ಶುಕ್ರವಾರ, ಜೂನ್ 26, 2015

ಆರ್.ಟಿ.ಐ. ಗೆ ತಿದ್ದುಪಡಿ... ?




ಮಾನ್ಯರೆ,  
ಸರ್ಕಾರವು ಆಡಳಿತದಲ್ಲಿ ದಕ್ಷತೆ ಮತ್ತು ಪಾರದರ್ಶಕತೆಯನ್ನು ತರಲು, ಆಡಳಿತದಲ್ಲಿನ ದೋಷಗಳನ್ನು ಸುಧಾರಣೆ ಮಾಡುವ ಸಲುವಾಗಿ, ಜನಸಾಮಾನ್ಯರು ನಿಖರ ಮಾಹಿತಿ ಪಡೆಯಲು, ಲಂಚಗುಳಿತನ, ಪಕ್ಷಪಾತತನ ತಡೆಯಲು ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆಯನ್ನು ಜಾರಿಗೊಳಿಸಿತು. ಆದರೆ ಇಂದು ಈ ಕಾಯ್ದೆಯನ್ನು ಹಲವರು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗ ಮಾಡಿಕೊಳ್ಳುತ್ತಾ ಬ್ಲಾಕ್‍ಮೇಲ್ ಮಾಡಲು ಬಳಸಿಕೊಳ್ಳುತ್ತಿರುವುದು ಬೇಸರದ ಸಂಗತಿ. ಇಂತಹ ದಂಧಕೋರರಿಂದ ಆರ್.ಟಿ.ಐ. ಕಾಯ್ದೆಯನ್ನು ರೂಪಿಸಿರುವ ಉದ್ದೇಶವು ಈಡೇರದಾಗಿದೆ.
ಈ ನಿಟ್ಟಿನಲ್ಲಿ ಸರ್ಕಾರವು ಗಮನವಹಿಸಿ, ಸುಳ್ಳು ಆರ್.ಟಿ.ಐ. ಮಾಹಿತಿದಾರರನ್ನು ನಿಯಂತ್ರಿಸಿ, ನಿಜವಾದ ಮಾಹಿತಿದಾರಿಗೆ ನೇರವಾಗಬೇಕಾಗಿದೆ. ಮಾಹಿತಿ ಕೇಳಿರುವ ಉದ್ದೇಶ ಜನಪರ/ಸದುದೇಶವನ್ನು ಹೊಂದಿರುವವರಿಗೆ ಮಾತ್ರ ಮಾಹಿತಿ ನೀಡುವುದು ಮತ್ತು ಈ ಕಾಯ್ದೆಗೆ ಸೂಕ್ತ ತಿದ್ದುಪಡಿಯನ್ನು ತಂದು ಆರ್.ಟಿ.ಐ. ಕಾಯ್ದೆಯನ್ನು ಜನಪರ ಮಾಹಿತಿಗಳನ್ನು ಪಡೆಯಲು ಮಾತ್ರ ಬಳಸುವಂತೆ ಕ್ರಮ ಕೈಗೊಳ್ಳಬೇಕಾದಂತಹ ಅವಶ್ಯಕತೆ ಹಿಂದೆಂದಿಗಿತಲೂ ಇಂದು ಹೆಚ್ಚಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ