ಬುಧವಾರ, ಆಗಸ್ಟ್ 12, 2015

ಸಾಮಾನ್ಯ ಜ್ಞಾನ (collecting)



ಸಾಮಾನ್ಯ ಜ್ಞಾನ .. ಪ್ರಚಲಿತ ಘಟನೆಗಳೊಂದಿಗೆ ...

691) ಇತ್ತೀಚೆಗೆ ಏಷ್ಯಾದಲ್ಲೇ ದೊಡ್ಡದು ಎನ್ನಲಾದ 140 ಅಡಿ ಎತ್ತರದ ಗುಂಡು ನಿರೋಧಕ ಶಿಲುಬೆಯೊಂದನ್ನು ಯಾವ ದೇಶದಲ್ಲಿ ಸ್ಥಾಪಿಸಲಾಗಿದೆ?                          ●.ಪಾಕಿಸ್ತಾನ
692)
ಇತ್ತೀಚೆಗೆ ಬ್ರಿಟನ್ ಸಸ್ಯಶಾಸ್ತ್ರಜ್ಞ ಮತ್ತು ಇತಿಹಾಸಕಾರರೊಬ್ಬರು 16ನೇ ಶತಮಾನಕ್ಕೆ ಸೇರಿದ ಸಸ್ಯಶಾಸ್ತ್ರದ ಪುಸ್ತಕವೊಂದರಲ್ಲಿ ಶೇಕ್ಸ್ಪಿಯರ್ ನೈಜ್ಯ ಚಿತ್ರವನ್ನು ಪತ್ತೆ ಹಚ್ಚಿದ್ದಾರೆ. ಅವರ ಹೆಸರೇನು?             ●.ಮಾರ್ಕ್ ಗ್ರಿಫಿತ್
693)
ಇತ್ತೀಚೆಗೆ ಬ್ರಿಟನ್ ಸಸ್ಯಶಾಸ್ತ್ರಜ್ಞ ಮತ್ತು ಇತಿಹಾಸಕಾರರಾದ ಮಾರ್ಕ್ ಗ್ರಿಫಿತ್ ರವರು ಪತ್ತೆ ಹಚ್ಚಿದ್ದ ಶೇಕ್ಸ್ಪಿಯರ್ ನೈಜ್ಯ ಚಿತ್ರವನ್ನೊಳಗೊಂಡಿದ್ದ 16ನೇ ಶತಮಾನಕ್ಕೆ ಸೇರಿದ ಸಸ್ಯಶಾಸ್ತ್ರದ ಪುಸ್ತಕದ ಹೆಸರೇನು? ಪುಸ್ತಕದ ರಚನಾಕಾರರು ಯಾರು?                           ●.ಜಾನ್ ಗೆರಾರ್ಡ್ ರಚಿಸಿದ್ದ ಹಾಗೂ 1598ರಲ್ಲಿ ಪ್ರಕಟವಾಗಿದ್ದದಿ ಹರ್ಬಲ್ ಒರರ ಜನರಲ್ ಹಿಸ್ಟರಿ ಆಫ್ ಪ್ಲಾಂಟ್ಸ್ಎಂಬ ಪುಸ್ತಕದ ಪುಟ ಸಂಖ್ಯೆ 1,484ರಲ್ಲಿ
694) ವಿಶ್ವದಲ್ಲೇ ಅತ್ಯಂತ ದೀರ್ಘ ಕಾಲದ ದೊರೆ ಎನಿಸಿರುವ 87 ಹರೆಯದ ದೊರೆ ಭುಮಿಬೊಲ್ ಅಡುಲ್ಯಡೆಜ್ ಯಾವ ದೇಶಕ್ಕೆ ಸಂಬಂಧಿಸಿದ್ದಾರೆ?                                                     ●.ಥಾಯ್ಲೆಂಡ್
695)
ಇತ್ತೀಚೆಗೆ ಜಪಾನ್ದೇಶದ ಪ್ರಶಸ್ತಿಯಾದಆರ್ಡರ್ ಆಫ್ ರೈಸಿಂಗ್ ಸನ್, ಗೋಲ್ಡ್ ಆಂಡ್ ಸಿಲ್ವರ್ ಸ್ಟಾರ್ಗೌರವಕ್ಕೆ ಭಾಜನರಾದ ಭಾರತೀಯ ಯಾರು?.    ●.ಭಾರತರತ್ನ ಪ್ರೊ.ಸಿ.ಎನ್.ಆರ್.ರಾವ್
696)
ಇತ್ತೀಚೆಗೆ ಭೂಕಂಪದಲ್ಲಿ ಧರೆಗುರುಳಿದ 'ಐತಿಹಾಸಿಕ ಧರಹರ ಟವರ್' ನೇಪಾಳ ದೇಶಕ್ಕೆ ಸಂಬಂಧಿಸಿದ್ದು?
697) ಪ್ರಸ್ತುತ ಕೆನಡಾ ದೇಶದ ಪ್ರಧಾನಿ ಯಾರು?                                  ●.ಸ್ಟೀಫನ್ ಹಾರ್ಪರ್
698) ಇತ್ತೀಚೆಗೆ ಸುಮಾರು 900 ವರ್ಷಗಳಷ್ಟು ಹಳೆಯದಾದ, ಭಾರತದಿಂದ ಸಾಗಿಸಲ್ಪಟ್ಟ ಖಜುರಾಹೋ ದೇವಾಲಯದೊಳಗಿದ್ದಶುಕ ಕನ್ನಿಕಾಶಿಲ್ಪಕಲಾಕೃತಿಯನ್ನು, 1970 ಯುನೆಸ್ಕೊ ಸಮಾವೇಶದ ನಿರ್ಧಾರಕ್ಕೆ ಅನುಗುಣವಾಗಿ ಮತ್ತೆ ಭಾರತಕ್ಕೆ ಹಿಂತಿರುಗಿಸಿದ ದೇಶ ಯಾವುದು?                                     ●.ಕೆನಡಾ
699) ಇತ್ತೀಚೆಗೆ ಸುಮಾರು 3500 ಎಕರೆಗಳಿಗೆ ವ್ಯಾಪಿಸಿ, ನೂರಾರು ವಾಹನಗಳು, ಮನೆಗಳನ್ನು ಭಸ್ಮ ಮಾಡಿದ ಭಾರಿ ಪ್ರಮಾಣದ ಕಾಳ್ಗಿಚ್ಚು ಕಂಡುಬಂದ ಕಾಜೋನ್ ಕಣಿವೆಯು ಯಾವ ದೇಶದಲ್ಲಿದೆ?           ●.ಕ್ಯಾಲಿಫೋರ್ನಿಯಾ
700)
ಇತ್ತೀಚೆಗೆ ಪ್ಲೂಟೊ ಗ್ರಹದಲ್ಲಿ ಸು.10 ಕೋಟಿ ವರ್ಷಗಳ ಹಿಂದೆಯೇ ಉದ್ಭವಿಸಿರಬಹುದೆಂದು ಅಂದಾಜಿಸಿರುವ,11 ಸಾವಿರ ಅಡಿ ಎತ್ತರದ ಹಿಮ ಪರ್ವತವನ್ನು ಪತ್ತೆ ಹಚ್ಚಿದ ನಾಸಾದ ಗಗನನೌಕೆಯ ಹೆಸರೇನು?     ●.ನ್ಯೂ ಹೊರೈಜನ್
701) ಇತ್ತೀಚೆಗೆಲಿಬರೇಶನ್ ವಾರ್ಎಂಬ ಪರಮೋಚ್ಛ ಗೌರವ ಪ್ರಶಸ್ತಿಯನ್ನು ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಪ್ರದಾನ ಮಾಡಿದ ದೇಶ ಯಾವುದು?                     ●.ಬಾಂಗ್ಲಾದೇಶ.
702) ಬಾಂಗ್ಲಾದೇಶದ ಪ್ರಸ್ತುತ ಅಧ್ಯಕ್ಷರು ಯಾರು?                                                               ●.ಅಬ್ದುಲ್ ಹಮೀದ್.
703) ಇತ್ತೀಚಿನ ವಿಶ್ವಸಂಸ್ಥೆಯ ಹಸಿವಿಗೆ ಸಂಬಂಧಿಸಿದ ಆಹಾರ ಅಭದ್ರತೆಯ ಸ್ಥಿತಿಯ ವಾರ್ಷಿಕ ವರದಿಯ ಪ್ರಕಾರ, ಭಾರತದಲ್ಲೇ ಅತಿ ಹೆಚ್ಚು ಅಂದರೆ 11.64 ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದಾರೆ.ನಂತರದ ಸ್ಥಾನದಲ್ಲಿ ಚೀನಾ ಇದೆ.
704)
ಡೆನ್ಮಾರ್ಕ್ ದೇಶದ ರಾಷ್ಟ್ರೀಯ ಪಕ್ಷಿ ಯಾವುದು?                                          ●.ಕೋಗಿಲೆ.
705) ರಾತ್ರಿಯ ವೇಳೆಯಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಿರುವ ದೇಶ ಯಾವುದು?          ●.ಬುರುಂಡಿ.
706)
ಇಟಲಿ, ಬೆಲ್ಜಿಯಂ, ನ್ಯೂಝಿಲೆಂಡ್ ದೇಶಗಳಲ್ಲಿ 18 ವರ್ಷದೊಳಗಿನವರು ಪಟಾಕಿ ಹೊಡೆಯುವಂತಿಲ್ಲ.
707)
ಇತ್ತೀಚೆಗೆ 'ವಿಶ್ವಸಂಸ್ಥೆ ತರಬೇತಿ ಮತ್ತು ಸಂಶೋಧನಾ ಸಂಸ್ಥೆಯ (ಯುನಿಟರ್)' ಮುಖ್ಯಸ್ಥರಾಗಿ ನೇಮಕಗೊಂಡ ಭಾರತೀಯ ಯಾರು?                                           ●.ನಿಖಿಲ್ ಸೇಥ್.
708) ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಂಡವರು ಯಾರು?                    ●.ಓಂಪ್ರಕಾಶ್.
709) ವರ್ಷದ ಪ್ರತಿಷ್ಟಿತ ಸ್ಟಾಕ್ ಹೋಂ ಜಲಪ್ರಶಸ್ತಿ (ಜಲ ನೊಬೆಲ್) ಯಾರಿಗೆ ಲಭಿಸಿದೆ?            ●.ರಾಜೇಂದ್ರ ಸಿಂಗ್
710) ಪ್ರಪಂಚದ ಪ್ರಥಮಬುರುಡೆನೆತ್ತಿ ಕಸಿನಡೆಸಿದ ಕೀರ್ತಿಗೆ ಪಾತ್ರವಾದ ದೇಶ ಯಾವುದು?         ●.ಅಮೆರಿಕ
711) ಇತ್ತೀಚೆಗೆ ಅಮೆರಿಕದ ಶ್ವೇತಭವನ ನೀಡುವಬದಲಾವಣೆಯ ರೂವಾರಿ’ (ಚಾಂಪಿಯನ್ಆಫ್ಚೇಂಜ್‌) ಪ್ರಶಸ್ತಿಗೆ ಆಯ್ಕೆಯಾದವರು ಯಾರು?                     ●.ಭಾರತ ಮೂಲದ ಸುನೀತಾ ವಿಶ್ವನಾಥ್
712) ಪತ್ನಿಗೆ ಹೆರಿಗೆಯಾದಾಗ ಪತಿಗೆ ಹೆರಿಗೆ ರಜೆಯನ್ನು ನೀಡುವ ಏಕೈಕ ದೇಶ ಯಾವುದು?                    ●.ಆಸ್ಟ್ರೇಲಿಯಾ
713)
ಬೋಹೆಡ್ಜಾತಿಯ ತಿಮಿಂಗಿಲ 200ಕ್ಕೂ ಹೆಚ್ಚು ವರ್ಷಗಳ ಕಾಲ ಬದುಕುತ್ತವೆ. ಅವು ಜಗತ್ತಿನಲ್ಲಿ ಅತಿ ಹೆಚ್ಚು ವರ್ಷ ಬದುಕಬಲ್ಲ ಸಸ್ತನಿಗಳಾಗಿವೆ.     
714) ಪ್ರಸ್ತುತ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ಅಧ್ಯಕ್ಷರು ಯಾರು?                 ●.ಟಕೆಹಿಕೊ ನಕಾವೊ
715) ಉದ್ದಿಮೆ ವಹಿವಾಟು ಆರಂಭಿಸಲು ಭಾರತವನ್ನು ಸುಲಲಿತ ತಾಣವನ್ನಾಗಿ ಪರಿವರ್ತಿಸುವುದೂ ಸೇರಿದೆ. ಉದ್ದಿಮೆಗಳಿಗೆ ಪೂರಕ ವಾತಾವರಣ ಕಲ್ಪಿಸುವಲ್ಲಿ ಸದ್ಯಕ್ಕೆ ಭಾರತವು ವಿಶ್ವದಲ್ಲಿ 149ನೇ ಸ್ಥಾನದಲ್ಲಿ ಇದೆ. ವಿಶ್ವದ ಅತ್ಯಂತ ಭ್ರಷ್ಟ ದೇಶಗಳ ಸಾಲಿನಲ್ಲಿಯೂ ಭಾರತ ಇದೇ ಸ್ಥಾನಮಾನ ಹೊಂದಿದೆ.
716) ನಿಂಬೆ ಹಣ್ಣಿನ ತವರೂರು ಯಾವುದು?                           ●.ಭಾರತ.
717)
ಬೆಂಗಳೂರು ಅರಮನೆಯನ್ನು ಯಾವ ಕಟ್ಟಡದ ಪ್ರೇರಣೆಯಿಂದ ನಿರ್ಮಿಸಲಾಗಿದೆ?    ●.ವಿಂಡ್ಸರ್ ಕ್ಯಾಸ್ಟಲ್
718) ಇತ್ತೀಚೆಗೆ 'ಕೈಟ್ ಆಫ್ ಲಿಜನ್ ಆಫ್ ಆನರ್' ಗೌರವ ಪ್ರಶಸ್ತಿಯನ್ನು ಪಡೆದ ಭಾರತೀಯ ಯಾರು?
                                ●.
ಬಾಲಿವುಡ್ ನಟ ಶಾರುಖ್ ಖಾನ್
719) ಭಾರತದ ಯಾವ ರಾಜ್ಯದ ಹೆಸರು ಅಕ್ಷರಶಃ 'ದೇವರ ಸನ್ನಿಧಿ' ಎಂಬ ಅರ್ಥ ಕೊಡುತ್ತದೆ?            ●.ಹರ್ಯಾಣ.
720) ನಾವು ವಾಸಿಸಿರುವ ಭೂಮಿ ಒಂದು ಆಯಸ್ಕಾಂತ ಎಂದು ಕಂಡು ಹಿಡಿದವರು         ●.ವಿಲಿಯಂ ಗಿಲ್ಬರ್ಟ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ