ಸೋಮವಾರ, ಮೇ 4, 2015

ಯಾಕೆ ಬೇಕು ಮತ್ತೊಬ್ಬ ರಾಷ್ಟ್ರಕವಿ. .?



ಯಾಕೆ ಬೇಕು ಮತ್ತೊಬ್ಬ ರಾಷ್ಟ್ರಕವಿ. .?
         
          ಕವಿಗಳ ದೃಷ್ಟಿಯಿಂದ ರಾಷ್ಟ್ರಕವಿ ಎಂಬ ಬಿರುದು ಅಗತ್ಯ ಆದರೆ ನನ್ನ ದೃಷ್ಟಿಯಿಂದ ಮತ್ತೊಬ್ಬ ರಾಷ್ಟ್ರಕವಿ ಏಕೆ? ಹೆಚ್ಚಿನವರಿಗೆ ರಾಷ್ಟ್ರಕವಿ ಎಂಬ ಬಿರುದನ್ನು ನೀಡಿದರೆ, ಆ ಸ್ಥಾನದ ಬೆಲೆಯು ಕಡಿಮೆಯಾಗುವ ಸಾಧ್ಯತೆಗಳಿವೆ. ಅಲ್ಲದೆ ಇಂದು ಈ ರೀತಿಯಾದ ಗೌರವವನ್ನು ಪಡೆಯುವವರನ್ನು ಆಯ್ಕೆಮಾಡುವುದು ಬಹುಕಷ್ಟಕರವಾಗಿದೆ ಮತ್ತು ಪಡೆಯುವ ಅರ್ಹತೆಯುಳ್ಳರು ವಿರಳ.
          ಸಾಹಿತ್ಯ ಕ್ಷೇತ್ರದಲ್ಲಿ ಅವರು ಸಾಧನೆ, ಸೇವೆ, ನಾಡಿನ ಸಂಸ್ಕೃತಿ, ಸಾಹಿತ್ಯ ಬೆಳವಣಿಗೆಗೆ ಅವರು ನೀಡಿದ ಕೊಡುಗೆ ಆಧಾರದ ಮೇಲೆ ಅರ್ಹರನ್ನು ಆಯ್ಕೆ ಮಾಡಬೇಕು. ಅದಕ್ಕೆ ಬೇಕಿರುವುದು ವಸ್ತು ನಿಷ್ಠ ನಡೆಯಷ್ಟೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅದಮ್ಯ ಸಾಧನೆ ಮಾಡಿರುವ, ಕವಿಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ಹಿಂದೆ ನೀಡಲಾಗುತ್ತಿತ್ತು.  ಆದರೆ, ಈಗ ಸಾಧನೆ ಕಡೆಗಣಿಸಿ, ಜನಾಭಿಪ್ರಾಯ ಸಂಗ್ರಹದ ಮೂಲಕ ಕವಿಯ ಆಯ್ಕೆ ನಡೆಯುತ್ತಿರುವುದು ಸರಿಯಲ್ಲ. ಹಿಂದಿನ ಪದ್ಧತಿಯಂತೆ ಆಯ್ಕೆ ನಡೆಯಲಿ.
 
-      -  ಕೆ.ಟಿ.ಆರ್.
ಬೆಂಗಳೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ