ಶುಕ್ರವಾರ, ಮೇ 22, 2015

ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮ

ಶಿಕ್ಷಣ- ವರ್ಜೀನಿಯಾ ವಿಶ್ವವಿದ್ಯಾನಿಲಯದಂಥಹ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಸಂಯುಕ್ತ ಸಂಸ್ಥಾನದ 80%ರಷ್ಟು ಕಾಲೇಜು ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಥಾಮಸ್ ಜೆಫರ್ಸನ್ ಸಂಸ್ಥಾಪಿಸಿದ ಒಂದು ಜಾಗತಿಕ ಸಾಂಪ್ರದಾಯಿಕ ಜಾಲತಾಣ.
ಅಮೆರಿಕದ ಸಾರ್ವಜನಿಕ ಶಿಕ್ಷಣವು ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳಿಂದ ನಡೆಸಲ್ಪಡುತ್ತದೆ ಹಾಗೂ ಫೆಡರಲ್ ನಿಧಿಯ ಪರಿಮಿತಿಯಲ್ಲಿಸಂಯಕ್ತ ಸಂಸ್ಥಾನದ ಶಿಕ್ಷಣ ಇಲಾಖೆ ನಿಯಮಕ್ಕೆ ಒಳಪಟ್ಟಿರುತ್ತದೆ. ಸಾಮಾನ್ಯವಾಗಿ ಎಲ್ಲ ರಾಜ್ಯಗಳಲ್ಲಿ ಮಕ್ಕಳು ತಮ್ಮ ಆರು ಅಥವಾ ಏಳನೇ ವಯಸ್ಸಿನಿಂದ (ಸಾಮಾನ್ಯವಾಗಿ ಕಿಂಡರ್ಗಾರ್ಟನ್ ಅಥವಾ ಮೊದಲ ದರ್ಜೆಗೆ) ಹದಿನೆಂಟನೇ ವರ್ಷದವರೆಗೆ (ಸಾಮಾನ್ಯವಾಗಿ ಹನ್ನೆರಡನೇ ದರ್ಜೆಯಿಂದ ಪ್ರೌಢಶಾಲೆ ಕೊನೆಯವರೆಗೆ) ಶಾಲೆಗೆ ಹಾಜರಾಗಬೇಕು. ಕೆಲವು ರಾಜ್ಯಗಳಲ್ಲಿ ಹದಿನಾರು ಅಥವಾ ಹದಿನೇಳನೇ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಶಾಲೆಯನ್ನು ತೊರೆಯುವುದಕ್ಕೆ ಅನುಮತಿ ಇದೆ. ಸುಮಾರು 12%ರಷ್ಟು ಮಕ್ಕಳು ಪ್ರಾಂತೀಯ ಅಥವಾ ಅಸಂಘಟಿತ ಖಾಸಗಿ ಶಾಲೆಗಳಿಗೆ ಸೇರಿದ್ದಾರೆ. ಕೇವಲ 2%ರಷ್ಟು ಮಕ್ಕಳಿಗೆ ಮನೆಯೇ ಶಾಲೆಯಾಗಿದೆ. ಸಂಯುಕ್ತ ಸಂಸ್ಥಾನದಲ್ಲಿ ಹಲವು ಸ್ಪರ್ಧಾತ್ಮಕ ಖಾಸಗಿ ಮತ್ತು ಸಾರ್ವಜನಿಕ ಉನ್ನತ ಶಿಕ್ಷಣ ಶೈಕ್ಷಣಿಕ ಸಂಸ್ಥೆಗಳಿವೆ. ಹಾಗೆಯೆ ಮುಕ್ತ ನೋಂದಣಿ ನಿಯಮದಡಿ ಸ್ಥಳೀಯ ಸಮುದಾಯ ಕಾಲೇಜುಗಳೂ ಇವೆ. ಇಪ್ಪತ್ತೈದು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಕ ಅಮೆರಿಕನ್ನರಲ್ಲಿ 84.6% ಪ್ರೌಢಶಾಲಾ ಪದವಿ ಪಡೆದಿದ್ದಾರೆ, 52.6%ರಷ್ಟು ಜನರು ಕಾಲೇಜುಗಳಿಗೆ ಹಾಜರಾಗಿದ್ದಾರೆ, 27.2%ರಷ್ಟು ಜನರು ಪದವಿ ಪಡೆದಿದ್ದಾರೆ ಮತ್ತು 9.6%ರಷ್ಟು ಜನರು ಉನ್ನತ ಪದವಿ ಶಿಕ್ಷಣ ಹೊಂದಿದ್ದಾರೆ. ಇಲ್ಲಿಯ ಮೂಲಸಾಕ್ಷರತೆಯ ದರವು ಸರಿಸುಮಾರು 99% ಆಗಿದೆ. ಸಂಯುಕ್ತ ರಾಷ್ಟ್ರಗಳಲ್ಲಿನ ಶೈಕ್ಷಣಿಕ ಸೂಚ್ಯಾಂಕದಲ್ಲಿ ಸಂಯುಕ್ತ ಸಂಸ್ಥಾನದ ಮಟ್ಟವು 0.97ಇದ್ದು ಪ್ರಪಂಚದಲ್ಲಿ ಹನ್ನೆರಡನೇ ಸ್ಥಾನಕ್ಕೆ ಪೈಪೋಟಿ ನಡೆಸಿದೆ.
ಆರೋಗ್ಯ - ಸಂಯುಕ್ತ ಸಂಸ್ಥಾನದಲ್ಲಿನ ಆಯುಷ್ಯ ಪ್ರಮಾಣವು 77.8 ವರ್ಷವಾಗಿದೆ[ . ಇದು ಪಶ್ಚಿಮ ಯುರೋಪಿಗಿಂತ ಒಂದು ವರ್ಷ ಕಡಿಮೆಯಾಗಿದೆ. ನಾರ್ವೆ, ಸ್ವಿಝರ್ಲ್ಯಾಂಡ್ ಮತ್ತು ಕೆನಡಾ ದೇಶಗಳಿಗಿಂತ ಮೂರರಿಂದ ನಾಲ್ಕು ವರ್ಷಗಳಷ್ಟು ಕಡಿಮೆಯಾಗಿದೆ. ಎರಡು ಶತಮಾನಗಳಿಂದೀಚೆಗೆ ದೇಶದ ಆಯುಷ್ಯ ಪ್ರಮಾಣದ ದರ್ಜೆಯು 11ನೇ ಸ್ಥಾನದಿಂದ 42ನೇ ಸ್ಥಾನಕ್ಕಿಳಿದಿದೆ. ಸ್ಥಳಾಧಾರದ ಮೇಲೆ ಶಿಶು ಮರಣ ದರವು, 221ದೇಶಗಳಿಗೆ ಹೋಲಿಸಿದರೆ ಸಂಯುಕ್ತ ಸಂಸ್ಥಾನವು 42ನೇ ಸ್ಥಾನದಲ್ಲಿದೆ. ಎಲ್ಲ ಪಶ್ಚಿಮ ಯೂರೋಪ್ ದೇಶಗಳ ಹಿಂದಿನ ಸ್ಥಾನವಿದು.] ಸಂಯುಕ್ತ ಸಂಸ್ಥಾನದಲ್ಲಿ ಕ್ಯಾನ್ಸರ್ನಿಂದ ಬದುಕುಳಿದವರ ಸಂಖ್ಯೆ ಜಗತ್ತಿನಲ್ಲೇ ಅತೀ ಹೆಚ್ಚಿನದಾಗಿದೆ ಸರಿಸುಮಾರು ಮೂರರಲ್ಲಿ ಒಂದು ಭಾಗದ ಯುವ ಜನರು ಬೊಜ್ಜು ಮೈಯುಳ್ಳವರಾಗಿದ್ದಾರೆ. ಇನ್ನುಳಿದ ಮೂರು ಭಾಗದ ಜನರು ಅತೀ ತೂಕದವರಾಗಿದ್ದಾರೆ. ಸ್ಥೂಲಕಾಯದ ದರವು ಔದ್ಯಮಿಕ ಜಗತ್ತಿನಲ್ಲಿ ಅತೀಹೆಚ್ಚಿನದಾಗಿದೆ. ಇದು ಕಳೆದ ದಶಮಾನದ ಕೊನೆಯ ಸಮಯದಲ್ಲಿ ದ್ವಿಗುಣವಾಗಿದೆ. ಸ್ಥೂಲಕಾಯಕ್ಕೆ ಸಂಬಂಧಿಸಿದ ಎರಡನೇ ವರ್ಗದ ಸಿಹಿಮೂತ್ರರೋಗವು ಸಾಂಕ್ರಾಮಿಕ ಎಂದು ಆರೋಗ್ಯ ಪರಿಣಿತರು ಹೇಳುತ್ತಾರೆ.  ಸಂಯುಕ್ತ ಸಂಸ್ಥಾನದ ಅಪಕ್ವ ವಯಸ್ಸಿನ ಗರ್ಭಧಾರಣೆಯ ದರವು ಪ್ರತೀ 1,000 ಮಹಿಳೆಯರಿಗೆ 79.8% ಆಗಿದೆ. ದರವು ಪ್ರಾನ್ಸ್ನಲ್ಲಿಯ ಪರಿಸ್ಥಿತಿಗಿಂತ ನಾಲ್ಕು ಪಟ್ಟು ಹೆಚ್ಚು ಮತ್ತು ಜರ್ಮನಿಯ ಪರಿಸ್ಥಿತಿಗಿಂತ ಐದು ಪಟ್ಟು ಹೆಚ್ಚಾಗಿದೆ. ಗರ್ಭಪಾತವು ಅವಶ್ಯಕ ಎಂಬಂತಹ ಸಮಯದಲ್ಲಿ ಕಾನೂನು ಅದಕ್ಕೆ ಅವಕಾಶ ನೀಡುತ್ತಿದ್ದು ಉಳಿದಂತೆ ಇದು ಅತೀ ವಿವಾದಿತ ವಿಷಯವಾಗಿದೆ. ಹಲವು ರಾಜ್ಯಗಳು ಪ್ರಕ್ರಿಯೆಗೆ ಸಾರ್ವಜನಿಕ ನಿಧಿ ನೀಡುವುದನ್ನು ನಿಷೇಧಿಸಿವೆ ಹಾಗೆಯೇ ತಡವಾಗಿ ಗರ್ಭಪಾತ ಮಾಡಿಸಿಕೊಳ್ಳುವುದನ್ನು ನಿರ್ಬಂಧಿಸಿವೆ ಮತ್ತು ಅಪ್ರಾಪ್ತರಿಗೆ ಗರ್ಭಪಾತ ಮಾಡಿಸಲು ಪೋಷಕರ ಒಪ್ಪಿಗೆ ಅಗತ್ಯ ಹಾಗೂ ಪ್ರಕ್ರಿಯೆಗಾಗಿ ನಿಗಧಿತ ಸಮಯವನ್ನು ನಿರ್ಧಾರ ಪೂರ್ವ ಕಾಯುವಿಕೆಯ ಸಮಯವಾಗಿ ಅಧಿಕೃತ ಕಾನೂನಾಗಿಸಿದೆ. ಇದೇವೇಳೆ ಗರ್ಭಪಾತದ ದರವು ಕಡಿಮೆಯಾಗುತ್ತಿದ್ದು 1,000 ಸಜೀವ ಜನನ ಪ್ರಮಾಣಕ್ಕೆ 241 ಗರ್ಭಪಾತದ ಪ್ರಮಾಣವಿದೆ. ಮತ್ತು ಹಲವು ಪಶ್ಚಿಮ ದೇಶಗಳಿಗಿಂತ ಗರಿಷ್ಠವಾದ ಗರ್ಭಪಾತದ ಪ್ರಮಾಣವು 15-44 ವರ್ಷದ 1,000 ಮಹಿಳೆಯರಲ್ಲಿ 15 ಇದೆ.         ಸಂಯುಕ್ತ ಸಂಸ್ಥಾನದ ಆರೋಗ್ಯ ಕಾಳಜಿ ವ್ಯವಸ್ಥೆಗಾಗಿ ಅತಿಹೆಚ್ಚು ಖರ್ಚು ಮಾಡುತ್ತಿದೆ. ಇದನ್ನು ತಲಾ ಖರ್ಚು ಮತ್ತು ಜಿಡಿಪಿಯ ಶೇಕಡಾವಾರು ಮೂಲಕ ಅಳೆಯಬಹುದಾಗಿದೆ.ವಿಶ್ವಆರೋಗ್ಯ ಸಂಸ್ಥೆ ಸಂಘಟನೆಯು ಸಂಯುಕ್ತ ಸಂಸ್ಥಾನದ ಆರೋಗ್ಯ ವ್ಯವಸ್ಥೆಯನ್ನು ಉತ್ತಮ ಕಾಳಜಿಯುಳ್ಳ ವ್ಯವಸ್ಥೆಯೆಂದು 2000ದಲ್ಲಿ ಘೋಷಿಸಿತು. ಆದರೇ ಒಟ್ತಾರೆ ನಿರ್ವಹಣೆಯಲ್ಲಿ 37ನೆಯದೆಂದು ಘೋಷಿಸಿತು.
ಸಂಯುಕ್ತ ಸಂಸ್ಥಾನವು ರೋಗಗಳಿಗೆ ಔಷಧಗಳನ್ನು ಕಂಡುಹಿಡಿಯುವಲ್ಲಿ ಮೊದಲ ದೇಶವಾಗಿದೆ. 2004ರಲ್ಲಿ ಉದ್ಯಮೇತರ ಕ್ಷೇತ್ರವು ಯುರೋಪ್ ತಲಾ ಆದಾಯಕ್ಕಿಂತ ಮೂರು ಪಟ್ಟು ಹೆಚ್ಚು ಖರ್ಚನ್ನು ಜೈವಿಕ ಔಷಧಗಳ ಸಂಶೋಧನೆಗಾಗಿ ವೆಚ್ಚ ಮಾಡಿದೆ. ಉಳಿದ ಅಭಿವೃದ್ಧಿಯುತ ದೇಶಗಳಂತೆ ಆರೋಗ್ಯ ಕಾಳಜಿಯ ವ್ಯಾಪ್ತಿಯು ಸಂಯುಕ್ತ ಸಂಸ್ಥಾನದಲ್ಲಿ ಸಾರ್ವತ್ರಿಕವಾಗಿಲ್ಲ. 2004ರಲ್ಲಿ ಖಾಸಗಿ ವಿಮೆಯಿಂದ 36%ರಷ್ಟನ್ನು ವೈಯುಕ್ತಿಕ ಆರೋಗ್ಯ ವೆಚ್ಚವೂ, 15% ಖಾಸಗಿ ವೈಯುಕ್ತಿಕೇತರ ಹಣವೂ ಮತ್ತು ಉಳಿದ 44%ರಷ್ಟನ್ನು ಫೆಡರಲ್, ರಾಜ್ಯ, ಸ್ಥಳೀಯ ಸರ್ಕಾರಗಳು ಪಾವತಿಸಿವೆ.[೧೬೨] 2005ರಲ್ಲಿ ಒಟ್ಟೂ ಜನಸಂಖ್ಯೆಯಲ್ಲಿ 46.6 ಮಿಲಿಯನ್‌‌ ಅಂದರೆ 15.9%ರಷ್ಟು ಜನರು ವಿಮೆಗೆ ಒಳಪಟ್ಟಿಲ್ಲ ಇದು 2001 ಪ್ರಮಾಣಕ್ಕಿಂತ 5.4 ಮಿಲಿಯನ್ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಉದ್ಯೋಗ ಪ್ರಾಯೋಜಿತ ಆರೋಗ್ಯ ವಿಮೆಯು ಹೆಚ್ಚಿನ ಅಮೆರಿಕನ್ನರಲ್ಲಿ ಕಡಿಮೆಯಾಗಿದ್ದುದು, ವಿಮೆ ಹೊಂದಿಲ್ಲದ ಮತ್ತು ವಿಮೆ ಹೊಂದುತ್ತಿರುವ ಜನಸಂಖ್ಯೆಯ ನಡುವೆ ಅತಿ ಹೆಚ್ಚಿನ ವ್ಯತ್ಯಾಸವಿದ್ದದ್ದು ಅಮೇರಿಕಾ ರಾಜಕೀಯ ವಿವಾದಾಂಶವಾಗಿತ್ತು. ಅಮೆರಿಕನ್ ಜರ್ನಲ್ ಆಫ್ ಪಬ್ಲಿಕ್ ಹೆಲ್ತ್ನಲ್ಲಿ ಪ್ರಕಟವಾದ ಹಾರ್ವರ್ಡ್ ಮೂಲದ ಅದ್ಯಯನವು ಅಂದಾಜಿಸಿರುವಂತೆ ಸಂಯುಕ್ತ ಸಂಸ್ಥಾನದಲ್ಲಿನ ಪ್ರತೀವರ್ಷದ ಸುಮಾರು 45,000 ಮರಣವು ಲಕ್ಷಗಟ್ಟಲೆ ಆರೋಗ್ಯ ವಿಮೆಯನ್ನು ಜೊತೆಗಿರಿಸಿಕೊಂಡಿದೆ.
2006ರಲ್ಲಿ ಮಸ್ಸಾಚುಸೆಟ್ಸ್ ರಾಜ್ಯವು ಸಾರ್ವತ್ರಿಕ ಆರೋಗ್ಯ ವಿಮೆಯನ್ನು ಅಧಿಕೃತವಾಗಿಸುವಲ್ಲಿ ಮೊದಲ ರಾಜ್ಯವಾಗಿದೆ.

ಅಪರಾಧ ಮತ್ತು ಕಾನೂನು ಪ್ರಾಬಲ್ಯ - ಸಂಯುಕ್ತ ಸಂಸ್ಥಾನದಲ್ಲಿ ಕಾನೂನನ್ನು ಕಾಪಾಡುವುದು ಸ್ಥಳೀಯ ಪೋಲೀಸರು ಮತ್ತು ಶೆರಿಫ್ ಇಲಾಖೆಗಳ ಜೊತೆಗೆ ರಾಜ್ಯ ಪೋಲೀಸರು ಕೂಡಾ ವಿಸ್ತ್ರತ ಸೇವೆಯನ್ನು ನೀಡುತ್ತಿದ್ದಾರೆ. ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್ಬಿಐ) ಮತ್ತು ಯು.ಎಸ್. ಮಾರ್ಶಲ್ಸ್ ಸರ್ವೀಸ್ನಂತಹ ಫೆಡರಲ್ ಏಜೆನ್ಸಿಗಳು ವಿಶೇಷ ಕರ್ತವ್ಯವನ್ನು ಹೊಂದಿವೆ. ಫೆಡೆರಲ್ ಮಟ್ಟದಲ್ಲಿ ಮತ್ತು ಸಾಮಾನ್ಯವಾಗಿ ಎಲ್ಲ ರಾಜ್ಯಗಳಲ್ಲೂ ನ್ಯಾಯಶಾಸ್ತ್ರವು ಸಾಮಾನ್ಯ ಕಾನೂನು ಪದ್ಧತಿಯಲ್ಲಿ ಆಚರಿಸಲ್ಪಡುತ್ತದೆ. ರಾಜ್ಯ ನ್ಯಾಯಾಲಯವು ಅಪರಾಧೀ ವಿಚಾರಣೆಗಳನ್ನು ಕೈಗೊಳ್ಳುತ್ತದೆ. ಫೆಡರಲ್ ನ್ಯಾಯಾಲಯವು ಕೆಲವೇ ವಿಶಿಷ್ಟವಾದ ಅಪರಾಧಗಳನ್ನು ರಾಜ್ಯವ್ಯವಸ್ಥೆಯಿಂದ ಮೇಲ್ಮನವಿ ಸಲ್ಲಿಸಲ್ಪಟ್ಟ ಮೊಕದ್ದಮೆಗಳ ವಿಚಾರಣೆಯನ್ನು ನಡೆಸುತ್ತದೆ.
            ಅಭಿವೃದ್ಧಿಯುತ ದೇಶಗಳಲ್ಲಿ ಸಂಯುಕ್ತ ಸಂಸ್ಥಾನವು ಸುಮಾರು ಸರಾಸರಿ ಮಟ್ಟದ ಅಪರಾಧಗಳು ಮತ್ತು ವಿಶೇಷವಾಗಿ ಗರಿಷ್ಠಮಟ್ಟದ ನರಹಂತಕರು ಹಾಗೂಬಂದೂಕಿನ ಬಳಕೆ ಇದೆ. 2007ರಲ್ಲಿ 100,000 ಜನರಿಗೆ 5.6 ಕೊಲೆಗಳು ನಡೆದಿವೆ. ಇದು ನೆರೆಯ ದೇಶವಾದ ಕೆನಡಾಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಿದೆ. ಸಂಯುಕ್ತ ಸಂಸ್ಥಾನದ ನರಹತ್ಯೆಯ ದರವು 1991 ಮತ್ತು 1999 ಮಧ್ಯೆ 42%ಕ್ಕೆ ಇಳಿದಿದೆ ಹಾಗೂ ಇದು ಈವರೆಗೆ ಅದೇ ಮಟ್ಟವನ್ನು ಕಾಯ್ದುಕೊಂಡಿದೆ. ಬಂದೂಕಿನ ಪರವಾನಗಿ ಕಾನೂನು ರಾಜಕೀಯ ಚರ್ಚೆಗೆ ಕಾರಣವಾಗಿದೆ.
            ಸಂಯುಕ್ತ ಸಂಸ್ಥಾನವು ಜಗತ್ತಿನಲ್ಲಿ ಅತೀಹೆಚ್ಚು ಕಾರಾಗೃಹವಾಸ ದರವನ್ನು ]ದಾಖಲಿಸಿದ ಮತ್ತು ಅತೀ ಹೆಚ್ಚು ಕಾರಾಗೃಹವಾಸ ಅನುಭವಿಸಿದ ಜನಸಂಖ್ಯೆಯನ್ನು ಹೊಂದಿದ ದೇಶವಾಗಿದೆ. 2008 ಪ್ರಾರಂಭದ ಹೊತ್ತಿಗೆ, 2.3 ಮಿಲಿಯನ್‌‌ಗಿಂತಲೂ ಹೆಚ್ಚು ಜನರು ಕಾರಾಗೃಹವಾಸಿಗಳಾಗಿದ್ದರು. ಇದು ಪ್ರತಿ ನೂರು ಯುವಕರಲ್ಲಿ ಒಂದಕ್ಕಿಂತ ಹೆಚ್ಚಾಗಿತ್ತು. ಈಗಿನ ದರವು 1980 ಅಂಕಿ ಅಸಂಖ್ಯೆಗಿಂತ ಸುಮಾರು ಏಳು ಬಾರಿ ಹೆಚ್ಚಿನದಾಗಿದೆ. ಆಫ್ರಿಕನ್ ಅಮೆರಿಕನ್ ಪುರುಷರು, ಬಿಳಿಯ ಪುರುಷರ ದರಕ್ಕೆ ಹೋಲಿಸಿದರೆ ಆರು ಪಟ್ಟು ಹೆಚ್ಚು ಸೆರೆವಾಸ ಹಾಗೂ ಮೂಲದಲ್ಲಿ ಸ್ಪಾನಿಷ್ಮಾತನಾಡುವ ಹಿಸ್ಪಾನಿಕ್ ಪುರಷರಿಗಿಂತ ಮೂರು ಪಟ್ಟು ಹೆಚ್ಚಿನ ಸೆರೆವಾಸ ಅನುಭವಿಸಿದ್ದಾರೆ.
2006ರಲ್ಲಿ ಯು.ಎಸ್ನಲ್ಲಿ ಬಂಧಿಸಲ್ಪಟ್ಟ ವ್ಯಕ್ತಿಗಳ ಸಂಖ್ಯೆಯು ಪೊಲಂಡ್ನಲ್ಲಿಯ ಅಂಕಿಅಂಶಗಳಿಗಿಂತ ಮೂರುಪಟ್ಟು ಹೆಚ್ಚಿತ್ತು. ಇದು ಆರ್ಗನೈಸೇಷನ್ಫಾರ್ ಎಕನಾಮಿಕ್ಕೋ ಆಪರೇಷನ್ಅಂಡ್ಡೆವೆಲಪ್ಮೆಂಟ್ (OECD) ಸದಸ್ಯ ರಾಷ್ಟ್ರಗಳಲ್ಲೇ ಎರಡನೆಯ ಸ್ಥಾನ ಹೊಂದಿದೆ. ದೇಶದ ಕಾರಗೃಹವಾಸದ ದರವು ಅತೀಹೆಚ್ಚಿರುವುದರ ಕಾರಣವೆಂದರೆ ಶಿಕ್ಷೆಯ ತೀರ್ಪು ಮತ್ತು ಮದ್ಯವ್ಯಸನದ ನಿಯಮಾವಳಿಯಾಗಿದೆ. ಹಲವು ಪಶ್ಚಿಮದ ರಾಷ್ಟ್ರಗಳಿಂದ ರದ್ದುಗೊಳಿಸಲಾಗಿದೆಯಾದರೂ ಮರಣದಂಡನೆಯನ್ನು ಸಂಯುಕ್ತ ಸಂಸ್ಥಾನದ ಮೂವತ್ತಾರು ರಾಜ್ಯಗಳಲ್ಲಿ ಹಾಗೂ ಕೆಲವು ಫೆಡರಲ್ ಮತ್ತು ಮಿಲಿಟರಿ ಅಪರಾಧಗಳಿಗಾಗಿ ನೀಡಲಾಗುತ್ತದೆ. 1976ರಲ್ಲಿ ಸಂಯುಕ್ತ ಸಂಸ್ಥಾನದ ಸರ್ವೋಚ್ಛ ನ್ಯಾಯಾಲಯವು ನಾಲ್ಕು ವರ್ಷಗಳ ತಾತ್ಕಾಲಿಕ ನಿಷೇಧದ ನಂತರ ಮರಣ ದಂಡನೆಯನ್ನು ಪುನರ್ಸ್ಥಾಪಿಸಿದೆ. 1,000ಕ್ಕೂ ಹೆಚ್ಚು ಅಪರಾಧಿಗಳನ್ನು ಗಲ್ಲಿಗೇರಿಸಲಾಗಿದೆ. 2006ರಲ್ಲಿ ಜಗತ್ತಿನ ಆರನೇ ಅತೀ ಹೆಚ್ಚು ಶಿರಚ್ಛೇದಕರ ಪಟ್ಟಿಯಲ್ಲಿ ಚೀನಾ, ಪಾಕಿಸ್ತಾನ, ಇರಾಕ್ ಮತ್ತು ಸುಡಾನ್ನ್ನು ಹಿಂಬಾಲಿಸುತ್ತಿದೆ. ನ್ಯೂ ಮೆಕ್ಸಿಕೋವನ್ನು ಹಿಂಬಾಲಿಸಿ, 2007ರಲ್ಲಿ ನ್ಯೂ ಜೆರ್ಸಿಯು 1976 ಸರ್ವೋಚ್ಛ ನ್ಯಾಯಾಲಯದ ತೀರ್ಪಿನ್ನು ಅನುಸರಿಸಿ ಮರಣ ದಂಡನೆಯನ್ನು ಶಾಸನಾತ್ಮಕವಾಗಿ ನಿಷೇಧಿಸಿದ ಮೊಟ್ಟ ಮೊದಲ ರಾಜ್ಯವಾಯಿತು.


ಸಂಸ್ಕೃತಿ - ಸಂಯುಕ್ತ ಸಂಸ್ಥಾನವು ಬಹು ಸಾಂಸ್ಕೃತಿಕ ದೇಶವಾಗಿದೆ. ವಿವಿಧ ಜನಾಂಗದ ಗುಂಪುಗಳ, ಸಂಪ್ರದಾಯಗಳ ಮತ್ತು ಮೌಲ್ಯಗಳ ವಿಶಾಲ ವೈವಿಧ್ಯದ ತವರಾಗಿದೆ. ತುಂಬ ಕಡಿಮೆ ಪ್ರಮಾಣದ ಸ್ಥಳೀಯ ಅಮೆರಿಕನ್ನರು ಮತ್ತು ಸ್ಥಳೀಯ ಹವಾಯಿ ಜನರುನ್ನು ಹೊರತುಪಡಿಸಿ, ಸುಮಾರು ಎಲ್ಲಾ ಅಮೆರಿಕನ್ನರೂ ಅಥವಾ ಅವರ ಪೂರ್ವಜರೂ ಕಳೆದ ಐದು ಶತಮಾನಗಳಿಂದ ವಲಸೆ ಬಂದವರಾಗಿರುತ್ತಾರೆ.ಸಾಮಾನ್ಯವಾಗಿ ಎಲ್ಲಾ ಅಮೆರಿಕನ್ನರ ಸಂಸ್ಕೃತಿಯೂ (ಮುಖ್ಯ ವಾಹಿನಿಯ ಅಮೆರಿಕದ ಸಂಸ್ಕೃತಿಯು) ಆಫ್ರಿಕಾದ ಕೂಲಿಗಳ ಸಂಪ್ರದಾಯಗಳಂಥ ಹಲವು ಪ್ರಭಾವಗಳ ಜೊತೆಗೆ ಯುರೋಪಿಯನ್ ವಲಸೆಗಾರರ ಸಂಪ್ರದಾಯಗಳಂಥ ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವಕ್ಕೆ ಒಳಪಟ್ಟಿದೆ. ತೀರಾ ಇತ್ತೀಚೆಗೆ ಏಷ್ಯಾದಿಂದ ಮತ್ತು ವಿಶೇಷವಾಗಿಲ್ಯಾಟಿನ್ ಅಮೆರಿಕಾದಿಂದ ಬಂದ ವಲಸೆಗಾರರು ಸಾಂಸ್ಕೃತಿಕ ಸಮ್ಮಿಳನಕ್ಕೆ ಕಾರಣವಾಗಿದ್ದಾರೆ. ಇದನ್ನು ವಲಸೆಗಾರರು ಮತ್ತು ತಮ್ಮ ಸಂತತಿಯನ್ನು ಪುನರ್ಒಗ್ಗೂಡಿಸಿಕೊಳ್ಳುವ ಸಾಂಸ್ಕೃತಿಕ ಗುಣಲಕ್ಷಣಗಳ ಸಮ್ಮಿಶ್ರ ಕುಡಿಕೆ ಮತ್ತು ಸಂಕರ ಕುಡಿಕೆ ಎಂದು ವಿವರಿಸಲಾಗಿದೆ.
ಗೀರ್ಟ್ ಹಾಫ್ಸ್ಟೀಡ್ ಅವರ ಸಾಂಸ್ಕೃತಿಕ ಕವಲಿನ ವಿಶ್ಲೇಷಣೆಯಂತೆ, ಸಂಯುಕ್ತ ಸಂಸ್ಥಾನವು ಇತರೆಲ್ಲ ದೇಶದ ಅಧ್ಯಯನಕ್ಕಿಂತ ಅತೀ ಹೆಚ್ಚು ವೈಯಕ್ತಿಕವಾದದ ಅಂಕವನ್ನು ಹೊಂದಿದೆ. ಇದೇ ವೇಳೆ ಮುಖ್ಯವಾಹಿನಿಯ ಸಂಸ್ಕೃತಿಯು ಸಂಯುಕ್ತ ಸಂಸ್ಥಾನವನ್ನು ವರ್ಗವಿಲ್ಲದ ಸಮಾಜವನ್ನಾಗಿ ಮಾಡಿದೆ. ದೇಶದ ಸಾಮಾಜಿಕತೆ, ಭಾಷೆ ಮತ್ತು ಮೌಲ್ಯಗಳು ಮಧ್ಯೆ ಗಮನಾರ್ಹವಾದ ವ್ಯತ್ಯಾಸವನ್ನು ವಿದ್ವಾಂಸರು ಗುರುತಿಸಿದ್ದಾರೆ. ಅಮೆರಿಕದ ಮಧ್ಯ ಮತ್ತು ದುಡಿಯುವ ವರ್ಗವು ಆಧುನಿಕ ಸ್ತ್ರೀವಾದ, ಪರಿಸರವಾದ ಮತ್ತು ಬಹುಸಾಂಸ್ಕೃತಿಯತೆಯಂತಹ ಸಮಕಾಲೀನ ಸಾಮಾಜಿಕ ಧೋರಣೆಯನ್ನು ಹೊಂದಿದೆ. ಅಮೆರಿಕನ್ನರ ಸ್ವಂತ ಕಲ್ಪನೆಗಳು, ಸಾಮಾಜಿಕ ದೃಷ್ಟಿಕೋನಗಳು ಮತ್ತು ಸಾಂಸ್ಕೃತಿಕ ನಿರೀಕ್ಷೆಗಳು ಅವರ ಕೆಲಸಗಳ ಜೊತೆ ಅಸಹಜವಾದ ಸಮೀಪ ಹಂತದ ಸಂಬಂಧವನ್ನು ಹೊಂದಿದೆ.  ಅದೇ ವೇಳೆ ಅಮೆರಿಕನ್ನರ ಸಮಾಜೋಆರ್ಥಿಕ ಸಾಧನೆಯ ಉನ್ನತ ಮೌಲ್ಯಗಳು, ಸಾಧಾರಣ ಅಥವಾ ಸರಾಸರಿಯಾಗಿ ಸಕಾರಾತ್ಮಕ ಗುಣಲಕ್ಷಣಗಳನ್ನು ಹೊಂದಿವೆ.  ಅಮೆರಿಕನ್ನರು ಅನುಭವಿಸುವ ಉತ್ತಮ ಸಾಮಾಜಿಕ ವ್ಯವಸ್ಥೆ ಹಾಗೂ ಅಮೆರಿಕದ ಕನಸುಗಳು ವಲಸೆಗಾರರನ್ನು ಆಕರ್ಷಿಸಲು ಪ್ರಮುಖ ಪಾತ್ರವನ್ನು ವಹಿಸಿದೆ. ಕೆಲವು ವಿದ್ವಾಂಸರು ವಿಶ್ಲೇಷಿಸುವಂತೆ ಸಂಯುಕ್ತ ಸಂಸ್ಥಾನವು ಪಶ್ಚಿಮ ಯೂರೋಪ್ ಮತ್ತು ಕೆನಡಾಗಳಿಗಿಂತ ಉತ್ತಮ ಸಾಮಾಜಿಕ ವ್ಯವಸ್ಥೆಯನ್ನು ಹೊಂದಿದೆ. 
            ಸ್ತ್ರೀಯರು ಬಹುಪಾಲು, ಮನೆಯ ಹೊರಗಡೆ ಕೆಲಸ ಮಾಡುತ್ತಾರೆ ಮತ್ತು ಪದವಿಯನ್ನು ಹೊಂದಿರುತ್ತಾರೆ.[೧೮೮] 2005ರಲ್ಲಿ 28%ರಷ್ಟು ಕುಟುಂಬಗಳು ಮದುವೆಯಾಗಿ ಮಕ್ಕಳಿಲ್ಲದ ದಂಪತಿಗಳಾಗಿರುವ ವ್ಯವಸ್ಥೆಯಲ್ಲಿದ್ದಾರೆ.[೧೮೯] ಸಲಿಂಗ ಮದುವೆಯು ವಿವಾದಾತ್ಮಕವಾಗಿದೆ. ಕೆಲವು ರಾಜ್ಯಗಳ ಸಿವಿಲ್ ಯೂನಿಯನ್ಗಳು ಲಿಯೂ ಆಫ್ ಮ್ಯಾರೇಜ್ಗೆ ಅನುಮತಿ ನೀಡಿದೆ. 2003 ಹೊತ್ತಿಗೆ ನಾಲ್ಕು ರಾಜ್ಯಗಳ ಸರ್ವೋಚ್ಛ ನ್ಯಾಯಾಲಯವು ಅಸಾಂವಿಧಾನಿಕ ಸಲಿಂಗ ಮದುವೆಯನ್ನು ನಿರ್ಬಂಧಿಸಿದೆ. ಇದೇ ವೇಳೆ ಹನ್ನೆರಡಕ್ಕೂ ಹೆಚ್ಚು ರಾಜ್ಯಗಳಲ್ಲಿನ ಮತದಾರರು ಸಲಿಂಗ ಕಾಮದ ಆಚರಣೆಯ ಸಾಂವಿಧಾನಿಕ ನಿರ್ಬಂಧವನ್ನು ಒಪ್ಪಿದ್ದಾರೆ. 2009ರಲ್ಲಿ ಮೊಟ್ಟಮೊದಲು ವೆರ್ಮಾಂಟ್, ಮೈನೆ ಮತ್ತು ನ್ಯೂ ಹ್ಯಾಂಪ್ಶೈರ್ ರಾಜ್ಯಗಳು ಸಮಲೈಂಗಿಕತೆಗೆ ಶಾಸನಾತ್ಮಕ ಕ್ರಮಗಳ ಮೂಲಕ ಅನುಮತಿಸಿದೆ.
ಜನಪ್ರಿಯ ಮಾಧ್ಯಮ -ಜಗತ್ತಿನ ಮೊದಲ ಚಲನಚಿತ್ರದ ಪ್ರದರ್ಶನವನ್ನು ಥಾಮಸ್ ಎಡಿಸನ್ ಕೈನೆಟೋಸ್ಕೋಪ್ನ್ನ ಉಪಯೋಗಿಸಿಕೊಂಡು ನ್ಯೂಯಾರ್ಕ್ ಸಿಟಿಯಲ್ಲಿ 1894ರಲ್ಲಿ ನಡೆಸಲಾಯಿತು. ಮುಂದಿನ ವರ್ಷ ನ್ಯೂಯಾರ್ಕ್ನಲ್ಲಿ ಮೊದಲ ವಾಣಿಜ್ಯಿಕ ಚಲನಚಿತ್ರ ಪ್ರದರ್ಶನವನ್ನು ಕೈಗೊಳ್ಳಲಾಯಿತು. ಮತ್ತು ಸಂಯುಕ್ತ ಸಂಸ್ಥಾನವು ಶತಮಾನದಲ್ಲಿ ವಾಕ್‌‍ಚಿತ್ರಗಳ ಬೆಳಣಿಗೆಗೆ ಮುಂದಾಳತ್ವ ವಹಿಸಿತು. 20ನೇ ಶತಮಾನದಲ್ಲಿ ಕ್ಯಾಲಿಫೋರ್ನಿಯಾದ ಹಾಲಿವುಡ್ ಸುತ್ತಮುತ್ತ ಸಂಯುಕ್ತ ಸಂಸ್ಥಾನದ ಚಲನಚಿತ್ರ ಉದ್ಯಮವು ನೆಲೆಯಾಯಿತು. ಚಲನಚಿತ್ರ ವ್ಯಾಕರಣ ಬೆಳವಣಿಗೆಗೆ ನಿರ್ದೇಶಕರಾದ ಡಿ.ಡಬ್ಲ್ಯೂ. ಗ್ರಿಫಿತ್ಕಾರಣರಾದರು ಮತ್ತು ಓರ್ಸನ್ ವೆಲ್ಲೆಸ್ ಸಿಟಿಜನ್ ಕೇನ್ (೧೯೪೧), ಎಲ್ಲ ಸಮಯದ ಅತ್ಯುತ್ತಮ ಚಲನಚಿತ್ರವೆಂದು ಅಂಗೀಕರಿಸಲ್ಪಟ್ಟಿದೆ.ಅಮೆರಿಕದ ಚಿತ್ರತಾರೆಗಳಾದಂತಹ ಜಾನ್ ವಾಯ್ನ್ ಮತ್ತು ಮರ್ಲಿನ್ ಮನ್ರೋರವರು ಪೂಜನೀಯ ವ್ಯಕ್ತಿಗಳಾದರು. ಅದೇವೇಳೆ ನಿರ್ಮಾಪಕರಾದ ವಾಲ್ಟ್ ಡಿಸ್ನೆ ಅನಿಮೇಟೆಡ್ ಚಿತ್ರಕ್ಕೂ ಮತ್ತುವಾಣಿಜ್ಯಿಕ ಚಿತ್ರ ನಿರ್ಮಾಣದಲ್ಲೂ ಮುಖ್ಯ ವ್ಯಕ್ತಿಗಳಾದರು. ಹಾಲಿವುಡ್ ಮುಖ್ಯ ಚಲನಚಿತ್ರ ಸ್ಟುಡಿಯೋಗಳು ಇತಿಹಾಸದಲ್ಲಿ ವಾಣಿಜ್ಯಿಕವಾಗಿ ಯಶಸ್ವಿಯಾದ ಸ್ಟಾರ್ ವಾರ್ (1977) ಮತ್ತುಟೈಟಾನಿಕ್ (1997)ನಂತಹ ಚಲನಚಿತ್ರಗಳನ್ನು ತಯಾರಿಸಿದವು. ಇಂದು ಜಾಗತಿಕ ಚಲನಚಿತ್ರ ಜಗತ್ತನ್ನು ಹಾಲಿವುಡ್ ನಿಯಂತ್ರಿಸುತ್ತಿದೆ.
            ಅಮೆರಿಕನ್ನರು ಜಗತ್ತಿನಲ್ಲೇ ಅತೀ ಹೆಚ್ಚು ದೂರದರ್ಶನ ವೀಕ್ಷಕರಾಗಿದ್ದಾರೆ. ಮತ್ತು ಸರಾಸರಿ ವೀಕ್ಷಣೆಯ ಅವಧಿಯು ನಿರಂತರವಾಗಿ ಏರುತ್ತಾ 2006ರಲ್ಲಿ ಪ್ರತಿ ದಿನಕ್ಕೆ ಐದು ಗಂಟೆಯಷ್ಟಾಗಿದೆ. ನಾಲ್ಕು ಮುಖ್ಯ ಪ್ರಸಾರ ಜಾಲಗಳು ವಾಣಿಜ್ಯ ಮೂಲದವು. ಅಮೆರಿಕನ್ನರು ಬಾನುಲಿ ಕಾರ್ಯಕ್ರಮವನ್ನು ಸುಮಾರು ಪ್ರತಿದಿನಕ್ಕೆ ಎರಡೂವರೆ ಗಂಟೆಗಳಷ್ಟು ಕಾಲ ಕೇಳುತ್ತಾರೆ. ಇದು ಕೂಡಾ ಹೆಚ್ಚಾಗಿ ವಾಣಿಜ್ಯೀಕರಣಗೊಂಡಿದೆ. ಇನ್ನೊಂದು ಹಂತದಲ್ಲಿ ಅಂತರ್ಜಾಲ ದ್ವಾರಗಳು ಮತ್ತು ಅಂತರ್ಜಾಲ ಹುಡುಕುವ ಸಾಧನಗಳಿವೆ. ಜನಪ್ರಿಯವಾದ ಜಲತಾಣಗಳೆಂದರೆ ಫೇಸ್ಬುಕ್, ಯೂಟ್ಯೂಬ್, ಮೈಸ್ಪೇಸ್,ವಿಕಿಪೀಡಿಯಾ, ಕ್ರೇಗ್ಲಿಸ್ಟ್ ಮತ್ತು ಈಬೇಗಳಾಗಿವೆ.
 
            `ಆಫ್ರಿಕನ್ ಅಮೆರಿಕನ್ ಸಂಗೀತ ಲಯ ಮತ್ತು ಸಾಹಿತ್ಯ ಶೈಲಿಯು ಅಮೆರಿಕನ್ ಸಂಗೀತ ಮೇಲೆ ಗಂಭೀರವಾಗಿ ಪ್ರಭಾವ ಬೀರಿದೆ. ಅಲ್ಲದೆ ಇದು ಯುರೋಪಿಯನ್ ಸಂಪ್ರದಾಯಗಳಿಂದ ವಿಭಿನ್ನವಾಗಿದೆ.ಜನಪದ ಮತ್ತು ಬ್ಲೂಸ್ಗಳಿಂದ ತೆಗೆದುಕೊಳ್ಳಲ್ಪಟ್ಟ ನುಡಿಗಟ್ಟುಗಳು ಈಗ ಹಳೆ ಕಾಲದ ಸಂಗೀತ ಎಂದು ಕರೆಯಲ್ಪಡುತ್ತಿದ್ದ ಅವು ಜಾಗತಿಕ ಮಟ್ಟದ ಕೇಳುಗರನ್ನು ಅನುಸರಿಸಿ ಪ್ರಸಿದ್ಧ ಪ್ರಕಾರಗಳಾಗಿ ಮಾರ್ಪಡಿಸಲಾಗಿದೆ. ಜಾಝ್ ಸಂಗೀತವು ಇಪ್ಪತ್ತನೇ ಶತಮಾನದಲ್ಲಿ ಅನ್ವೇಷಕರಾದ ಲೂಯಿಸ್ ಆರ್ಮ್ಸ್ಟ್ರಾಂಗ್ ಮತ್ತು ಡ್ಯೂಕ್ಎಲ್ಲಿಂಗ್ಟನ್ರವರಿಂದ ಅಭಿವೃದ್ಧಿಗೊಂಡಿತು
1920 ಮತ್ತು 1950 ಮಧ್ಯೆ ದೇಶಿಯ ಸಂಗೀತವಾದ ರಿದಮ್ಮತ್ತು ಬ್ಲ್ಯೂ, ರಾಕ್ ಅಂಡ್ ರೋಲ್ ಗಳು ಹುಟ್ಟಿಕೊಂಡವು.1960 ಸಮಯದಲ್ಲಿ ಬಾಬ್ಡೈಲನ್ ಇವರು ಜನಪದ ಸಂಗೀತ ಮೂಲದಿಂದ ಬೆಳೆದು ಅಮೇರಿಕಾದ ಪ್ರಸಿದ್ಧ ಗೀತ ಬರಹಗಾರರಾದರು ಹಾಗೂ ಜೇಮ್ಸ್ಬ್ರೌನ್ ಫಂಕ್ ಸಂಗೀತ ಬೆಳವಣಿಗೆಗೆ ಕಾರಣರಾದರು.   ತೀರಾ ಇತ್ತೀಚಿನ ಅಮೆರಿಕದ ಸಂಯೋಜನೆಗಳು ಹಿಪ್ ಹಾಪ್ ಮತ್ತು ಹೌಸ್ ಸಂಗೀತವನ್ನು ಆಯೊಜಿಸಿವೆ. ಅಮೆರಿಕದ ಪಾಪ್ ತಾರೆಗಳಾದ ಎಲ್ವಿಸ್ ಪ್ರೆಸ್ಲೇ, ಮೈಕೆಲ್ ಜಾಕ್ಸನ್ ಮತ್ತು ಮಡೋನ್ನಾರವರು ಜಾಗತಿಕ ಪ್ರಸಿದ್ಧರು.
ಸಾಹಿತ್ಯ, ತತ್ವಶಾಸ್ತ್ರ ಮತ್ತು ಕಲೆ - ಹದಿನೆಂಟನೇ ಮತ್ತು ಹತ್ತೊಂಬತ್ತನೇ ಶತಮಾನದ ಅಮೆರಿಕದ ಕಲೆ ಮತ್ತು ಸಾಹಿತ್ಯವು ಯುರೋಪ್ನಿಂದ ಪ್ರಭಾವಿತವಾದದ್ದು. ನ್ಯಾಥನೀಲ್ ಹಾವ್ಥೊರ್ನ್, ಎಡ್ಗರ್ಅಲೆನ್ಪೋ ಮತ್ತು ಹೆನ್ರಿ ಡೇವಿಡ್ ಥೋರಿಯೋರವರು ಹತ್ತೊಂಭತ್ತನೇ ದಶಕದ ಮಧ್ಯ ಭಾಗದಲ್ಲಿ ಅಮೇರಿಕದ ವಿಶೇಷ ಸಾಹಿತ್ಯಿಕ ಧ್ವನಿಯನ್ನು ಹೊರಡಿಸಿದರು. ದಶಕದ ಉತ್ತರಾರ್ಧದಲ್ಲಿ ಮಾರ್ಕ್ ಟ್ವೈನ್ ಮತ್ತುವಾಲ್ಟ್ ವೈಟ್ಮನ್ರವರು ಮುಖ್ಯ ವ್ಯಕ್ತಿಗಳು. ಎಮಿಲಿ ಡಿಕನ್ಸನ್ರವರು ತಮ್ಮ ಜೀವಿತಾವಧಿಯಲ್ಲಿ ಅನಾಮಿಕಾಗಿದ್ದರು. ಈಗ ಅವರನ್ನು ಅಮೆರಿಕದ ವಿಶೇಷವಾದ ಕವಿ ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ಅನುಭವ ಮತ್ತು ಗುಣಲಕ್ಷಣಗಳ ಮೂಲಭೂತ ವಿಚಾರಗಳನ್ನು ಹಿಡಿದಿಟ್ಟ ಹರ್ಮನ್ ಮೆಲ್ವಿಲ್ಲೆಯವರ ಮೊಬಿಡಿಕ್ (1851), ಟ್ವೈನ್ರವರ ದಿ ಅಡ್ವೆಂಚರ್ಸ್ ಆಫ್ ಹಕ್ಲೆಬೆರ್ರಿ ಫಿನ್ (1885), ಮತ್ತು ಎಫ್. ಸ್ಕಾಟ್ ಫಿಡ್ಜೆರಾಲ್ಡ್ರವರ ದಿ ಗ್ರೇಟ್ ಗಾಟ್ಸ್ಬಿ (1925) ಇವುಗಳು ಅಮೆರಿಕದ ಉತ್ತಮ ಕಾದಂಬರಿ ಎಂದು ಕರೆಸಿಕೊಂಡಿವೆ.
            ತೀರಾ ಇತ್ತೀಚೆಗೆ 1993ರಲ್ಲಿ ಟೋನಿ ಮಾರಿಸನ್ರವರನ್ನೊಳಗೊಂಡು ಸಂಯುಕ್ತ ಸಂಸ್ಥಾನದ ಹನ್ನೊಂದು ನಾಗರಿಕರು ಸಾಹಿತ್ಯಕ್ಕೆ ನೊಬೆಲ್ ಪಾರಿತೋಷಕವನ್ನು ಪಡೆದಿದ್ದಾರೆ. 1954ರಲ್ಲಿ ನೊಬೆಲ್ ಪಾರಿತೋಷಕ ಭೂಷಿತ ಅರ್ನೆಸ್ಟ್ ಹೆಮಿಂಗ್ವೇಯವರನ್ನು ಇಪ್ಪತ್ತನೇ ಶತಮಾನದ ಅತ್ಯಂತ ಪ್ರಭಾವಶಾಲೀ ಲೇಖಕ ಎಂದು ಕರೆಯಲಾಗಿದೆ. ಜನಪ್ರಿಯ ಸಾಹಿತ್ಯ ಶೈಲಿಯಾದಪಾಶ್ಚಿಮಾತ್ಯ ಮತ್ತು ಅತಿರಂಜಿತ ಪತ್ತೇದಾರಿ ಕಾದಂಬರಿಯು ಸಂಯುಕ್ತ ಸಂಸ್ಥಾನದಲ್ಲಿ ಬೆಳವಣಿಗೆಯನ್ನು ಕಂಡಿತು. ಸ್ಪಂದನ ಸಂತತಿ ಲೇಖಕರಾದಂತಹ ನವಪೂರ್ವಿಕ ಜಾನ್ ಬಾರ್ತ್,ಥಾಮಸ್ ಪಿನ್ಕಾನ್ ಮತ್ತು ಡಾನ್ ಡೆಲಿಲ್ಲೋರವರು ಹೊಸ ಸಾಹಿತ್ಯವನ್ನು ಬೆಳಕಿಗೆ ತಂದರು.
            ಅಜ್ಞೇಯವಾದಿಗಳಾದ ಥೊರಿಯೊ ಮತ್ತು ರಾಲ್ಫ್ ವಾಲ್ಡೋ ಎಮರ್ಸನ್ರವರು ಅಮೆರಿಕದ ಮೊದಲ ತಾತ್ವಿಕ ಚಳುವಳಿಯನ್ನು ಹುಟ್ಟುಹಾಕಿದರು. ಆಂತರಿಕ ಯುದ್ಧದ ನಂತರದಲ್ಲಿ ಚಾರ್ಲ್ಸ್ ಸ್ಯಾಂಡರ್ಸ್ ಪೀಯರ್ಸ್ ಮತ್ತು ತದನಂತರ ವಿಲಿಯಮ್ ಜೇಮ್ಸ್ ಹಾಗೂ ಜಾನ್ ಡೆವೆರವರು ಪ್ರಾಯೋಗಿಕ ದೃಷ್ಟಿ ಬೆಳವಣಿಗೆಯ ಮುಖ್ಯಸ್ಥರಾದರು. ಇಪ್ಪತ್ತನೇ ಶತಮಾನದಲ್ಲಿ ಸಂಯುಕ್ತ ಸಂಸ್ಥಾನದ ಪಾಂಡಿತ್ಯಕ್ಕೆ ವಿಶ್ಲೇಷಣಾ ತತ್ವಶಾಸ್ತ್ರವನ್ನು W.V.O ಕ್ವೈನ್ ಮತ್ತು ರಿಚರ್ಡ್ ರಾರ್ಟಿಯವರು ತಂದರು ಜಾನ್ ರಾವ್ಲ್ಸ್ ಮತ್ತು ರಾಬರ್ಟ್ ನಾಝಿಕ್ ರಾಜಕೀಯ ತತ್ವಶಾಸ್ತ್ರ ಚಳುವಳಿಯ ಮುಂಚೂಣಿಯಾದರು. ದೃಶ್ಯ ಕಲೆಯಲ್ಲಿ, ಯುರೋಪಿಯನ್ ನೈಸರ್ಗಿಕವಾದದ ಸಂಪ್ರದಾಯದಲ್ಲಿ ಮಧ್ಯ ಹತ್ತೊಂಬತ್ತನೇ ಶತಮಾನದ ಚಳುವಳಿಯು ಹಡ್ಸನ್ ರಿವರ್ ಸ್ಕೂಲಾಗಿತ್ತು. 1913ರಲ್ಲಿ ನ್ಯೂಯಾರ್ಕ್ ಸಿಟಿಯಲ್ಲಿ ನಡೆದ ಯುರೋಪಿಯನ್ ಆಧುನಿಕ ಕಲೆ ಪ್ರದರ್ಶನವಾದ ರ್ಮರಿ ಪ್ರದರ್ಶನವು ಜನರನ್ನು ದಂಗುಬಡಿಸಿತು ಮತ್ತು ಸಂಯುಕ್ತ ಸಂಸ್ಥಾನದ ಕಲಾ ದೃಶ್ಯಕ್ಕೆ ಪರಿವರ್ತಿಸಿತು.[೧೯೯] ಉನ್ನತ ವ್ಯಕ್ತಿಗತ ಸಂವೇದನೆಗಳ ಪ್ರದರ್ಶನವಾದ ಹೊಸ ಶೈಲಿಯ ಪ್ರಯೋಗವನ್ನು ಜಾರ್ಜಿಯಾ ಓಕಿಫೀಹಾಗೂ ಮಾರ್ಸ್ಡನ್ ಹಾರ್ಟ್ಲೀ ಮತ್ತಿತರು ಮಾಡಿದರು. ಅಮೂರ್ತ ಪ್ರಕಟಣಾವಾದ ಜಾಕ್ಸನ್ ಪೊಲ್ಲಾಕ್ ಮತ್ತು ವಿಲಿಯಮ್ ಡೆ ಕೂನಿಂಗ್ ಹಾಗೂ ಆಂಡಿ ವರ್ಹೋಲ್ ಮತ್ತು ರಾಯ್ ಲಿಶೆನ್ಸ್ಟೀನ್ರವರ ಪಾಪ್ ಕಲೆಯಂತಹ ಮುಖ್ಯ ಕಲಾ ಚಳುವಳಿಯು ಸಂಯುಕ್ತ ಸಂಸ್ಥಾನದಲ್ಲಿ ವಿಶಾಲವಾಗಿ ಬೆಳವಣಿಗೆ ಕಂಡಿತು. ಆಧುನಿಕವಾದ ಮತ್ತು ನಂತರದ ಆಧುನಿಕ ಪೂರ್ವವಾದ ಗತಿಯು ಅಮೆರಿಕದ ವಾಸ್ತುವಿನ್ಯಾಸಗಾರರಾದ ಫ್ರಾಂಕ್ ಲಿಯಾಯ್ಡ್ ವ್ರೈಟ್, ಫಿಲಿಪ್ ಜಾನ್ಸನ್ ಮತ್ತು ಫ್ರಾಂಕ್ ಗೆಹ್ರೆಯವರಿಂದ ಬೆಳಕಿಗೆ ಬಂತು.
            ಅಮೆರಿಕದ ನಾಟಕರಂಗದ ಮೊಟ್ಟಮೊದಲನೇ ಮುಖ್ಯ ಪ್ರವರ್ತಕನಾದವನು ಸಂಚಾಲಕ ಪಿ.ಟಿ.ಬರುಮ್. ಇವರು ಸಣ್ಣದಾದ ಮ್ಯಾನ್ಹಟನ್ ಮನರಂಜನೆಯ ಸಂಕೀರ್ಣವನ್ನು 1841ರಲ್ಲಿ ನಿರ್ವಹಿಸಲು ಪ್ರಾರಂಭಿಸಿದರು

            1870 ಪ್ರಾರಂಭದಲ್ಲಿ ಹ್ಯಾರಿಗನ್ ಮತ್ತು ಹಾರ್ಟ್ ಸಂಘವು ಜನಪ್ರಿಯ ಸಂಗೀತ ಹಾಸ್ಯ ನಾಟಕಗಳ ಸರಣಿಯನ್ನು ನ್ಯೂಯಾರ್ಕ್ನಲ್ಲಿ ಪ್ರಾರಂಭಿಸಿತು. ಇಪ್ಪತ್ತನೇ ಶತಮಾನದಲ್ಲಿ ಅಧುನಿಕ ಸಂಗೀತದ ಸ್ವರೂಪವು ಮುಖ್ಯವಾಹಿನಿಯಲ್ಲಿ ಲೀನವಾಯಿತು. ಸಂಗೀತ ನಾಟಕದ ಹಾಡುಗಳ ನಿರ್ದೇಶಕರಾದ ಇರ್ವಿಂಗ್ ಬೆರ್ಲಿನ್, ಕೋಲ್ ಪೀಟರ್ ಮತ್ತು ಸ್ಟೀಫನ್ ಸೊಂಡಿಯಮ್ರವರುಪಾಪ್ ಗುಣಮಟ್ಟದವರಾಗಿ ಹೊರಹೊಮ್ಮಿದರು ನಾಟಕಕಾರ ಈಜೀನ್ ಓನೀಲ್ರವರು 1936ರಲ್ಲಿ ನೋಬಲ್ ಪಾರಿತೊಷಕವನ್ನು ಗಳಿಸಿದ್ದಾರೆ ಮತ್ತು ನೋಬೆಲ್ ನಾಮಾಂಕಿತರಾಗಿದ್ದ ಹಾಗೂ ಹಲವು ಪುಲಿಟ್ಝರ್ ಪ್ರಶಸ್ತಿ ಪುರಸ್ಕೃತರಾದ ಇನ್ನುಳಿದವರೆಂದರೆ ಟೆನ್ನೀಸ್ ವಿಲಿಯಂಸ್, ಎಡ್ವರ್ಡ್ ಅಲ್ಬೀ ಮತ್ತು ಆಗಸ್ಟ್ ವಿಲ್ಸನ್. ಸಮಯದಲ್ಲಿ ವಿಶಾಲ ಪಕ್ಷಿನೋಟವನ್ನು ಹರಿಸಿದಾಗ,1910ರಲ್ಲಿ ಚಾರ್ಲ್ಸ್ ಇವ್ಸ್ರವರ ಕಾರ್ಯದಿಂದಾಗಿ ಅವರಿಗೆ ಸಂಯುಕ್ತ ಸಂಸ್ಥಾನದ ಮುಖ್ಯ ಶಾಸ್ತ್ರೀಯ ಸಾಂಪ್ರದಾಯಿಕ ಸಂಯೋಜಕನೆಂದು ಹೆಸರು ತಂದುಕೊಟ್ಟಿತು. ಇನ್ನುಳಿದ ಪ್ರಾಯೋಗಿಕರಾದ ಹೆನ್ರಿ ಕೋವೆಲ್ ಮತ್ತು ಜಾನ್ ಕೇಗ್ರವರು ಶಾಸ್ತ್ರೀಯ ಸಂಯೋಜನೆಗಳಲ್ಲಿ ಅಮೆರಿಕಕ್ಕೆ ಹೆಸರು ತಂದುಕೊಟ್ಟರು.ಆರನ್ ಕೋಪ್ಲ್ಯಾಂಡ್ ಮತ್ತು ಜಾರ್ಜ್ ಗೆರ್ಶ್ವಿನ್ರವರು ಶಾಸ್ತ್ರೀಯ ಸಂಗೀತ ಮತ್ತು ಜನಪ್ರಿಯ ಸಂಗೀತಕ್ಕೆ ಸಂಘಟಿತ ಸಂಯೋಜನೆಗಳನ್ನು ಅಭಿವೃದ್ಧಿಪಡಿಸಿದರು ನೃತ್ಯಸಂಯೋಜಕರಾದಇಸಾಡೊರಾ ಡಂಕನ್ ಮತ್ತು ಮಾರ್ಥಾ ಗ್ರಹಮ್ ಆಧುನಿಕ ನೃತ್ಯಕ್ಕೆ ಸಹಕರಿಸಿದರು. ಅದೇ ವೇಳೆ ಜಾರ್ಜ್ ಬಲನ್ಶೈನ್ ಮತ್ತು ಜೆರೋಮ್ ರಾಬಿನ್ಸ್ರವರು ಇಪ್ಪತ್ತನೇ ಶತಮಾನದ ಬ್ಯಾಲೆಗೆ ಮುಂದಾಳುಗಳಾಗಿದ್ದರು. ಆಧುನಿಕ ಕಲಾ ಮಾಧ್ಯಮವಾದ ಛಾಯಾಚಿತ್ರಗ್ರಹಣದಲ್ಲಿ ಅಮೆರಿಕವು ತುಂಬ ಮುಖ್ಯವಾದುದಾಗಿದೆ. ಮುಖ್ಯ ಛಾಯಾಚಿತ್ರಗಾರರೆಂದರೆ ಆಲ್ಫ್ರೆಡ್ ಸ್ಟಿಗ್ಲಿಟ್ಝ್, ಎಡ್ವರ್ಡ್ ಸ್ಟೆಚಿನ್ ಮತ್ತು ಅನ್ಸೆಲ್ ಆಡಮ್ಸ್.ದಿನಪತ್ರಿಕೆಯ ಹಾಸ್ಯದಪಟ್ಟಿ ಮತ್ತು ಹಾಸ್ಯದ ಪುಸ್ತಕಗಳೆರಡೂ ಸಂಯುಕ್ತ ಸಂಸ್ಥಾನದ ಅನ್ವೇಷಣೆಯಾಗಿದೆ. ಸೂಪರ್ಮ್ಯಾನ್ ಎಂಬ ಅತಿರಂಜಿತ ವ್ಯಕ್ತಿ ಹಾಸ್ಯ ಪುಸ್ತಕವು ಅಮೆರಿಕದ ಲಾಂಛನದಂತಾಗಿದೆ.
ಆಹಾರ - ಅಮೆರಿಕದ ಮುಖ್ಯವಾಹಿನಿಯ ಪಾಕಕಲೆಯು ಪಶ್ಚಿಮ ದೇಶಗಳಿಗೆ ಹೋಲುವಂತಹುದು. ಗೋಧಿಯು ಮೂಲ ಆಹಾರ ಧಾನ್ಯವಾಗಿದೆ. ಸಾಂಪ್ರದಾಯಿಕ ಪಾಕಪದ್ಧತಿಯು ಕೋಳಿ,ಬಿಳಿಯಬಾಲವಿರುವ ಜಿಂಕೆ, ಜಿಂಕೆಯ ಮಾಂಸ, ಬಟಾಟೆ, ಸಿಹಿ ಗೆಣಸು, ಜೋಳ, ಚೌ ಚೌ ಕಾಯಿ, ಮೇಪಲ್ ರಸವನ್ನು ಬಳಸುತ್ತದೆ. ಸ್ವದೇಶೀ ಆಹಾರವು ಸ್ಥಳೀಯ ಅಮೆರಿಕನ್ನರು ಮತ್ತು ಇತ್ತೀಚಿನ ಯುರೋಪಿಯನ್ ನಿವಾಸಿಗಳಿಂದ ಬಳಸಲ್ಪಡುತ್ತಿದೆ. ಲೋಹದ ಚೌಕಟ್ಟಿನಲ್ಲಿ ಹಂದಿಯ ಮತ್ತು ದನದ ಬೇಯಿಸಿದ ಮಾಂಸದೊಂದಿಗೆ ಆಚರಿಸುವ ಮೋಜಿನ ಕೂಟ, ಏಡಿಯ ಕೇಕ್ಗಳು, ಬಟಾಟೆಯ ಚಿಪ್ಸ್ ಮತ್ತು ಚಾಕೊಲೇಟ್ ಸಿಪ್ಪೆಯ ಅಡಿಗೆಯು ಅಮೆರಿಕನ್ನರ ವಿಶೇಷ ಶೈಲಿಯಾಗಿದೆ. ಸತ್ವಯುತ ಆಹಾರವು ಆಫ್ರಿಕನ್ ಜೀತದಾಳುಗಳಿಂದ ಅಭಿವೃದ್ಧಿಗೊಂಡಿತು.ಇದು ದಕ್ಷಿಣದ ಎಲ್ಲ ಕಡೆ ಹಾಗೂ ಆಫ್ರಿಕನ್ ಅಮೆರಿಕನ್ನರಲ್ಲಿ ಜನಪ್ರಿಯವಾಯಿತು. ಸಿಂಕ್ರೆಟಿಕ್ ಪಾಕಪದ್ಧತಿಯಾದ ಲುಯಿಸೀನಿಯಾ ಕ್ರಿಯೋಲ್, ಕಾಜುನ್, ಟೆಕ್ಸ್-ಮ್ಯಾಕ್ಸ್ಗಳು ಸ್ಥಳೀಯವಾಗಿ ಮುಖ್ಯವಾದವು. ಗುಣಾತ್ಮಕವಾದ ತಿಂಡಿಗಳಾದ ಆಪಲ್ ಪೈ, ಫ್ರೈಡ್ ಚಿಕನ್, ಪಿಝಾ, ಹ್ಯಾಂಬರ್ಗರ್ ಮತ್ತು ಹಾಟ್ ಡಾಗ್ಗಳು ವಿವಿಧ ವಲಸೆಗಾರರ ಪಾಕಸೂತ್ತ್ರ ವಿವರಣೆಗಳಾಗಿವೆ. ಪ್ರೆಂಚ್ ಫ್ರೈಸ್, ಮೆಕ್ಸಿಕನ್ ತಿಂಡಿಗಳಾದಂತಹ ಬುರ್ರಿಟೋ, ಟ್ಯಾಕೋ ಮತ್ತು ಪಾಸ್ಟಾ ತಿಂಡಿಗಳು ಮುಕ್ತವಾಗಿ ಅಳವಡಿಸಿಕೊಂಡ ವಿಶಾಲ ಉಪಯೋಗದ ಇಟಾಲಿಯನ್ ಮೂಲದ ತಿಂಡಿಯಾಗಿದೆ. ಅಮೆರಿಕನ್ನರು ಸಾಮಾನ್ಯವಾಗಿ ಕಾಫಿಗಿಂತ ಟೀಯನ್ನು ಹೆಚ್ಚು ಬಯಸುತ್ತಾರೆ. ಸಂಯುಕ್ತ ಸಂಸ್ಥಾನದ ಮಾರುಕಟ್ಟೆಯು ಕಿತ್ತಳೆರಸವನ್ನು ಮತ್ತು ಹಾಲಿನ ಪೇಯವನ್ನು ತಯಾರಿಸಲು ಹೊಣೆಹೊತ್ತಿದೆ. 1980 ಮತ್ತು 1990 ಮಧ್ಯೆ ಅಮೆರಿಕನ್ನರ ಕ್ಯಾಲೊರಿ ಸೇವನೆಯು 24% ರಷ್ಟು ಏರಿದೆ. ಪದೇ ಪದೇ ಫಾಸ್ಟ್ ಫುಡ್ ಮುಂಗಟ್ಟುಗಳಲ್ಲಿ ತಿನ್ನುವುದು ಅಮೆರಿಕನ್ನರ "ಬೊಜ್ಜು ಹರಡುವಿಕೆ"ಗೆ ಕಾರಣವಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ. ಅತೀ ಸಿಹಿಯಾದ ಮೃದು ಪೇಯಗಳು ತುಂಬಾ ಜನಪ್ರಿಯವಾಗಿದೆ. ಸಿಹಿಯಾದ ಪಾನೀಯವು ಅಮೆರಿಕನ್ನರ 9%ರಷ್ಟು ಸರಾಸರಿ ಕ್ಯಾಲರಿ ಸ್ವೀಕೃತಿಯನ್ನು ಗಣಿಸುತ್ತದೆ.
ಕ್ರೀಡೆ -  ಹತ್ತೊಂಬತ್ತನೇ ಶತಮಾನದವರೆಗೂ ಬೇಸ್ಬಾಲ್ನ್ನು ರಾಷ್ಟ್ರೀಯ ಕ್ರೀಡೆಯಾಗಿ ಮಾನ್ಯ ಮಾಡಲಾಗಿತ್ತು. ಅಮೆರಿಕದ ಫುಟ್ಬಾಲ್, ಬಾಸ್ಕೆಟ್ಬಾಲ್ ಮತ್ತು ಐಸ್ ಹಾಕಿಯು ದೇಶದ ಇತರ ಮೂರು ಮುಖ್ಯ ಕುಶಲವಾದ ಆಟವಾಗಿದೆ. ಕಾಲೇಜು ಫುಟ್ಬಾಲ್ ಮತ್ತು ಬಾಸ್ಕೆಟ್ಬಾಲ್ಗಳು ಅಸಂಖ್ಯ ಪ್ರೇಕ್ಷಕರನ್ನು ಸೆಳೆಯುವಂಥದು. ಬಾಕ್ಸಿಂಗ್ ಮತ್ತು ಕುದುರೆ ಜೂಜು ಒಂದು ಸಮಯದಲ್ಲಿ ಅತೀಹೆಚ್ಚು ವೀಕ್ಷಣೆಗೆ ಒಳಗಾದ ವೈಯಕ್ತಿಕ ಕ್ರೀಡೆಯಾಗಿತ್ತು. ಆದರೆ ಅದೀಗ ಗಾಲ್ಫ್, ಆಟೋ ರೇಸಿಂಗ್ ಮತ್ತು ವಿಶೇಷವಾಗಿ NASCAR ಕಡೆಗೆ ತಿರುಗಿದೆ. ಸಾಕರ್ ಕ್ರೀಡೆಯನ್ನು ಯುವಜನರು ಮತ್ತು ಉತ್ಸಾಹೀ ಜನರು ಅತೀ ಹೆಚ್ಚು ಆಡುವ ಆಟವಾಗಿದೆ. ಟೆನ್ನಿಸ್ ಮತ್ತು ಹಲವು ಹೊರಾಂಗಣ ಆಟಗಳೂ ಜನಪ್ರಿಯವಾಗಿದೆ. ಇದೇವೇಳೆ ಹೆಚ್ಚಿನ ಸಂಯುಕ್ತ ಸಂಸ್ಥಾನದ ಆಟಗಳು ಯುರೋಪಿಯನ್ನರ ಅಭ್ಯಾಸದಿಂದ ವಿಕಸಿಸಿದ. ಬಾಸ್ಕೆಟ್ಬಾಲ್, ವಾಲಿಬಾಲ್, ಸ್ಕೇಟ್ಬೋರ್ಡಿಂಗ್, ಸ್ನೋಬೋರ್ಡಿಂಗ್ ಮತ್ತು ಚೀರ್ಲೀಡಿಂಗ್ ಆಟಗಳು ಅಮೆರಿಕದ ಅನ್ವೇಷಣೆಯಾಗಿದೆ. ಸ್ಥಳೀಯ ಅಮೆರಿಕನ್ನರ ಮತ್ತು ಸ್ಥಳೀಯ ಹವಾಯಿಯನ್ನರ ಪಶ್ಚಿಮದ ಸಂಪರ್ಕ ಪ್ರಭಾವಿತ ಚಟುವಟಿಕೆಗಳಿಂದ ಲ್ಯಾಕ್ರೋಸ್ ಮತ್ತುಸರ್ಫಿಂಗ್ಗಳು ಹೆಚ್ಚಾಗಿವೆ. ಎಂಟು ಓಲಂಪಿಕ್ ಆಟಗಳು ಸಂಯುಕ್ತ ಸಂಸ್ಥಾನದಲ್ಲಿ ನೆಲೆಗೊಂಡಿವೆ. ಸಂಯುಕ್ತ ಸಂಸ್ಥಾನವು ಬೇಸಿಗೆಕಾಲದ ಓಲಂಪಿಕ್ ಆಟಗಳಲ್ಲಿ ಉಳಿದೆಲ್ಲ ದೇಶಗಳಿಗಿಂತ ಹೆಚ್ಚು, 2,301 ಪದಕಗಳನ್ನು ಗೆದ್ದಿವೆ. ಮತ್ತು ಎರಡನೇ ಅಧಿಕವಾದ 216 ಪದಕಗಳನ್ನು ಛಳಿಗಾಲದ ಓಲಂಪಿಕ್ ಆಟಗಳಲ್ಲಿ ಗೆದ್ದಿದೆ.
ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮ

         ಅಮೇರಿಕ ಜಗತ್ತಿನ ಸೂಪರ್ ಪವರ್ ಮಾತ್ರವಲ್ಲ, ಅದೊಂದು ಹೈಪರ್ ಪವರ್ ಎಂಬ ವಿಷಯ ಅಂತರಾಷ್ಟ್ರೀಯ ವಿದ್ಯಮಾನಗಳಿಂದ ತಿಳಿದಿರುವ ವಿಷಯ. ಇಂದು ಜುಲೈ ೪ ಅಮೇರಿಕಾ ಸಾಮ್ರಾಜ್ಯಶಾಹಿ ಶಕ್ತಿಯಿಂದ ಮುಕ್ತಿ ಪಡೆದುಕೊಂಡು, ಸರ್ವ ಸ್ವತಂತ್ರ ದೇಶವಾದ ದಿನ. ಭಾರತದಂತೆಯೇ, ಅಮೆರಿಕಾ ಕೂಡ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಸಾಹತುವಾಗಿತ್ತು. ಯುರೋಪ್‌ನಲ್ಲಿ 'ಏಳು ವರ್ಷಗಳ ಯುದ್ಧ' ಮುಗಿದ ಮೇಲೆ ಉತ್ತರ ಅಮೆರಿಕಾದಲ್ಲಿ ಫ್ರೆಂಚ್ ಪ್ರಭಾವ ಕಡಿಮೆಯಾಗಿತ್ತು. ಅಮೆರಿಕಾದಲ್ಲಿ ನೆಲೆಯಾಗಿದ್ದ ಜನರಿಗೆ ಸ್ವ ಆಡಳಿತದ ಆಸೆ ಇದ್ದರೂ, ಬ್ರಿಟಿಷ್ ಸೈನ್ಯ, ನೌಕಾದಳ ಅಮೆರಿಕಾವನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊ­ಂಡಿತ್ತು. ಈ ಬ್ರಹತ್ ಸೈನ್ಯದ ನಿರ್ವಹಣೆಗಾಗಿ ಬ್ರಿಟಿಷ್ ಸರಕಾರ ಅಮೆರಿಕಾದ ಮೇಲೆ ಹೆಚ್ಚುವರಿ ತೆರಿಗೆಗಳನ್ನು ಹೇರಿತು.
      ಬ್ರಿಟಿಷ್ ಪಾರ್ಲಿಮೆಂಟ್‌ನಲ್ಲಿ ಅಮೆರಿಕಾವನ್ನು ಪ್ರತಿನಿಧಿಸಲು ಯಾವೊಬ್ಬ ಪ್ರತಿನಿಧಿಯೂ ಇರಲಿಲ್ಲವಾದ ಕಾರಣ, ಅಮೆರಿಕನ್ನರು ನೇರ ಕಾರ್ಯಾಚಾರಣೆಗಿಳಿದರು. 1773ರಲ್ಲಿ ಬೊಸ್ಟನ್ ಬಂದರಿನಲ್ಲಿ ಬಂದಿಳಿದ ಹಡಗುಗಳಿದ್ಧ ಟೀ ಹುಡಿಯ ಬಾಕ್ಸ್‌ಗಳನ್ನು ಸಮುದ್ರಕ್ಕೆ ಎಸೆಯುವ ಮೂಲಕ, ಅಮೆರಿಕನ್ನರು ತಮ್ಮ ಪ್ರತಿರೋಧ ವ್ಯಕ್ತಪಡಿಸಿದರು. ಈ ಘಟನೆ ಇತಿಹಾ ಸದ ಪುಟಗಳಲ್ಲಿ 'ಬೋಸ್ಟನ್ ಟೀ ಪಾರ್ಟಿ' ಎಂಬ ಹೆಸರಿನಿಂದ ಚಿರಪರಿಚಿತ. ಇದರಿಂದ ಉದ್ರಿಕ್ತಗೊಂಡ ಬ್ರಿಟಿಷ್ ಸರಕಾರ ಮಸಾಚ್ಯುಸೆಟ್ಸ್ಅನ್ನು ಸೈನಿಕ ಆಡಳಿತಕ್ಕೆ ಒಳಪಡಿಸಿತು 1775ರಲ್ಲಿ ಅಮೆರಿಕನ್ನರು ಜಾರ್ಜ್ ವಾಷಿಂಗ್‌ಟನ್ ರನ್ನು ಅಮೆರಿಕಾ ವಸಾಹತುಗಳ ಮಹಾದಂಡನಾಯಕರೆಂದು ಘೋಷಿಸಿದರು. ಸೋಲೇ ಕಾಣದ ಬ್ರಿಟಿಷ್ ಸೈನ್ಯಕ್ಕೆ ಅಮೆರಿಕನ್ನರು ಸಾಲು ಸಾಲು ಸೋಲಿನ ರುಚಿ ತೋರಿಸಿದರು. 1778ರಲ್ಲಿ ಅಮೆರಿಕಾಕ್ಕೆ ಫ್ರೆಂಚರ ಸಹಾಯಹಸ್ತ ದೊರಕಿ ಆನೆಬಲ ಬಂದತ್ತಾಗಿತ್ತು. ಲೆಕ್ಸಿಂಗ್‌ಟನ್, ಸರಟೋಗಗಳಲ್ಲಿ ಸೋಲು ಅನುಭವಿಸಿದ ಬ್ರಿಟಿಷರಿಗೆ ಆಶಾಕಿರಣವಾಗಿ 1780ರಲ್ಲಿ ಲಾರ್ಡ್ ಕಾರ್ನ್‌ವಾಲಿಸ್ ಚಾರ್ಲ್ಸ್‌ಟೌನ್ ಪಟ್ಟಣವನ್ನು ವಶಪಡಿಸಿಕೊಂಡ. ಆದರೆ ಇದು ಅಲ್ಪಕಾಲದ ಯಶಸ್ಸು, 1781ರ ಅಕ್ಟೋಬರ್‌ನಲ್ಲಿ ಕಾರ್ನ್‌ವಾಲಿಸ್ ಯಾರ್ಕ್‌ಟೌನ್ ನಲ್ಲಿ ಅಮೆರಿಕನ್ನರಿಗೆ ಶರಣಾಗತನಾದ. ಯುದ್ಧ ಅಂತ್ಯವಾಗಿದ್ದು 1781ರಲ್ಲೇ ಆದರೂ, ಆರು ವರ್ಷಗಳ ಹಿಂದೆಯೇ ಅಂದರೆ 4 ಜುಲೈ 1776ರಲ್ಲಿಯೇ ಅಮೆರಿಕಾದ 13 ವಸಾಹತುಗಳ ಪ್ರತಿನಿಧಿಗಳು ಅಮೆರಿಕಾದ ಸ್ವಾತಂತ್ರ್ಯ ಘೋಷಣೆಗೆ ಸಹಿ ಹಾಕಿ ಬ್ರಿಟನ್ ಜೊತೆಗಿನ ಎಲ್ಲ ರಾಜಕಿಯ ಸಂಬಂಧಗಳನ್ನು ಕೊನೆಗೊಳಿಸಿದರು. ವಾಷಿಂಗ್‌ಟನ್, ಜೆಫರ್‌ಸನ್ ಮುಂತಾದವರು ಅಮೆರಿಕಾ ಕ್ರಾಂತಿಯ ರೂವಾರಿಗಳು. ಜುಲೈ 4 ಅಮೆರಿಕಾ ಮಾತ್ರವಲ್ಲ ವಿಶ್ವಕ್ಕೆ ಸ್ಪೂರ್ತಿಯಾದ ದಿನ. ಸೂರ್ಯ ಮುಳುಗದ ಸಾಮ್ರಾಜ್ಯವನ್ನು ಸೋಲಿಸುವ ಮೂಲಕ, ಅಮೆರಿಕಾದ ಕ್ರಾಂತಿ ಮುಂದೆ ಅನೇಕ ದೇಶಗಳ ಸ್ವಾತಂತ್ರ್ಯ ಸಂಗ್ರಾಮಗಳಿಗೆ ಮಾದರಿಯಾಯಿತು.