ಶುಕ್ರವಾರ, ಏಪ್ರಿಲ್ 11, 2014

ಪಕ್ಷಾಂತರ ಸರಿಯೇ?

ಪಕ್ಷಾಂತರ ಸರಿಯೇ?

ಚುನಾವಣೆ ಬಂತೆಂದರೆ ರಾಜಕಾರಣಿಗಳಿಗೆ ಒಂದು ರೀತಿಯ ಚಲನೆ ಉಂಟಾಗುತ್ತದೆ. ಲೋಕಸಭೆ ಮತ್ತು ರಾಜ್ಯ ಸಭೆಗಳಿಗೆ ಚುನಾವಣೆ ಬಂದರೆ ಅಧಿಕಾರ ಮತ್ತು ಟಿಕೆಟ್‍ ಪಡೆಯಲು ರಾಜಕಾರಣಿಗಳು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರುವ ಹಕ್ಕಿಗಳಾಗುತ್ತಾರೆ, ಇಂತಹವರು ಜನರಿಗೆ ಮಾಡುವುದಾದರೂ ಏನು?
ತಮ್ಮ ತೋಳ್ಬಲ, ಹಣಬಲ, ಜಾತಿ ಎಂಬ ಪ್ರಭಾವೀ ಬಲವನ್ನು ಪ್ರಯೋಗಿಸಿ ಪಕ್ಷಗಳಿಂದ ಟಿಕೆಟ್‍ ಗಿಟ್ಟಿಸುವ ಇಂತಹವರಿಗೆ ಜನತೆ ಸರಿಯಾದ ಬುದ್ಧಿಕಲಿಸಬೇಕು. ಪಕ್ಷಾಂತರ ನಿಷೇದ ಕಾಯ್ದೆ ಜಾರಿಮಾಡುವಂತೆ ಆಗ್ರಹಿಸಬೇಕು. ಮತ್ತು ಈ ರೀತಿ ಪಕ್ಷ ಬದಲಿಸುವ ನಾಯಕರು ನಿಸ್ವಾರ್ಥ ಸೇವೆ ಮಾಡುತ್ತಾರೆಯೆ? ಪ್ರಜೆಗಳು ಇಂತಹವರನ್ನು ಬಹಿಷ್ಕರಿಸಬೇಕು. ಆಗ ಮಾತ್ರ ಇಂತಹ ಪ್ರಕರಣಗಳಿಗೆ ಕಡಿವಾಣ ಬಿದ್ದಂತಾಗುತ್ತದೆ. ಮುಂದೆ ಇಂತವಹ ಪಕ್ಷಾಂತರ ನಡೆಸಲು ಎಲ್ಲರೂ ಹೆದರುತ್ತಾರೆ, ಚುನಾವಣೆ ಸಂದರ್ಭದಲ್ಲಿ ಬಹುತೇಕ ಪಕ್ಷಗಳಲ್ಲಿ ಟಿಕೆಟ್‍ ಸಿಗಲಿಲ್ಲ ಎನ್ನುವ ಕಾರಣಕ್ಕೆ ಪಕ್ಷದಿಂದ ಪಕ್ಷಕ್ಕೆ ಹಾರುವುದು ಎಷ್ಟು ಸರಿ? ಒಮ್ಮೆ ಯೋಚಿಸಿ. . . . ಮತದಾನ ಮಾಡಿ

-   PÉ.n.Dgï.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ