ ಮತ್ತು 1620ರಲ್ಲಿ ಸ್ಥಾಪನೆಗೊಂಡ ಪಿಲ್ಗ್ರಿಮ್ಸ್ ಪ್ಲೈಮೌತ್ ಕಾಲೊನಿ. 1628ರಲ್ಲಿ ಮಸಾಚುಯೆಟ್ಸ್ ಬೇ ಕಾಲೊನಿ ಸನದು ವಲಸೆಗಾರರ ಮಹಾಪೂರಕ್ಕೆ ಕಾರಣವಾಯಿತು; 1634 ವೇಳೆಗೆ ಕೆಲವು 10,000 ಪ್ಯುರಿಟನ್ನರಿಂದ ಹೊಸ ಇಂಗ್ಲೆಂಡ್ ನೆಲೆಗೊಂಡಿತು.ಅಮೆರಿಕನ್ ಕ್ರಾಂತಿ ಮತ್ತು 1610 ಮಧ್ಯೆ ಸುಮಾರು 50,000 ಅಪರಾಧಿಗಳು ಬ್ರಿಟನ್ ಅಮೆರಿಕನ್ ಕಾಲೊನಿಗೆ ಸ್ಥಳಾಂತರಗೊಂಡರು.1614 ಪ್ರಾರಂಭದಲ್ಲಿ ಹಡ್ಸನ್ ನದಿ ಕೆಳಪಾತ್ರದಲ್ಲಿ ಡಚ್ಚರು ತಮ್ಮ ವಸಾಹತನ್ನು ಸ್ಥಾಪಿಸಿಕೊಂಡರು. ಜೊತೆಗೆ ಮ್ಯಾನ್ಹಟನ್ ದ್ವೀಪದಲ್ಲಿ ನ್ಯೂ ಆಮ್ಸ್ಟರ್ಡಾಮ್ ನ್ನು ಕೂಡಾ ಸ್ಥಾಪಿಸಿತು. 1674ರಲ್ಲಿ ಇಂಗ್ಲೆಂಡ್ಗೆ ತನ್ನ ವಶದಲ್ಲಿದ ಅಮೆರಿಕಾ ಆಡಳಿತವನ್ನು ಬಿಟ್ಟುಕೊಟ್ಟಿತು ಮತ್ತು ನ್ಯೂ ನೆದರ್ಲ್ಯಾಂಡ್ ಪ್ರದೇಶವನ್ನು ನ್ಯೂಯಾರ್ಕ್ ಎಂದು ಹೊಸದಾಗಿ ಹೆಸರಿಸಿತು.1630 ಮತ್ತು 1680 ಮಧ್ಯೆ ದಕ್ಷಿಣದ ಕಡೆ ವಲಸೆ ಬಂದ ಮೂರರಲ್ಲಿ ಎರಡು ಭಾಗದ ವರ್ಜೀನಿಯಾ ವಲಸೆಗಾರರು ಕರಾರು ಕೂಲಿಗಳಾಗಿದ್ದರು.ಶತಮಾನ ಕಳೆಯುವ ಹೊತ್ತಿಗೆ ಆಫ್ರಿಕನ್ ಗುಲಾಮರು, ಜೀತದ ಕೆಲಸಕ್ಕೆ ಅತ್ಯಗತ್ಯವಾದರು.ಕೆರೋಲಿನಾಗಳ 1729 ವಿಭಜನೆ ಹಾಗೂ 1732 ಜಾರ್ಜಿಯಾ ವಸಾಹತೀಕರಣಗಳೊಂದಿಗೆ ಹದಿಮೂರು ಬ್ರಿಟಿಷ ವಸಾಹತುಗಳು ಸೇರಿ ಅಮೆರಿಕ ಸಂಯುಕ್ತ ಸಂಸ್ಥಾನದ ಸ್ಥಾಪನೆಯಾಯಿತು.ಆಂಗ್ಲರ ಪುರಾತನ ಹಕ್ಕುಗಳೆಡೆಗೆ ಹೆಚ್ಚುತ್ತಿದ್ದ ಆರಾಧನಾಭಾವ ಮತ್ತು ಗಣರಾಜ್ಯತ್ವಕ್ಕೆ ಇಂಬುಕೊಡುವ ಸ್ವ-ಸರ್ಕಾರದ ಬಗೆಗಿನ ಅರಿವಿನಿಂದಾಗಿ ಪ್ರತಿಯೊಂದೂ ಮುಕ್ತ ಚುನಾವಣೆಗಳ ಮೂಲಕ ಆಯ್ಕೆಗೊಂಡ ಸ್ಥಳೀಯ ಸರ್ಕಾರಗಳನ್ನು ಹೊಂದಿದ್ದವು. ಅಫಿಕನ್ ಗುಲಾಮರ ಮಾರಾಟವನ್ನು ಎಲ್ಲವೂ ಕಾನೂನು ಮಾನ್ಯ ಮಾಡಿದ್ದವು.ಅತೀ ಹೆಚ್ಚಿನ ಜನನ ಪ್ರಮಾಣ, ಕಡಿಮೆ ಮರಣ ಪ್ರಮಾಣ ಮತ್ತು ವಲಸೆಯ ಮುಂದುವರಿಕೆಯಿಂದಾಗಿ ವಸಾಹತಿನ ಜನಸಂಖ್ಯೆಯು ಏರುಗತಿಯಲ್ಲಿ ಬೆಳವಣಿಗೆಯನ್ನು ಕಂಡಿತು. 1730 ಮತ್ತು 1740ಕ್ರಿಶ್ಚಿಯನ್ ಪುನರ್ಸ್ಥಾಪನೆ ಚಳುವಳಿಯು ಗ್ರೇಟ್ ಅವೇಕನಿಂಗ್ ಎಂದು ಹೆಸರಾಯಿತು ಮತ್ತು ಇದು ಧರ್ಮ ಮತ್ತು ಧಾರ್ಮಿಕತೆ ಎರಡರ ಬಗ್ಗೆಯೂ ಆಸಕ್ತಿಯನ್ನು ಬೆಳೆಸುವುದಕ್ಕೆ ನಾಂದಿಯಾಯಿತು.
        ಫ್ರೆಂಚ್ ಮತ್ತು ಇಂಡಿಯನ್ ಯುದ್ಧದಲ್ಲಿ ಬ್ರಿಟಿಷ್ ಪಡೆಗಳು ಫ್ರೆಂಚರಿಂದ ಕೆನಡಾವನ್ನು ವಶಪಡಿಸಿಕೊಂಡವು. ಆದರೆ ಫ್ರಾಂಕೋಫೋನ್ ಜನರು ದಕ್ಷಿಣದ ವಸಾಹತಿನಿಂದ ರಾಜಕೀಯವಾಗಿ ದೂರವೇ ಉಳಿದರು. ಸ್ಥಳಾಂತರಗೊಂಡ ಮೂಲ ಅಮೆರಿಕನ್ನರನ್ನು ಹೊರತುಪಡಿಸಿ (ಅಮೆರಿಕನ್ ಇಂಡಿಯನ್ ಎಂದು ಜನಪ್ರಿಯವಾದ) ಹದಿಮೂರು ವಸಾಹತಿನ ಜನಸಂಖ್ಯೆಯು 1770ರಲ್ಲಿ 2.6 ಮಿಲಿಯನ್ಆಗಿತ್ತು. ಸುಮಾರು ಮೂರರಲ್ಲಿ ಒಂದು ಭಾಗ ಬ್ರಿಟನ್ನರು ಮತ್ತು ಐದರಲ್ಲಿ ಒಂದು ಭಾಗ ಅಮೆರಿಕದ ಕಪ್ಪು ಗುಲಾಮರಾಗಿದ್ದರು.[೨೯]ಬ್ರಿಟಿಷ್ ಕಂದಾಯಕ್ಕೆ ಒಳಗಾಗಿದ್ದರೂ ಕೂಡ ಅಮೆರಿಕನ್ ಕಾಲೋನಿಗಳು ಗ್ರೇಟ್ ಬ್ರಿಟನ್ನಿನ ಸಂಸತ್ತಿನಲ್ಲಿಪ್ರಾತಿನಿಧ್ಯವನ್ನು ಹೊಂದಿರಲಿಲ್ಲ.

ಸ್ವಾತಂತ್ರ್ಯ ಮತ್ತು ವಿಸ್ತರಣೆ -1760 ಮತ್ತು 1770 ಅಮೆರಿಕಾ ವಸಾಹತು ಮತ್ತು ಬ್ರಿಟಿಷರ ಮಧ್ಯದ ಕ್ರಾಂತಿಯ ಅವಧಿಯಲ್ಲಿನ ತಿಕ್ಕಾಟವು ನಂತರ 1775 ರಿಂದ 1781ರವರೆಗಿನ ಅಮೆರಿಕದ ಕ್ರಾಂತಿ ಸಮರಕ್ಕೆ ಕಾರಣವಾಯಿತು.ಜೂನ್ 4, 1775ರಂದು ಫಿಲಡೆಲ್ಫಿಯಾದಲ್ಲಿ ಸಂಧಿಸಿದ ಕಾಂಟಿನೆಂಟಲ್ ಕಾಂಗ್ರೆಸ್, ಜಾರ್ಜ್ ವಾಶಿಂಗ್ಟನ್ ನೇತೃತ್ವದಲ್ಲಿ ಕಾಂಟಿನೆಂಟಲ್ ಆರ್ಮಿಯನ್ನು ಹುಟ್ಟುಹಾಕಿತು."ಎಲ್ಲ ಮನುಷ್ಯರೂ ಸಮಾನರು"ಎಂದು ಘೋಷಿಸುವ ನಿರ್ದಿಷ್ಟ ಪರಕೀಯವಲ್ಲದ ಹಕ್ಕುಗಳನ್ನು ಸ್ವಾತಂತ್ರ್ಯ ಘೋಷಣೆಯಲ್ಲಿ ಸ್ವೀಕರಿಸಿತು. ಕರಡನ್ನು ಜುಲೈ 4, 1776ರಲ್ಲಿ ಥಾಮಸ್ ಜೆಫರ್ಸನ್ಸಿದ್ಧಪಡಿಸಿದರು. ದಿನವನ್ನು ಈಗ ಪ್ರತೀವರ್ಷವೂ ಅಮೆರಿಕದ ಸ್ವಾತಂತ್ರ್ಯ ದಿನ ಎಂದು ಆಚರಿಸಲಾಗುತ್ತಿದೆ. ಕ್ಷೀಣ ಸಾಮರ್ಥ್ಯದ ಫೆಡರಲ್ ಸರ್ಕಾರವನ್ನು 1777ರಲ್ಲಿ ಸ್ಥಾಪಿತವಾದಆರ್ಟಿಕಲ್ಸ್ ಆಫ್ ಕಾನ್ಫೆಡರೇಶನ್ 1789ರವರೆಗೂ ನಡೆಸಿತು. ಫ್ರೆಂಚ್ ಸಹಯೋಗದಲ್ಲಿ ಅಮೆರಿಕಾದ ಪಡೆಗಳು ಬ್ರಿಟಿಷರನ್ನು ಸೋಲಿಸಿದ ನಂತರ, ಗ್ರೇಟ್ ಬ್ರಿಟನ್ ಸಂಯುಕ್ತ ಸಂಸ್ಥಾನದ ಸ್ವಾತಂತ್ರ್ಯವನ್ನು ಮನಗಂಡಿತು ಮತ್ತು ಮಿಸ್ಸಿಸಿಪ್ಪಿ ನದಿ ಪಶ್ಚಿಮಕ್ಕೆ ಅಮೆರಿಕಾದ ಆಡಳಿತವು ಸ್ವಾಯತ್ತತೆಯನ್ನು ಪಡೆಯಿತು. ಕಂದಾಯದ ಅಧಿಕಾರದಿಂದ ಸಬಲ ರಾಷ್ಟ್ರೀಯ ಸರ್ಕಾರವನ್ನು ಸ್ಥಾಪಿಸಲು ಬಯಸಿದವರು 1787ರಲ್ಲಿ ಒಂದುಸಾಂವಿಧಾನಿಕ ಸಮ್ಮೇಳನವನ್ನು ಆಯೋಜಿಸಿದ್ದರು. ಸಂಯುಕ್ತ ಸಂಸ್ಥಾನದ ಸಂವಿಧಾನವು 1788ರಲ್ಲಿ ಅಧಿಕೃತವಾಯಿತು. ಮತ್ತು ಗಣರಾಜ್ಯದ ಮೊದಲ ಶಾಸನಸಭೆ, ಸದಸ್ಯರುಗಳ ಒಕ್ಕೂಟ ಸ್ಥಾಪನೆಯಾಯಿತು ಮತ್ತು ಅಧ್ಯಕ್ಷ ಜಾರ್ಜ್ ವಾಶಿಂಗ್ಟನ್ 1789ರಲ್ಲಿ ಅಧಿಕಾರ ಸ್ವೀಕರಿಸಿದರು. ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವ ನಿರ್ಬಂಧಗಳನ್ನು ತೆಗೆದುಹಾಕುವ ಮತ್ತು ಕಾನೂನು ರಕ್ಷಣೆ ಒದಗಿಸುವ ಹಕ್ಕುಗಳ ಮಸೂದೆಯು ಅಂಗೀಕೃತಗೊಂಡು, 1791ರಲ್ಲಿ ಜಾರಿಗೊಂಡಿತು.
            ಗುಲಾಮೀಪದ್ಧತಿಯೆಡೆಗೆ ಒಲವು ಹೆಚ್ಚುತ್ತಲೇ ಇತ್ತು; ಸಂವಿಧಾನದ ಒಂದು ನಿಯಮವು ಆಫ್ರಿಕನ್ ಗುಲಾಮೀ ಮಾರಾಟವನ್ನು 1808 ವರೆಗೆ ಮಾತ್ರ ರಕ್ಷಿಸಿತು.1780 ಮತ್ತು 1804 ಮಧ್ಯೆ ಉತ್ತರದ ರಾಜ್ಯಗಳು ಗುಲಾಮಗಿರಿಯನ್ನು ಕಿತ್ತುಹಾಕಿದವು. ತಮ್ಮ "ವಿಶಿಷ್ಟ ಸಮಾಜ"ವನ್ನು ಸಮರ್ಥಿಸಿಕೊಳ್ಳುವ ದಕ್ಷಿಣದ ಗುಲಾಮೀ ರಾಜ್ಯಗಳು ಇನ್ನೂ ಗುಲಾಮಗಿರಿಯನ್ನು ಅಪ್ಪಿಕೊಂಡಿದ್ದವು.ಎರಡನೇ ಮಹಾ ಜಾಗೃತಿ (great awakening) 1800ರಲ್ಲಿ ಪ್ರಾರಂಭವಾಯಿತು. ಇದು ಸಾಮಾಜಿಕ ಸುಧಾರಣಾ ಚಳುವಳಿ ಹಿನ್ನೆಲೆಯಾಗಿ ನಿರ್ಮೂಲನಾ ಚಳವಳಿಯೊಂದಿಗೆ ಕ್ರಿಸ್ತೀಕರಣಕ್ಕೆ (evangelicalism) ನಾಂದಿಯಾಯಿತು.
            ಅಮೆರಿಕನ್ನರ ಮಹಾತ್ವಾಕಾಂಕ್ಷೆಯು ಪಶ್ಚಿಮದೆಡೆ ವಿಸ್ತರಿಸಿದುದು ಇಂಡಿಯನ್ ಸಮರ ಸರಣಿಗೆ ಕಾರಣವಾಯಿತು. ಮತ್ತು ಇಂಡಿಯನ್ ಸ್ಥಳಾಂತರ ಕಾನೂನು ಮೂಲ ಸ್ಥಳೀಯರನ್ನು ತಮ್ಮ ಸ್ವಂತ ನೆಲದಿಂದ ಸ್ಥಳಾಂತರಗೊಳಿಸುವುದಕ್ಕೆ ಕಾರಣವಾಯಿತು. ಅಧ್ಯಕ್ಷ ಥಾಮಸ್ ಜೆಫರ್ಸನ್ ಅವರು 1803ರಲ್ಲಿ ಫ್ರೆಂಚ್ ಆಡಳಿತದಲ್ಲಿದ್ದ ಭಾಗಗಳನ್ನು ಲುಯಿಸಿಯಾನಾ ಖರೀದಿ ಮೂಲಕ ಖರೀದಿಸಿದ್ದು ದೇಶದ ಗಾತ್ರವನ್ನು ಸುಮಾರು ಎರಡರಷ್ಟಾಗಿಸಿತು. ಹಲವು ಕಾರಣಗಳಿಂದಾಗಿ ಬ್ರಿಟನ್ ವಿರುದ್ಧ ಘೋಷಿಸಿದ 1812 ಯುದ್ಧವು ಯು.ಎಸ್. ರಾಷ್ಟ್ರೀಯತೆಯನ್ನು ಮತ್ತಷ್ಟು ಬಲಗೊಳಿಸಿತು. ಫ್ಲೊರಿಡಾ ಮೇಲಿನ ಸಂಯುಕ್ತ ಸಂಸ್ಥಾನದ ಸರಣಿ ದಾಳಿಯಿಂದಾಗಿ ಸ್ಪೇನ್ ಅದನ್ನು ಬಿಟ್ಟುಕೊಡಬೇಕಾಗಿ ಬಂತು ಮತ್ತು ಇತರ ಕೊಲ್ಲಿ ತೀರದ ಪ್ರಾಂತ್ಯಗಳನ್ನು ಕೂಡಾ 1819ರಲ್ಲಿ ಬಿಟ್ಟುಕೊಟ್ಟಿತು. ಸಂಯುಕ್ತ ಸಂಸ್ಥಾನವು ಟೆಕ್ಸಾಸ್ ಗಣರಾಜ್ಯವನ್ನು 1845ರಲ್ಲಿ ವಶಪಡಿಸಿಕೊಂಡಿತು. ಸಮಯದಲ್ಲಿ ಮ್ಯಾನಿಫೆಸ್ಟ್ ಡೆಸ್ಟಿನಿ ಪರಿಕಲ್ಪನೆಯು ಜನಪ್ರಿಯವಾಯಿತು. 1846 ಬ್ರಿಟನ್ ಜೊತೆಗಿನ ಓರೆಗಾನ್ ಒಪ್ಪಂದವು ಅಮೆರಿಕದ ಈಗಿನ ವಾಯವ್ಯ ಪ್ರಾಂತ್ಯದ ಮೇಲೆ ಸಂಯುಕ್ತ ಸಂಸ್ಥಾನವು ಸ್ವಾಧೀನತೆಯನ್ನು ಸಾಧಿಸಿತು. 1848 ಮೆಕ್ಸಿಕನ್-ಅಮೆರಿಕನ್ ಸಮರದಲ್ಲಿ ಕ್ಯಾಲಿಫೋರ್ನಿಯವು ಸೋಲೊಪ್ಪಿಕೊಂಡಿತು ಮತ್ತು ಈಗಿನ ಅಮೆರಿಕದ ನೈರುತ್ಯ ಭಾಗಗಳು ವಶವಾದವು. 1848-49 ಕ್ಯಾಲಿಫೋರ್ನಿಯಾ ಗೋಲ್ಡ್ ರಶ್ನಿಂದಾಗಿ ಪಶ್ಚಿಮದ ವಲಸೆಗೆ ಉತ್ತೇಜನ ಸಿಕ್ಕಿತು.ಹೊಸ ರೈಲು ಮಾರ್ಗ ಸ್ಥಾಪನೆಯಿಂದಾಗಿ ವಲಸಿಗರಿಗೆ ಸ್ಥಳಾಂತರಗೊಳ್ಳಲು ಸುಲಭವಾಯಿತು ಮತ್ತು ಸ್ಥಳೀಯ ಅಮೆರಿಕನ್ನರ ಜೊತೆ ಸಂಘರ್ಷಗಳೂ ಜಾಸ್ತಿಯಾದವು.ಸರಿಸುಮಾರು ಅರ್ಧ ಶತಮಾನಗಳ ಕಾಲ ಚರ್ಮ, ಮಾಂಸ ಹಾಗೂ ರೇಲ್ವೇ ವಿಸ್ತರಣೆಯ ಕಾರಣಗಳಿಗಾಗಿ 40ಮಿಲಿಯನ್ ಅಮೆರಿಕನ್ ಕಾಡೆಮ್ಮೆಹಾಗೂ ಕಾಡುಕೋಣಗಳು ಹತವಾದವು. ಇಂಡಿಯನ್ನರ ಪ್ರಾಥಮಿಕ ಸಂಪನ್ಮೂಲವಾಗಿದ್ದ ಕೋಣಗಳ ವಿನಾಶವು ಹಲವು ಬುಡಕಟ್ಟು ಸಂಸ್ಕೃತಿಗಳಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದವು.
ಆಂತರಿಕ ಯುದ್ಧ ಮತ್ತು ಔದ್ಯಮೀಕರಣ - ಮುಕ್ತ ರಾಜ್ಯಗಳು ಮತ್ತು ಕೂಲಿಗಳ ಮಧ್ಯದ ತಿಕ್ಕಾಟವು ರಾಜ್ಯ ಮತ್ತು ಫೆಡರಲ್ ಸರ್ಕಾರ ಮಧ್ಯದ ವಾದಗಳನ್ನು ಆಧರಿಸಿದೆ. ಹಾಗೇ ಕೂಲಿಯ ದ್ವೇಷಯುತ ತಿಕ್ಕಾಟವು ರಾಜ್ಯಾದ್ಯಂತ ಹರಡುವುದಕ್ಕೂ ಕಾರಣವಾಯಿತು.ಗುಲಾಮಗಿರಿ ವ್ಯವಸ್ಥೆಯ ವಿರೋಧಿ ರಿಪಬ್ಲಿಕನ್ ಪಕ್ಷ ಅಭ್ಯರ್ಥಿ ಅಬ್ರಹಾಂ ಲಿಂಕನ್ 1860ರಲ್ಲಿ ಅಧ್ಯಕ್ಷನಾಗಿ ಆಯ್ಕೆಯಾದರು. ಅಧ್ಯಕ್ಷ ಅಬ್ರಹಾಂ ಲಿಂಕನ್ ಅಧಿಕಾರ ತೆಗೆದುಕೊಳ್ಳುವ ಮೊದಲು ಏಳು ಗುಲಾಮ ರಾಜ್ಯಗಳು ತಮ್ಮ ವಿಯೋಜನೆಯನ್ನು ಘೋಷಿಸಿದವು. ಇವುಗಳನ್ನು ಅಮೆರಿಕದ ಒಕ್ಕೂಟ ರಾಜ್ಯಗಳು ಮತ್ತು ಫೆಡರಲ್ ಸರ್ಕಾರವು ಅಕ್ರಮವಾಗಿ ನಿಭಾಯಿಸುತ್ತಿದ್ದವು. ಫೋರ್ಟ್ ಸಮ್ಟರ್ ಮೇಲೆ ಕಾನ್ಫ್ಹೆಡರೇಟ್ ದಾಳಿಯೊಂದಿಗೆ ಅಮೆರಿಕದ ಆಂತರಿಕ ಯುದ್ಧವು ಪ್ರಾರಂಭವಾಯಿತು ಮತ್ತು ನಾಲ್ಕು ಗುಲಾಮ ರಾಜ್ಯಗಳು ಕಾನ್ಫೆಡರಸಿಯನ್ನು ಸೇರಿದವು. ಲಿಂಕನ್ನರದಾಸ್ಯಮುಕ್ತಿಯ ಉದ್ಘೋಷಣೆಯು ಗುಲಾಮಗಿರಿಯನ್ನು ಕೊನೆಗೊಳಿಸುವಲ್ಲಿ ಯೂನಿಯನ್‌‌ನ್ನು ಬದ್ಧನಾಗಿಸಿತು. 1865 ಯೂನಿಯನ್ ವಿಜಯದ ನಂತರ ಸಂಯುಕ್ತ ಸಂಸ್ಥಾನದ ಸಂವಿಧಾನಕ್ಕೆ ಮೂರು ತಿದ್ದುಪಡಿಗಳನ್ನು ಮಾಡಿ ಸುಮಾರು ನಾಲ್ಕು ಮಿಲಿಯನ್ ಆಫ್ರಿಕಾದ ಅಮೆರಿಕನ್ ಗುಲಾಮರನ್ನು ಸ್ವತಂತ್ರರನ್ನಾಗಿಸಲಾಯಿತು ಅವರನ್ನು ನಾಗರಿಕರನ್ನಾಗಿಸಿ ಮತ ಚಲಾವಣೆಯ ಹಕ್ಕುಗಳನ್ನು ನೀಡಲಾಯಿತು. ಸಮರ ಮತ್ತು ತೀರ್ಮಾನಗಳು ಫೆಡರಲ್ ಶಕ್ತಿಯ ಸದೃಢ ಅಭಿವೃದ್ಧಿಗೆ ನಾಂದಿಯಾಯಿತು.
             ಲಿಂಕನ್ನರ ಕೊಲೆಯಿಂದಾಗಿ ರಿಪಬ್ಲಿಕನ್ ಮೂಲಸ್ವರೂಪ ಪುನರ್ನಿರ್ಮಾಣ ನಿಯಮವು ದಕ್ಷಿಣದ ರಾಜ್ಯಗಳ ನಿಯಮಾವಳಿಗಳ ಸಂಘಟನೆ ಮತ್ತು ಪುನರ್ಸ್ಥಾಪನೆಯಾಯಿತು. ಮತ್ತು ಅದೇ ವೇಳೆ ಹೊಸದಾಗಿ ಮುಕ್ತರಾದ ಗುಲಾಮರ ಹಕ್ಕುಗಳ ರಕ್ಷಣೆಯನ್ನೂ ಕೈಗೊಳ್ಳಲಾಯಿತು. 1876 ವಿವಾದಿತ ಅಧ್ಯಕ್ಷೀಯ ಚುನವಣೆಯು 1877 ಒಪ್ಪಂದದೊಂದಿಗೆ ಪುನ್ನಿರ್ಮಾಣವು ಕೊನೆಗೊಂಡಿತು. ಜಿಮ್ ಕ್ರೋವ್ ಕಾನೂನು ಹಲವು ಆಫ್ರಿಕನ್ ಅಮೆರಿಕನ್ನರ ಮತದಾನದ ಹಕ್ಕುಗಳನ್ನು ಕಸಿದುಕೊಂಡಿತು. ಉತ್ತರದಲ್ಲಿ ನಗರೀಕರಣದಿಂದಾಗಿ ಮತ್ತು ದಕ್ಷಿಣದಿಂದ ಅಭೂತಪೂರ್ವವಾಗಿ ಹರಿದು ಬಂದ ವಲಸೆಗಾರರ ಪ್ರವಾಹವು ಹಾಗೂ ಪೂರ್ವ ಯುರೋಪ್ನಿಂದಾಗಿ ದೇಶದ ಔದ್ಯಮೀಕರಣಅಭಿವೃದ್ಧಿಯಾಯಿತು. ವಲಸೆಗಾರ ಪ್ರವಾಹವು 1929 ವರೆಗೂ ಕಾರ್ಮಿಕರನ್ನು ಮತ್ತು ಅಮೆರಿಕ ಸಂಸ್ಕೃತಿಯನ್ನು ಪ್ರಸರಿಸಿತು. ರಾಷ್ಟ್ರೀಯ ಮೂಲಸೌಲಭ್ಯಗಳ ಬೆಳವಣಿಗೆಯು ಆರ್ಥಿಕ ಬೆಳವಣಿಗೆಯನ್ನು ಪ್ರಚೋದಿಸಿತು. 1867ರಲ್ಲಿ ರಷ್ಯಾದಿಂದ ಮಾಡಿದ ಅಲಾಸ್ಕಾ ಖರೀದಿಯು ದೇಶದ ಮುಖ್ಯಭೂಮಿಯ ವಿಸ್ತಾರವನ್ನು ಕೊನೆಗೊಳಿಸಿತು. 1890 ಗಾಯಗೊಂಡ ಮಂಡಿಯ ನರಮೇಧವು ಇಂಡಿಯನ್ ಸಮರಗಳಲ್ಲೇ ಬಹುಮುಖ್ಯವಾದ ಸೈನಿಕ ಘರ್ಷಣೆಯು ಅಮೆರಿಕಾದ ನಾಗರಿಕರ ಮುಂದಾಳತ್ವದಲ್ಲಿನ ಕ್ರಾಂತಿಯು ಹವಾಯಿಯ ಪೆಸಿಫಿಕ್ ಸಾಮ್ರಾಜ್ಯ ಸ್ಥಳೀಯ ಆಡಳಿತವನ್ನು 1893ರಲ್ಲಿ ಸೋಲಿಸಿತು ಹಾಗೂ ಸಂಯುಕ್ತ ಸಂಸ್ಥಾನವು 1898ರಲ್ಲಿ ದ್ವೀಪಸಮೂಹವನ್ನು ವಶಪಡಿಸಿಕೊಂಡಿತು. ಸ್ಪಾನಿಷ್ - ಅಮೆರಿಕನ್ ಸಮರದಲ್ಲಿನ ವಿಜಯದ ನಂತರ ಅದೇ ವರ್ಷವೇ ಸಂಯುಕ್ತ ಸಂಸ್ಥಾನವು ಜಗತ್ತಿನ ಅತ್ಯಂತ ಶಕ್ತಿಯುತ ರಾಷ್ಟ್ರ ಎಂದು ಗುರುತಿಸಿಕೊಂಡಿತು ಮತ್ತು ಫಿಲಿಪ್ಪೀನ್ಸ್, ಪ್ಯೂರ್ಟೋ ರಿಕೋ ಮತ್ತು ಗುವಾಮನ್ನು ವಶಪಡಿಸಿಕೊಂಡಿತು. ಅರ್ಧ ಶತಮಾನದ ನಂತರ ಫಿಲಿಪ್ಪೀನ್ಸ್ ಸ್ವಾತಂತ್ರ್ಯವನ್ನು ಪಡೆಯಿತು ಮತ್ತು ಪ್ಯೂರ್ಟೋ ರಿಕೋ ಮತ್ತು ಗುವಾಮ ಸಂಯುಕ್ತ ಸಂಸ್ಥಾನದ ಆಡಳಿತದಲ್ಲೇ ಉಳಿಯಿತು.
ಮೊದಲ ಜಾಗತಿಕ ಯುದ್ಧ, ಮಹಾ ಆರ್ಥಿಕ ಕುಸಿತ, ಮತ್ತು ಎರಡನೇ ಜಾಗತಿಕ ಯುದ್ಧ- 1914 ಮೊದಲ ಜಾಗತಿಕ ಯುದ್ಧ ಪ್ರಾರಂಭದಲ್ಲಿ ಸಂಯುಕ್ತ ಸಂಸ್ಥಾನವು ನಿರ್ಲಿಪ್ತವಾಗಿದ್ದಿತು. ಅಮೆರಿಕದ ಹೆಚ್ಚಿನ ಪ್ರಜೆಗಳು ಬ್ರಿಟಿಷ್ ಮತ್ತು ಫ್ರೆಂಚರಿಗೆ ಸಹಾನುಭೂತಿ ತೋರಿಸಿದರು, ಆದರೂ ಬಹಳಷ್ಟು ಜನರು ಅಮೆರಿಕದ ಭಾಗವಹಿಸುವಿಕೆಯನ್ನು ವಿರೋಧಿಸಿದರು. 1917ರಲ್ಲಿ ಸಂಯುಕ್ತ ಸಂಸ್ಥಾನವು ಒಕ್ಕೂಟವನ್ನು ಸೇರಿತು. ಕೇಂದ್ರ ಶಕ್ತಿಯ ವಿರುದ್ಧ ಪ್ರವಾಹವನ್ನು ತಿರುಗಿಸಿತು. ಲೀಗ್ ಆಫ್ ನೇಶನ್ಸ್ ಸಂಸ್ಥಾಪಿಸಿದ ವರ್ಸೈಲ್ ಒಪ್ಪಂದವನ್ನು ಸಮರದ ನಂತರ ಸಂಸತ್ತು ಅಂಗೀಕರಿಸಲಿಲ್ಲ. ಪ್ರತ್ಯೇಕತಾವಾದದ ಅಂಚಿನಲ್ಲಿ ಏಕಪಕ್ಷೀಯತೆ ನಿಯಮವನ್ನು ದೇಶವು ಹಿಂಬಾಲಿಸಿತು. 1920ರಲ್ಲಿ ಸ್ತ್ರೀ ಹಕ್ಕು ಚಳುವಳಿಯಿಂದಾಗಿ ಸಂವಿಧಾನದ ತಿದ್ದುಪಡಿಯು ಸ್ತ್ರೀಯರ ಮತದಾನ ಹಕ್ಕನ್ನು ಗೌರವಿಸಿತು. 1929 ವಾಲ್ಸ್ಟ್ರೀಟ್ ಕ್ರಾಶ್ನೊಂದಿಗೆರೋರಿಂಗ್ ಟ್ವೆಂಟೀಸ್ ಎಂಬ 1920 ದಶಕದ ಬೆಳವಣಿಗೆಯು ಕೊನೆಗೊಂಡಿತು. ಇದು ಮಹಾ ಅರ್ಥಿಕ ಕುಸಿತಕ್ಕೆ ನಾಂದಿಯಾಯಿತು. 1932 ಅಧ್ಯಕ್ಷೀಯ ಚುನಾವಣೆಯಲ್ಲಿ ಆರಿಸಿ ಬಂದಫ್ರಾಂಕ್ಲಿನ್ ಡಿ ರೂಸ್ವೆಲ್ಟ್ ಹೊಸ ನಿಯಮಗಳನ್ನು ತಂದರು. ನಿಯಮಾವಳಿಗಳು ಆರ್ಥಿಕತೆಯಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಹೆಚ್ಚಿಸಿತು. 1930 ಮಧ್ಯಕಾಲದಲ್ಲಿ ಡಸ್ಟ್ ಬೋವ್ಲ್ನಿಂದಾಗಿ ಹಲವಾರು ಕೃಷಿ ಸಮುದಾಯಗಳ ಬಡತನಕ್ಕೆ ಕಾರಣವಾಯಿತು ಮತ್ತು ಪಶ್ಚಿಮದ ವಲಸೆಗಾರರಿಗೆ ಹೊಸ ಉತ್ಸಾಹವನ್ನು ತುಂಬಿತು.
            ಸಂಯುಕ್ತ ಸಂಸ್ಥಾನವು ಎರಡನೇ ಮಹಾಯುದ್ಧ ಮೊದಲ ಹಂತದಲ್ಲಿ ಸಂಪೂರ್ಣವಾಗಿ ನಿರ್ಲಿಪ್ತತೆಯನ್ನು ಹೊಂದಿತ್ತು. 1939 ಸೆಪ್ಟೆಂಬರ್ನಲ್ಲಿ ನಾಝಿ ಜರ್ಮನಿಯು ಪೋಲಾಂಡ್ ಮೇಲೆ ದಂಡೆತ್ತಿ ಬಂದ ನಂತರ 1941 ಮಾರ್ಚ್ನಲ್ಲಿ ಲೆಂಡ್-ಲೀಸ್ಕಾರ್ಯಕ್ರಮದ ಮೂಲಕ ಸಂಯುಕ್ತ ಸಂಸ್ಥಾನವು ಒಕ್ಕೂಟಕ್ಕೆ ಸಾಮಗ್ರಿಗಳನ್ನು ಒದಗಿಸಲು ಪ್ರಾರಂಭಿಸಿತು. ಜಪಾನ್ ಸಾಮ್ರಾಜ್ಯವುಪರ್ಲ್ಹಾರ್ಬರ್ ಮೇಲೆ ಡಿಸೆಂಬರ್ 7, 1941ರಂದು ಆಕಸ್ಮಿಕ ದಾಳಿಯನ್ನು ನಡೆಸಿತು. ಇದು ಸಂಯುಕ್ತ ಸಂಸ್ಥಾನವು ಅಕ್ಷ ರಾಷ್ಟ್ರಗಳ ವಿರುದ್ಧದ ಒಕ್ಕೂಟವನ್ನು ಸೇರುವುದಕ್ಕೆ ಪ್ರೇರಿಸಿತು. ಸಮರದಲ್ಲಿನ ಭಾಗವಹಿಸುವಿಕೆಯು ಬಂಡವಾಳ ಹೂಡಿಕೆ ಮತ್ತು ಉದ್ಯಮಗಳ ಸಾಮರ್ಥ್ಯಕ್ಕೆ ಉತ್ತೇಜನವನ್ನು ನೀಡಿತು.

             ಯುದ್ಧದಲ್ಲಿ ಭಾಗವಹಿಸಿದ ಅನೇಕ ರಾಷ್ಟ್ರಗಳಿಗೆ ಹೋಲಿಸಿದರೆ ಅಮೇರಿಕವೊಂದೇ ಯುದ್ಧದ ನಂತರ ಶ್ರೀಮಂತ ರಾಷ್ಟ್ರವಾಗಿದ್ದುದು. ದೊಡ್ಡ ಪ್ರಮಾಣದ ಕಾಳಗಕ್ಕೆ ಆಯುಧಗಳನ್ನು ಸರಬರಾಜು ಮಾಡುವ ಮೂಲಕ ಸಂಯುಕ್ತ ಸಂಸ್ಥಾನವು ನಿಜಕ್ಕೂ ಶ್ರೀಮಂತವಾಯಿತು.[೩೬] ಬ್ರೆಟನ್ ವುಡ್ಸ್ ಮತ್ತು ಯಾಲ್ಟಾನಲ್ಲಿನ ಒಕ್ಕೂಟದ ಸಮ್ಮೇಳನವು ಅಂತರಾಷ್ಟ್ರೀಯ ಸಂಘಟನೆಗಳ ಹೊಸ ವ್ಯವಸ್ಥೆಯನ್ನು ಸ್ಥಾಪಿಸಿತು. ವ್ಯವಸ್ಥೆಯಿಂದಾಗಿಸಂಯುಕ್ತ ಸಂಸ್ಥಾನ ಮತ್ತು ಸೋವಿಯತ್ ಯೂನಿಯನ್ಗಳು ಜಗತ್ತಿನ ವಿದ್ಯಮಾನಗಳ ಕೇಂದ್ರಗಳಾಗಿ ಸ್ಥಾಪಿತಗೊಂಡವು. ಯುರೋಪ್ನಲ್ಲಿನ ವಿಜಯ ನಂತರ 1945ರಲ್ಲಿ ಅಂತರಾಷ್ಟ್ರೀಯ ಸಮ್ಮೇಳನವು ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ಸಂಯುಕ್ತ ಸಂಸ್ಥಾನದ ಸನ್ನದನ್ನು ಪ್ರಸ್ಥಾಪಿಸಿತು. ಇದು ಸಮರದ ನಂತರ ಕಾರ್ಯಪ್ರವೃತ್ತವಾಯಿತು. ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸಿದ ಮೊಟ್ಟಮೊದಲ ರಾಷ್ಟ್ರವಾದ ಸಂಯುಕ್ತ ಸಂಸ್ಥಾನವು ಜಪಾನಿನ ಹಿರೋಶಿಮಾ ಮತ್ತು ನಾಗಾಸಾಕಿಗಳ ಮೇಲೆ ಅದನ್ನು ಆಗಸ್ಟ್ನಲ್ಲಿ ಪ್ರಯೋಗಿಸಿತು. ಜಪಾನ್ ಸೆಪ್ಟೆಂಬರ್ ಎರಡರಂದು ಶರಣಾಗತವಾಯಿತು ಮತ್ತು ಸಮರವು ಕೊನೆಗೊಂಡಿತು.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ