ಶುಕ್ರವಾರ, ಮೇ 22, 2015

ಕಂಪ್ಯೂಟರ್ AND GK

ಕಂಪ್ಯೂಟರ್ ಎಂದರೇನು?

          ಕಂಪ್ಯೂಟರ್ (ಕನ್ನಡದಲ್ಲಿ ಗಣಕ ಯಂತ್ರ) ಎಂದರೆ ಒಂದು ವಿದ್ಯುತ್ ಚಾಲಿತ ಯಂತ್ರ. ನಿತ್ಯ ಜೀವನದಲ್ಲಿ ಅನೇಕ ಕ್ಷೇತ್ರಗಳಲ್ಲಿ ಬಳಕೆಯಾಗುವ ಇದೊಂದು ಬಹೋಪಯೋಗಿ ಉಪಕರಣ. ನಾವು ಕಂಪ್ಯೂಟರ್ಗೆ ನೀಡುವ ದತ್ತಾಂಶ ಅಥವಾ ಮಾಹಿತಿಯನ್ನು ತನ್ನಲ್ಲಿನ ತಂತ್ರಾಂಶದ ಮೂಲಕ ಮಾರ್ಪಡಿಸಿ ಉತ್ತರ ನೀಡುತ್ತದೆ. ಕಂಪ್ಯೂಟರ್ ಒಳಗೆ ಮೊದಲೇ ಕೆಲವು ನಿರ್ದಿಷ್ಟ ಕಾರ್ಯಗಳನ್ನು ಮಾಡುವಂತೆ ಪ್ರೋಗ್ರಾಂಗಳನ್ನು ರೂಪಿಸಿರಲಾಗುತ್ತದೆ. ನಾವು ಹೊಸ ದತ್ತಾಂಶ ಅಥವಾ ಮಾಹಿತಿಯನ್ನು ನೀಡಿದಾಗ ಅದು ಮಾಹಿತಿಯನ್ನು ಸ್ವೀಕರಿಸಿಪರಿಷ್ಕರಿಸಿ, ಸಂಸ್ಕರಿಸಿ ಕರಾರುವಾಕ್ಕಾದ ಫಲಿತಾಂಶವನ್ನು ತಕ್ಷಣದಲ್ಲಿಯೇ ನೀಡುತ್ತದೆ. ಕಂಪ್ಯೂಟರ್ನಲ್ಲಿ ದ್ವಿಮಾನ ಪದ್ಧತಿಯ (ಬೈನರಿ ಪದ್ಧತಿ) ಯಂತ್ರ ಭಾಷೆಯನ್ನು ಬಳಸಲಾಗಿದ್ದು, ಅದು ನಾವು ನೀಡುವ ಎಲ್ಲ ಮಾಹಿತಿಗಳನ್ನು, ಅಂದರೆ ಅಕ್ಷರಗಳು, ಅಂಕೆಗಳು, ಚಿತ್ರಗಳು, ವಿರಾಮ ಚಿಹ್ನೆಗಳು ಹಾಗೂ ಖಾಲಿ ಸ್ಥಾನ, ದ್ವಿಮಾನ ಪದ್ಧತಿಯಲ್ಲಿ ಸ್ವೀಕರಿಸಿ ಅರ್ಥೈಸಿಕೊಳ್ಳುತ್ತದೆ.
ಹಾರ್ಡ್ವೇರ್ ಮತ್ತು ಸಾಫ್ಟ್ವೇರ್
          ಕಂಪ್ಯೂಟರ್ಬಳಸುವ ಮೊದಲು ಅದರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಕಂಪ್ಯೂಟರ್ನಲ್ಲಿ ಎರಡು ವಿಭಾಗಗಳಿವೆ. ಅವುಗಳನ್ನು ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಎಂದು ಕರೆಯುತ್ತಾರೆ. ಹಾರ್ಡ್ವೇರ್ ಅಂದರೆ ಯಂತ್ರಾಂಶಗಳು ಅಥವಾ ಯಂತ್ರ ಭಾಗಗಳು. ಯಂತ್ರ ಭಾಗಗಳಲ್ಲಿ ಸಿಪಿಯು (ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್), ಮಾನಿಟರ್, ಕೀಬೋರ್ಡ್, ಮೌಸ್ ಮುಂತಾದವುಗಳು ಸೇರಿವೆ. ಸಾಫ್ಟ್ವೇರ್ ಅಂದರೆ ಕಂಪ್ಯೂಟರ್ ತಂತ್ರಾಂಶ ಭಾಗ. ಸಾಫ್ಟ್ವೇರ್ ಭೌತಿಕವಾಗಿ ಸ್ಪರ್ಶಿಸಲು ಬರುವುದಿಲ್ಲ.
            ಸಾಫ್ಟ್ವೇರ್ಗಳನ್ನು ಪ್ರಮುಖವಾಗಿ ಮೂರು ಭಾಗಗಳಾಗಿ ವಿಂಗಡಿಸುತ್ತಾರೆ. ಅವುಗಳೆಂದರೆ ಸಿಸ್ಟಂ ಸಾಫ್ಟ್ವೇರ್, ಪ್ರೊಗ್ರಾಮಿಂಗ್ ಸಾಫ್ಟ್ವೇರ್ ಮತ್ತು ಅಪ್ಲಿಕೇಶನ್ ಸಾಫ್ಟ್ವೇರ್. ಒಂದು ಕಂಪ್ಯೂಟರ್ ಅನ್ನು ಬಳಸುವಲ್ಲಿನ ಮೂಲ ಕಾರ್ಯಗಳನ್ನು ಸಿಸ್ಟಮ್ ಸಾಫ್ಟ್ವೇರ್ ರೂಪಿಸುತ್ತದೆ ಮತ್ತು ಕಾರ್ಯಗಳಿಗೆ ಚಾಲನೆ ನೀಡುತ್ತದೆ. ಇದು ಡಿವೈಸ್ ಡ್ರೈವರ್ಗಳು, ಆಪರೇಟಿಂಗ್ ಸಿಸ್ಟಮ್‌, ಸರ್ವರ್ಗಳು, ವಿಂಡೋ ಸಿಸ್ಟಂ ಮುಂತಾದವುಗಳ ಸಂಯೋಜನೆಯನ್ನು ಒಳಗೊಂಡಿರುತ್ತದೆ. ಸಿಸ್ಟಂ ಸಾಫ್ಟ್ವೇರ್ ಕಂಪ್ಯೂಟರ್ನಲ್ಲಿ ಬಳಸಲಾಗುವ ಬೇರೆ ಬೇರೆ ಹಾರ್ಡ್ವೇರ್ ಭಾಗಗಳು ಸಂಯೋಜಿತವಾಗಿ ಕಾರ್ಯ ನಿರ್ವಹಿಸುವಂತೆ ವ್ಯವಸ್ಥಿತಗೊಳಿಸುತ್ತದೆ. ಪ್ರೋಗ್ರಾಮಿಂಗ್ ಸಾಫ್ಟ್ವೇರ್ ಕಂಪ್ಯೂಟರ್ ಸಾಫ್ಟ್ವೇರ್ಗಳನ್ನು ಮತ್ತು ಪ್ರೋಗ್ರಾಮ್ಗಳನ್ನು ಬರೆಯಲು ಸಹಾಯ ಮಾಡುತ್ತದೆ. ಅಂತಿಮ ಬಳಕೆದಾರರಾದ ನಮಗೆ ಅಪ್ಲಿಕೇಶನ್ ಸಾಫ್ಟ್ವೇರ್ಗಳನ್ನು ಬಳಸುವ ಕುರಿತು ತಿಳಿದಿದ್ದರೆ ಸಾಕು.
ಅಪ್ಲಿಕೇಶನ್ ಸಾಫ್ಟ್ವೇರ್
          ಕಂಪ್ಯೂಟರ್ಎಂದರೆ ಬಹೂಪಯೋಗಿ ಯಂತ್ರ ಎಂಬುದು ಅಪ್ಲಿಕೇಶನ್ ಸಾಫ್ಟ್ವೇರ್ ಕುರಿತು ತಿಳಿದಾಗ ನಮಗೆ ಅರಿವಾಗುತ್ತದೆ. ವಿಭಿನ್ನ ಕಾರ್ಯಗಳಲ್ಲಿ ಸಹಾಯಕವಾಗುವಂತೆ ಅಪ್ಲಿಕೇಶನ್ ಅಥವಾ ಬಳಕೆಯ ಸಾಫ್ಟ್ವೇರ್ಗಳನ್ನು ರೂಪಿಸಿರಲಾಗುತ್ತದೆ. ಇದರಲ್ಲಿ ಅನೇಕ ಪ್ರಕಾರದ ಸಾಫ್ಟ್ವೇರ್ಅಪ್ಲಿಕೇಶನ್ಗಳಿದ್ದು, ಇಂಟರ್ನೆಟ್ ಬಳಸಲು ಬೇಕಾದ ಬ್ರೌಸರ್ ಕೂಡಾ ಇದರಲ್ಲಿ ಬರುತ್ತದೆ.
          ಬರವಣಿಗೆ ಮಾಡಲು, ಕಂಪ್ಯೂಟರ್ ಆಧಾರಿತ ಚಿತ್ರ ರಚಿಸಲು, ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಎಡಿಟ್ ಮಾಡಲು, ದತ್ತಾಂಶ ಸಂಗ್ರಹಣೆಮಾಡಲು, ಗಣನ ಕಾರ್ಯಗಳಿಗೆ ಬಳಸಲು ಮತ್ತು ವೀಡಿಯೋ ಗೇಮ್ಗಳಿಗಾಗಿ ವಿಭಿನ್ನ ಸಾಫ್ಟ್ವೇರ್ ಅಪ್ಲಿಕೇಶನ್ಗಳು ಇರುತ್ತವೆ.ಸಾಮಾನ್ಯವಾಗಿ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಇರುವ ಕಂಪ್ಯೂಟರ್ನಲ್ಲಿ ಕೆಳಗಿನ ಅಪ್ಲಿಕೇಶನ್ಗಳು ಇರುತ್ತವೆ: ಬರವಣಿಗೆ ಹಾಗೂ ದತ್ತಾಂಶ ಸಂಗ್ರಹಣೆಗಾಗಿ ವರ್ಡ್ಪ್ಯಾಡ್, ನೋಟ್ಪ್ಯಾಡ್, ಎಂಎಸ್ ವರ್ಡ್, ಎಂಎಸ್ ಎಕ್ಸೆಲ್ ಮುಂತಾದ ಸಾಫ್ಟ್ವೇರ್ಗಳು, ಚಿತ್ರ ಬಿಡಿಸಲು ಪೇಂಟ್, ಗೇಮ್ಗಳು, ಇಂಟರ್ನೆಟ್ ಬ್ರೌಸರ್ ಮುಂತಾದವುಗಳು ಇರುತ್ತವೆ. ಇವಲ್ಲದೇ ಅಗತ್ಯಕ್ಕೆ ತಕ್ಕಂತೆ ನಾವು ಹೊಸ ಸಾಫ್ಟ್ವೇರ್ ಅಪ್ಲಿಕೇಶನ್ಗಳನ್ನು ಕೂಡಾ ಸ್ಥಾಪನೆ (ಇನ್ಸ್ಟಾಲ್) ಮಾಡಿಕೊಳ್ಳಬಹುದು. ಉದಾಹರಣೆಗೆ ಡೆಸ್ಕ್ಟಾಪ್ ಡಿಕ್ಷನರಿಗಳು, ಮ್ಯಾಪ್ಗಳು, ಫೋಟೋ ಎಡಿಟ್ ಮಾಡುವ ಅಡೋಬ್ ಫೋಟೋಶಾಪ್, ಪುಟವಿನ್ಯಾಸ ಮಾಡುವ ಇನ್ಡಿಸೈನ್ ಅಥವಾ ಕ್ವಾರ್ಕ್ ಎಕ್ಸ್ಪ್ರೆಸ್, ಡಿಜಿಟಲ್ ಚಿತ್ರಗಳನ್ನು ಹಾಗೂ ಎನಿಮೇಶನ್ ಚಿತ್ರಗಳನ್ನು ಮಾಡುವ ಇಲ್ಲಸ್ಟ್ರೇಟರ್ ಮುಂತಾದವುಗಳು. ಇವಲ್ಲದೇ ಬೇರೆ ಬೇರೆ ವಿಜ್ಞಾನ, ವೈದ್ಯಕೀಯ, ಬೇರೇ ಬೇರೆ ವ್ಯವಹಾರಗಳಲ್ಲಿರುವವರು ತಮ್ಮ ಅಗತ್ಯಕ್ಕೆ ತಕ್ಕಂತೆ ಬೇರೆ ಬೇರೆ ಸಾಫ್ಟ್ವೇರ್ಗಳನ್ನು ಸ್ಥಾಪಿಸಿಕೊಂಡು ಬಳಸುತ್ತಾರೆ. ಸಾಫ್ಟ್ವೇರ್ಗಳ ಬಳಕೆಯಿಂದ ಅವರ ದೈನಂದಿನ ಕಾರ್ಯಗಳು ಅತ್ಯಂತ ಸುಲಭವಾಗುತ್ತವೆ. ಸಾಫ್ಟ್ವೇರ್ ಇಂಜಿನಿಯರುಗಳು ಇಂತಹ ವಿಭಿನ್ನ ಕ್ಷೇತ್ರಗಳ ಅಗತ್ಯಗಳಿಗೆ ತಕ್ಕಂತೆ ಅಪ್ಲಿಕೇಶನ್ ಸಾಫ್ಟ್ವೇರ್ಗಳನ್ನು ರೂಪಿಸುತ್ತಾರೆ.

          ಎಲ್ಲ ಅಪ್ಲಿಕೇಶನ್ಸಾಫ್ಟ್ವೇರ್ಗಳನ್ನು ಸ್ಥಾಪಿಸಲು ಮತ್ತು ಬಳಸಿಕೊಳ್ಳಲು ಒಂದು ವೇದಿಕೆಯಿದ್ದು, ಅದನ್ನು ಆಪರೇಟಿಂಗ್ ಸಿಸ್ಟಮ್ ಎಂದು ಕರೆಯುತ್ತಾರೆ. ಆಪರೇಟಿಂಗ್ ಸಿಸ್ಟಮ್ಸಹಾ ಒಂದು ಅತ್ಯಂತ ಮುಖ್ಯ ಸಾಫ್ಟ್ವೇರ್ ಆಗಿದೆ. ಇದು ಕಂಪ್ಯೂಟರ್ನಲ್ಲಿರುವ ಮೆಮರಿ, ಸಂಗ್ರಹ, ಪ್ರಕ್ರಿಯೆಗಳು, ಎಲ್ಲ ಸಾಫ್ಟ್ವೇರ್ ಹಾಗೂ ಹಾರ್ಡ್ವೇರ್ಗಳನ್ನು ನಿರ್ವಹಿಸುತ್ತದೆ. ಡಾಸ್, ವಿಂಡೋಸ್, ಲಿನಕ್ಸ್ ಮುಂತಾದವುಗಳು ಆಪರೇಟಿಂಗ್ ಸಿಸ್ಟಮ್ಗೆ ಉದಾಹರಣೆಯಾಗಿವೆ.
ಕಂಪ್ಯೂಟರ್ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಕಂಪ್ಯೂಟರ್ಗೆ ನಾವು ಸೂಚನೆ ಅಥವಾ ಮಾಹಿತಿಯನ್ನು ನೀಡಲು ಬಳಸುವ ಸಾಧನಗಳನ್ನು ಇನ್ಪುಟ್ ಡಿವೈಸ್ ಎಂದು ಕರೆಯುತ್ತಾರೆ. ಇನ್ಪುಟ್ ಡಿವೈಸ್ಗಳಿಗೆ ಉದಾಹರಣೆಗಳೆಂದರೆ ಕೀಬೋರ್ಡ್, ಮೌಸ್, ಕಾಂಪ್ಯಾಕ್ಟ್ ಡಿಸ್ಕ್ಗಳು (ಸಿಡಿ), ಡಿಜಿಟಲ್ ವರ್ಸಟೈಲ್ ಡಿಸ್ಕ್ (ಡಿವಿಡಿ), ಡಿಜಿಟಲ್ ಕ್ಯಾಮೆರಾ, ಸ್ಕ್ಯಾನರ್ ಮುಂತಾದವುಗಳು. ನಾವು ಸಾಧನಗಳ ಮೂಲಕ ಮಾಹಿತಿ ಅಥವಾ ದತ್ತಾಂಶವನ್ನು ಕಂಪ್ಯೂಟರ್ಗೆ ನೀಡಿದಾಗ ಅದು ಮಾಹಿತಿಗಳನ್ನು ಪರಿಷ್ಕರಿಸಿ, ಸಂಸ್ಕರಿಸಿ ಕರಾರುವಾಕ್ಕಾದ ಫಲಿತಾಂಶವನ್ನು ನೀಡುತ್ತದೆ. ಫಲಿತಾಂಶಗಳು ಔಟ್ಪುಟ್ಡಿವೈಸ್ಗಳಾದ ಮಾನಿಟರ್, ಪ್ರಿಂಟರ್, ಸ್ಪೀಕರ್, ಹೆಡ್ಫೋನ್ಮುಂತಾದವುಗಳ ಮೂಲಕ ನಮಗೆ ದೊರೆಯುತ್ತವೆ. ಸೆಂಟ್ರಲ್ ಪ್ರೊಸೆಸಿಂಗ್ ಯುನಿಟ್ (ಸಿಪಿಯು) ಇನ್ಪುಟ್ ಮತ್ತು ಔಟ್ಪುಟ್ ಸಾಧನಗಳ ಕಾರ್ಯಗಳನ್ನು ನಿರ್ದೇಶಿಸುತ್ತದೆ.
ಕಂಪ್ಯೂಟರ್ ಪ್ರಕಾರಗಳು
          ಕಂಪ್ಯೂಟರ್ಗಳು ಗಾತ್ರ ಮತ್ತು ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಅನೇಕ ಶ್ರೇಣಿಯ. ಉನ್ನತ ಮಟ್ಟದ ವೈಜ್ಞಾನಿಕ ಮತ್ತು ಇಂಜಿನಿಯರಿಂಗ್ ಸಂಶೋಧನೆ ಮತ್ತು ರಚನೆಗಳಲ್ಲಿ ಬಳಕೆಯಾಗುವ ಸೂಪರ್ಕಂಪ್ಯೂಟರ್ಗಳಿಂದ ಹಿಡಿದು ಕ್ಯಾಲ್ಕುಲೇಟರ್, ಸ್ಟೀರಿಯೋ ಸಿಸ್ಟಂ ಮುಂತಾದವುಗಳಲ್ಲಿ ಬಳಕೆಯಾಗುವಂತೆ ಬೇರೆ ಬೇರೆ ಶ್ರೇಣಿಯ ಕಂಪ್ಯೂಟರ್ಗಳಿವೆ.
ಪರ್ಸನಲ್ ಕಂಪ್ಯೂಟರ್ಗಳು ಒಂದು ಬಾರಿ ಒಬ್ಬ ವ್ಯಕ್ತಿ ಬಳಸುವುದಕ್ಕೆ ಸಾಧ್ಯವಾಗುವಂತೆ ರೂಪಿಸಲ್ಪಟ್ಟಿರುತ್ತವೆ. ಡೆಸ್ಕ್‌‍ಟಾಪ್ ಕಂಪ್ಯೂಟರ್, ಲ್ಯಾಪ್ಟಾಪ್, ಟ್ಯಾಬ್ಲೆಟ್ ಪಿಸಿ ಮುಂತಾದವುಗಳು ಪರ್ಸನಲ್ ಕಂಪ್ಯೂಟರ್ಗೆ ಉದಾಹರಣೆಗಳು.
ಕಂಪ್ಯೂಟರ್ ಉಪಯೋಗಗಳು
          ಕಂಪ್ಯೂಟರ್ನಿಂದ ಸಾಮಾನ್ಯ ಬಳಕೆದಾರನಿಗೆ ಅನೇಕ ಉಪಯೋಗಗಳಿವೆ. ಅವುಗಳು ಯಾವುವೆಂದು ಇಲ್ಲಿ ನೋಡೋಣ:
·         ಕಂಪ್ಯೂಟರ್ನಲ್ಲಿ ದಾಖಲೆಗಳನ್ನು, ಮಾಹಿತಿಗಳನ್ನು, ಚಿತ್ರಗಳನ್ನು, -ಬುಕ್ಗಳನ್ನು, ಹಾಡುಗಳನ್ನು, ಚಲನಚಿತ್ರಗಳನ್ನು ಶೇಖರಿಸಿ ಇಡಬಹುದು.
ವಿದ್ಯಾರ್ಥಿಗಳು, ಸಂಶೋಧಕರು ಪ್ರೊಜೆಕ್ಟ್ ಸಿದ್ಧಗೊಳಿಸಲು, ಅಧ್ಯಯನ ಮಾಡಲು ಕಂಪ್ಯೂಟರ್ಅಪ್ಲಿಕೇಶನ್ಗಳನ್ನು ಬಳಸಿಕೊಳ್ಳಬಹುದು. ಎಂಎಸ್ ವರ್ಡ್ನಂತಹ ಅಪ್ಲಿಕೇಶನ್ಗಳಲ್ಲಿ ಬರೆಯುವುದು, ತಿದ್ದುವುದು, ಹೊಂದಿಸುವುದು ಅತ್ಯಂತ ಸುಲಭವಾಗಿದ್ದು, ಕೈಬರಹಕ್ಕಿಂತ ಇದು ಅದು ಅತ್ಯಂತ ಸುಲಭ ಮತ್ತು ವೇಗದ್ದಾಗಿರುತ್ತದೆ.
·         ಕಠಿಣವಾದ ಲೆಕ್ಕಗಳನ್ನು ಕಂಪ್ಯೂಟರ್ ಬಳಸಿ ಮಾಡುವುದು ಅತ್ಯಂತ ಸುಲಭವಾಗುತ್ತದೆ. ಕಲಿಕೆಯ ದೃಷ್ಟಿಯಿಂದ ಕಂಪ್ಯೂಟರ್ ಬಳಕೆ ಅತ್ಯಂತ ಪ್ರಯೋಜನಕಾರಿ.
·         ಕಂಪ್ಯೂಟರ್ನಲ್ಲಿ ವೀಡಿಯೋ ಗೇಮ್ ಆಡುವುದು ಅತ್ಯಂತ ಮನರಂಜನೀಯವಾಗಿರುತ್ತದೆ. ಹೊಸ ಹೊಸ ಆಟಗಳನ್ನು ಕಂಪ್ಯೂಟರ್ನಲ್ಲಿ ಸ್ಥಾಪಿಸಿಕೊಂಡು ಆಡಬಹುದು.
·         ಅಂತರಜಾಲವನ್ನು ಬಳಸಿ ಅಗತ್ಯ ಮಾಹಿತಿಗಳನ್ನು ಹುಡುಕಬಹುದು ಮತ್ತು ಅಂತರಜಾಲದಿಂದ ಪಡೆದ ಮಾಹಿತಿಗಳನ್ನು ಕಂಪ್ಯೂಟರ್ ಹಾರ್ಡ್ ಡ್ರೈವ್ಗಳಲ್ಲಿ ಶೇಖರಿಸಿ ಇಡಬಹುದು. ಇಮೇಲ್ ಮಾಡಲು, ಸಾಮಾಜಿಕ ಸಂವಹನ ನಡೆಸಲು ಬಳಸಬಹುದಾಗಿದೆ.
·         ಕಂಪ್ಯೂಟರ್ನಲ್ಲಿ ಬರೆದದ್ದನ್ನು, ಇಂಟರ್ನೆಟ್ನಿಂದ ಡೌನ್‌‍ಲೋಡ್ ಮಾಡಿದ್ದನ್ನು ಬಾಹ್ಯ ಹಾರ್ಡ್ಡಿಸ್ಕ್ಗಳಾದ ಸಿಡಿ, ಡಿವಿಡಿ, ಪೆನ್ಡ್ರೈವ್ ಮುಂತಾದವುಗಳ ಮುಖಾಂತರ ಇತರರೊಂದಿಗೆ ಹಂಚಿಕೊಳ್ಳುವುದು ಅಥವಾ ಬೇರೊಂದು ಕಂಪ್ಯೂಟರ್ಗೆ ವರ್ಗಾಯಿಸುವುದು ಎಲ್ಲವೂ ಸುಲಭ.
ಒಮ್ಮೆ ಕಂಪ್ಯೂಟರ್ ಮತ್ತು ಅಂತರಜಾಲದ ಬಳಕೆಯ ಜಗತ್ತಿಗೆ ತೆರೆದುಕೊಂಡರೆ, ಅದು ಅಸಂಖ್ಯ ಸಾಧ್ಯತೆಗಳನ್ನು ಒದಗಿಸುತ್ತದೆ, ಮತ್ತು ಕಲಿಕೆ ಅತ್ಯಂತ ಆಸಕ್ತಿದಾಯಕ ಮತ್ತು ಆನಂದದಾಯಕವಾದದ್ದಾಗಿರುತ್ತದೆ. ಕಂಪ್ಯೂಟರ್ ಬಳಕೆಯನ್ನು ಕನಿಷ್ಟ ಶಿಕ್ಷಣವಿರುವವರಿಗೂ ಕಲಿಯಲು ಸುಲಭವಾಗುವಂತೆ ರೂಪಿಸುವಲ್ಲಿ ನೂರಾರು ಇಂಜಿನಿಯರುಗಳ ಪಾತ್ರ ದೊಡ್ಡದಿದೆ. ಆಸಕ್ತಿಯಿಂದ ಕಲಿಯುವವರಿಗೆ ಕಂಪ್ಯೂಟರ್ ಬಳಕೆ ನಿಜಕ್ಕೂ ಅತ್ಯಂತ ಸುಲಭವಿದೆ.


   ಸ್ವತಂತ್ರ ಭಾರತದಲ್ಲಿ ನೇಮಕಗೊಂಡ ಪ್ರಥಮ ಶಿಕ್ಷಣದ ಆಯೋಗ ಯಾವುದು?
.    ಕೆಎಸ್ಆರ್ಪಿ (KSRP) ವಿಸ್ತೃತ ರೂಪವೇನು?      ಡಾ||ರಾಧಾಕೃಷ್ಣನ್ ಆಯೋಗ       
.    ಹಸಿರು ಸಸ್ಯಗಳು ಯಾವ ಕ್ರಿಯೆಯ ಮೂಲಕ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ.    ಕರ್ನಾಟಕ ಸ್ಟೇಟ್ ರಿಸರ್ವ್ ಪೋಲಿಸ್
.    ಡಿ.ಟಿ.ಹೆಚ್. ಸೇವೆ ಆರಂಭವಾದ ವರ್ಷ  ಯಾವುದು? .    ದ್ಯುತಿಸಂಶ್ಲೇಷಣೆ ಕ್ರಿಯೆ
.    ಶೂಲಪಾಣಿ ಇದು ಯಾರ ಕಾವ್ಯನಾಮವಾಗಿದೆ?
.    ಜಾಕೀರ್ ಹುಸೇನ್ ಎಂದಾಕ್ಷಣ ನೆನಪಿಗೆ ಬರುವ ವಾಧ್ಯ ಯಾವುದು?
.    ಸಚಿನ್ ತೆಂಡೂಲ್ಕರ್ ರವರ ಮೇಣದ ಪ್ರತಿಮೆ ಆಸ್ಟ್ರೇಲಿಯಾದ ಯಾವ ಕ್ರೀಡಾಂಗಣದಲ್ಲಿದೆ?
.    ಸೋಮೇಶ್ವರ ವನ್ಯಪ್ರಾಣಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
.    ಲಾಲ್ಲಜಪತ್ರಾಯರ ವಂದೇ ಮಾತರಂ ಯಾವ ಭಾಷೆಯ ಪತ್ರಿಕೆಯಾಗಿತ್ತು?
೧೦.    ಬ್ರಿಟಿಷ್ ಸರ್ಕಾರದಲ್ಲಿ ಪೋಲಿಸ್ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಯನ್ನು ತಂದ ಗೌವರ್ನರ್ ಜನರಲ್ ಯಾರು?
೧೧.    ಅಂಗಾರಕ ಹೆಸರಿನ ಗ್ರಹ ಯಾವುದು?
೧೨.    ವಿಕಿರಣಗಳು ಸೂಸುವ ಮೂರು ವಿಧವಾದ ಕಿರಣಗಳು ಯಾವವು?
೧೩.    ಕರ್ನಾಟಕ ಪೊಲೀಸ್ ಕಾಯಿದೆ ಜಾರಿಗೆ ಬಂದ ವರ್ಷ ಯಾವುದು?
೧೪.    ಭಾರತೀಯ ಮಾವು ಸಂಶೋಧನಾ ಸಂಸ್ಥೆ ಎಲ್ಲಿದೆ?
೧೫.    ನಿಜಾತ್ಮ ರಾಮರಾಯ ಇದು ಯಾರ ಅಂಕಿತನಾಮವಾಗಿದೆ?
೧೬.    ಡಾ||ಸಲೀಂ ಅಲಿ ಪಕ್ಷಿಗಳ ಅಭಯಾರಣ್ಯ ಯಾವ ರಾಜ್ಯದಲ್ಲಿದೆ?
೧೭.    ಕಾಂಬೋಡಿಯಾ ದೇಶದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ಹೆಸರೇನು?
೧೮.    ತ್ರಿಭಾಷಾ ಸೂತ್ರವನ್ನು ಪ್ರತಿಪಾದಿಸಿದ ಆಯೋಗ ಯಾವುದು?
೧೯.    ಲಕ್ಷ್ಮಣ ತೀರ್ಥ ನದಿಯ ಉಗಮ ಸ್ಥಳ ಯಾವುದು?
೨೦.     ನೇಷನ್ ಇನ್ ದಿ ಮೇಕಿಂಗ್ ಕೃತಿಯನ್ನು ರಚಿಸಿದವರು ಯಾರು?
೨೧.    ಒಂದು ಮಸೂರದ ಸಾಮರ್ಥ್ಯವನ್ನು ಅಳೆಯುವ ಮಾನ ಯಾವುದು?
೨೨.    ಕರ್ನಾಟಕ ರಾಜ್ಯ ಮಹಿಳಾ ವಿಶ್ವ ವಿದ್ಯಾಲಯ ಯಾವ ಜಿಲ್ಲೆಯಲ್ಲಿದೆ?
೨೩.    ಶ್ರೀನಿವಾಸ ರಾಮಾನುಜಂ ರವರ ಹುಟ್ಟೂರು ಯಾವುದು?
೨೪.    ಪ್ರಸಿದ್ಧ ಯಾತ್ರಾ ಸ್ಥಳ ಧರ್ಮಸ್ಥಳ ಯಾವ ನದಿಯ ದಂಡೆಯ ಮೇಲಿದೆ?
೨೫.    ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಸಂಸ್ಥಾಪಕರು ಯಾರು?
೨೬.    ಚುಟುಕು ಬ್ರಹ್ಮ ಎಂದು ಕನ್ನಡದ ಯಾವ ಸಾಹಿತಿಯನ್ನು ಕರೆಯುತ್ತಾರೆ?
೨೭.    ಭಾರತದ ಪ್ರಥಮ ಸಿಖ್ ರಾಷ್ಟ್ರಪತಿ ಯಾರು?
೨೮.    ಗೋವಾ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು?
೨೯.    ಕನ್ನಡದ ನಟಿ ತಾರಾಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಚಲನಚಿತ್ರ ಯಾವುದು?
ಉತ್ತರಗಳು:               
.    ಜೂನ್ ೨೦೦೪            .    ಬಿ.ಶಿವಮೂರ್ತಿ             .    ತಬಲಾ         .    ಮೆಲ್ಬೋರ್ನ್ ಕ್ರೀಡಾಂಗಣ
.    ದಕ್ಷಿಣ ಕನ್ನಡ .    ಉರ್ದು          ೧೦.    ಲಾರ್ಡ್ ಕಾರ್ನ್ವಾಲಿಸ್        ೧೧.    ಮಂಗಳ ಗ್ರಹ
೧೨.    ಅಲ್ಟಾ ಬೀಟ ಗಾಮಾ                ೧೩.    ೧೯೬೩   ೧೪.    ವಿಜಯವಾಡ (ಆಂಧ್ರಪ್ರದೇಶ)
೧೫.    ಮಾದರ ಚನ್ನಯ್ಯ     ೧೬.    ಗೋವಾ ೧೭.    ರೀಯಲ್   ೧೮.    ಕೊಠಾರಿ ಆಯೋಗ
೧೯.    ಕೊಡಗು ಜಿಲ್ಲೆಯ ಮುನಿಕಾಡು ಅರಣ್ಯ ಪ್ರದೇಶ       ೨೦.    ಮೌಲಾನಾ ಆಜಾದ್
೨೧.    ಡಯಾಪ್ಟರ್               ೨೨.    ವಿಜಯಪುರ               ೨೩.    ಈರೋಡ (ತಮಿಳುನಾಡು)    ೨೪.    ನೇತ್ರಾವತಿ
೨೫.    ಸರ್. ಅಹಮ್ಮದ್ ಖಾನ್          ೨೬.    ದಿನಕರ ದೇಸಾಯಿ   ೨೭.    ಗ್ಯಾನಿ ಜೇಲ್ಸಿಂಗ್
೨೮.    ೩೦ಮೇ೧೯೮೭  ೨೯.    ಹಸೀನಾ

ಪ್ರಶ್ನೆಗಳು:
.    ವಿಶ್ವಸಂಸ್ಥೆಯ ಶಿಕ್ಷಣ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಮುಖ್ಯ ಕಛೇರಿ ಎಲ್ಲಿದೆ?
ಉತ್ತರಗಳು:
.    ಪ್ಯಾರಿಸ್
.    ಯುನೈಟೆಡ್ ನೇಷನ್ಸ್ ಇಂಟರ್ನ್ಯಾಷನಲ್ ಚಿಲ್ಡ್ರನ್ ಎಮರ್ಜೆನ್ಸಿ ಫಂಡ್
.    ವೀ.ಚಿಕ್ಕವೀರಯ್ಯಾ
.    .ಆರ್.ಕೃಷ್ಣಶಾಸ್ತ್ರಿ
.    ಮೇಡಂ ಟುಸ್ಸಾಡ್ಸ್ ಮ್ಯೂಸಿಯಂ
.    ಬಿಜೆಪಿ
.    ಕ್ಲೆಮೆಂಟ್ ಆಟ್ಲೆ
.    ರಾಜಶೇಖರ ಚರಿತ್ರಮು
.    ಗಂಗೂಬಾಯಿ ಹಾನಗಲ್
೧೦.    ಪ್ರೊ.ಎಲ್.ಎಸ್.ಶೇಷಗಿರಿರಾವ್
೧೧.    ಚೌಡಪ್ಪ ಮತ್ತು ಭದ್ರಪ್ಪ ಸಹೋದರರು
೧೨.    ತರಾನಾಯೇಹಿಂದಿ
೧೩.    ೧೯೬೧
೧೪.    ಬ್ಯಾರಕ್ಪುರ (.ಬಂಗಾಳ)
೧೫.    ಐರ್ಲೆಂಡ್
೧೬.    ಒರಿಸ್ಸಾ
೧೭.    ಮುಕ್ತಾಯಕ್ಕ
೧೮.    ಸಿ ವಿಟಮಿನ್
೧೯.    ಕೈಮೊಗ್ರಾಫ್
೨೦.    ನೇಫಾ
೨೧.    ಡಾ|| ರಾಜೇಂದ್ರಪ್ರಸಾದ
೨೨.    ಮಹಾಪದ್ಮನಂದ
೨೩.    ಜಪಾನಿನ ಮೋನೋ ರೈಲ್
೨೪.    ೨ನೇ ಬಹುದ್ದೂರ್ ಶಾ
೨೫.    ಮಾಜೀದ್ ಅಬ್ದುಲ್ಲಾ (ಸೌದಿ ಅರೇಬಿಯಾ)
೨೬.    ಬೆಂಗಳೂರು
೨೭.    ವಡೆ
೨೮.    ಪ್ರಸನ್ನ ಮಾಧವಗುಡಿ
೨೯.    ರಾಕ್ಲೈನ್ ವೆಂಕಟೇಶ್
೩೦.    ಸಿದ್ದಯ್ಯಾ ಪುರಾಣಿಕ
.    ಯುನಿಸೆಫ್ (UNICEF) ವಿಸ್ತೃತ ರೂಪವೇನು?
.    ವೀಚಿ ಇದು ಯಾರ ಕಾವ್ಯನಾಮವಾಗಿದೆ?
.    ೧೯೧೮ರಲ್ಲಿ ಆರಂಭವಾದ ಪ್ರಬುದ್ಧ ಕರ್ನಾಟಕ ಪತ್ರಿಕೆಯ ಮೊದಲ ಸಂಪಾದಕರು ಯಾರಾಗಿದ್ದರು?
.    ಸಲ್ಮಾನ್ ಖಾನ್ ಮೇಣದ ಪ್ರತಿಮೆ ಲಂಡನ್ನಿನ ಯಾವ ಮ್ಯೂಸಿಯಂನಲ್ಲಿದೆ?
.    ದೇಶದ ಮೊಟ್ಟ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕಿರಣ ಬೇಡಿಯವರು ಇತ್ತೀಚೆಗೆ ಯಾವ ಪಕ್ಷ ಸೇರಿಕೊಂಡರು?
.    ಭಾರತಕ್ಕೆ ಸ್ವತಂತ್ರ್ಯ ದೊರೆತಾಗ ಇಂಗ್ಲೆಂಡಿನ ಪ್ರಧಾನಿ ಯಾರಾಗಿದ್ದರು?
.    ತೆಲುಗು ಸಾಹಿತ್ಯದ ಪ್ರಥಮ ಕಾದಂಬರಿ ಯಾವುದು?
.    ಸಂಗೀತ ಗಂಗಾದೇವಿ ಎಂದು ಕರ್ನಾಟಕದ ಯಾವ ಮಹಿಳೆಯನ್ನು ಕರೆಯುತ್ತಾರೆ?
೧೦.    ಮೊದಲ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದವರು ಯಾರು?
೧೧.    ಕೆಳದಿ ರಾಜ್ಯದ ಸಂಸ್ಥಾಪಕರು ಯಾರು?
೧೨.    ಸಾರೆ ಜಹಾಂಸೆ ಅಚ್ಚಾ ಗೀತೆಯ ಶೀರ್ಷಿಕೆ ಯಾವುದು?
೧೩.    ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ಸಂಸ್ಥೆಯನ್ನು ಯಾವ ವರ್ಷ ಆರಂಭಿಸಲಾಯಿತು?
೧೪.    ಭಾರತೀಯ ಸೆಣಬು ಸಂಶೋಧನಾ ಸಂಸ್ಥೆ ಎಲ್ಲಿದೆ?
೧೫.    ಭಾತರದ ಸಂವಿಧಾನದಲ್ಲಿ ರಾಜ್ಯ ನೀತಿ ನಿರ್ದೇಶಕ ತತ್ವಗಳನ್ನು ಯಾವ ದೇಶದ ಸಂವಿಧಾನದಿಂದ ಆರಿಸಿಕೊಳ್ಳಲಾಗಿದೆ?
೧೬.    ಅಶೋಕನ ಮನ ಪರಿವರ್ತಿಸಿದ ಕಳಿಂಗ ಯುದ್ಧ ನಡೆದ ಸ್ಥಳ ಇಂದಿನ ಯಾವ ರಾಜ್ಯದಲ್ಲಿ ಬರುತ್ತದೆ?
೧೭.    ಅಜಗಣ್ಣ ತಂದೆ ಇದು ಯಾರ ಅಂಕಿತನಾಮವಾಗಿದೆ?
೧೮.    ಗಾಯಗಳು ಬೇಗ ವಾಸಿಯಾಗಲು ಬೇಕಾಗುವ ವಿಟಮಿನ್ ಯಾವುದು?
೧೯.    ಮಾನವನ ಉಸಿರಾಟವನ್ನು ಅಳೆಯಲು ಬಳಸುವ ಉಪಕರಣ ಯಾವುದು?
೨೦.    ಅರುಣಾಚಲ ಪ್ರದೇಶಕ್ಕೆ ಇದ್ದ ಮೊದಲ ಹೆಸರು ಯಾವುದು?
೨೧.    ಭಾರತದ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾದವರು ಯಾರು?
೨೨.    ನಂದರ ವಂಶ ಸ್ಥಾಪಕ ಯಾರು?
೨೩.    ಪ್ರಪಂಚದ ಅತೀ ವೇಗದ ರೈಲು ಯಾವುದು?
೨೪.    ಭಾರತದ ಮೊಘಲ್ ಸಾಮ್ರಾಜ್ಯದ ಕೊನೆಯ ಚಕ್ರವರ್ತಿ ಯಾರು?
೨೫.    ಅತಿ ಹೆಚ್ಚು ಅಂತರಾಷ್ಟ್ರೀಯ ಪುಟ್ಬಾಲ್ ಪಂದ್ಯಗಳನ್ನು  ಆಡಿದ ಆಟಗಾರ ಯಾರು?
೨೬.    ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ಕಲ್ಚರ್  ಕರ್ನಾಟಕದಲ್ಲಿ ಎಲ್ಲಿದೆ?
೨೭.    ಗೋಕಾಕ್ ಕರದಂಟಿಗೆ ಪ್ರಸಿದ್ಧಯಾದರೆ ಮದ್ದೂರು ಯಾವುದಕ್ಕೆ ಪ್ರಸಿದ್ಧವಾಗಿದೆ?
೨೮.    ೨೪ ಘಂಟೆಗಳ ನಿರಂತರ ಶಾಸ್ತ್ರೀಯ ಗಾಯನದಲ್ಲಿ ಗಿನ್ನಿಸ್ ದಾಖಲೆ ಮಾಡಿದ ಕನ್ನಡಿಗ ಯಾರು?
೨೯.    ಇತ್ತೀಚಿಗೆ ಬಿಡುಗಡೆಯಾದ ತಮಿಳು ಲಿಂಗ ಚಿತ್ರದ ನಿರ್ಮಾಪಕರು ಯಾರು?
ಜನವರಿ೩೦ ಹುತಾತ್ಮರ ದಿನ, ಮತ್ತು ವಿಶ್ವ ಕುಷ್ಠರೋಗ ನಿರ್ಮೂಲನಾ ದಿನ

1. ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷರಾದ ಮೊದಲ ಕನ್ನಡಿಗ ಯಾರು?       ರಾಮಕೃಷ್ಣ ಹೆಗಡೆ
.    ಕುಂದರನಾಡಿನ ಕಂದ ಎಂದು ಯಾವ ಸಾಹಿತಿಯನ್ನು ಕರೆಯುತ್ತಾರೆ? .               ಬಸವರಾಜ ಕಟ್ಟಿಮನಿ 
.    ಎಚ್.ಎಸ್.ಸಿ.ಎಲ್ (HSCL) ವಿಸ್ತೃತ ರೂಪವೇನು?  ಹಿಂದೂಸ್ಥಾನ್ ಸ್ಕೀಲ್ ವರ್ಕ್ಸ ಕನ್‌ಸ್ಟ್ರಕ್ಷನ್ ಲಿಮಿಟೆಡ್
.    ಅಖಂಡೇಶ್ವರ ಇದು ಯಾರ ಅಂಕಿತನಾಮವಾಗಿದೆ?              ಷಣ್ಮುಖಸ್ವಾಮಿ
.    ಕಂಪ್ಯೂಟರ್ ಚಿಪ್ ತಯಾರಿಕೆಯಲ್ಲಿ ಬಳಸುವ ಮೂಲವಸ್ತು ಯಾವುದು?  ಸಿಲಿಕಾನ್         
.    ರಾಮಾಯಣದ ಕಾಲದಲ್ಲಿ ಚಿತ್ರದುರ್ಗವನ್ನು ಯಾವ ಹೆಸರಿನಿಂದ ಕರೆಯಲಾಗುತಿತ್ತು? .           ಚಿನ್ನಮೂಲಾದ್ರಿ
.    ಒಂದು ಹೆಕ್ಟೇರಿನಲ್ಲಿ ಎಷ್ಟು ಚರದ ಮೀಟರುಗಳಿವೆ?                 ೧೦,೦೦೦       
.    ಕೆನಡಾದ ರಾಷ್ಟ್ರೀಯ ಪ್ರಾಣಿ ಯಾವುದು?              ನೀರುನಾಯಿ
.    ಶಿವಪ್ಪ ನಾಯಕನ ನಂತರ ಒಂದು ವರ್ಷದ ವರೆಗೆ ಕೆಳದಿಯ ಅರಸನಾದ ದೊರೆ ಯಾರು?   ವೆಂಕಟಪ್ಪನಾಯಕ
೧೦.    ಪ್ಲೇಗ್ ಕಾಯಿಲೆ ಯಾವ ಪ್ರಾಣಿಯಿಂದ ಹರಡುತ್ತದೆ?            ಇಲಿ
೧೧.    ವಿಜಯನಗರ ಕಾಲದ ಆಡಳಿತದ ಮುಖ್ಯ ಕಛೇರಿಯನ್ನು ಯಾವ ಹೆಸರಿನಿಂದ ಕರೆಯಲಾಗುತಿತ್ತು?    ದಿವಾನಖಾನೆ
೧೨.    ಹೆಸರಾಂತ ನಾಟಕಕಾರ ವಿಲಿಯಂ ಯೇಟ್ಸ್ ಯಾವ ದೇಶದವರು?     ಐರ್‍ಲೆಂಡ್
೧೩.    ಸುಲ್ತಾನಪುರ ಸರೋವರ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ?          ಹರಿಯಾಣ
೧೪.    ಜಿ ಎಸ್ ಎಸ್ ಇದು ಯಾರ ಕಾವ್ಯನಾಮವಾಗಿದೆ?        ಗುಗ್ಗೇರಿ ಶಾಂತವೀರಪ್ಪ ಶಿವರುದ್ರಪ್ಪ  
೧೫.    ವಿಜಯನಗರದ ಹರಿಹರನಿಗಿದ್ದ ಬಿರುದು ಯಾವುದು?           ಪೂರ್ವ ಪಶ್ಚಿಮ ಸಮದ್ರೇಶ್ವರ 
  ೧೬.    ಬೆಂಕಿ ಕಡ್ಡಿಯನ್ನು ಕಂಡುಹಿಡಿದವರು ಯಾರು?     ಜಾನ್‌ವಾಕರ್ (ಬ್ರಿಟನ್)
೧೭.    ಪ್ರಿಯದರ್ಶಿನಿ ಆವಾಸ ಯೋಜನೆ ಯಾವ ರಾಜ್ಯದ ವಸತಿ ಯೋಜನೆಯಾಗಿದೆ? ಹರಿಯಾಣ
೧೮.    ಲಖ್ನೋ ನಗರ ಯಾವ ನದಿಯ ದಂಡೆಯ ಮೇಲಿದೆ?          ಗೋಮತಿ          
೧೯.    ಪಾಕಿಸ್ತಾನದ ಮೊದಲಿನ ರಾಜಧಾನಿ ಯಾವುದು?               ಕರಾಚಿ
೨೦.    ಮೈಥಾನ್ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?          ಬರಾಕರ್          
೨೧.    ವೇದಗಳ ಕಾಲದಲ್ಲಿ ಗ್ರಾಮದ ಮುಖ್ಯಸ್ಥನಿಗೆ ಏನೆಂದು ಕರೆಯುತ್ತಿದ್ದರು?                        ಗ್ರಾಮೀಣಿ
೨೨.    ಏಷ್ಯಾದ ಅತಿದೊಡ್ಡ ಮರುಭೂಮಿ ಯಾವುದು?     ಗೋಬಿ ಮರಭೂಮಿ (ಮಂಗೋಲಿಯಾ) 
೨೩.    ಟೆರ್ರಾಕೂಟಾ (ಮಣ್ಣಿನ ಶಿಲ್ಪಕಲಾ) ಪ್ರಚಾರಕ್ಕಾಗಿ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡದ ಮೊದಲ ಕಲಾವಿದೆ ಯಾರು?             ಎನ್.ಪುಷ್ಪಮಾಲಾ
೨೪.    ಇನ್ಫೋಸಿಸ್ ಎನ್.ಆರ್.ನಾರಾಯಣಮೂರ್ತಿಯವರಿಗೆ ೨೦೧೩ನೇ ಸಾಲಿನ ಬಸವ ಶ್ರೀ ಪ್ರಶಸ್ತಿ ನೀಡಿದೆ
            ಧಾರ್ಮಿಕ ಸಂಸ್ಥೆ ಯಾವುದು?         ಮುರುಘರಾಜೇಂದ್ರಮಠ (ಚಿತ್ರದುರ್ಗ
೨೫.    ಎಲೆಕ್ಟ್ರಾನ್ಗಳನ್ನ ಸಂಶೋಧಿಸಿದವರು ಯಾರು?               ಜೆ.ಜೆ.ಥಾಮಸನ್
೨೬.    ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಶಸ್ತ್ರ ದಂಗೆಯ ಮುಂದಾಳತ್ವ ವಹಿಸಿದವರು ಯಾರು?    ಕಲ್ಯಾಣಸ್ವಾಮಿ
೨೭.    ನಮ್ಮ ದೇಹದ ಅತಿದೊಡ್ಡ ಗ್ರಂಥಿ ಯಾವುದು?       ಮೇದೋಜೀರಕ ಗ್ರಂಥಿ
೨೮.    ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) ಮುಖ್ಯ ಕಛೇರಿ ಎಲ್ಲಿದೆ?        ಫಿಲಿಫೈನ್ಸನ ಮನಿಲಾದಲ್ಲಿ.  
೨೯.    ಕ್ರಿಕೆಟ್ ಆಟಗಾರ ಅರ್ಜುನ್ ರಣತುಂಗಾ ಯಾವ ದೇಶದವರು?           ಶ್ರೀಲಂಕಾ
 ಜಾನ್.ಎಫ್.ಕೆನಡಿ (ಅತ್ಯಂತ ಸಣ್ಣ ವಯಸ್ಸಿನಲ್ಲಿ ಅಮೇರಿಕಾದ ಅಧ್ಯಕ್ಷರಾದವರು)
ಜನವರಿ೨೩ದೇಶ ಪ್ರೇಮ ದಿನ    ಜನವರಿ೨೫ಮತದಾರರ ದಿನ





ಪ್ರಶ್ನೆಗಳು:
.    ರವೀಂದ್ರನಾಥ ಠಾಗೂರರ ಪ್ರಥಮ ಕವನ ಸಂಕಲನ ಯಾವುದು?
.    ಎಪಿಎಮ್ಸಿ (APMC) ವಿಸ್ತೃತ ರೂಪವೇನು?                       
ಉತ್ತರಗಳು:
೧.    ಸಾಂಗ್ಸ್ ಆಫ್ ದಿ ಮಾರ್ನಿಂಗ್
೨.    ಅಗ್ರಿಕಲ್ಚರ್ ಪ್ರೊಡ್ಯೂಸ್
 ಮಾರ್ಕೆಟಿಂಗ್ ಕಮಿಟಿ
೩.    ಬೆಂಗಳೂರು
೪.    ವಿದ್ಯಾ ಸರಸ್ವತಿ
೫.    ಅಂಕೋಲ
೬.    ಫ್ರಾನ್ಸ್
೭.    ಬಿಹಾರ
೮.    ದಂತಿದುರ್ಗ
೯.    ಕೊಡಗು
೧೦.    ಮುಂಬೈ
೧೧.    ಮೈಸೂರು
೧೨.    ವಿಜಯ ವಿಠಲ
೧೩.    ಸೀರೆಗಳು
೧೪.    ಲಾಮೋಗಳು
೧೫.    ವ್ಯಾಸರಾಯರು
೧೬.    ಕ್ಯಾವೆಂಡಿಸ್
೧೭.    ಶ್ರೀ ರಾಮಾನುಜಾಚಾರ್ಯರು
೧೮.    ಫರ್ಡಿನಾಂಡ್ ಕಿಟೆಲ್
೧೯.    ಸಿದ್ಧಾಶ್ರಮ
೨೦.    ಫ್ರಾಂಕಲಿನ್ ರೂಜ್‌ವೆಲ್ಟ್
೨೧.    ಕುಂಚೂರು ಬಾರಿಕೇರ ಸದಾಶಿವ
೨೨.    ತಾಮ್ರ ಮತ್ತು ತವರ
೨೩.    ದಾಮೋದರ
೨೪.    ಘಜ್ನಿ ಮಹಮ್ಮದ್
೨೫.    ಜವಹರಲಾಲ್ ನೆಹರು
೨೬.    ಜಿಪ್ಸಂ
೨೭.    ರೋಸೋ
೨೮.    ಹುಬ್ಬಳಿ
೨೯.    ೦೯.೧೧.೨೦೦೦
೩೦.    ಹಾ.ಮಾ.ನಾಯಕ್
ನ್ಯಾಷನಲ್ ಏರೋನಾಟಿಕಲ್ ಲ್ಯಾಬೋರೇಟರಿ (NAL) ಕರ್ನಾಟಕದಲ್ಲಿ ಎಲ್ಲಿದೆ?
.    ಹಂಸ ಪಕ್ಷಿಯನ್ನು ತನ್ನ ವಾಹನವನ್ನಾಗಿ ಹೊಂದಿರುವ ದೇವತೆ ಯಾರು?
.    ಉತ್ತರ ಕನ್ನಡ ಜಿಲ್ಲೆಯ ಯಾವ ತಾಲ್ಲೂಕನ್ನು ಗಾಂಧಿನೆಲೆ ಎಂದು ಕರೆಯುತ್ತಾರೆ?
.    ದೊಡ್ಡ ಟೈಡಲ್ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದ ಮೊದಲ ದೇಶ ಯಾವುದು?
.  ಯುರೇನಿಯಂ ಖನಿಜವನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ರಾಜ್ಯ ಯಾವುದು?
.    ಪ್ರಥ್ವಿವಲ್ಲಭ ಎಂದು ಬಿರುದು ಹೊಂದಿದ್ದ ರಾಷ್ಟ್ರಕೂಟರ ದೊರೆ ಯಾರು?
.    ಹುತ್ತರಿಹಬ್ಬ ಕುಣಿತಕ್ಕೆ ಪ್ರಸಿದ್ಧವಾಗಿರುವ ಜಿಲ್ಲೆ ಯಾವುದು?
೧೦.    ಕೇಂದ್ರೀಯ ಹತ್ತಿ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಎಲ್ಲಿದೆ?
೧೧.    ಮೊದಲ ವಿಶ್ವಕನ್ನಡ ಸಮ್ಮೇಳನ ನಡೆದ ಸ್ಥಳ ಯಾವುದು?
೧೨.    ವಿಶ್ವವಿಖ್ಯಾತ ಹಂಪಿಯಲ್ಲಿ ಕಲ್ಲಿನ ರಥ ಯಾವ ದೇವಾಲಯದಲ್ಲಿದೆ?
೧೩ಬ್ಯಾಡಗಿ ಮೆಣಸಿನ ಕಾಯಿಗೆ ಪ್ರಸಿದ್ಧವಾದರೆ ಇಲಕಲ್ ಯಾವುದಕ್ಕೆ ಪ್ರಸಿದ್ಧವಾಗಿದೆ?
೧೪.    ಟಿಬೇಟಿಯನ್ ಸನ್ಯಾಸಿಗಳನ್ನ ಏನೆಂದು ಕರೆಯುತ್ತಾರೆ?
೧೫.    ಶ್ರೀ ಕೃಷ್ಣ ಇದು ಯಾರ ಅಂಕಿತನಾಮವಾಗಿದೆ?
೧೬.    ಜಲಜನಕವನ್ನು ಕಂಡು ಹಿಡಿದವರು ಯಾರು?
೧೭.    ಶ್ರೀ ವೈಷ್ಣವ ಸಿದ್ಧಾಂತವನ್ನು ಸ್ಥಾಪಿಸಿದವರು ಯಾರು?
೧೮.    ಕನ್ನಡದ ಕೆಲಸಕ್ಕೆ ಡಾಕ್ಟರೇಟ್ ಪದವಿ ಗಳಿಸಿದ ಮೊದಲಿಗ ಯಾರು?
೧೯.    ವಿಶ್ವಾಮಿತ್ರನ ಆಶ್ರಮದ ಹೆಸರೇನು?
೨೦ಸತತವಾಗಿ ನಾಲ್ಕು ಬಾರಿ ಅಮೇರಿಕಾದ ಅಧ್ಯಕ್ಷ ಹುದ್ದೆ ಅಲಂಕರಿಸಿದವರು ಯಾರು?
೨೧.    ಕುಂಬಾಸ ಇದು ಯಾರ ಕಾವ್ಯ ನಾಮವಾಗಿದೆ?
೨೨.    ಗಂಟೆಗಳನ್ನು ಯಾವ ಲೋಹದ ಮಿಶ್ರಣದಿಂದ ತಯಾರಿಸುತ್ತಾರೆ?
೨೩.    ಝೂನ್ಸಿ ರಾಣಿ ಲಕ್ಷ್ಮಿಬಾಯಿಯ ದತ್ತು ಪುತ್ರನ ಹೆಸರೇನು?
೨೪.    ಫಿರ್ದೂಸಿ ಇವರು ಯಾರ ಆಸ್ಥಾನದ ಕವಿ ಆಗಿದ್ದರು?
೨೫.    ಭಾರತದ ವಿದೇಶಿ ನೀತಿಯ ಮುಖ್ಯ ಶಿಲ್ಪಿ ಯಾರು?
೨೬.    ಕ್ಯಾಲ್ಸಿಯಂ ಸಲ್ಫೇಟ್ನ್ನು ಸಾಮಾನ್ಯವಾಗಿ ಯಾವ ಹೆಸರಿನಿಂದ ಕರೆಯುತ್ತಾರೆ?
೨೭.    ಆಧುನಿಕ ಶಿಕ್ಷಣದ ಪಿತಾಮಹಾನೆಂದು ಕರೆಯಲ್ಪಡುವ ಶಿಕ್ಷಣ ತಜ್ಞ ಯಾರು?
೨೮.    ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಎಲ್ಲಿದೆ?     ೨೯.    ಉತ್ತರಖಂಡ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು?

1 ಕಾಮೆಂಟ್‌: