ಶುಕ್ರವಾರ, ಜೂನ್ 26, 2015

ಸ್ನೇಹವೇ ನನ್ನ ಲೋಕ




ಮಾನ್ಯರೆ,  
 ಗೆಳೆತನ ದಿವ್ಯ ಅನುಭವ ಎನ್ನುತ್ತಾನೆ ಅನುಭವಿ. ಅದು ಹೊಂಗೆಯ ಮರದಂತೆ ತಂಪು ಎನ್ನುತ್ತಾನೆ ಮತ್ತೊಬ್ಬ ಫಲಾನುಭವಿ. ಗೆಳೆತನ ಆಲದ ಮರವಿದ್ದಂತೆ ಎನ್ನುತ್ತಾನೆ ಕವಿ. ಹೌದು, ಗೆಳೆತನವೆಂದರೆ ಇದೆಲ್ಲವೂ ಹೌದು, ಇವೆಲ್ಲವನ್ನು ಮೀರಿದ ಬಂಧವೂ ಹೌದು. ಕುಟುಂಬದೊಳಗಿನ ಸದಸ್ಯರಿಂದ ಸಿಗದ ನೆಮ್ಮದಿ, ನಿರುಮ್ಮಳತೆ ಗೆಳೆತನದಿಂದ ಸಿಗುವುದುಂಟು. ಅದಕ್ಕೆ ಹೇಳುವುದು ಒಬ್ಬ ನಿಜವಾದ ಗೆಳೆಯನಿದ್ದರೆ ಜಗತ್ತನ್ನೇ ಗೆಲ್ಲಬಹುದೆಂದು ! ನಿಜ, ಅಂಥ ಅದ್ಭುತ ಗೆಳೆಯರು ಎಲ್ಲರಿಗೂ ಸಿಗುವುದಿಲ್ಲ. ಒಳ್ಳೆಯ ಗೆಳೆತನ ದೊರಕಲಿಕ್ಕೂ ಅದೃಷ್ಟ ಬೇಕು.
ಆಂಗ್ಲಕವಿಯೊಬ್ಬ ಸ್ನೇಹಾನ ಈ ರೀತಿ ವರ್ಣಿಸಿದ್ದಾನೆ...`ಮಿಲಿಯಗಟ್ಟಲೆ ಸ್ನೇಹಿತರನ್ನು ಸಂಪಾದನೆ ಮಾಡೋದು ದೊಡ್ಡ ಪವಾಡವಲ್ಲ. ಆದರೆ ನಿಜವಾದ ಗೆಳೆಯನನ್ನು ಸಂಪಾದನೆ ಮಾಡೋದು ಮಾತ್ರ ಕಷ್ಟ. ಮಿಲಿಯದಷ್ಟು ಜನರು ನಮ್ಮ ವಿರುದ್ಧ ನಿಂತಾಗ ನಮ್ಮ ಪರವಾಗಿ ಒಬ್ಬ ನಿಂತಿರುತ್ತಾನಲ್ಲಾ ಆತನೇ ನಿಜವಾದ ಸ್ನೇಹಿತ(ರು).
ನಾನು ಜೀವನದಲ್ಲಿ ಗೆಳೆಯರಿಂದ ಕಹಿಯ ಬದಲಿಗೆ ಸಿಹಿಯೇ ಹೆಚ್ಚಾಗಿ ಸವೆದಿರುವೆನು. ನಾನು ನಂಬಿಕೆ ಇಡುವ 3 ವಿಷಯಗಳಲ್ಲಿ ಗೆಳೆತನವು ಒಂದು. ನಾನು ಇಂದು ಏನೇ ಕಲಿತಿದ್ದರೂ, ಪಡೆದಿದ್ದರೂ, ಎಲ್ಲರಿಂದ ಉತ್ತಮವಾದ ಮೆಚ್ಚುಗೆ ಗಳಿಸಿರುವ ಹಿಂದೆ ನನ್ನ ಗೆಳೆಯರು ಸಹ ಇದ್ದಾರೆ. ಕೆಲವರು ಗೆಳೆತನ ಎನ್ನುವ ಪದವನ್ನು ಬಳಸಿ ನನ್ನಿಂದ ಕಾರ್ಯಸಾಧಿಸಿಕೊಂಡು, ಬಳಿಕ ಮಾತನಾಡದವರು ಸಹ ಇದ್ದಾರೆ, ಇನ್ನೂ ಕೆಲವರು ನಾನು ಹೇಳುವುದಕ್ಕಿಂತ ಮೊದಲೇ ನನ್ನ ಸಮಸ್ಯೆಯನ್ನರಿತು ಅದಕ್ಕೆ ಪರಿಹಾರವನ್ನು ತಿಳಿಸಿದವರೂ ಇದ್ದಾರೆ. ನನಗೆ ಯಾರ ಬಗ್ಗೆಯೂ ಬೇಸರವಿಲ್ಲ. ಕಾರಣ ಎಲ್ಲರೂ ನನ್ನ ಹೃದಯದಲ್ಲಿರುವ ಆತ್ಮೀಯರೇ. . . ಒಮ್ಮೆ ಗೆಳೆತನವಾದರೆ ಸಾಯುವವರೆಗೂ ಅದು ಶಾಶ್ವತವಾಗಿರುತ್ತದೆ ಎಂಬುದು ನನ್ನ ನಂಬಿಕೆ. ಜಗತ್ತಿನಲ್ಲಿರುವ ಎಲ್ಲರೊಂದಿಗೆ ಸ್ನೇಹ ಬೆಳೆಸಿ, ಆದರೆ ಯಾರೊಬ್ಬರಿಗೂ ನಂಬಿಕೆ ದ್ರೋಹ ಎಸಗದಿರಿ.. ನೂರು ಜನ ಗೆಳೆಯರನ್ನು ಪಡೆಯುವುದು ಮಹಾನ್ ಸಾಧನೆಯಲ್ಲ, ಪಡೆದವರನ್ನು ಕಳೆದುಕೊಳ್ಳದಿರುವುದು ಮಹಾನ್ ಸಾಧನೆ. ಅದುವೇ ನಿಜವಾದ ಗೆಳೆಯನ…

ಗೆಳೆತನವೆಂದರೆ ಹರಿವ ಜಲಧಿ, ಮನದ ತುಮುಲ ದುಗುಡ ಮರೆಸಿ,
ಹುರುಪು ತುಂಬುವ ಜೀವನದಿ, ಒರತೆ ಬತ್ತಿ ದಡಕೆ ಒತ್ತಿ
ಚಿಲುಮೆ ಮಾಯವಾದರೂ, ನೋವ ಮರೆಸಿ ನಗಲು ಕಲಿಸಿ,
    ಮನದಿ ಹರುಷ ನೆಮ್ಮದಿ . .. . . . .

ಇಂತಿ ತಮ್ಮ ಪ್ರೀತಿಯ ಗೆಳೆಯ
-     PÉ.n.Dgï.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ