ಶುಕ್ರವಾರ, ಜುಲೈ 17, 2015

ಸಾಮಾನ್ಯ ಜ್ಞಾನದ ಪ್ರಶ್ನೆಗಳು



.    ಇತ್ತೀಚಿಗೆ ೨೦೧೫ ಅಂಬೇಡ್ಕರ್ ಪ್ರಶಸ್ತಿಯನ್ನು ಶ್ರೀ ಸಿದ್ದರಾಮಯ್ಯನವರು ಯಾರಿಗೆ ಪ್ರಧಾನ ಮಾಡಿದರು?                               ಡಾ|| ಎಸ್. ಎಸ್. ಅರಕೇರಿ
.    ಫೀಫಾ (FIFA) ವಿಸ್ತೃತ ರೂಪ?       ಪೆಡರೇಷನ್ ಇಂಟರ್ ನ್ಯಾಷನಲ್ ಡಿ ಪುಟ್ಬಾಲ್ ಅಸೋಸಿಯೇಷನ್
.    ಪದಬಂಧವನ್ನು ಮೊದಲಿಗೆ ಕಂಡುಹಿಡಿದವರು ಯಾರು?                ಆರ್ಥರ್ ವೈನಿ (ಇಂಗ್ಲೆಂಡ್)
.    ಡಿ. ಎಲ್. ಎನ್ ಇದು ಯಾರ ಕಾವ್ಯನಾಮವಾಗಿದೆ?                     ದೊಡ್ಡ ಬೆಲೆ ಲಕ್ಷ್ಮೀನರಸಿಂಹಚಾರ್ಯ
.    ಕೇಂದ್ರ ಆರ್ಯುವೇದ ಸಂಶೋಧನಾ ಸಂಸ್ಥೆ ಎಲ್ಲಿದೆ?                    ಭುವನೇಶ್ವರ
.    ಹಕ್ಕಿಗಳಲ್ಲಿ ಅತ್ಯಂತ ಚಿಕ್ಕದಾದ ಹಕ್ಕಿ ಯಾವುದು?                       ಹಮ್ಮಿಂಗ್ ಬರ್ಡ್
.    ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಚಿರಾಪುಂಜಿ ಯಾವ ರಾಜ್ಯದಲ್ಲಿದೆ?                     ಮೇಘಾಲಯ
.    ದಕ್ಷಿಣ ಭಾರತದಿಂದ ಮೊದಲ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದವರು ಯಾರು?    ಪಿ. ವಿ. ನರಸಿಂಹ ರಾವ್
.    ಸ್ಕರ್ವಿ ಖಾಯಿಲೆ ಯಾವ ವಿಟಮಿನ್ ಕೊರತೆಯಿಂದ ಬರುತ್ತದೆ?                  ವಿಟಮಿನ್ಸಿ
೧೦.    ಡಿಸ್ಕವರ್, ಪಲ್ಸರ್, ಬೈಕ್ ಗಳ ತಯಾರಿಕಾ ಕಂಪನಿ ಯಾವುದು?             ಬಜಾಜ್ ಆಟೋಮೊಬೈಲ್ಸ್
೧೧.    ಯಕ್ಷಗಾನ ಇದು ಯಾವ ರಾಜ್ಯದ ಸಾಂಸ್ಕೃತಿಕ ಕಲೆಯಾಗಿದೆ?                ಕರ್ನಾಟಕ
೧೨.    ಕಾವೇರಿ ಮತ್ತು ಅರ್ಕಾವತಿ ನದಿಗಳು ಸೇರುವ ಸ್ಥಳ ಯಾವುದು?              ಮೇಕೆದಾಟು
೧೩.    ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು ಯಾರು?                  ವೆಲ್ಲೆಸ್ಲಿ
೧೪.    ಧೂಮಕೇತುಗಳಲ್ಲಿ ಅತ್ಯಂತ ಜನಪ್ರಿಯ ಧೂಮಕೇತು ಯಾವುದು?           ಹ್ಯಾಲಿ ಧೂಮಕೇತು
೧೫.    ಕಪ್ಪೆಯ ಹೃದಯದಲಿ ಎಷ್ಟು ಬಾಗಗಳಿವೆ?                                ಮೂರು
೧೬.    ಗಾಳಿಯ ದಿಕ್ಕನ್ನು ತೋರಿಸುವ ಸಾಧನ ಯಾವುದು?                 ಅನಿಮೊಮೀಟರ್
೧೭.    ಭಾರತದ ಅತಿ ಹೆಚ್ಚು ಲಿಪಿಗಳು ಯಾವ ಲಿಪಿಯ ಮೂಲವನ್ನು ಹೊಂದಿವೆ?              ಬ್ರಾಹ್ಮಿ
೧೮.    ಪ್ರಪಂಚದಲ್ಲಿ ಯಾವ ಕ್ರೀಡೆಯ ಕುರಿತು ಅತಿ ಹೆಚ್ಚು ಪುಸ್ತಕಗಳು ಪ್ರಕಟವಾಗಿದೆ?       ಚದುರಂಗ
೧೯.    ಕಿಸಾನ್ ಘಾಟ್ ಇದು ಯಾವ ವ್ಯಕ್ತಿಗೆ ಸಂಬಂಧಿಸಿದೆ. ಸ್ಶಳವಾಗಿದೆ?              ಚರಣಸಿಂಗ್
೨೦.    ೧೯೦೯ ರಲ್ಲಿ ಕೌಟಿಲ್ಯನ ಅರ್ಥಶಾಸ್ತ್ರವನ್ನು ಸಂಗ್ರಹಿಸಿ ಪ್ರಕಟಿಸಿದವರು ಯಾರು?      ಶಾಮಾಶಾಸ್ತ್ರಿ
೨೧.    ಮದ್ರಾಸ್ತಮಿಳುನಾಡು ಎಂದು ನಾಮಕರಣಗೊಂಡ ವರ್ಷ ಯಾವುದು?           ೧೯೬೯
೨೨.    ರೆಕ್ಕೆಗಳೇ ಇಲ್ಲದ ಪಕ್ಷಿ ಯಾವುದು?                  ಕಿವಿ ಎಂಬ ಪಕ್ಷಿ
೨೩.    ಹೋರಾಟದ ಹಾದಿ ಇದು ಯಾವ ವ್ಯಕ್ತಿಯ ಆತ್ಮಕಥನವಾಗಿದೆ?               ಹೆಚ್. ನರಸಿಂಹಯ್ಯ
೨೪.    ರಾಮಾಯಣ ನಡೆಯಿತೆನ್ನಲಾಗುವ ಯುಗ ಯಾವುದು?                         ತ್ರೇತಾಯುಗ
೨೫.    .ಪಿ.ಎಲ್ ಕಿಂಗ್ಸ್ ಎಲೆವನ್ ಪಂಜಾಬ್ ತಂಡದ ಮಾಲೀಕರು ಯಾರು?             ಪ್ರೀತಿ ಜಿಂಟಾ
೨೬.    ಚೋಮನದುಡಿ ಚಲನಚಿತ್ರದ ನಿರ್ದೇಶಕರು ಯಾರು?               ಬಿ. ವಿ. ಕಾರಂತ
೨೭.    ರೈಟ್ ಲೈವ್ಲಿ ಹುಡ್ ಪ್ರಶಸ್ತಿ ಪ್ರಧಾನ ಮಾಡುವ ದೇಶ ಯಾವುದು?             ಸ್ವೀಡನ್
೨೮.   3 ಕಣ್ಣು ಹೊಂದಿರುವ ಟ್ವಿಟಾರ್ ಎಂಬ ಸರೀಸೃಪ ಯಾವ ದೇಶದಲ್ಲಿ ಕಂಡು ಬರುತ್ತವೆ?    ನ್ಯೂಜಿಲ್ಯಾಂಡ್
೨೯.    ಅತೀ ವೇಗವಾಗಿ ಬೆಳೆಯುವ ಮರ ಯಾವುದು?             ಬಿದಿರು
ಏಪ್ರೀಲ್  ೨೨ವಿಶ್ವ ಭೂ ದಿನ           ಏಪ್ರೀಲ್  ೨೩ವಿಶ್ವ ಪುಸ್ತಕ ಮತ್ತು ಗ್ರಂಥ ಸ್ವಾಮ್ಯ ದಿನ

ಪ್ರಶ್ನೆಗಳು:
1.    ಕೇಂದ್ರ ಸಂಗೀತನಾಟಕಅಕಾಡೆಮಿಯಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗಯಾರು?     ಡಾ||ಗಿರೀಶ್ಕಾರ್ನಾಡ್
2.    ಸಿಸ್ಮೋಗ್ರಫಿ ಇದುಯಾವುದರಕುರಿತುಅಧ್ಯಯನವಾಗಿದೆ?                           ಭೂಕಂಪ
3.    ಉಕಾಯ್ ನೀರಾವರಿಯೋಜನೆಯಾವ ನದಿಗೆ ಸಂಬಂಧಿಸಿದೆ?                        ತಪತಿ
4.    ಭಾರತದಲ್ಲಿಅತಿದೊಡ್ಡರೇಡಿಯೋಟೆಲಿಸ್ಕೋಪ್ಎಲ್ಲಿದೆ?                  ನಾರಾಯಣಗಾಂವ್ (ಪುಣೆ)
5.    ಯು.ಪಿ.ಎಸ್(UPS) ವಿಸ್ತøತರೂಪವೇನು?                             ಅನ್ಇನ್ಟೆರಪ್ಟಿಡ್ ಪವರ್ ಸಪ್ಲೈ
7.    1954ರಲ್ಲಿ ಪಾಟೀಲ ಪುಟ್ಟಪ್ಪನವರು ಹೊರಡಿಸಿದ ಪತ್ರಿಕೆಯಾವುದು?            ಪ್ರಪಂಚ
8.    ನಳಂದ ವಿಶ್ವವಿದ್ಯಾಲಯಯಾವಧರ್ಮದ ತತ್ವಗಳನ್ನು ತಳಹದಿಯಾಗಿ ಹೊಂದಿತ್ತು?        ಬೌದ್ಧ
9.   ಭಾರತದಲ್ಲಿ ಮೊದಲ ಬಾರಿಗೆ ರೈಲ್ವೆ ಮಾರ್ಗ ಆರಂಭವಾದಾಗ ಗವರ್ನರ್ಜನರಲ್     ಲಾರ್ಡ್ಡಾಲ್ ಹೌಸಿ
10.    ಚಂಪಾರಣ್ಯರೈತ ಚಳುವಳಿ ಇದುಯಾರ ಮುಂದಾಳತ್ವದಲ್ಲಿ ನಡೆಯಿತು?    ಗಾಂಧೀಜಿ
11.    ರಾಷ್ಟ್ರಧ್ವಜದಲ್ಲಿರುವ ಬಿಳಿ ವರ್ಣಯಾವುದರದೋತ್ಯಕವಾಗಿದೆ?         ಶಾಂತಿ, ಸ್ವಚ್ಛತೆ
12.    ರಾಷ್ಟ್ರಕೂಟರರಾಜ್ಯ ಸ್ಥಾಪನೆಗೆ ಅಡಿಪಾಯ ಹಾಕಿದದೊರೆಯಾರು?             ದಂತಿದುರ್ಗ
13.    ವಿಶ್ವದಅತಿದೊಡ್ಡಉಡದ ಹೆಸರೇನು?                          ಕ್ರೋಮೋಡೋಡ್ರಾಗನ್
14.    2004ರಲ್ಲಿ ಗೀತಾನಾಗಭೂಷಣನವರಯಾವಕೃತಿಗೆಕೇಂದ್ರ ಸಾಹಿತ್ಯಅಕಾಡೆಮಿ ಪ್ರಶಸ್ತಿ ದೊರಕಿದೆ? ಬದುಕು
15.    ಭಾರತದಲ್ಲಿಅತಿಎತ್ತರದಲ್ಲಿಜನ ವಾಸಿಸುವ ಭೂಭಾಗಯಾವುದು?   ಲಡಾಖ್
16.    1920ರಲ್ಲಿ ನಡೆದ ಮೊದಲ ಕರ್ನಾಟಕರಾಜಕೀಯ ಸಮ್ಮೇಳನದ ಅಧ್ಯಕ್ಷರು            ವಿ.ಪಿ.ಮಾಧವ್ರಾವ್
17.    ಧ್ವಜಅರ್ಧಮಟ್ಟ ಹಾಜರಿಸುವುದುಇದುಯಾವುದರ ಸಂಕೇತದ ನೋಚಕವಾಗಿದೆ?     ರಾಷ್ಟ್ರೀಯ ಶೋಕ
18.    ಇಸ್ರೇಲ್ ಶಾಸಕಾಂಗದಹೆಸರೇನು?             ನೆಸ್ಯಾಟ್
19.    ಪ್ರಥಮರಾಜ್ಯಪಾಲರಾದ ಮೊದಲ ಕನ್ನಡಿಗಯಾರು?          ಬಿ.ರಾಚಯ್ಯ
20.    ಮೇಲುಕೋಟೆಯಲ್ಲಿರುವ ಪ್ರಸಿದ್ಧ ದೇವಾಲಯಯಾವುದು?            ಚೆಲುವನಾರಾಯಣಸ್ವಾಮಿದೇವಸ್ಥಾನ
21.    ಟೆಲಿಗ್ರಾಫ್ ಸಂಶೋಧಕರುಯಾರು?                 ಎಂ.ಲ್ಯಾಮಂಡ್ (ಪ್ರಾನ್ಸ್)
22.    ಪೆನ್ಸಿಲ್ನಲ್ಲಿಉಪಯೋಗಿಸುವ ಲೆಡ್ ಪದಾರ್ಥಯಾವುದು?           ಗ್ರಾಫೈಟ್
23.    ವಿಶ್ವದಅತಿಎತ್ತರದಗೋಪುರಯಾವುದು?                      ಕೆನಾಡಾದ ಸಿ.ಎನ್.ಗೋಪುರ
24.    ಉಪಗ್ರಹಗಳಿಲ್ಲದ ಗ್ರಹಗಳು ಯಾವುವು?                      ಬುಧ ಮತ್ತು ಶುಕ್ರ
25.    ಇಂದ್ರಾಣಿರೆಹಮಾನ್ಇವರುಯಾವಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ?               ಭರತನಾಟ್ಯ
26.    ಬೈಬಲ್ಗೆಕನ್ನಡದಲ್ಲಿಏನೆಂದುಕರೆಯುತ್ತಾರೆ?                 ಸತ್ಯವೇದ
27.    ಭೀಮೇಶ ಕೃಷ್ಣ ಇದುಯಾರಅಂಕಿತನಾಮವಾಗಿದೆ?        ಹರಪ್ಪನಹಳ್ಳಿ ಭೀಮವ್ವ
28.    ಅಮೃತಸರದಲ್ಲಿರುವ ಸ್ವರ್ಣ ಮಂದಿರದ ಹೆಸರೇನು?      ದರ್ಬಾರ್ ಸಾಹೀಬ್
29.    ರೋವರ್ಸ್ ಕಪ ಯಾವಕ್ರೀಡೆಗೆ ಸಂಬಂಧಿಸಿದೆ?             ಫುಟ್ಬಾಲ್
ಮೇ – 1 ಕಾರ್ಮಿಕರ ದಿನ                          ಮೇ – 3 ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ
  ಪ್ರಶ್ನೆಗಳು:
.    ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಥಮ ನಿರ್ದೇಶಕರು ಯಾರು?        .ಎನ್ ಮೂರ್ತಿರಾವ್
.    ಟೆಲ್ಕೊ (TELCO) ವಿಸ್ತೃತ ರೂಪವೇನು?     ಟಾಟಾ ಇಂಜಿನಿಯರಿಂಗ್ ಅಂಡ್ ಲೋಕೋಮೋಟಿವ್ ಕಂಪನಿ
.    ಕೋಟಿ ವಿದ್ಯೆಗಳಲ್ಲಿ ಮೇಟಿ ವಿಧ್ಯೆಯೇ ಮೇಲು ಎಂದು ಹೇಳಿದವರು ಯಾರು?              ಸರ್ವಜ್ಞ\

.    ಬಂಕಲೇಶ್ವರಲಿಂಗ ಇದು ಯಾರ ಅಂಕಿತನಾಮವಾಗಿದೆ?              ಸುಂಕದ ಬಂಕಣ್ಣ
.    ಶೃಂಗೇರಿಯ ಶಾರದಾ ಪೀಠ ಸ್ಥಾಪಿಸಿದವರು ಯಾರು?                 ಶಂಕರಾಚಾರ್ಯರು
.    ಸಮೀಪ ದೃಷ್ಟಿದೋಶವನ್ನು ನಿವಾರಿಸಲು ಬಳಸುವ ಮಸೂರ ಯಾವುದು?    ನಿಮ್ನಮಸೂರ
.    ರಾಸಾಯನಿಕ ಪದಾರ್ಥಗಳಿಂದ ತಯಾರಾಗುವ ದಾರ ಯಾವುದು?            ಟೆರೆಲಿನ್
.    ಮದ್ದೂರು ವಡೆಗೆ ಪ್ರಸಿದ್ಧವಾದರೆ ಧಾರವಾಡ ಯಾವುದಕ್ಕೆ ಪ್ರಸಿದ್ಧವಾಗಿದೆ?    ಪೇಡ
.    ಕವನ ಸಂಕಲನ ಆಧರಿಸಿ ನಿರ್ಮಿಸಿದ ಏಕೈಕ ಕನ್ನಡ ಚಲನಚಿತ್ರ ಯಾವುದು?             ಮೈಸೂರು ಮಲ್ಲಿಗೆ
೧೦.    ಸೂರ್ಯನಿಗೆ ಅತಿ ದೂರದಲ್ಲಿರುವ ಗ್ರಹ ಯಾವುದು?                  ಯುರೇನೆಸ್
೧೧.    ಕೊಲ್ಕತ್ತಾದ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಸ್ಥಾಪಕರಾರು?              ಪಿ.ಸಿ.ಮೆಹಲನೋಬಿಸ್
೧೨.    ಬೇಗಮ್ ಅಖ್ತರ್ ರವರು ಯಾವುದಕ್ಕೆ ಪ್ರಸಿದ್ಧರು?                     ಗಜಲ್ ಹಾಡುಗಾರಿಕೆ
೧೩.    ರಾಷ್ಟ್ರೀಯ ಕಲ್ಲಿದ್ದಲು ಅಭಿವೃದ್ದಿ ಮಂಡಳಿ ಸ್ಥಾಪನೆಯಾದ ವರ್ಷ ಯಾವುದು?           ೧೯೫೬
೧೪.    ಆಹಾರದಲ್ಲಿ ಕೊಬ್ಬಿನ ಅಂಶ ಕಡಿಮೆಯಾದಲ್ಲಿ ಉಂಟಾಗುವ ಕಾಯಿಲೆ ಯಾವುದು?    ಫೈನೋಡರ್ಮ
೧೫.    ಆನಂದ ಇದು ಯಾರ ಕಾವ್ಯನಾಮವಾಗಿದೆ?                ಅಜ್ಜಂಪುರ ಸೀತಾರಾಂ
೧೬.    ಭಾರತದ ಬಾವುಟದಲ್ಲಿರುವ ಚಕ್ರವು ಯಾವ ರಾಜನಿಗೆ ಸಂಬಂಧಿಸಿದೆ?         ಅಶೋಕ
೧೭.    ಕೃಷ್ಣದೇವರಾಯನು ತೆಲಗು ಭಾಷೆಯಲ್ಲಿ ಬರೆದ ಗ್ರಂಥ ಯಾವುದು?          ಅಮುಕ್ತ ಮೌಲ್ಯದ
೧೮.    ವಿಶ್ವ ಪ್ರಸಿದ್ಧ ನಯಾಗರ್ ಜಲಪಾತ ಯಾವ ದೇಶದಲ್ಲಿದೆ?            ಅಮೇರಿಕಾ
೧೯.    ಭಾರತೀಯ ರಿಸರ್ವ್ ಬ್ಯಾಂಕಿನ ಲಾಂಛನದಲ್ಲಿ ಯಾವ ಪ್ರಾಣಿ ಅಂಕಿತವಾಗಿದೆ?      .    ಹುಲಿ
೨೦.    ಭಾರತದಲ್ಲಿ ಶೇಕಡವಾರು ಅತಿ ಕಡಿಮೆ ಅರಣ್ಯ ಹೊಂದಿರುವ ರಾಜ್ಯ ಯಾವುದು? .    ಹರಿಯಾಣ
೨೧.    ಅಬ್ದುಲ್ ಸಲಾಂ ಅಂತರಾಷ್ಟ್ರೀಯ ಪತ್ರಿಕೋದ್ಯಮ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡಿಗ     ಪಿ.ಲಂಕೇಶ್
೨೨.    ರಾಷ್ಟ್ರಕೂಟರ ರಾಜ್ಯ ಲಾಂಛನ ಯಾವುದಾಗಿತ್ತು?                     ಗರುಡ
೨೩.    ಹಜಾರಿಬಾಗ್ ನ್ಯಾಷನಲ್ ಪಾರ್ಕ್ ಯಾವ ರಾಜ್ಯದಲ್ಲಿದೆ?                       ಬಿಹಾರ
೨೪.    ಥರ್ಮಾಸ್  ಪ್ಲಾಸ್ಕ್ ನ್ನು ಕಂಡುಹಿಡಿದವರು ಯಾರು?                     ಜೇಮ್ಸ್ ದಿವಾರ್
೨೫.    ನಾರ್ಥ್ ವೆಲ್ಸ್ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ?                  ಶೂಟಿಂಗ್
೨೬.    ಇಂಗ್ಲೆಂಡಿನಲ್ಲಿದ್ದ ಟಿಪ್ಪುವಿನ ಖಡ್ಗವನ್ನು ಮತ್ತೆ ಭಾರತಕ್ಕೆ ತಂದವರು ಯಾರು?           ವಿಜಯ ಮಲ್ಯ
೨೭.    ಸರ್ನಿಯಾ ಫೋಟೋ ವೋಲ್ಟಾಯಿಕ್ ಪವರ್ ಪ್ಲಾಂಟ್ ಯಾವ ದೇಶದಲ್ಲಿದೆ?          ಕೆನಡಾ
೨೮.    ಕರ್ನಾಟಕದಲ್ಲಿ ಅತಿ ಹೆಚ್ಚು ದೇವಸ್ಥಾನಗಳನ್ನು ನಿರ್ಮಿಸಿದ ರಾಜ ಮನೆತನ ಯಾವುದು?            ಹೊಯ್ಸಳ 
೨೯.    ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿರುವ ಆಟಗಾರರ ಸಂಖ್ಯೆ ಎಷ್ಟು?       ಐದು ಜನ
ಏಫ್ರಿಲ್೦೫ ರಾಷ್ಟ್ರೀಯ ಸಾಗರ ಯಾನ ದಿನ
ಪ್ರಶ್ನೆಗಳು:
.    ಮೂರ್ತಿದೇವಿ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು?   ಸಿ.ಕೆ.ನಾಗರಾಜರಾವ್      
.    ಜಿ.ಎಸ್.ಎಂ (GSM)   ವಿಸ್ತೃತ ರೂಪವೇನು?              ಗ್ಲೋಬಲ್ ಸಿಸ್ಟಮ್ ಫಾರ್ ಮೊಬೈಲ್
.    ಅಧಿಕ ಪ್ರೋಟೀನ್ ಹೊಂದಿರುವ ಬೆಳೆ ಯಾವುದು?           ಸೊಯಾಬಿನ್     
.    ಗುರು ಮಹಿಪತಿ ಇದು ಯಾರ ಅಂಕಿತನಾಮವಾಗಿದೆ?      .    ಮಹಿಪತಿದಾಸರು
.    ೧೯೯೭೨೦೦೩ರ ಸಾಲಿನ ಭಾರತದ ರಿಸರ್ವ್ ಬ್ಯಾಂಕಿನ ಗವರ್ನರ್ ಯಾರಾಗಿದ್ದರು?   ಡಾ||ಭೀಮಲ್ಜಲನ್

.    ಸೋಡಾ ವಾಟರ್ನಲ್ಲಿರುವ ಆಮ್ಲ ಯಾವುದು?                ಕಾರ್ಬಲಿಕ್ ಆಮ್ಲ
.     ಕಂದು ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ?      ಮಸಾಲಾ ವಸ್ತುಗಳ ಉತ್ಪಾದನೆ
.    ೧೯೯೪ ರಲ್ಲಿ ರಾಮ್ ಜೇಠ್ಮಲಾನಿ ಸ್ಥಾಪಿಸಿದ ಪಕ್ಷ ಯಾವುದು?       ಭಾರತೀಯ ಲೋಕ್ ಪಂಚಾಯತ್
.    ಉಗಾಂಡಾ ರಾಷ್ಟ್ರದ ಅಧೀಕೃತ ಭಾಷೆ ಯಾವುದು?         .    ಇಂಗ್ಲೀಷ್
೧೦.    ೧೮೫೭ ಭಾರತದ ಸ್ವಾತಂತ್ರ್ಯ ಸಂಗ್ರಾಮ ಕೃತಿ ಬರೆದವರು ಯಾರು?               ಎಚ್.ವಿ.ಶೇಷಾದ್ರಿ
೧೧.    ತಮಿಳು ಭಾಷೆಯಲ್ಲಿರುವ ಬೌದ್ಧಗ್ರಂಥ ಯಾವುದು?                                   ಮಣಿಮೇ ಖಲೈ
೧೨.    ಮಹಾಜನ್ ಆಯೋಗ ರಚಿಸಲಾದ ವರ್ಷ ಯಾವುದು?               ೧೯೫೬
೧೩.    ಸಿ.ಸಿ.ಕಿ ಇದು ಯಾರ ಕಾವ್ಯನಾಮವಾಗಿದೆ?                 ಸಿ.ಸಿ.ಕೃಷ್ಣಕುಮಾರ್
೧೪.    ವಿಕ್ಟೋರಿಯಾ ಮತ್ತು ಅಲ್ಬರ್ಟ್ ಮ್ಯೂಸಿಯಂ ಯಾವ ರಾಜ್ಯದಲ್ಲಿದೆ?          ಮಹಾರಾಷ್ಟ್ರ (ಮುಂಬೈ)
೧೫.    ಗಂಡಬೇರುಂಡ ಪಕ್ಷಿ ಇದು ಕರ್ನಾಟಕದ ಯಾವ ಅರಸರ ರಾಜಮುದ್ರೆಯಾಗಿತ್ತು?    ಕೆಳದಿ ಅರಸರು
೧೬.    ಶಾರದಾ ಸಹಾಯಕ ನೀರಾವರಿ ಯೋಜನೆ ಯಾವ ನದಿಗೆ ಸಂಬಂಧಿಸಿದೆ?             .    ಗಾಗ್ರಾನದಿ
೧೭.    ಮಾಣಿ ಅಣೆಕಟ್ಟು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?                 ಶಿವಮೊಗ್ಗ
೧೮.    ಭಾರತದ ಪ್ರಥಮ ಲೋಕಸಭಾ ಸ್ಪೀಕರ್ ಯಾರು?       .    ಜಿ.ವಿ.ಮಾವಳಂಕರ್
೧೯.    ಪುನರ್ವನೀಕರಣ ಎಂದರೇನು?                   ಕಾಡು ಕಡಿದಲ್ಲಿ ಮತ್ತೆ ಕಾಡು ಬೆಳೆಸುವುದು
೨೦.    ಭಾರತೀಯ ದ್ವಿದಳ ಧಾನ್ಯ ಸಂಶೋಧನಾ ಸಂಸ್ಥೆ ಯಾವ ರಾಜ್ಯದಲ್ಲಿದೆ?         ಉತ್ತರ ಪ್ರದೇಶ (ಕಾನ್ಪುರ)
೨೧.    ಕೆಂಪು ರಕ್ತ ಕಣಗಳ ಜೀವಿತಾವಧಿ ಎಷ್ಟು?                                120 ದಿನಗಳು                
೨೨.    ರಾಷ್ಟ್ರೀಯ ಸಂಘಟಿತ ದಿನ ಯಾರ ಜನ್ಮ ದಿನವಾಗಿದೆ?              ಫಕ್ರುದ್ಧೀನ್ ಆಲಿ ಅಹಮ್ಮದ್
೨೩.    ಕರ್ನಾಟಕದಲ್ಲಿ ಕನ್ನಡ ಶಾಲೆಗಳನ್ನು ಪ್ರಾರಂಭಿಸಿದವರು ಯಾರು?            .    .ಪಿ.ರೈಸ್
೨೪.    ಹೌರಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ?                      .ಬಂಗಾಳ (ಕೋಲ್ಕತ್ತಾ)
೨೫.    ಎರಡು ರಾಜ್ಯಗಳಿಗೆ ಮುಖ್ಯಮಂತ್ರಿಯಾಗಿದ್ದ ಭಾರತದ ಏಕೈಕ ವ್ಯಕ್ತಿ ಯಾರು?          ಎನ್.ಡಿ.ತಿವಾರಿ 
೨೬.    ಕೆರೆಗಳ ನೀರಾವರಿ ಅತಿಹೆಚ್ಚು ಅನುಕೂಲ ಹೊಂದಿರುವ ಕರ್ನಾಟಕದ ಜಿಲ್ಲೆ ಯಾವುದು?        ಶಿವಮೊಗ್ಗ          
೨೭.    ವಿದ್ಯುತ್ ದೀಪಗಳಲ್ಲಿ ಬಳಸುವ ಅನಿಲ ಯಾವುದು?                      ಆರ್ಗಾನ್ & ಸಾರಜನಕ
೨೮.    ಚೇತನ ಬಬೂರ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?         ಟೇಬಲ್ ಟೆನ್ನಿಸ್
೨೯.    ೨೦೧೫ರ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡ ಯಾವುದು?             ಆಸ್ಪ್ರೇಲಿಯಾ
ಏಫ್ರಿಲ್೦೭ ವಿಶ್ವ ಆರೋಗ್ಯ ದಿನ                          ಏಫ್ರಿಲ್೧೨ ವಿಶ್ವ ಬಾಹ್ಯಾಕಾಶ ದಿನ

ಸಾಮಾನ್ಯ ಜ್ಞಾನ (ಭಾಗ - 12) General Knowledge (Part-12):

501) 2016 ಜನವರಿಯಲ್ಲಿ 'ಇಂಡಿಯನ್ ಸೈನ್ಸ್ ಕಾಂಗ್ರೆಸ್' 103ನೇ ಅಧಿವೇಶನ'ವನ್ನು ಯಾವ ನಗರದಲ್ಲಿ ನಡೆಸಲು ನಿರ್ಧರಿಸಲಾಗಿದೆ?                                   ಮೈಸೂರು
502) ಇತ್ತೀಚೆಗೆ (2015) ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನಸ್ವೀಕರಿಸಿದವರು ಯಾರು ?
ಮೈತ್ರಿಪಾಲ ಸಿರಿಸೇನ (63)
503) ಇತ್ತೀಚೆಗೆ (2015) ಶ್ರೀಲಂಕಾದ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡವರು ಯಾರು ?
ರೆನಿಲ್ ವಿಕ್ರಮ್ಸಿಂಘೆ (61) (ವಿರೋಧ ಪಕ್ಷದ ನಾಯಕ)
504) ಭಾರತದಲ್ಲಿ 'ಆಸಿಡ್ ದಾಳಿ ನಿಲ್ಲಿಸಿ' ಅಭಿಯಾನದ ಸಂಚಾಲಕಿ ಯಾರು ?    ಲಕ್ಷ್ಮಿ.
505) ಭಾರತದ ಪ್ರಥಮಸೀಮೆಎಣ್ಣೆ ಬಳಕೆ ಮುಕ್ತರಾಜ್ಯವಾಗಿ ಕೆಳಗಿನ ಯಾವ ರಾಜ್ಯ ಘೋಷಣೆ ಮಾಡಿದೆ.?    ದೆಹಲಿ.

506) 21st Century South Asia " ಪುಸ್ತಕದ ಲೇಖಕರು ಯಾರು?                   ಪ್ರೊ. ಸಂಘಮಿತ್ರ ಸರ್ಕಾರ
508)
ಇತ್ತೀಚೆಗೆ ಪ್ರಪಂಚದ ಏಳು ಖಂಡಗಳ ಏಳು ಪರ್ವತಗಳನ್ನು ಯಶಸ್ವಿಯಾಗಿ ಏರಿದ ಮಹಿಳೆ ಯಾರು ಮತ್ತು ಯಾವ ದೇಶದವರು?                            ಸಮಿನಾ ಬೇಗ್ (ಪಾಕಿಸ್ತಾನ)
509) (2014)
ಪ್ರಸ್ತುತ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರು ಯಾರು?        ಶ್ರೀ ಪಿಚ್ಚಳ್ಳಿ ಶ್ರೀನಿವಾಸ್
510)
ಬೆಂಕಿ ಆರಿಸುವ ಸಿಲಿಂಡರ್ ನಲ್ಲಿ ಬಳಸುವ "ರಾಸಾಯನಿಕ" ಯಾವುದು.?
— Sodium bicarbonate
ಅಥವಾ Pottasium bicarbonate.
511) '
ವಿಶ್ವ ಆಹಾರ ದಿನ' ಯಾವಾಗ ಆಚರಿಸಲಾಗುವುದು?                  ಅಕ್ಟೋಬರ್ 16.
512) 2014
ನೇ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿಯನ್ನು ಪಡೆದವರು ಯಾರು?    ರಿಚರ್ಡ್ ಪ್ಲಾನಗಾನ್ (ಆಸ್ಟ್ರೇಲಿಯಾ).
513) ವಿಶ್ವದ ಅತ್ಯಂತ ದೊಡ್ಡ ಪ್ರಯಾಣಿಕರ ಹಡಗು ಯಾವುದು.?                       ಓಯಸಿಸ್ ಆಫ್ ದಿ ಸೀಸ್.
514)
ಇತ್ತೀಚೆಗೆ (2014) ಹಾಕಿ ತಂಡದ ಅಧ್ಯಕ್ಷರಾಗಿ ಆಯ್ಕೆಯಾದವರು ಯಾರು?              ನರೀಂದರ್ ಭಾತ್ರಾ.
515) 'ವಿಶ್ವ ಮಾನಸಿಕ ಆರೋಗ್ಯ ದಿನ' ಯಾವಾಗ ಆಚರಿಸಲಾಗುವುದು?             ಅಕ್ಟೋಬರ್ 10.         
516) (2014) ಇತ್ತೀಚೆಗೆ UNICEF 'ಪೌಷ್ಟಿಕಾಂಶ ಪ್ರಚಾರಕ್ಕಾಗಿ' ದಕ್ಷಿಣ ಏಷ್ಯಾದ ರಾಯಭಾರಿಯಾಗಿ ಆಯ್ಕೆಯಾದ ಭಾರತೀಯ ಯಾರು?                        ನಟ ಅಮೀರ್ ಖಾನ್.
517)
ಯೆಮನ್ದೇಶದ ರಾಜಧಾನಿ ಯಾವುದು.?                                - ಸಾನಾ
518)
ಭಾರತ ರತ್ನ ಪ್ರಶಸ್ತಿ ಇಬ್ಬರು ವಿದೇಶಿಗರು ಯಾರು?            ನೆಲ್ಸನ್ ಮಂಡೇಲಾ ಮತ್ತು ಅಬ್ದುಲ್ ಗಫಾರ್ ಖಾನ್.
519)
ವಿದ್ಯುಚ್ಛಕ್ತಿ ಪ್ರವಹನ ಪರಿಮಾಣವನ್ನು ಅಳೆಯುವ ಸಾಧನ?                        ವೋಲ್ಟಾಮೀಟರ್
520) 2013
'ಪುಟ್ಟಣ್ಣ ಕಣಗಾಲ್ ಪ್ರಶಸ್ತಿ' ಗೆ ಯಾರು ಆಯ್ಕೆಯಾಗಿದ್ದಾರೆ?           — C. ಪಿ. ಎಚ್. ವಿಶ್ವನಾಥ್
521)'
ಮೇರಾ ಖಾತಾ - ಭಾಗ್ಯವಿಧಾತಾ' ಘೋಷ ವಾಕ್ಯ ಯಾವ ಯೋಜನೆಗೆ ಸಂಬಂಧಿಸಿದ್ದಾಗಿದೆ?
ಪ್ರಧಾನಮಂತ್ರಿ ಜನ-ಧನ ಯೋಜನೆ.
522)
ಟ್ರಾನ್ಸ್ ಫರೆನ್ಸಿ ಇಂಟರ್ ನ್ಯಾಷನಲ್ ಇತ್ತೀಚೆಗೆ ಹೊರತಂದಿರುವ ಮಾಹಿತಿಯಲ್ಲಿ ಭಾರತ ಭ್ರಷ್ಟಾಚಾರದಲ್ಲಿ 94 ನೇ ಸ್ಥಾನವನ್ನು ಪಡೆದುಕೊಂಡಿದೆ. ಸಮೀಕ್ಷೆಯ ಪ್ರಕಾರ ಭ್ರಷ್ಟಾಚಾರ ಶೂನ್ಯ ರಾಷ್ಟ್ರಗಳು ಯಾವುವು?  
  ಡೆನ್ಮಾರ್ಕ್ ಮತ್ತು ನ್ಯೂಜಿಲ್ಯಾಂಡ್.
523)
ಜಮ್ಮು ಮತ್ತು ಕಾಶ್ಮೀರದಲ್ಲಿ 1977ರಿಂದ ಈವರೆಗೆ (2015) ಏಷ್ಟು ಬಾರಿ ರಾಜ್ಯಪಾಲರ ಆಡಳಿತವನ್ನು ಜಾರಿಗೊಳಿಸಲಾಗಿದೆ?                                              ಆರನೇ ಬಾರಿ.
524) ಪ್ರಸ್ತುತ (2015) ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಯಾರು?   ಎನ್‌.ಎನ್‌. ವೋಹ್ರಾ.
525)
ಇತ್ತೀಚೆಗೆ ಬಾಲಕಾರ್ಮಿಕತೆಯನ್ನು ಕಾನೂನುಬದ್ಧಗೊಳಿಸಿದ ರಾಷ್ಟ್ರ ಯಾವುದು?                    ಬೊಲೊವಿಯಾ.
526) ವಿಯೆನ್ನಾ ಯಾವ ದೇಶದ ರಾಜಧಾನಿ ?                        ಆಸ್ಟ್ರಿಯ
527)
ಇತ್ತೀಚೆಗೆ (2015) ಕೇಂದ್ರ ಸರ್ಕಾರ 'ವಿಶ್ವ ಶಾಂತಿ ಪಾಲನಾ ಪಡೆ'ಗಳಿಗೆ ಅತ್ಯಗತ್ಯ ನೆರವು ನೀಡುವ ವಿಭಾಗದ ಮುಖ್ಯಸ್ಥರನ್ನಾಗಿ ಯಾರನ್ನು ನೇಮಕ ಮಾಡಲಾಗಿದೆ?    ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿ ಅತುಲ್ಖರೆ
528) ಗಾಂಧೀಜಿಯ ಹೋರಾಟದ ಉದ್ಘಾಟನೆಯಾದದ್ದು 1917ರಲ್ಲಿ ಆರಂಭವಾದ ಭಾರತದ ಮೊದಲ ಅಹಿಂಸಾತ್ಮಕ ಮುಷ್ಕರ ಬಿಹಾರದ ಚಂಪಾರಣ್ ಕೃಷಿಕರ ಕಷ್ಟಕ್ಕೆ ಸ್ಪಂದಿಸುವುದರೊಂದಿಗೆ.
529)
ಯಾವ ಸಂಸ್ಥೆಯು ಇತ್ತೀಚೆಗೆ 'ನವರತ್ನ' ಸ್ಥಾನಮಾನ ಪಡೆದುಕೊಂಡಿತು?                 — CONCOR.
530)
ಇತ್ತೀಚೆಗೆ 41 ನೇ ಚೆಸ್ ಒಲಂಪಿಯಾಡ್ ನಡೆದದ್ದು ಯವ ದೇಶದಲ್ಲಿ,?                      ನಾರ್ವೆ
ಜಾಗತಿಕ ಶಾಂತಿ ಸೂಚ್ಯಂಕ- ಪಟ್ಟಿಯಲ್ಲಿ ಭಾರತಕ್ಕೆ 143ನೇ ಸ್ಥಾನ ದೊರೆತಿದೆ.
* ಅಗ್ರಸ್ಥಾನ ಪಡೆದಿರುವ ಐಸ್ಲೆಂಡ್ಜಗತ್ತಿನ ಶಾಂತಿಯುತ ರಾಷ್ಟ್ರ  ಎಂಬ ಗೌರವ ತನ್ನದಾಗಿಸಿಕೊಂಡಿದೆ.
ಜುಲೈ 1: ರಾಷ್ಟ್ರೀಯ ವೈದ್ಯರ ದಿನ (ಬಿಧಾನ್ ಚಂದ್ರರಾಯ್ ಅವರ ಹುಟ್ಟಿನ ದಿನವಾದ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನ ಚರಿಸಲಾಗುತ್ತಿದೆ.. ಬಿದಾನ್ ಚಂದ್ರರಾಯ್ ಅವರ ಒಂದಿಷ್ಟು ಮಾಹಿತಿ ಇಲ್ಲಿದೆ)
**ಇಂದಿರಾ ಗಾಂಧಿ**
ಇಂದಿರಾ ಪ್ರಿಯದರ್ಶಿನಿ ಗಾಂಧಿ. ಭಾರತದ ಮೊಟ್ಟ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನ ಮಂತ್ರಿ. ಹೆಣ್ಣು ಮಕ್ಕಳಿಗೆ ರಾಜಕೀಯದ ಗೊಡವೆ ಬೇಡ ಎನ್ನುವ ಕಾಲಘಟ್ಟದಲ್ಲಿ ನಾಲ್ಕು ಸಲ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ್ದು ಇವರ ಹೆಗ್ಗಳಿಕೆ. ಕಾಶ್ಮೀರಿ ಪಂಡಿತ್ ಕುಟುಂಬದ ಸುಕೋಮಲ ಹೆಣ್ಣುಮಗಳೊಬ್ಬಳ ವೈಯಕ್ತಿಕ ಮತ್ತು ರಾಜಕೀಯ ನಿಲುವಿಗೆ ಸಂಬಂಧಪಟ್ಟ ದಿಟ್ಟ ನಡೆ ಚಾರಿತ್ರಿಕ ಸಾಧನೆ. ಸಾವು ದುರಂತವಾದರೂ ಬದುಕಿದ ರೀತಿ ಇತಿಹಾಸ.
*ಆನಂದಿ ಬಾಯಿ ಜೋಷಿ*
ಪಾರಂಪರಿಕ ನೆಲೆಗಟ್ಟನ್ನು ಮೀರಿ ಪಾಶ್ಚಾತ್ಯ ವೈದ್ಯಕೀಯ ಪದವಿ ಪಡೆದ ಮೊದಲ ಮಹಿಳಾ ವೈದ್ಯೆ. ಅಲ್ಲದೇ, ಪಾಶ್ಟಾತ್ಯ ವೈದ್ಯಕೀಯ ಪದವಿ ಪಡೆದ ಮತ್ತು ಅಮೆರಿಕಾದ ನೆಲದ ಮೇಲೆ ನಡೆದ ಮೊಟ್ಟಮೊದಲ ಹಿಂದೂ ಮಹಿಳೆ. ಪುಣೆಯ ಸಾಂಪ್ರದಾಯಿಕ ಕುಟುಂಬದಲ್ಲಿ ಜನನ, 9ನೇ ವಯಸ್ಸಿನಲ್ಲಿ ಮದುವೆ. ಹದಿನಾಲ್ಕನೇ ವಯಸ್ಸಿನಲ್ಲಿ ಜನ್ಮ ನೀಡಿದ ಮಗು ಸರಿಯಾದ ವೈದ್ಯಕೀಯ ಚಿಕಿತ್ಸೆ ಸಿಗದ ಕಾರಣ ಮೃತಪಟ್ಟಿದ್ದೆ ಇವರಲ್ಲಿ ವೈದ್ಯರಾಗುವ ಛಲ ಮೂಡಿಸಿದ್ದು.
*ಹಮೈ ವ್ಯಾರವಾಲ*
ಕಪ್ಪು ಬಿಳುಪಿನ ಚಿತ್ರಗಳಲ್ಲಿ ಸ್ವತಂತ್ರ ಭಾರತದ ಇತಿಹಾಸವನ್ನು ಹಿಡಿದಿಟ್ಟ ಹೆಗ್ಗಳಿಕೆ ಹಮೈ ವ್ಯಾರವಾಲ ಅವರದ್ದು. ಸಂಗಾತಿ ಮಾಣೆಕ್ಶಾ ಸಾಂಗತ್ಯ ಬಯಸಿ ಕ್ಯಾಮೆರಾ ಕೈಗೆತ್ತಿಕೊಂಡಾಗ ಆಕೆಗಿನ್ನೂ 13 ಹರೆಯ. ಹುಟ್ಟಿದ್ದು ಗುಜರಾತಿನ ನವ್ಸಾರಿ, ಶಿಕ್ಷಣ ಬಾಂಬೆಯಲ್ಲಿ, ದಿಲ್ಲಿ ಅವರ ಕರ್ಮಭೂಮಿ. ಸಮಾಜದ ಎಲ್ಲ ಎಲ್ಲೆಕಟ್ಟುಗಳನ್ನೂ ಮೀರಿ ವೃತ್ತಿಪರ ಛಾಯಾಗ್ರಹಣವನ್ನು ಕೈಗೆತ್ತಿಕೊಂಡ ಅವರು, ಬ್ರಿಟಿಷ್ ಇನ್ಫರ್ಮೇಷನ್ ಸರ್ವೀಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದರು. ಸೈಕಲ್ ಏರಿ, ಕ್ಯಾಮರಾ ಹಿಡಿದು ಹೊರಟರೆಂದರೆ ಚಿತ್ರದ ಬೇಟೆ ಶತಃಸಿದ್ಧ. ಒಂದೊಳ್ಳೆ ಆಂಗಲ್ಗಾಗಿ ಏರದ ಎತ್ತರ, ಕಾಯದ ಕ್ಷಣವಿಲ್ಲ. ಭಾರತದ ಕಡೆಯ ವೈಸರಾಯ್ ಲಾರ್ಡ್ ಮೌಂಟ್ಬ್ಯಾಟನ್ ಅವರ ನಿಷ್ಕ್ರಮಣ, ಕೆಂಪುಕೋಟೆಯ ಮೇಲೆ ಸ್ವತಂತ್ರ ಭಾರತದ ಧ್ವಜ ಹಾರಾಡಿದ ಮೊದಲ ಕ್ಷಣ, ಮಹಾತ್ಮನ ಅಂತಿಮ ಯಾತ್ರೆ, ಹೀಗೆ ಎಷ್ಟೋ ಅಪರೂಪದ ಕ್ಷಣಗಳು ಇವರ ಕ್ಯಾಮರಾದಲ್ಲಿ ಕೈದಾಗಿವೆ. ನೆಹರು ಇವರ ಅಚ್ಚುಮೆಚ್ಚಿನ ವಸ್ತು. ನೆಹರು ಸಿಗಾರ್ ಹೊತ್ತಿಸುವ ದೃಶ್ಯ ವಿಶ್ವದ ಗಮನ ಸೆಳೆಯಿತು. ಸಂಗಾತಿ ಅಗಲಿದ ನಂತರ ಛಾಯಾಗ್ರಹಣ ನಿಲ್ಲಿಸಿದ ಅವರು, ಕಡೆಯ ದಿನಗಳವರೆಗೂ ಸ್ವತಂತ್ರವಾಗಿ ಘನತೆಯಿಂದ ಬದುಕಿದರು.
 
**ಮೀರಾ ಸಾಹಿ್ ಫಾತಿಮಾ ಬೀವಿ**
1989ರಲ್ಲಿ ಸುಪ್ರೀಂ ಕೋರ್ಟಿಗೆ ನೇಮಕಗೊಂಡ ಮೊದಲ ಭಾರತದ ಮತ್ತು ಏಷ್ಯಾ ಖಂಡದ ಮೊದಲ ಮಹಿಳಾ ನ್ಯಾಯಾಧೀಶೆ. ರಾಷ್ಟ್ರವೊಂದರ ನ್ಯಾಯಾಂಗ ವಿಭಾಗದಲ್ಲಿ ಉನ್ನತ ಹುದ್ದೆಗೆ ಏರಿದ ಮೊಟ್ಟ ಮೊದಲ ಮುಸ್ಲಿಂ ಮಹಿಳೆ. ಮುಸ್ಲಿಂ ಮಹಿಳೆಯರ ವಿಚ್ಛೇದನ ಹಕ್ಕುಗಳ ರಕ್ಷಣೆ ಕುರಿತು ಇವರು ಮಾಡಿದ ಕೆಲಸ ಅಪಾರ. ಇದರ ಜತೆಯಲ್ಲೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ ಕಾರ್ಯ, ನಿವೃತ್ತಿ ನಂತರ ತಮಿಳುನಾಡಿನ ರಾಜ್ಯಪಾಲರಾಗಿ ಕೆಲಸ ನಿರ್ವಹಿಸಿದ್ದರು.
*ನೀರಜಾ ಭಾನೋಟ್* 1985ರಲ್ಲಿ ಅಮೆರಿಕದ 'ಪ್ಯಾನ್ ಅಮೆರಿಕನ್ ವಿಮಾನದ ಫ್ಲೈಟ್ ಅಟೆಂಡೆಂಟ್' ಪದವಿಗೆ ಅರ್ಜಿ ಸಲ್ಲಿಸಿದ ಚಂಡೀಘಡ್ ಮೂಲದ ಚೆಲುವೆ. ಸುಮಾರು 10 ಸಾವಿರ ಅಭ್ಯರ್ಥಿಗಳ ಪೈಕಿ ಆಯ್ಕೆಯಾದ 80 ಜನರಲ್ಲಿದ್ದ ಏಕೈಕ ಭಾರತೀಯಳು. ನಂತರ ಪ್ಯಾನ್ ಅಮೆರಿಕನ್ ಕ್ಲಿಪ್ಪರ್-73 ವಿಮಾನದ ಗಗನ ಸಖಿಯರ ಮುಖ್ಯಸ್ಥೆಯಾಗಿ ಕೆಲಸ. ಭಯೋತ್ಪಾದಕರಿಂದ ಅಪಹರಣಗೊಂಡ ವಿಮಾನದ 300ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಲು ತಮ್ಮ ಪ್ರಾಣವನ್ನು ನೀಡಿ, ವಿಮಾನಯಾನದ ಇತಿಹಾಸದಲ್ಲಿ ಮರೆಯದ ಹೆಸರು.
*ರೀನಾ ಕೌಶಲ್ ಧರ್ಮಶಕ್ತು*
ಪ್ರಪಂಚದಲ್ಲೇ ಅತ್ಯಂತ ಶೀತ ಪ್ರದೇಶವಾದ ದಕ್ಷಿಣ ಧ್ರುವದ ತುದಿ ಮುಟ್ಟಿದ ಮೊದಲ ಭಾರತೀಯಳು ಎಂಬ ಗೌರವಕ್ಕೆ ಭಾಜನಳಾದ ಮಹಿಳೆ. ದೆಹಲಿ ಮೂಲಕ 38 ದಿನಗಳ ಕಾಲ ಸ್ಕೀಯಿಂಗ್ ಮಾಡುತ್ತ 915 ಕೀ.ಮೀ. ದೂರವನ್ನು ಮಂಜುಗಡ್ಡೆಯ ದಾರಿಯಲ್ಲಿ ಪಯಣಿಸಿ ಗುರಿ ತಲುಪಿದ ಸಾಹಸಿ.
ಮೇರಿ ಕೋಮ್-  ಭಾರತೀಯ ಮಹಿಳಾ ಬಾಕ್ಸಿಂಗ್ ಪಟು. ಮಣಿಪುರದ ಕೋಮ್ ಬುಡಕಟ್ಟು ಸಮುದಾಯಕ್ಕೆ ಸೇರಿದ ಈಕೆ, 5 ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್. ಅಲ್ಲದೇ ಆಡಿದ ಆರು ಚಾಂಪಿಯನ್ಶಿಪ್ಗಳಲ್ಲೂ ಪದಕ ಗೆದ್ದ ಏಕೈಕ ಮಹಿಳೆ. 2012 ಬೇಸಿಗೆ ಒಲಿಂಪಿಕ್ಸ್ಗೆ ಆಯ್ಕೆಯಾದ ಏಕೈಕ ಬಾರತೀಯ ಮಹಿಳಾ ಬಾಕ್ಸಿಂಗ್ ಪಟು. ಮತ್ತು 50 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿ ಕಂಚಿನ ಪದಕ ವಿಜೇತೆ. ಭಾರತದ ಅತ್ಯಂತ ಹೆಚ್ಚಿನ ಪ್ರಸಿದ್ಧಿ ಮತ್ತು ಗೌರವ ಪಡೆದ ಕ್ರೀಡಾ ತಾರೆ.
ಇರೋಮ್ ಶರ್ಮಿಳಾ ಛಾನು (42)  - ಮಣಿಪುರದ ಉಕ್ಕಿನ ಮಹಿಳೆ,ನಾಗರಿಕ ಹಕ್ಕುಗಳ ಕಾರ್ಯಕರ್ತೆ, ಕವಯಿತ್ರಿ ಇರೋಮ್ ಶರ್ಮಿಳಾ ಛಾನು. ಇಂಫಾಲ ಅವರ ಹುಟ್ಟೂರು. ಸಶಸ್ತ್ರಪಡೆಯ (ವಿಶೇಷ ಅಧಿಕಾರ) ಕಾಯಿದೆ 1958ಅನ್ನು ವಾಪಸ್ ಪಡೆಯಲು ಆಗ್ರಹಿಸಿ 2000 ಇಸವಿಯ .3ರಿಂದ ನಿರಶನ ಆರಂಭಿಸಿದ್ದು, 15ನೇ ವರ್ಷದಲ್ಲೂ ಮುಂದುವರಿಸಿದ ಗಟ್ಟಿಗಿತ್ತಿ. ರಾಜ್ಯದಲ್ಲಿ ಸಶಸ್ತ್ರಪಡೆಯು ವಿಶೇಷಾಧಿಕಾರ ಬಳಸಿಕೊಂಡು ಮಹಿಳೆಯರ ಮೇಲೆ ಅತ್ಯಾಚಾರ, ಅಮಾಯಕರ ಹತ್ಯೆಯಲ್ಲಿ ತೊಡಗಿರುವುದರ ವಿರುದ್ಧ ಸಿಡಿದೆದ್ದು ಏಕಾಂಗಿಯಾಗಿ ಅಹಿಂಸಾತ್ಮಕ ಪ್ರತಿಭಟನೆ ಮುಂದುವರಿಸಿರುವ ದಿಟ್ಟೆ.
*ಎಂ.ಎಸ್.ಸುಬ್ಬಲಕ್ಷ್ಮಿ
ಸಂಗೀತವೇ ಜಗವಾಳೋ ಮಂದಹಾಸ ಎನ್ನುವುದಕ್ಕೆ ಜೀವಂತ ಪ್ರತಿಮೆ ಎಂ.ಎಸ್.ಸುಬ್ಬಲಕ್ಷ್ಮಿ. ವಿನಯ, ಸಜ್ಜನಿಕೆ, ಗಾಂಭೀರ್ಯ ಎಲ್ಲವೂ ಮೇಳೈಸಿದ ಅವರದ್ದು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅಜರಾಮರ ಹೆಸರು. ಪ್ರಪ್ರಥಮವಾಗಿ ಮೀರಾ ಭಜನ್ ಅನ್ನು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸಿದವರು. ದೇಶದ ಎಲ್ಲಾ ಭಾಷೆಯಲ್ಲೂ ಹಾಡಿರುವ ಹೆಗ್ಗಳಿಕೆ ಇವರದು. 1966ರಲ್ಲಿ ವಿಶ್ವಸಂಸ್ಥೆಯ ಕೋರಿಕೆಯಂತೆ ವಿಶ್ವಸಂಸ್ಥೆ ದಿನಾಚರಣೆ ಸಮಾರಂಭದಲ್ಲಿ ಕಛೇರಿ ನಡೆಸಲು ವಿಶೇಷ ಆಹ್ವಾನ ಪಡೆದು, ಹಾಡಿದ ಮೊಟ್ಟ ಮೊದಲ ಭಾರತೀಯ ಮಹಿಳೆ.
ಅಮೃತಾ ದೇವಿ   -               ಪರಿಸರ ಸಂರಕ್ಷಣೆಯಲ್ಲಿ ಶತಮಾನದ ಆರಂಭದಿಂದಲೂ ಅನೇಕ ಹೆಸರುಗಳು ಕೇಳಿ ಬರುತ್ತವೆ. ಆದರೆ 17ನೇ ಶತಮಾನದಲ್ಲಿ ರಾಜ ಆಜ್ಞೆಯಂತೆ ಮರ ಕಡಿಯಲು ಬಂದವರಿಗೆ ಮರಗಳನ್ನು ಕಡಿಯಲು ಬಿಡದೆ ಜೀವ ಕೊಟ್ಟ ಮಹಿಳೆ ಅಮೃತಾ ದೇವಿ. ವಿಷಯ ತಿಳಿದ ರಾಜ ಅವಳ ಸಮುದಾಯದವರು ಇರುವ ಗ್ರಾಮಗಳಲ್ಲಿ ಮರ ಕಡಿಯುವುದನ್ನು, ಬೇಟೆಯಾಡುವುದನ್ನು ನಿಷೇಧಿಸಿ ಕಾನೂನು ಜಾರಿಗೆಯ ತಂದ. ಅದು ಇಂದಿಗೂ ಜಾರಿಯಲ್ಲಿದೆ.
 
ಕಮಲಾದೇವಿ ಚಟ್ಟೋಪಾಧ್ಯಾಯ
ಹಲವು ಪ್ರಥಮಗಳನ್ನು ಸಾಧಿಸಿದ ಹೆಗ್ಗಳಿಕೆ ಕನ್ನಡತಿ ಕಮಲಾ ಚಟ್ಟೋಪಾಧ್ಯಾಯ ಅವರದ್ದು. ಸಹಕಾರ ಚಳವಳಿಯ ಮೂಲಕ ಭಾರತೀಯ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಶ್ರಮಿಸಿದವರು. ಸ್ವತಂತ್ರ ಭಾರತದಲ್ಲಿ ಭಾರತೀಯ ಕೈಮಗ್ಗ, ಕರಕುಶಲ, ರಂಗಭೂಮಿಯ ಏಳಿಗೆಯ ಪ್ರವರ್ತಕಿಯಾಗಿ ಗುರುತಿಸಿಕೊಂಡವರು. ಇವರ ದೂರದೃಷ್ಟಿಯ ಫಲವಾಗಿ ರಾಷ್ಟ್ರೀಯ ನಾಟಕ ಶಾಲೆ, ಸಂಗೀತ ನಾಟಕ ಅಕಾಡೆಮಿ, ಭಾರತ ಕರಕುಶಲ ಮಂಡಳಿ, ಸೆಂಟ್ರಲ್ ಕಾಟೇಜ್ ಆಫ್ ಇಂಡಸ್ಟ್ರೀಸ್ ಎಂಪೋರಿಯಂ ರೂಪು ತಾಳಿವೆ. ಅಖಿಲ ಭಾರತ ಕರಕುಶಲ ಮಂಡಳಿಯ ಮೊದಲ ಅಧ್ಯಕ್ಷೆ. 1964ರಲ್ಲಿ ಬೆಂಗಳೂರಿನಲ್ಲಿ ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಆ್ಯಂಡ್ ಕೊರಿಯೊಗ್ರಫಿ ಆರಂಭಿಸಿದರು. 1926ರಲ್ಲಿ ಮದ್ರಾಸ್ ಪಾವಿನ್ಷಿಯಲ್ ಲೆಜಿಸ್ಲೇಟಿವ್ ಅಸೆಂಬ್ಲಿಗೆ ಸ್ಪರ್ಧಿಸುವ ಮೂಲಕ ಅಸೆಂಬ್ಲಿಗೆ ಸ್ಪರ್ಧಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರದ್ದು.
ಸುರೇಖಾ ಯಾದವ್  -
ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಸರಕು - ಸಾಗಣೆ ರೈಲಿನಲ್ಲಿ ಸಹಾಯಕ ಚಾಲಕಿಯಾಗಿ ನೇಮಕಗೊಂಡವರು ಮಹಾರಾಷ್ಟ್ರದ ಕಾರಡ್ ಸುರೇಖಾ ಯಾದವ್. ಸರಕು -ಸಾಗಣೆ ರೈಲುಗಳಲ್ಲಿ ಗಂಟೆಗಟ್ಟಲೆ ಪ್ರಯಾಣಿಸುವ ಸವಾಲನ್ನು ಛಲದಿಂದಲೇ ಸ್ವೀಕರಿಸಿದ ಈಕೆ, ಹತ್ತು ವರ್ಷಗಳ ಕಾಲ ಅಲ್ಲಿ ದುಡಿದರು. ಇಬ್ಬರು ಮಕ್ಕಳ ತಾಯಿಯಾಗಿರುವ ಈಕೆ ಸದ್ಯ ಕಳೆದ ದಶಕದಿಂದೀಚೆಗೆ ಉಪನಗರಗಳ ರೈಲು ಚಾಲಕಿಯಾಗಿದ್ದಾರೆ.
*ಅರುಂಧತಿ ಭಟ್ಟಾಚಾರ್ಯ
ದೇಶದ ಪ್ರತಿಷ್ಠಿತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೊದಲ ಮಹಿಳಾ ಅಧ್ಯಕ್ಷೆ. ಹುಟ್ಟೂರು ಕೋಲ್ಕೊತಾ. ಜಾಧವ್ಪುರ ವಿವಿ, ಕೋಲ್ಕೊತಾದ ಲೇಡಿ ಬ್ರಬುರ್ನೆ ಕಾಲೇಜಿನಲ್ಲಿ ಅಧ್ಯಯನ. ಪೋರ್ಬ್ಸ್ ಪಟ್ಟಿಯಲ್ಲಿ ಜಗತ್ತಿನ 36ನೇ ಪ್ರಭಾವಿ ಮಹಿಳೆ ಎಂದು ಗುರುತಿಸಿಕೊಂಡಿದ್ದಾರೆ. ಬ್ಯಾಂಕ್ನಲ್ಲಿ ಶೇ 20ರಷ್ಟು ಮಹಿಳೆಯರ ನಿರೀಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕುಟುಂಬಕ್ಕೆ ನಿಕಟವಾಗಿರುವಂತೆ ವರ್ಗಾವಣೆ ಪ್ರಕ್ರಿಯೆ, ಉನ್ನತ ಶಿಕ್ಷಣ, ವಿಶೇಷ ತರಬೇತಿ, ಮಕ್ಕಳ ಆರೈಕೆಗಾಗಿ ಎರಡು ವರ್ಷಗಳ ವಿಶ್ರಾಂತಿ, ಮಹಿಳೆಯರ ಕೆಲಸದ ಅವಧಿಯಲ್ಲಿ ನಮ್ಯತೆ, ತಾತ್ಕಾಲಿಕ ನಿಯೋಜನೆ ಸೇರಿದಂತೆ ಹಲವು ಉಪಕ್ರಮಗಳನ್ನು ಕೈಗೊಂಡಿದ್ದಾರೆ.
ವಿಂಗ್ ಕಮಾಂಡರ್ ಪೂಜಾ ಠಾಕೂರ್
ರಾಜಸ್ಥಾನದಲ್ಲಿ ಹುಟ್ಟಿದ ಇವರು ಗಣರಾಜ್ಯೋತ್ಸವ ಪಥ ಸಂಚಲನವನ್ನು ನಿರ್ವಹಿಸಿದ ಮೊದಲ ಮಹಿಳೆಯಾಗಿ ಇತಿಹಾಸ ನಿರ್ಮಿಸಿದವರು. ಬಾರಿ ಗಣರಾಜ್ಯೋತ್ಸವಕ್ಕೆ ಪ್ರಮುಖ ಅತಿಥಿಯಾಗಿ ಬಂದಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಸ್ವಾಗತಿಸಿದ ಬೆಟಾಲಿಯನ್ ನೇತೃತ್ವದ ವಹಿಸಿ ಗೌರವ ವಂದನೆ ಸಲ್ಲಿಸುವ ಮೂಲಕ ದೇಶದ ಗೌರವಕ್ಕೆ ಪಾತ್ರರಾಗಿದ್ದಾರೆ. ಹೈದರಾಬಾದ್ ಏರ್ಪೋರ್ಸ್ ಅಕಾಡೆಮಿಯ 2000ನೇ ಬ್ಯಾಚ್ ಅಧಿಕಾರಿಯಾಗಿರುವ ಠಾಕೂರ್ ಪ್ಯಾರಾ ಜಂಪಿಂಗ್ ಮತ್ತು ಸಾಹಸ ಕ್ರೀಡೆಗಳಲ್ಲಿ ಛಾಪು ಮೂಡಿಸಿದ್ದಾರೆ. ಭಾರತೀಯ ವಾಯುಪಡೆಯಲ್ಲಿ ಹದಿಮೂರುವರೆ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ''ತರಬೇತಿ ಅವಧಿಯಲ್ಲಿ ನಮ್ಮನ್ನು ಪುರುಷ ಅಧಿಕಾರಿಗಳಂತೆ ಕಾಣಲಾಗುತ್ತಿತ್ತು. ಮೊದಲಿಗೆ ನಾವು ಅಧಿಕಾರಿಗಳು, ಬಳಿಕವಷ್ಟೆ ಮಹಿಳೆಯರು. ಇದು ನನ್ನ ಉದ್ಯೋಗವಲ್ಲ , ಜೀವನ ಮಾರ್ಗ,''ಎಂದು ಹೇಳುತ್ತಾರೆ.
ರಾಜ್ಯ...: ಯಕ್ಷಗಾನ ಕಲಾವಿದೆ ಲೀಲಾ ಬೈಪಡಿತ್ತಾಯ (68)
ಪುರುಷ ಪಾರಮ್ಯದ ಗಂಡುಮೆಟ್ಟಿನ ಕಲೆ ಯಕ್ಷಗಾನವನ್ನೇ ವೃತ್ತಿಯಾಗಿರಿಸಿಕೊಂಡು ವ್ಯವಸಾಯಿ ಮೇಳಗಳಲ್ಲಿ ತಿರುಗಾಟ ಮಾಡಿದ ಮೊದಲ, ಯಕ್ಷಗಾನ ಕಲಾವಿದೆ ಲೀಲಾ ಬೈಪಡಿತ್ತಾಯ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಲೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಇವರು ಏಕಾಂಗಿಯಾಗಿ ಒಂದಿಡೀ ಆಟವನ್ನು ನಡೆಸಿಕೊಡುವ ಏಕೈಕ ವೃತ್ತಿಪರ ಮಹಿಳಾ ಭಾಗವತರು. ಧರ್ಮಸ್ಥಳ ಯಕ್ಷಗಾನ ಕಲಿಕಾ ಕೇಂದ್ರದಲ್ಲಿ ಗುರುಗಳಾಗಿ, ಈಗ ಕಟೀಲು ಯಕ್ಷಗಾನ ಕೇಂದ್ರದಲ್ಲಿ ಭಾಗವತಿಕೆ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂಬಯಿ, ಚೆನ್ನೈ, ಅಹಮದಾಬಾದ್, ದಿಲ್ಲಿಗಳಲ್ಲೂ ಇವರ ಕಂಠ ಮೊಳಗಿದೆ. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಎದುರು ಯಕ್ಷಗಾನ ಪ್ರದರ್ಶನ ನೀಡಿರುವ ಇವರು ಎರಡು ತುಳು ಚಲನಚಿತ್ರಗಳಿಗೂ ಕಂಠದಾನ ಮಾಡಿದ್ದಾರೆ. ಭಾಗ್ಯದ ಭಾಗೀರಥಿ ಎಂಬ ಸಾಮಾಜಿಕ ಯಕ್ಷಗಾನ ಪ್ರಸಂಗವೊಂದನ್ನು ಬರೆದಿದ್ದಾರೆ.
ಕಾಸರಗೋಡಿನ ಮಧೂರು ಇವರ ಹುಟ್ಟೂರು. ಇವರು ಶಾಸ್ತ್ರೀಯ ಸಂಗೀತ ಅಭ್ಯಸಿಸಿ ಹಿಂದಿ ವಿಶಾರದ ಪದವಿ ಪಡೆದಿದ್ದಾರೆ. 2010ರಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು 2012ರಲ್ಲಿ ಕರ್ನಾಟಕ ಸರಕಾರದ ಹಿರಿಯ ನಾಗರಿಕರ ಸಾಧನಾ ಪ್ರಶಸ್ತಿ ಸೇರಿದಂತೆ ನಾನಾ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಇನ್ನು, ಕೇಂದ್ರ ರೈಲ್ವೆ ಉಪನಗರಗಳ ಸಂಚಾರಿ ವ್ಯವಸ್ಥೆಯಲ್ಲಿ ಮೊದಲ ಬಾರಿ ಚಾಲಕರ ಸ್ಥಾನದಲ್ಲಿ ರಾರಾಜಿಸಿದ ಮಹಿಳೆ ಮುಮ್ತಾಜ್ ಕಜಿ, ಸಾಂಪ್ರದಾಯಿಕ ಕೌಟುಂಬಿಕ ಹಿನ್ನೆಲೆಯಿಂದ ಬಂದ ಈಕೆ ಧೈರ್ಯ, ಛಲವೊಂದಿದ್ದರೆ ಮಹಿಳೆಯರು ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಸ್ಪಷ್ಟ ನಿದರ್ಶನ ಎಂಬಂತಿದ್ದಾರೆ.
ಹಲವು ಪ್ರಥಮಗಳು
*ಆರತಿ ಸಾಹ:ಇಂಗ್ಲಿಷ್ ಚಾನೆಲ್ ದಾಟಿದ ಈಜುಗಾರ್ತಿ       *ಅರುಣ್ ಅಸಫ್ ಆಲಿ: ಹೊಸದಿಲ್ಲಿಯ ಮಹಿಳಾ ಮೇಯರ್
*
ಬಚೇಂದ್ರ ಪಾಲ್: ಮೌಂಟ್ ಎವೆರೆಸ್ಟ್ ಏರಿದಾಕೆ                            *ಹೃಷಿನಿ ಕಂಹೆಕರ್: ಅಗ್ನಿಶಾಮಕ ದಳದಲ್ಲಿ ಸೇವೆ
*
ಇಂದಿರಾ ಗಾಂಧಿ: ಪ್ರಧಾನಿ ಹಾಗೂ ಭಾರತ ರತ್ನ ಪುರಸ್ಕೃತೆ       *ಕಾಂಚನ್ ಸಿ. ಭಟ್ಟಾಚಾರ್ಯ: ಡಿಜಿಪಿ
*
ಕಾಂಚನ್ ಗೌಡ್: ಟ್ಯಾಕ್ಸಿ ಚಾಲಕಿ                       *ಕಿರಣ್ ಬೇಡಿ: ಐಪಿಎಸ್ ಅಧಿಕಾರಿ
*
ಲೀಲಾ ಸೇತ್: ಮುಖ್ಯನ್ಯಾಯಮೂರ್ತಿ (ಹೈಕೋಟ್)                 *ಮರಿಯಾ ಗೋರ್ತೆ: ರೈಲು ಎಂಜಿನ್ ಚಾಲಕಿ
*
ಮೀನಾಕ್ಷಿ: ದಿಲ್ಲಿ ಮೆಟ್ರೋನ ಚಾಲಕಿ           *ಪದ್ಮಾವತಿ: ಏರ್ಮಾರ್ಷಲ್         *ಪ್ರತಿಭಾ ಪಾಟೀಲ್: ರಾಷ್ಟ್ರಪತಿ
*
ರಾಜಕುಮಾರಿ ಅಮೃತ್ಕೌರ್: ಸಂಪುಟ ಸಚಿವೆ          *ರೀತಾ ಫರೀಯಾ: 'ಮಿಸ್ ವರ್ಲ್ಡ್' ಪ್ರಶಸ್ತಿ ಪುರಸ್ಕೃತೆ
*
ಸರೋಜಿನಿ ನಾಯ್ಡು: ಉತ್ತರ ಪ್ರದೇಶದ ಮೇಯರ್                *ಸುಚೇತಾ ಕೃಪಾಲನಿ: ಮುಖ್ಯಮಂತ್ರಿ
*
ಸುಷ್ಮಿತಾ ಸೇನ್: 'ಮಿಸ್ ಯುನಿವಸ್‌' ಪ್ರಶಸ್ತಿ ಪುರಸ್ಕೃತೆ           *ಶಾನ್ನೋ ದೇವಿ: ರಾಜ್ಯಸಭೆಯ ಸ್ಪೀಕರ್
*ವಿಜಯಲಕ್ಷ್ಮಿ ಪಂಡಿತ್: ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯ ಅಧ್ಯಕ್ಷೆ
*
ಸಂತೋಷ್ ಯಾದವ್: ಎರಡು ಬಾರಿ ಮೌಂಟ್ ಎವೆರೆಸ್ಟ್ ಏರಿದಾಕೆ
*
ಅನ್ನಿಬೆಸೆಂಟ್: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ
*
ಹರೀತ್ ಕೌರ್ ದಯಾಳ್: ಭಾರತೀಯ ವಾಯುಸೇನೆಯ ವಿಮಾನ ಚಾಲಕಿ (ಪೈಲೆಟ್)
*
ಕದಂಬಿನಿ ಗಂಗೂಲಿ ಹಾಗೂ ಚಂದ್ರಮುಖಿ ಬಸು: ಪದವೀಧರರು (1883)
*
ದುರ್ಬಾ ಬ್ಯಾನರ್ಜಿ: ವಿಮಾನಯಾನದ ಪೈಲೆಟ್                             *ಕಾಮಿನಿ ರಾಯ್: ಆನರ್ಸ್ ಗ್ರಾಜ್ಯುಯೇಟ್ (1886)
*
ಕರ್ಣಂ ಮಲ್ಲೇಶ್ವರಿ: ಒಲಿಂಪಿಕ್ ಪದಕ ಪುರಸ್ಕೃತೆ (2000)
*
ಕಮಲಜೀತ್ ಸಂಧು: ಏಷಿಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ವಿಜೇತೆ        *ಕಾರ್ನಿಲಾ ಸೋರ್ಬಜಿ: ವಕೀಲೆ (ಲಾಯರ್)
*
ರೋಜ್ ಮಿಲನ್ ಬೆಥ್ಯೂ: ಯೂನಿಯನ್ ಪಬ್ಲಿಕ್ ಸರ್ವೀಸ್ ಕಮೀಷನ್
*
ಅನ್ನಾ ಚಾಂಡಿ: ನ್ಯಾಯಾಧೀಶೆ (1937ರಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ಜಡ್ಜ್ ಆಗಿದ್ದರು)
*
ಫಾತೀಮಾ ಬೀವಿ: ಸುಪ್ರೀಂಕೋರ್ಟ್ನಲ್ಲಿ ನ್ಯಾಯಾಧೀಶೆ                   *ಪುನೀತ್ ಅರೋರ: ಲೆಫ್ಟಿನೆಂಟ್ ಜನರಲ್
*
ಸುಷ್ಮಾ ಚಾವ್ಲಾ: ಭಾರತೀಯ ವಿಮಾನಯಾನದ ಅಧ್ಯಕ್ಷೆ
*
ರಜಿಯಾ ಸುಲ್ತಾನ್: ಭಾರತವನ್ನು ಆಳಿದ ಮೊದಲ ಹಾಗೂ ಕೊನೆಯ ಮುಸ್ಲಿಂ ಮಹಿಳೆ
*
ನೀರಜ್ ಭಾನಟ್: ಅಶೋಕ ಚಕ್ರ ಪುರಸ್ಕೃತೆ                       *ಆಶಾಪೂರ್ಣ ದೇವಿ: ಜ್ಞಾನಪೀಠ ಪುರಸ್ಕೃತೆ
*
ಮದರ್ ತರೇಸಾ: ನೋಬೆಲ್ ಪುರಸ್ಕೃತೆ                          *ಪಿ.ಕೆ ತ್ರೆಸಿಯಾ ನಂಗುಲಿ : ಮುಖ್ಯ ಎಂಜನಿಯರ್
*
ಲಕ್ಷ್ಮಿ ಎನ್. ಮೆನನ್ : ವಿದೇಶ ಸಚಿವೆ                                       *ಅಮೃತಾ ಪ್ರೀತಂ : ಸಾಹಿತ್ಯ ಅಕಾಡೆಮಿ ಪುರಸ್ಕೃತೆ
*
ಡಾ. ಆಶಾ ಚಟರ್ಜಿ :ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಧ್ಯಕ್ಷೆ
*
ಸಾನಿಯಾ ಮಿರ್ಜಾ: ಡಬ್ಲ್ಯುಟಿಎ ಟೆನ್ನಿಸ್ ಪಂದ್ಯಾವಳಿ ವಿಜೇತೆ                   *ಪ್ರೇಮಾ ಮುಖರ್ಜಿ : ಸರ್ಜನ್
*
ದೇವಿಕಾ ರಾಣಿ : ನಟಿ                                   *ಪ್ರತಿಮಾ ಪುರಿ : ದೂರದರ್ಶನದ ಸುದ್ದಿ ವಾಚಕಿ
*
ಆ್ಯನಾ ಜಾಜ್ : ಐಎಎಸ್ ಅಧಿಕಾರಿ                      *ಅಂಜು ಸಚ್ದೇವ, ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ (ದಿಲ್ಲಿ ವಿವಿ)

ಆವಿಷ್ಕಾರಗಳು
1. ಕಾಗದದ ಚೀಲ-        1868ರಲ್ಲಿ ಅಮೆರಿಕದ ಹತ್ತಿ ಮಿಲ್ ಕಾರ್ಮಿಕಳಾದ ಮಾರ್ಗರೆಟ್ ನೈಟ್ ಕಾಗದದ ಚೀಲ ಮಾಡುವ ಯಂತ್ರವನ್ನು ಕಂಡುಹಿಡಿದಳು. 1871ರಲ್ಲಿ ನೈಟ್ ಅದರ ಪೇಟೆಂಟ್ ಪಡೆದಳು.
2. ಕೆಲ್ವರ್-       1966ರಲ್ಲಿ ಹಗುರವಾದ ಹಾಗೂ ಸ್ಟೀಲ್ಗಿಂತ ಐದು ಪಟ್ಟು ಶಕ್ತಿಶಾಲಿಯಾದ ಕೆಲ್ವರ್ ಅನ್ನು ಡುಪೋಟ್ ಕೆಮಿಸ್ಟ್ ಸ್ಟೆಫ್ನಿ ಕೌಲೆಂಕ್ ಕಂಡುಹಿಡಿದಳು. ಕಾರಿನ ಟೈರ್ಗಾಗಿ ಹಗುರವಾದ ಫೈಬರ್ವನ್ನು ಹುಡುಕುವ ಸಮಯದಲ್ಲಿ ಆಕಸ್ಮಿಕವಾಗಿ ಅವಳು ಇದನ್ನು ಕಂಡುಹಿಡಿದಳು.
3. ಭೂಮಾಲೀಕರ ಆಟವನ್ನು ರೂಪಿಸುವ ಮೂಲಕ ಆರ್ಥಿಕ ಸಿದ್ಧಾಂತವನ್ನು ಪಸರಿಸದವಳು ಎಲಿಜಬೆತ್ ಮ್ಯಾಗಿ. ಭೂ ಕಬಳಿಕೆ, ಭೂ ಮೌಲ್ಯದ ತೆರಿಗೆ ಮುಂತಾದವನ್ನು ಮಾಲೀಕರಿಗೆ ತಿಳಿಸುವ ಬೋರ್ಡ್ ಗೇಮನ್ನು 1904ರಲ್ಲಿ ಪೇಟೆಂಟ್ ಪಡೆದು, 1906ರಲ್ಲಿ ಸ್ವತಃ ಪ್ರಕಟಿಸಿದಳು. 30 ವರ್ಷಗಳ ನಂತರ ಚಾರ್ಲ್ಸ್ ಡ್ಯಾರೋ ಎಂಬಾತ ಅದರನ್ನು ಪ್ರತಿರೂಪಿಸಿ, ಅದರ ಸ್ವಾಮ್ಯತೆಯನ್ನು ಪಾರ್ಕರ್ ಬ್ರದರಸ್ ಕಂಪನಿಗೆ ಮಾರಿದ. ಕಂಪನಿಯೂ ಮ್ಯಾಗಿಯ ಮೂಲ ಆಟದ ಪೇಟೆಂಟನ್ನು 500 ಡಾಲರ್ಗೆ ಪಡೆಯಿತು.
4. ಗಾಳಿ ತಡೆ ವೈಪರ್ಸ್‌: ಮೇರಿ ಅಂಡರ್ಸನ್ ಮಾನವ ಚಾಲಿತ ಗಾಳಿ ತಡೆ ವೈಪರ್ಸ್ನ್ನು 1903ರಲ್ಲಿ ಕಂಡುಹಿಡಿದಳು. (1917ರಲ್ಲಿ ಮತ್ತೊಬ್ಬ ಮಹಿಳಾ ಸಂಶೋಧಕಿ ಚಾರ್ಲೆಟ್ ಬ್ರಿಡ್ಜ್ವುಡ್ ಅಟೋಮ್ಯಾಟಿಕ್ ಎಲೆಕ್ಟ್ರಿಕ್ ರೋಲರ್ನ್ನು ಕಂಡುಹಿಡಿದರೂ ಅದು ಬಳಕೆಯಾಗಲಿಲ್ಲ). ಅಂಡರ್ಸನ್ ಪೇಟೆಂಡ್ 1920ರಲ್ಲಿ ಮುಗಿಯಿತು. ಕ್ಯಾಡಿಲಾಕ್ ಪ್ರಥಮ ಬಾರಿಗೆ ಕಾರಿನಲ್ಲಿ ಗಾಳಿತಡೆ ವೈಪರ್ಗಳನ್ನು ಅಳವಡಿಸಿದ, ನಂತರ ಇತರ ಕಂಪನಿಗಳೂ ಅನುಸರಿಸಿದವು.
5. ಬಳಸಿ ಎಸೆಯುವ ಕೂಸಿನ ಬಟ್ಟೆ: 1951ರಲ್ಲಿ ಮರಿಯಾನ್ ಡೊನೊವಾನ್ ಜಲನಿರೋಧಕ ಬೋಟರ್ಗೆ ಪೇಟೆಂಟ್ ಪಡೆದಳು. ಮಕ್ಕಳಿಗಾಗಿ ಬಳಸಿ ಎಸೆಯುವ ಬಟ್ಟೆಗಳ ಪೇಟೆಂಟ್ನ್ನು ಕೆಕೊ ಕಾರ್ಪೊರೇಷನ್ಗೆ 1ಮಿಲಿಯನ್ ಡಾಲರ್ಗೆ ಮಾರಿದಳು. ನಂತರ ಸಂಪೂರ್ಣವಾಗಿ ಬಳಸಿ ಎಸೆಯುವ ಮಾದರಿಯನ್ನು ಮುಂದಿನ 5 ವರ್ಷಗಳಲ್ಲಿ ರೂಪಿಸಿದಳು. 1961ರಲ್ಲಿ ಪ್ಯಾಂಪರಸ್ ರೂಪುಗೊಂಡಿತು.
6. ಪಾತ್ರೆ ತೊಳೆಯುವ ಸಾಧನ: ಜೋಸೆಫ್ ಕೊಕ್ರೇನ್ ಪಾತ್ರೆ ತೊಳೆಯುವ ಸಾಧನವನ್ನು ಕಂಡುಹಿಡಿದು 1886ರಲ್ಲಿ ಅದರ ಪೇಟೆಂಟ್ ಪಡೆದಳು. ಆದರೆ ಅದನ್ನು ಅವಳು ಸ್ವತಃ ಯಾವತ್ತೂ ಬಳಸಲಿಲ್ಲ, ಆದರೆ ಸೇವಕಿಯರಿಗೆ ಅದರ ಉಪಯೋಗ ದೊರೆಯಿತು.
7. ದ್ರವ ಕಾಗದ: ಟೈಪಿಂಗ್ ತಪ್ಪುಗಳನ್ನು ಮುಚ್ಚಿಹಾಕಲು ಬೆಟ್ಟೆ ನೆಸ್ಮಿತ್ ಗ್ರಾಹಂ ತನ್ನ ಅಡುಗೆ ಕೋಣೆಯಲ್ಲಿ ಹಲವಾರು ವರುಷಗಳು ನಡೆಸಿದ ಪ್ರಯತ್ನದ ಫಲವಾಗಿ, ಟೈಪಿಂಗ್ ತಪ್ಪುಗಳನ್ನು ಅಳಸಿಹಾಕು ದ್ರವ ಕಾಗದಕ್ಕೆ 1958ರಲ್ಲಿ ಪೇಟೆಂಡ್ ಪಡೆದಳು.
8. ಅಕ್ಷರಾಭ್ಯಾಸ: ಮಕ್ಕಳಿಗೆ ಅಕ್ಷರಾಭ್ಯಾಸಕ್ಕೆ ಅನುಕೂಲವಾಗುವ ಅಲ್ಫಾಬೆಟ್ ಬ್ಲಾಕ್ಗಳನ್ನು ರೂಪಿಸಿದ ಬರಹಗಾರ್ತಿ ಅಡೇಲೈನ್ ಡಿ.ಟಿ. ವೈಟ್ನಿ 1882ರಲ್ಲಿ ಪೇಟೆಂಟ್ ಪಡೆದಳು
ಸಿಗ್ನಲ್ ಫ್ಲೇರ್ಸ್‌: ಮಾರ್ಥಾ ಕೋಸ್ಟನ್ - ದಶಕಗಳ ಹಿಂದೆ ಹಡಗುಗಳ ನಡುವಿನ ಸಂವಹನ ಕೇವಲ ಬಣ್ಣಬಣ್ಣದ ಪತಾಕೆಗಳ ಮೂಲಕವಷ್ಟೇ ಸಾಂಕೇತಿಕವಾಗಿತ್ತು ಅಥವಾ ಜೋರಾಗಿ ಕೂಗಿಕೊಳ್ಳಬೇಕಿತ್ತು. ಆಗ, ಮಾರ್ಥಾ ಕೋಸ್ಟನ್ ಎಂಬಾಕೆ, ಸತ್ತ ತನ್ನ ಗಂಡನ ಡೈರಿಯಲ್ಲಿದ್ದ 'ಸಿಗ್ನಲ್ ಫ್ಲೇರ್ಸ್‌' ಯೋಜನೆಯನ್ನು ಕೈಗೆತ್ತಿಕೊಂಡು ಸತತ 10 ವರ್ಷಗಳ ಕಾಲ ಸಂಶೋಧನೆ ನಡೆಸಿದಳು. ರಸಾಯನಶಾಸ್ತ್ರಜ್ಞರು ಮತ್ತು ಪೈರೊಟೆಕ್ನಿಕ್ ತಜ್ಞರೊಂದಿಗೆ ಪ್ರಾಯೋಗಿಕವಾಗಿ ಅದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಶ್ರಮಿಸಿದರು. ಆದರೆ, ಅಂತಿಮವಾಗಿ 1859ರಲ್ಲಿ 'ಆಸ್ತಿಯ ಒಡತಿ' ಎಂದಷ್ಟೇ ಪರಿಗಣಿಸಿ, ಕೋಸ್ಟನ್ ಅವರ ಹೆಸರಿಗೇ ಪೇಟೆಂಟ್ ನೀಡಲಾಯಿತು.
* ದಿ ಸರ್ಕ್ಯುಲರ್ ಸಾ: ತಬಿತಾ ಬಬಿತ್
ತಬಿತಾ ಬಬಿತ್ ಎಂಬ ನೇಕಾರಿಕೆ ಕುಟುಂಬದ ಹೆಣ್ಣು ಮಗಳು ಮೊದಲ ಬಾರಿಗೆ ವೃತ್ತಾಕಾರದ ಗರಗಸದ ಮೂಲಕ ಮರವನ್ನು ಕತ್ತರಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟರು. 1813ರಲ್ಲಿ ಕುರಿತ ಮಾದರಿಯೊಂದನ್ನು ತಯಾರಿಸಿದ ತಬಿತಾ, ನೂಲುವ ರಾಟೆಗೆ ಅದನ್ನು ಜೋಡಿಸಿದರು. ಬಬಿತಾ ಅವರ ಷಾಕರ್ ಸಮುದಾಯ ಇದರ ಪೇಟೆಂಟ್ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡದಿದ್ದರೂ, ಸಂಶೋಧನೆಯ ಸಮಗ್ರ ಪ್ರಯೋಜನವನ್ನು ಪಡೆದುಕೊಳ್ಳಲಾಯಿತು.
* ರಿಟ್ರ್ಯಾಕ್ಟಬಲ್ ಡಾಗ್ ಲೀಶ್: ಮೇರಿ .ಡೆಲೆನಿ
ನ್ಯೂ ಯಾರ್ಕ್ ನಾಯಿಯೊಂದರ ಮಾಲೀಕರಾಗಿದ್ದ ಮೇರಿ .ಡೆಲೆನಿ 1908ರಲ್ಲಿ 'ನಾಯಿಯನ್ನು ನಿಯಂತ್ರಿಸುವ ಹಗ್ಗ ಅಥವಾ ಉಪಕರಣ' ಪೇಟೆಂಟ್ ಪಡೆದಿದ್ದಾರೆ. ಅಚ್ಚರಿ ಎಂದರೆ, ಆರ್.ಸಿ.ಕಾನರ್ ಎಂಬುವವರು 11 ವರ್ಷಗಳ ನಂತರ 'ಮಕ್ಕಳ ತಳ್ಳುವ ಗಾಡಿ'ಗೆ ಪೇಟೆಂಟ್ ಪಡೆದುಕೊಂಡಿದ್ದಾರೆ.
* ಜಲಾಂತರ್ಗಾಮಿ ದೂರದರ್ಶಕ ಮತ್ತು ದೀಪವನ್ನು ಸರಾ ಮಥರ್ ಎಂಬಾಕೆ ಕಂಡುಹಿಡಿದಿದ್ದು, 1845ರಲ್ಲಿ ಇದಕ್ಕೆ ಪೇಟೆಂಟ್ ಪಡೆದಿದ್ದಾರೆ.
* ಫೋಲ್ಡಿಂಗ್ ಕ್ಯಾಬಿನೆಟ್ ಬೆಡ್: ಸರಾ .ಗೋಡ್ಸ್
ಸರಾ .ಗೋಡ್ಸ್ ಅವರ ಫೋಲ್ಡಿಂಗ್ ಕ್ಯಾಬಿನೆಟ್ ಸಣ್ಣ ಮನೆಗಳಲ್ಲಿ ಹೆಚ್ಚು ಸಾಮಾನು, ಸರಂಜಾಮುಗಳನ್ನು ಸೇರ್ಪಡೆಗೊಳಿಸಲು ನೆರವಾಯಿತು. ಉಪಕರಣಕ್ಕಾಗಿ 1885ರಲ್ಲಿ ಪೇಟೆಂಟ್ ಪಡೆದ ಈಕೆ, ಅಮೆರಿಕಾದ ಪೇಟೆಂಟ್ ಪಡೆದ ಮೊದಲ ಆಫ್ರಿಕನ್ - ಅಮೆರಿಕನ್ ಮಹಿಳೆ ಎನಿಸಿಕೊಂಡರು.
ಡೆಸ್ಕ್ ಮಾದರಿಯ ಉಪಕರಣದಲ್ಲಿ ಇಡೀ ದಿನ ನಮಗೆ ಬೇಕಾದ ವಸ್ತುಗಳನ್ನು ಜೋಡಿಸಿಡಬಹುದಾಗಿದ್ದು, ರಾತ್ರಿ ವೇಳೆಗೆ ಮಡಚಿಟ್ಟು ಹಾಸಿಗೆ ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದೆ. ಇದಾದ 15 ವರ್ಷಗಳ ನಂತರವಷ್ಟೇ ಮರ್ಫಿ ಬೆಡ್ ಪರಿಕಲ್ಪನೆ ಬೆಳಕಿಗೆ ಬಂದಿತು.
* ಸೌರಶಕ್ತಿಯ ಮನೆ: ಮರಿಯಾ ಟೆಲ್ಕ್ಸ್
ಹಂಗೇರಿಯಾ ಮೂಲದ ಜೀವಭೌತವಿಜ್ಞಾನಿ ಮರಿಯಾ ಟೆಲ್ಕ್ಸ್ಮೊದಲ ಸೌರಶಕ್ತಿ ಮನೆ ಕಂಡುಹಿಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚೂಪಾದ ರಚನೆಯುಳ್ಳ ಡೊವರ್ ಹೌಸ್ಗೆ ಶಾಖವನ್ನು ಒದಗಿಸಲು ವಾಸ್ತುಶಿಲ್ಪಿ ಎಲೀನರ್ ರೇಮಂಡ್ರೊಂದಿಗೆ 1947ರಲ್ಲಿ ಉಷ್ಣವಿದ್ಯುತ್ ಜನರೇಟರ್ಅನ್ನು ಈಕೆ ಆವಿಷ್ಕರಿಸಿದರು. ಈಕೆ ಛಳಿಗಾಲದ ದಿನಗಳಲ್ಲಿ ಶಾಖ ಉತ್ಪಾದಿಸಲು ಸಲ್ಫ್ಯೂರಿಕ್ ಆಮ್ಲದ ಸೋಡಿಯಂ ಲವಣವನ್ನು ಬಳಸುತ್ತಿದ್ದರು. ಡೊವರ್ ಹೌಸ್ ಎಂಬ ಪರಿಕಲ್ಪನೆ ಮುಂದಿನ ಹಲವು ವರ್ಷಗಳ ಕಾಲ ಚಾಲ್ತಿಯಲ್ಲಿತ್ತು. (ಮೊದಲ ಸಂಪೂರ್ಣ ಸೌರಮನೆ)
* ಸ್ಕಾಚ್ಗಾರ್ಡ್: ಪ್ಯಾಟ್ಸಿ ಶೆರ್ಮನ್
1952ರಲ್ಲಿ ರಸಾಯನಶಾಸ್ತ್ರಜ್ಞ ಪ್ಯಾಟ್ಸಿ ಶೆರ್ಮನ್ ಎಂಬಾತ ತನ್ನ ಪ್ರಯೋಗಾಲಯದಲ್ಲಿ ಸಹಾಯಕನಾಗಿದ್ದವನ ಶೂ ಮೇಲೆ ಫ್ಲೋರೋಕೆಮಿಕಲ್ ರಬ್ಬರ್ ಬಿದ್ದು, ಗಟ್ಟಿಯಾಯಿತು. ಇದರಿಂದ ಗೊಂದಲಕ್ಕೊಳಗಾದ ಶೆರ್ಮನ್ ಶೂನ ಬಣ್ಣ ಹಾಳಾಗದಂತೆ, ಅದರ ಕಲೆಯನ್ನು ನೀರು, ಎಣ್ಣೆ ಮತ್ತಿತರ ದ್ರವಗಳ ಮೂಲಕ ಹೋಗಲಾಡಿಸಿದರು. ಇದನ್ನೇ ಆನಂತರ ಸ್ಕಾಚ್ಗಾರ್ಡ್ ಎಂದು ಕರೆಯಲಾಯಿತು.
* ಅದೃಶ್ಯ ಗಾಜು : ಕ್ಯಾಥರಿನ್ ಬ್ಲಾಡ್ಗೆಟ್
ಮೊದಲ ಸಾಮಾನ್ಯ ವಿದ್ಯುತ್ ಉಪಕರಣಗಳ ವಿಜ್ಞಾನಿ ಕ್ಯಾಥರಿನ್ ಬ್ಲಾಡ್ಗೆಟ್ ತೆಳುವಾದ ಮೋನೊಮಾಲಿಕ್ಯುಲರ್ ಲೇಪನವನ್ನು ಗಾಜು ಮತ್ತು ಲೋಹವಾಗಿಸುವ ಬಗೆಯನ್ನು 1935ರಲ್ಲಿ ಕಂಡುಹಿಡಿದರು. ತೀಕ್ಷ್ಣ ಬೆಳಕು ಮತ್ತು ವಿರೂಪ ಅಥವಾ ಅಸ್ಪಷ್ಟತೆಯನ್ನು ಗಾಜು ತೊಡೆದುಹಾಕಿತು. ತಂತ್ರಜ್ಞಾನವು ಮುಂದೆ ಕ್ಯಾಮೆರಾ, ಮೈಕ್ರೊಸ್ಕೋಪ್, ಕನ್ನಡಕಗಳು ಮತ್ತಿತರ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿತು.
* ಕಂಪ್ಯೂಟರ್: ಗ್ರೇಸ್ ಹಾಪರ್
1944ರಲ್ಲಿ ಗ್ರೇಸ್ ಹಾಪರ್ ಮತ್ತು ಹೊವಾರ್ಡ್ ಏಕೆನ್ ಜತೆಗೂಡಿ ಐದು ಟನ್, ಕೊಠಡಿ ಗಾತ್ರದ ಹಾರ್ವರ್ಡ್ ಮಾರ್ಕ 1 ಕಂಪ್ಯೂಟರ್ಅನ್ನು ವಿನ್ಯಾಸಗೊಳಿಸಿದರು. ಬರವಣಿಗೆಯ ಭಾಷೆಯನ್ನು ಕಂಪ್ಯೂಟರ್ ಕೋಡ್ ರೂಪಕ್ಕೆ ರೂಪಾಂತರಿಸುವ ಜೋಡಕವನ್ನು(ಕಂಪೈಲರ್) ಕಂಡುಹಿಡಿದ ಹಾಪರ್, ಬಗ್ ಮತ್ತು ಡಿಬಗ್ಗಿಂಗ್ ಎಂಬ ಪರಿಕಲ್ಪನೆಯನ್ನು ಮೊದಲ ಬಾರಿಗೆ ಪರಿಚಯಿಸಿದರು. 1959ರಲ್ಲಿ ಮೊದಲ ಆಧುನಿಕ ಪ್ರೋಗ್ರಾಮಿಂಗ್ ಭಾಷೆಯಾದ ಕೊಬೊಲ್ಅನ್ನು ಅಭಿವೃದ್ಧಿಪಡಿಸಿದ ತಂಡದಲ್ಲೊಬ್ಬರಾಗಿಯೂ ಹಾಪರ್ ಕಾರ್ಯನಿರ್ವಹಿಸಿದ್ದರು
ನೇಪಾಳ-                       ನೇಪಾಳವು ದಕ್ಷಿಣ ಏಷ್ಯಾದ ಒಂದು ರಾಷ್ಟ್ರ.
ಹಿಮಾಲಯದ ತಪ್ಪಲಲ್ಲಿ ಇರುವ ನೇಪಾಳವು ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿದೆ. *ನೇಪಾಳದ ಉತ್ತರಕ್ಕೆಟಿಬೆಟ್ ಮತ್ತು ಇತರ ಎಲ್ಲಾ ದಿಕ್ಕುಗಳಲ್ಲಿಯೂ ಭಾರತವಿದೆ.  *ಎವರೆಸ್ಟ್ ಸೇರಿದಂತೆ ವಿಶ್ವದ ಅತಿ ಉನ್ನತ 10 ಪರ್ವತ ಶಿಖರಗಳ ಪೈಕಿ 8 ನೇಪಾಳದಲ್ಲಿಯೇ ಇವೆ. *ನೇಪಾಳದ ವಿಸ್ತೀರ್ಣ 141,700 .ಕಿ.ಮೀ.
*ನೇಪಾಳ ರಾಷ್ಟ್ರದ ರಾಜಧಾನಿ ಕಾಠ್ಮಂಡು.                                       ಇತಿಹಾಸ
*ಕ್ರಿ.ಪೂ.6ಮತ್ತು 5ನೇಯ ಶತಮಾನದಲ್ಲಿ ಪ್ರದೇಶವು "ಶಾಕ್ಯ" ಆಡಳಿತಕ್ಕೊಳಪಟ್ಟಿತ್ಥು.
*ಶಾಕ್ಯ ರಾಜಕುಮಾರರಲ್ಲೊಬ್ಬನಾದ ಸಿದ್ಧಾರ್ಥ ಗೌತಮನು ಐಹಿಕ ಪ್ರಾಪಂಚಿಕ ವ್ಯಾಮೋಹಗಳನ್ನು ತೊರೆದು ದಿವ್ಯ ಜ್ಞಾನವನ್ನು ಹೊಂದಿ ಮುಂದೆ ಬುದ್ಧನೆನಿಸಿಕೊಂಡನು.
*ಸುಮಾರು ಕ್ರಿ.ಪೂ. 250 ಸಮಯಕ್ಕೆ ಪ್ರದೇಶವು ಉತ್ತರ ಭಾರತದ ಮೌರ್ಯ ಸಾಮ್ರಾಜ್ಯದ ಅಂಗವಾಗಿತ್ತು.
ತರುವಾಯ ಗುಪ್ತ ಸಾಮ್ರಾಟರು , ಲಿಚ್ಛವಿ ಸಾಮ್ರಾಟರು ಹಾಗೂ ಚಾಲುಕ್ಯರು  ಪ್ರದೇಶದ ಮೇಲೆ ಹತೋಟಿ ಸಾಧಿಸಿದ್ದರು. ನಂತರ ಪ್ರದೇಶವು ಹಲವು ಸಣ್ಣ ಅರಸೊತ್ತಿಗೆಗಳಾಗಿ ಹಂಚಿಹೋಯಿತು.
*1765ರಲ್ಲಿ ಪೃಥ್ವಿನಾರಾಯಣ ಶಹ ಎಂಬ ಗೂರ್ಖಾ ಅರಸನು ನೇಪಾಳವನ್ನು ಒಂದುಗೂಡಿಸಿದನು. *ಭಾರತವು ಬ್ರಿಟಿಷ್ ಆಡಳಿತಕ್ಕೆ ಒಳಗಾದಾಗ ನೇಪಾಳವು ತನ್ನಸ್ವಾಯತ್ತತೆಯನ್ನು ಉಳಿಸಿಕೊಂಡಿತ್ತು.ಆಂಗ್ಲರೊಡನೆ ನಡೆದ ಒಂದು ಯುದ್ಧದಲ್ಲಿ ನೇಪಾಳವು ಸೋಲನುಭವಿಸಿತಾದರೂ, ತನ್ನ ಸ್ವಾತಂತ್ರ್ಯವನ್ನುಉಳಿಸಿಕೊಳ್ಳಲು ಬ್ರಿಟಿಷರೊಂದಿಗೆ ಸಂಧಿ ಮಾಡಿಕೊಂಡಿತು. ಇದರ ಪ್ರಕಾರ ನೇಪಾಳವು ಅಂದು ತನ್ನ ಪ್ರದೇಶಗಳಾಗಿದ್ದ ಉತ್ತರಾಖಂಡಹಿಮಾಚಲ ಪ್ರದೇಶ ಮತ್ತು ಸಿಕ್ಕಿಂ ಭಾಗಗಳನ್ನು ಆಂಗ್ಲರಿಗೆ ಬಿಟ್ಟುಕೊಟ್ಟಿತು. ಅಲ್ಲಿಂದ ಮುಂದೆ ಇತ್ತೀಚಿನವರೆವಿಗೂ ನೇಪಾಳವು ಅರಸೊತ್ತಿಗೆಯಾಗಿಯೇ ಉಳಿದಿತ್ತು. ಈಚಿನ ದಿನಗಳಲ್ಲಿ ಪ್ರಜಾಸತ್ತೆಗಾಗಿ ಹೋರಾಟವು ತೀವ್ರಗೊಂಡು ಬಹುಪಕ್ಷೀಯ ಸಾಂಸದೀಯ ವ್ಯವಸ್ಥೆಯನ್ನುಸ್ಥಾಪಿಸಲಾಯಿತು. ಅರಸರ ಅಧಿಕಾರಗಳನ್ನು ಬಹುಮಟ್ಟಿಗೆ ಮೊಟಕುಗೊಳಿಸಲಾಯಿತು. *1991ರಲ್ಲಿ ಪ್ರಪ್ರಥಮ ಬಹುಪಕ್ಷೀಯ ಹಾಗೂ ಮುಕ್ತ ಚುನಾವಣೆಗಳು ನಡೆದವು.
*ಹಿಮಾಲಯದ ಉನ್ನತ ಪರ್ವತ ಪ್ರದೇಶವು ಪ್ರಪಂಚದಲ್ಲಿಯೇ ಅತಿ ಹೆಚ್ಚಿನ ಎತ್ತರದ ಪ್ರದೇಶವಾಗಿದೆ.ಎವರೆಸ್ಟ್ ,
ಕಾಂಚನ್ ಜುಂಗಾಅನ್ನಪೂರ್ಣಾ , ಮಕಾಲು ,ಧವಳಗಿರಿ ಸೇರಿದಂತೆ ವಿಶ್ವದ ಹಲವು ಅತ್ಯುನ್ನತ ಶಿಖರಗಳು ವಿಭಾಗದಲ್ಲಿ ಇವೆ
ಅರ್ಥವ್ಯವಸ್ಥೆ- *ನೇಪಾಳವು ಕೃಷಿಪ್ರಧಾನ ದೇಶ. ದೇಶದ ೭೬% ಜನರು ಜೀವನಕ್ಕಾಗಿ ವ್ಯವಸಾಯವನ್ನೇ ಅವಲಂಬಿಸಿದ್ದಾರೆ.  *ಬತ್ತ,ಗೋಧಿಕಬ್ಬು ಮತ್ತು ಸೆಣಬು ಮುಖ್ಯ ಬೆಳೆಗಳು. ಕೈಗಾರಿಕೆಗಳು ಕೃಷಿ ಉತ್ಪನ್ನಗಳನ್ನು ಸಂಸ್ಕರಿಸುವುದಕ್ಕೇ ಸೀಮಿತ           *ಪ್ರವಾಸೋದ್ಯಮವು ದೇಶದ ಪ್ರಮುಖ ಆರ್ಥಿಕ ಚಟುವಟಿಕೆ.
*ನೇಪಾಳವು ವಿಶ್ವದ ಏಕೈಕ ಹಿಂದೂ ರಾಷ್ಟ್ರ.
*ದೇಶದ ಅಧಿಕೃತ ಭಾಷೆ ನೇಪಾಲಿ. ಉಳಿದಂತೆ ಮೈಥಿಲಿ, ಭೋಜಪುರಿ ಮತ್ತು ಅವಧಿ ಭಾಷೆಗಳು ನುಡಿಯಲ್ಪಡುತ್ತವೆ.
* ಸಾಂಸ್ಕೃತಿಕ ವಿಷಯಗಳಲ್ಲಿ ನೇಪಾಳವು ಟಿಬೆಟ್ ಮತ್ತು ಭಾರತವನ್ನು ಹೋಲುತ್ತದೆ. *ಉತ್ತರದ ಹಿಮಾಲಯ ಪ್ರದೇಶದಲ್ಲಿ ಟಿಬೆಟ್ ಸಂಸ್ಕೃತಿಯ ಛಾಪು ಕಂಡುಬರುವುದು. ಉಳಿದಂತೆ ಎಲ್ಲಾ ಕಡೆ ಹಿಂದೂ ಸಂಸ್ಕೃತಿಯ ಗಾಢ ಛಾಯೆ ಇದೆ. *ನೇಪಾಳವು ಭಾರತವನ್ನು ಬಹಳವಾಗಿ ಅವಲಂಬಿಸಿದೆ. ಆರ್ಥಿಕ ಸಹಾಯ, ತಂತ್ರಜ್ಞಾನ, ರಕ್ಷಣೆ ಇವುಗಳೆಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಭಾರತದಿಂದಲೇ ನೇಪಾಳಕ್ಕೆ ಒದಗಿದೆ.

 ಏಪ್ರಿಲ್ 25 ವಿಶ್ವ ಮಲೇರಿಯಾ ದಿನ:: ಅದರ ಒಂದಿಷ್ಟು ಮಾಹಿತಿ

* ಪ್ರಪಂಚದಾದ್ಯಂತ ಪ್ರತಿ ದಿನ ಮಲೇರಿಯಾಕ್ಕೆ 1200ಕ್ಕೂ ಹೆಚ್ಚು ಮಕ್ಕಳು ಬಲಿಯಾಗುತ್ತಿದ್ದಾರೆ.
*
ಪ್ರತಿ ಗಂಟೆಗೆ 50 ಮಕ್ಕಳು ಮಲೇರಿಯಾಗೆ ತುತ್ತಾಗುತ್ತಿದ್ದಾರೆ.        * ಪ್ರತಿ ವರ್ಷ 10.000 ಗರ್ಭಿಣಿ ಮಹಿಳೆಯರು ಮಲೇರಿಯಾದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
* 2
ಲಕ್ಷ ಶಿಶುಗಳು ಬಲಿಯಾಗುತ್ತಿವೆ, ಕಳೆದ 15ವರ್ಷಗಳಿಂದ ಶೇ.40ರಷ್ಟು ಮಕ್ಕಳು ಮಲೇರಿಯಾ ರೋಗದಿಂದ ಸಾಯುತ್ತಿದ್ದಾರೆ ಎಂದು ಯುನಿಸೆಫ್ ಹೇಳಿದೆ  *ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಮಲೇರಿಯಾದಿಂದ ಮರಣ ಹೊಂದುವವರ ಪ್ರಮಾಣವು  ವಿಶ್ವದಾದ್ಯಂತ ಶೇ.47ರಷ್ಟು ತಗ್ಗಿದೆ.  ಆಪ್ರಿಕಾದಲ್ಲೇ ಶೇ. 54ರಷ್ಟು ಪ್ರಮಾಣ ಕಡಿಮೆಯಾಗಿದೆ.  2001ರಿಂದ 4ದಶಲಕ್ಷಕ್ಕೂ ಹೆಚ್ಚಿನ ಸಾವುಗಳು ಮಲೇರಿಯಾ ಕಾರಣಗಳಿಂದ ಸಂಭವಿಸಿವೆ.
ಮಲೇರಿಯಾ ಕಾರಣಗಳಿಂದ ಅಸುನೀಗಿದ ಮಕ್ಕಳಲ್ಲಿ ಶೇ.97ರಷ್ಟು 5 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ.
*2012
ರಲ್ಲಿ 6,27,000 ಸಾವುಗಳು ಮಲೇರಿಯಾದಿಂದ ಸಂಭವಿಸಿವೆ.
*2013
ರಲ್ಲಿ ಜಗತಿನಾದ್ಯಂತ 5,84,000 ಮಂದಿ ಮಲೇರಿಯಾದಿಂದ ಸತ್ತಿದ್ದಾರೆ. ಇದರಲ್ಲಿ ಶೆ90ರಷ್ಟು ಪ್ರಕರಣ ಆಪ್ರಿಕಾದಲ್ಲಿ ಘಟಿಸಿದೆ.     *2001-13 ನಡುವೆ 4.3 ದಶಲಕ್ಷ ಮಂದಿಯನ್ನು ಮಲೇರಿಯಾದಿಂದ ರಕ್ಷಿಸಲಾಗಿದೆ. ಇದರಲ್ಲಿ ಶೇ.92ರಷ್ಟು (3.9ದಶಲಕ್ಷ) 5 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಉಪ ಸಹರಾ ಆಪ್ರಿಕಾದಲ್ಲಿ ರಕ್ಷಿಸಲಾಗಿದೆ.
*
ಪ್ರತಿ ವರ್ಷ .25ನ್ನು ವಿಶ್ವ ಮಲೇರಿಯಾ ದಿನ ಎಂದು ಆಚರಿಸಲಾಗುತ್ತದೆ. 106ದೇಶಗಳಲ್ಲಿ 3.3 ದಶಲಕ್ಷ ಮಂದಿ ಮಲೇರಿಯಾ ರೋಗಕ್ಕೆ ಒಳಗಾಗಿದ್ದಾರೆ.
ಮಲೇರಿಯಾ: ಇದೊಂದು ಸಾಂಕ್ರಾಮಿಕ ರೋಗವಾಗಿದ್ದು, ಪ್ಲಾಸ್ಮೋಡಿಯಂ ಎಂಬ ಆದಿಜೀವಿ ಹಾಗೂ ಪರೋಪ ಜೀವಿ ಜಾತಿಗೆ ಸೇರಿದ ಐದು ಪ್ರಭೇದಗಳಾದ
"ಪ್ಲಾಸ್ಮೋಡಿಯಂ ವೈವಾಕ್ಸ್"              "ಪ್ಲಾಸ್ಮೋಡಿಯಂ ಓವಲೆ"     "ಪ್ಲಾಸ್ಮೋಡಿಯಂ ಮಲೇರಿಯಾ"
"
ಪ್ಲಾಸ್ಮೋಡಿಯಂ ಫಾಲ್ಸಿಪಾರಮ್"      "ಪ್ಲಾಸ್ಮೋಡಿಯಂ ನ್ಯೋಲೆಸಿ"              ಎಂಬ ಆದಿಜೀವಿಗಳಿಂದ ಹರಡುತ್ತದೆ.
*
ಪ್ಲಾಸ್ಮೋಡಿಯಂ ಫಾಲ್ಸಿಪಾರಮ್ ಎಂಬ ಪ್ರಭೇದವು ಅತ್ಯಂತ ಅಪಾಯಕಾರಿಯಾದಂತಹ ಆದಿ ಜೀವಿಯಾಗಿದೆ.
*
ಮಲೇರಿಯಾವನ್ನು "ಅನಾಫಿಲಿಸ್" ಜಾತಿಯ ಹೆಣ್ಣು ಸೊಳ್ಳೆಯು ಹರಡುತ್ತದೆ.
*
ಸರ್ ರೋನಾಲ್ಡ್ ರೋಸ್ ಎಂಬ ಬ್ರಿಟೀಷ್ ವೈದ್ಯನು ಅನಾಫಿಲಿಸ್ ಸೊಳ್ಳೆಯಲ್ಲಿ ಮಲೇರಿಯಾದ ಪರವಾಲಂಭಿಗಳು ಇರುವುದನ್ನು ಸಂಶೋಧಿಸಿ ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯು ಮಲೇರಿಯಾ ರೋಗ ಹಡರಲು ಮುಖ್ಯ ಕಾರಣವೆಂದು ಕಂಡು  ಹಿಡಿದನು. ಅದಕ್ಕಾಗಿ ಅವರಿಗೆ 1902ರಲ್ಲಿ ವೈದ್ಯಕೀಯ ಕ್ಷೇತ್ರದ ನೋಬೆಲ್ ಪ್ರಶಸ್ತಿ ನೀಡಲಾಯಿತು.
*
ಮಲೇರಿಯಾದ ಲಕ್ಷಣವೆಂದರೆ ಗಡುವಿನ ಜ್ವರ (24ಘಂಟೆ ಅಥವಾ 48ಗಂಟೆಗಳಿಗೊಮ್ಮೆ ಕಾಣಿಸುವ ಜ್ವರ), ವಿಪರೀತ ಚಳಿ, ನಡುಕ, ರಕ್ತಹೀನತೆ, ಗುಲ್ಮಾ ದೊಡ್ಡದಾಗುತ್ತದೆ.
*
ಇದರಿಂದ ಕೆಂಪು ರಕ್ಷ ಕಣಗಳು ನಾಶಗೊಂಡು ಪರಾವಲಂಭೀಗಳು ರಕ್ತದ ಪ್ರವಾಹದಲ್ಲಿ ಬಿದ್ದಾಗ ಜ್ವರ, ತಲೆನೋವು ಮತ್ತು ಚಳಿ, ಕೀಲು ನೋವು ಬರುತ್ತದೆ.          
* ರೋಗವನ್ನು ರಕ್ತ ಪರೀಕ್ಷೆಯ ಮೂಲಕ ಪತ್ತೆ ಹಚ್ಚಬಹುದು.
*
ರಾಷ್ಟ್ರೀಯ ಮಲೇರಿಯಾ ನಿಯಂತ್ರಣದಡಿಯಲ್ಲಿ ಕ್ಲೋರೋ ಕ್ವಿನೈನ್, ಪ್ರೈಮಿಧಾಅಮೈನ್, ಪ್ರೈಮಾಕ್ವೈನ್, ಅಟೋವಾಕ್ವಯೋನ್, ಸಲ್ಪೋಡಾಕ್ಸಿನ್ ಮತ್ತು ಪ್ರೈಮ್ಯಾಕ್ಸಿನ್ ಎಂಬ ಔಷಧಿಯಿಂದ ಗುಣಪಡಿಸಲಾಗುವುದು.
*
ಮಲೇರಿಯಾವನ್ನು ಹರಡುವ ಸೊಳ್ಳೆಗಳನ್ನು ತಡೆಯಲು ಕೀಟ ನಾಶಕವಾದ ಡಿ.ಡಿ.ಟಿಯನ್ನು  ಬಳಸಲಾಗುತ್ತಿದೆ.
*
ಕ್ವಿನೈನ್ ಎಂಬ ಔಷದವನ್ನು ಮಲೇರಿಯಾ ರೋಗ ನಿವಾರಣಗೆ ಬಳಸಲಾಗುತ್ತಿದೆಇದನ್ನು 'ಸಿಂಕೋನ ಮರ' ತೊಗಟೆಯಿಂದ ತೆಗೆಯಲಾಗುತ್ತದೆ.
(
ಕೀಟಗಳಿಗೆ ಬಂಜೆತನ ವಿಧಾನ- ಸ್ಟೆರೈಲ್ ಇನ್ಸ್ ಕ್ಟೆ ತಂತ್ರಜ್ಞಾನದ ಮೂಲಕ ಹೆಣ್ಣು ಸೊಳ್ಳೆಗೆ ಬಂಜೆತನ ಉಂಟು ಮಾಡಿ ಅದರ ವಂಶಾಭಿವೃದ್ಧಿಯಾಗದಂತೆ ಮಾಡುವುದಾಗಿದೆ.)

ವಿಶ್ವ ಸಂಸ್ಥೆ-         

ಮೂರನೇ ಮಹಾಯುದ್ದ ನಡೆಯಬಾರದೆಂದೂ ವಿಶ್ವದ ಪ್ರಮುಖ ವ್ಯಕ್ತಿಗಳು ಚರ್ಚಿಸಿದರ ಫಲವಾಗಿ 1945 ಅಕ್ಟೋಬರ್ 24 ರಂದು ವಿಶ್ವಸಂಸ್ಥೆ ಸ್ಥಾಪನೆಯಾಯಿತು.  ಅಕ್ಟೋಬರ್ 24ನ್ನು ವಿಶ್ವಸಂಸ್ಥೆಯ ದಿನಾಚರಣೆಯಾಗಿ ಆಚರಿಸುತ್ತಾರೆ
ವಿಶ್ವಸಂಸ್ಥೆಯ ಸ್ಥಾಪನೆಗೆ ಕಾರಣರಾದ ವ್ಯಕ್ತಿಗಳು
1)
ಅಮೇರಿಕಾದ ಅಧ್ಯಕ್ಷ ಪ್ರಾಂಕ್ಲಿನ್ ಡಿ ರೂಸವೆಲ್ಟ್     2) ಇಂಗ್ಲೇಂಡ್ ಚರ್ಚಿಲ್   3) ರಷ್ಯಾದ ಜೋಸೆಪ್ ಸ್ಟಾಲಿನ್
ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳು
1)
ಅಮೇರಿಕಾ ಅದರ ರಾಜಧಾನಿ ವಾಷಿಂಗಟನ್ ಡಿಸಿ ಕರೆನ್ಸಿ ಡಾಲರ್
2)
ರಷ್ಯಾ ಅದರ ರಾಜಧಾನಿ ಮಾಸ್ಕೋ ಕರೆನ್ಸಿ ರೋಬಾಲ್
3)
ಚೀನಾ ರಾಜಧಾನಿ ಬೀಜಿಂಗ್ ಕರೆನ್ಸಿ ಯೆಯನ್     4) ಪ್ರಾನ್ಸ್ ರಾಜಧಾನಿ ಪ್ಯಾರಿಸ್ ಕರೆನ್ಸಿ ಪ್ರಾಂಕ್ (ಯುರೋ)
5)
ಇಂಗ್ಲೇಂಡ್ ಅದರ ರಾಜಧಾನಿ ಲಂಡನ್ ಕರೆನ್ಸಿ ಪೌಲ್
ವಿಶ್ವಸಂಸ್ಥೆಯ ಧ್ವಜ:
ಆಲೀವ್ ರೆಂಬೆಗಳ ಮಧ್ಯದಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಬಾವುಟವಿರುವ ವಿಶ್ವದ ನಕಾಶೆ. ಇದನ್ನು 1945 ಅಕ್ಟೋಬರ್ 20 ರಂದು ಅಂಗೀಕರಿಸಲಾಯಿತು     *ವಿಶ್ವಸಂಸ್ಥೆ ಕಟ್ಟಲು ಸ್ಥಳ ಕೊಟ್ಟ ವ್ಯಕ್ತಿ: ಅಮೇರಿಕಾದ ಶ್ರೀಮಂತ ರಾಂಕ್ ಪಿಲ್ಲರ್
*
ವಿಶ್ವಸಂಸ್ಥೆ ಎಂದು ಮೊದಲ ಬಾರಿಗೆ ಕರೆದಂತಹ ವ್ಯಕ್ತಿ: ಪ್ರಾಂಕ್ಲಿನ್ ಡಿ ರೂಸವೆಲ್ಟ್
ವಿಶ್ವಸಂಸ್ಥೆಯ ಗುರಿ ಮತ್ತು ಉದ್ಧೇಶಗಳು
*
ರಾಷ್ಟ್ರ ರಾಷ್ಟ್ರಗಳ ಮಧ್ಯೆ ಬಾತೃತ್ವ ಭಾವನೆ ಮೂಡಿಸುತ್ತದೆ    * ಮಾರಕ ರೋಗಗಳ ವಿರುದ್ದ ಜಾಗೃತಿ ಮೂಡಿಸುತ್ತದೆ
*
ಭಯೋತ್ಪಾದನೆ ನಿಗ್ರಹಿಸಲು ಎಲ್ಲಾ ರಾಷ್ಟ್ರಗಳಿಗೆ ಕರೆ ನೀಡುತ್ತದೆ
*
ವಿಶ್ವದ ಸ್ತ್ರೀಯರ, ಮಕ್ಕಳ, ಕಾರ್ಮಿಕರ ಕಲ್ಯಾಣ ಸಾಧಿಸುತ್ತದೆ
*
ಹವಮಾನ ವೈಪರಿತ್ಯವನ್ನು ತಡೆಯಲು ತನ್ನದೇ ಆದ ಸಲಹೆ ನೀಡುತ್ತದೆ
*
ಸಾಂಸ್ಕೃತಿಕ ಮೌಲ್ಯಗಳನ್ನು ರಕ್ಷಣೆ ಮಾಡುತ್ತದೆ     * ವಿಶ್ವದ ಸಾಮಾಜಿಕ ಮತ್ತು ಆರ್ಥಿಕ ಸಮನ್ವಯ ಸಾಧಿಸುತ್ತದೆ
ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳು
1)
ಸಾಮಾನ್ಯ ಸಭೆ        2) ಭಧ್ರತಾ ಮಂಡಳಿ       3) ಸಾಮಾಜಿಕ ಮತ್ತು ಆರ್ಥಿಕ ಮಂಡಳಿ
4)
ಅಂತರಾಷ್ಟ್ರೀಯ ನ್ಯಾಯಲಯ   5) ಧರ್ಮದರ್ಶಿ ಮಂಡಳಿ   6) ಸಚಿವಾಲಯ

ವಿಶ್ವಸಂಸ್ಥೆಯ ವಿಶೇಷ ಅಂಶಗಳು
*
ಅಂತರಾಷ್ಟ್ರೀಯ ನ್ಯಾಯಲಯವೊಂದನ್ನು ಹೊರತು ಪಡಿಸಿ ಉಳಿದ ಐದೂ ಅಂಗ ಸಂಸ್ಥೆಗಳ ಕೇಂದ್ರ ಕಛೇರಿ ನ್ಯೂಯಾರ್ಕ್
*
ವಿಶ್ವಸಂಸ್ಥೆ ಸಂಪೂರ್ಣವಾಗಿ ನಿವಾರಿಸಿದ ರೋಗ ಸಿಡುಬು   * ವಿಶ್ವಸಂಸ್ಥೆಯಲ್ಲಿ ಮೊದಲು ಚರ್ಚಿಸಲ್ಪಟ್ಟ ವಿಷಯ ರೋಗ ಏಡ್ಸ್
*
ವಿಶ್ವಸಂಸ್ಥೆಗೆ ಸವಾಲಾಗಬಹುದಾದ ಪ್ರಸ್ತುತ ರೋಗ ಎಬೋಲಾ
*
ವಿಶ್ವಸಂಸ್ಥೆಯ ಪರಿಸರ ರಾಯಭಾರಿಯಾಗಿ ಸೇವೆ ಸಲ್ಲಿಸದ ಭಾರತೀಯ ವ್ಯಕ್ತಿ ಎಪಿಜೆ ಅಬ್ದುಲ್ ಕಲಾಂ
*
ವಿಶ್ವಸಂಸ್ಥೆಯ ಶಿಕ್ಷಣದ ಮಾರ್ಗದರ್ಶಕರಾಗಿ ಸೇವೆ ಭಾರತದ ವ್ಯಕ್ತಿ ಡಾ: ರಾಧಕೃಷ್ಣನ್
*
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸೇವೆ ಸಲ್ಲಿಸಿದ ಬಾರತದ ಮಹಿಳೆ ಕಿರಣ್ ಬೇಡಿ
*
ವಿಶ್ವಸಂಸ್ಥೆಯ ಏಡ್ಸ್ ರಾಯಭಾರಿಯಾಗಿ ನೇಮಕವಾದ ಭಾರತದ ಮಹಿಳೆ ಐಶ್ವರ್ಯಾ ರೈ
*
ವಿಶ್ವಸಂಸ್ಥೆಯ ಮಕ್ಕಳ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಭಾರತೀಯ ವ್ಯಕ್ತಿ ರವಿಶಾಸ್ತ್ರೀ
*
ವಿಶ್ವಸಂಸ್ಥೆಯ ಹವಮಾನ ವೈಪರಿತ್ಯದ ಕುರಿತು ಭಾಷಣ ಮಾಡಿದ ಭಾರತದ ಬಾಲಕಿ ಯುಗರತ್ನ ಶ್ರೀವಾಸ್ತವ
*
ವಿಶ್ವಸಂಸ್ಥೆಯ ವಿಶೇಷ ಪ್ರಶಸ್ತಿ ಪಡೆದ ಮಹಿಳೆಯರು (ಇತ್ತೀಚೆಗೆ) ಕರ್ನಾಟಕದ ಅಶ್ವಿನಿ ಅಂಗಡಿ ಉತ್ತರ ಪ್ರದೇಶದ ರಜಿಯಾ      
1. ಗೋವಾದ ಅರ್ವಾಲೆಂ ಪರ್ವತ ಶ್ರೇಣಿಯಲ್ಲಿ ಗುಹಾಂತರ ದೇವಾಲಯವೊಂದನ್ನು ನಿರ್ಮಿಸಿದವರು?    ಕದಂಬರು
2.
ಕೆರೆಯೊಂದರ ದಡದ ಮೇಲೆ ಯಮನು ಪಂಚ ಪಾಂಡವರಿಗೆ ಯಕ್ಷ ಪ್ರಶ್ನೆಗಳನ್ನು ಹಾಕಿದ್ದನಂತೆ, ಕೆರೆಯ ದಡದಲ್ಲಿಯೇ ನಾಲ್ವರು ಪಾಂಡವರೂ ಮೂರ್ಛೆ ಹೋಗಿದ್ದು, ಯುಧೀಷ್ಠಿರ ತನ್ನ ಧೀರ ಉತ್ತರಗಳಿಂದ ತನ್ನ ಸಹೋದರರ ಪ್ರಾಣ ಉಳಿಸಿದ್ದು ಸಹ ಕೆರೆಯ ದಡದಲ್ಲಿಯೇ ಹಾಗಾದರೆ ಕೆರೆಯ ಹೆಸರೇನು?               ಕೇತಾಸ್ ಕೆರೆ (ಪಾಕಿಸ್ಥಾನ)
3. 1800
ರಲ್ಲಿ ಥಾಮಸ್ ಮನ್ರೋ ಯಾವ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದಾರೆ?        ಬಳ್ಳಾರಿ
4.
ನಾರ್ವೆ, ಸ್ವೀಡನ್ ಮತ್ತು ಡೆನ್ಮಾರ್ಕ್ ರಾಷ್ಟ್ರಗಳನ್ನು ಸೇರಿಕೊಂಡಿರುವ ಪ್ರದೇಶವನ್ನು ಸ್ಕ್ಯಾಂಡಿನೆವಿಯ ಎನ್ನುತ್ತಾರೆ. ಹೀಗೆಂದು ಮೊತ್ತ ಮೊದಲು ಕರೆದವರು?                   ರೋಮನ್ ಬರಹಗಾರ ಪ್ಲೀನಿ
5.
ಪ್ರಾರ್ಥನ ಸಮಾಜದ ಸದಸ್ಯರಾಗಿದ್ದ ಎನ್.ಜಿ.ಚಂದಾವರಕರ್ ಮೂಲತ: ಯಾವ ಜಿಲ್ಲೆಯವರು?    ಉತ್ತರ ಕನ್ನಡ
6.
ರಾಬರ್ಟ್ ಕ್ಲೈವ್ ಸತ್ತಿದ್ದು ಹೇಗೆ?                ಆತ್ಮಹತ್ಯೆ ಮಾಡಿಕೊಂಡು
7.
ನಮ್ಮ ರಾಜ್ಯದಲ್ಲಿ ಥಿಯೋಸಾಫಿಕಲ್ ಸೊಸೈಟಿ 1886ರಲ್ಲಿ ಬೆಂಗಳೂರಿನಲ್ಲಿ ತನ್ನ ಮೊದಲ ಕೇಂದ್ರವನ್ನು ಸ್ಥಾಪಿಸಿದರೆ ಬ್ರಹ್ಮಸಮಾಜವು 1870ರಲ್ಲಿ ತನ್ನ ಮೊದಲ ಶಾಖೆಯನ್ನು ಎಲ್ಲಿ ಸ್ಥಾಪಿಸಿತು?         ಮಂಗಳೂರು
8.
ಬ್ಲಡ್ ಹೌಂಡ್ ಎಂಬ ನಾಯಿ ತಳಿಯು ಏಕೆ ಪ್ರಸಿದ್ದ?              ಅಪರಾಧಿಗಳನ್ನು ಪತ್ತೆ ಹಚ್ಚಲು ಬಳಸುತ್ತಾರೆ
9.
ಕರ್ನಾಟಕದ ವಿಧಾನ ಪರಿಷತ್ತಿನ ಇರುವ ಸದಸ್ಯರ ಸಂಖ್ಯೆ ಎಷ್ಟು?          75
10.
ಪ್ರೌನ್ ಹೋಪರ್ (fraun hofer line) ರೇಖೆಗಳು ಎಲ್ಲಿ ಕಾಣ ಸಿಗುತ್ತವೆ?        ಸೂರ್ಯನ ಕರೋನದಲ್ಲಿ
11.
ಮ್ಯಾಗ್ನೆಟ್ ಮೊದಲು ಪತ್ತೆ ಹಚ್ಚಿದವರು ಯಾರು?             ಮ್ಯಾಗ್ನಸ್ ಎಂಬ ಕುರಿ ಕಾಯುವವ
12. ಕೆಳಗಿನವುಗಳಲ್ಲಿ ಪ್ಯಾರಕಾಂತೀಯ ಅಲೋಹ ಯಾವುದು?                     ಆಕ್ಸಿಜನ್
13.
ಅಂಟಾರ್ಕ್ಟಿಕಾದಲ್ಲಿರುವ ಪರ್ವತವೊಂದಕ್ಕೆ ಭಾರತೀಯ ಮೂಲದವರೊಬ್ಬರ ಹೆಸರನ್ನು ಇಡಲಾಗಿದೆ. ಅವರ ಹೆಸರೇನು?   ಅಖೋರಿ ಸಿನ್ಹ            14. ಬೌದ್ಧ ಧರ್ಮದ ಮೊದಲ ಸಂನ್ಯಾಸಿನಿ ಯಾರು?          ಗೌತಮಿ
15.
ಮೊದಲ ಮೂರು ಕನ್ನಡ ಸಾಹಿತ್ಯ ಸಮ್ಮೇಲನದ ಅಧ್ಯಕ್ಷತೆಯನ್ನು ವಹಿಸಿದ್ದವರು ಯಾರು?     ಹೆಚ್.ವಿ.ನಂಜುಂಡಯ್ಯ
16. ತೀಜ್ ಎಂಬ ಹಬ್ಬವನ್ನು ಯಾರು ಆಚರಿಸುತ್ತಾರೆ?              . ಲಂಬಾಣಿ ಜನಾಂಗ
17.
ರೆಡಾರ್ ಸಂಶೋದಕ ಯಾರು?                         ರಾಬರ್ಟ್ ವ್ಯಾಟ್ಸನ್ ವಟ್
18.
ನೈಸರ್ಗಿಕ ಯುರೇನಿಯಂ ಬಳಸಿ ವಿದ್ಯುತ್ ಉತ್ಪಾದಿಸಿದ ಮೊದಲ ಅಣು ಸ್ಥಾವರ ಯಾವುದು?     ಕಲ್ಪಾಕಮ್
19.
ಭಾರತದ ಮೊದಲ ನ್ಯೂಕ್ಲಿಯರ್ ರೀಸರ್ಚ್ ರಿಯಾಕ್ಟರ್ ಯಾವುದು?             ಅಪ್ಸರಾ
1. 'ಭಾರತ ಮತ್ತು ಚೀನಾ' ಮಧ್ಯ ಇರುವ ಗಡಿ ರೇಖೆ ಯಾವುದು?      ಮ್ಯಾಕ್ ಮೋಹನ್ ರೇಖೆ.
2. 'ಹಿರಾಕುಡ್' ಅಣೆಕಟ್ಟು ಯಾವ ನದಿಗೆ ಕಟ್ಟಲಾಗಿದೆ?      ಮಹಾನದಿ.
3. ಭಾರತದಲ್ಲಿ ಸಂಪೂರ್ಣವಾಗಿ ಗ್ರಾನೈಟ್ ನಲ್ಲಿ ನಿರ್ಮಿಸಲಾದ ಮೊದಲ ದೇವಾಲಯ ಯಾವುದು?
        
ತಂಜಾವೂರಿನ ಬೃಹದೇಶ್ವರ ದೇವಾಲಯ.
4. 'ಇಂಡಿಯಾ ವಿನ್ಸ್ ಫ್ರೀಡಂ' ಗ್ರಂಥದ ಕರ್ತೃ ಯಾರು?         ಮೌಲಾನಾ ಅಬ್ದುಲ ಕಲಾಂ ಆಝಾದ್.
5. 'ಭಾರತೀಯ ಭಾಷೆಗಳ ಕೇಂದ್ರಿಯ ಸಂಸ್ಥೆ'(CIIL) ಯಾವ ನಗರದಲ್ಲಿದೆ?        ಮೈಸೂರು.
6. ದೆಹಲಿ ಯಾವ ನದಿದಂಡೆ ಮೇಲಿದೆ?                      ಯಮುನಾ.
7. 'ದಕ್ಷಿಣದ ಬ್ರಿಟನ್' ಎಂದು ಯಾವ ದೇಶವನ್ನು ಕರೆಯುತ್ತಾರೆ?                         ನ್ಯೂಜಿಲ್ಯಾಂಡ್.
8. ಭಾರತವು ನಿರ್ಮಿಸಿದ ಮೊಟ್ಟಮೊದಲ ಹಡಗಿನ ಹೆಸರೇನು?                          ಜಲುಷಾ.
9. ಕೆಳಗಿನವುಗಳಲ್ಲಿ ಯಾವ ರಾಜ್ಯವು ಹಿಂದಿಯನ್ನು 'ಮಾತೃಭಾಷೆ'ಯನ್ನಾಗಿ ಹೊಂದಿದೆ ?    ಮಧ್ಯಪ್ರದೇಶ.
10. ಭಾರತದ ಮೊಟ್ಟ ಮೊದಲ ತೈಲ ಬಾವಿಯನ್ನು ಕೆಳಗಿನ ಯಾವ ಸ್ಥಳದಲ್ಲಿ ತೊಡಲಾಯಿತು?    ದಿಗ್ಬಾಯ್
ಸಾಮಾನ್ಯ ಜ್ಞಾನ
. ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದು ಯಾರನ್ನು ಕರೆಯುತ್ತಾರೆ?    . ಕುಮಾರವ್ಯಾಸ
. ಕರ್ನಾಟಕದಲ್ಲಿ ಪ್ರಥಮವಾಗಿ ವಿದ್ಯುತ್ ಸಂಪರ್ಕ ಪಡೆದ ನಗರ ಯಾವುದು?     ಬೆಂಗಳೂರು (೧೯೦೫ರಲ್ಲಿ)
. ’ಮಾಲ್ಗುಡಿ ಡೇಸ್ಕೃತಿ ಬರೆದವರು ಯಾರು?       ಆರ್.ಕೆ.ನಾರಾಯಣ್
. ಏಷ್ಯಾದಲ್ಲೇ ಹೆಚ್ಚು ಕಬ್ಬಿಣ ನಿಕ್ಷೇಪವುಳ್ಳ ಕರ್ನಾಟಕದ ಸ್ಥಳ ಯಾವುದು?             ಕುದುರೆಮುಖ
. ಬಿ.ಡಿ.ಜತ್ತಿಯವರು ಯಾವ ರಾಜ್ಯದ ರಾಜ್ಯಪಾಲರಾಗಿದ್ದರು?     ಪಾಂಡಿಚೇರಿ
. ಕರ್ನಾಟಕದಲ್ಲಿ ಕೇಂದ್ರೀಯ ಆಹಾರ ಸಮಶೋಧನಾ ಸಂಸ್ಥೆ ಎಲ್ಲಿದೆ?              ಮೈಸೂರು
. ದುಡಿತವೇ ನನ್ನ ದೇವರು ಇದು ಯಾರ ಆತ್ಮಕಥೆ?              ಕಯ್ಯಾರ ಕಞ್ಞಣ್ಣ್ರೈ
. ಕರ್ನಾಟಕದ ದೊಡ್ಡ ಪಕ್ಷಿಧಾಮ ಯಾವುದು?          ರಂಗನತಿಟ್ಟು ಪಕ್ಷಿಧಾಮ
. ಪಟ್ಟದ ಕಲ್ಲುವಿನಲ್ಲಿನ ದೇವಾಲಯಗಳನ್ನು ಯಾವ ರಾಜ್ಯವಂಶದವರು ಕಾಲದಲ್ಲಿ ಕಟ್ಟಲಾಯಿತು?   ಚಾಲುಕ್ಯರು
೧೦. ಭಾರತದ ಪ್ರಥಮ ದಂಡನಾಯಕರಗಿದ್ದ ಕರ್ನಾಟಕದ ವ್ಯಕ್ತಿ ಯಾರು?                       ಜನರಲ್ ಕಾರಿಯಪ್ಪ
೧೧. ಶರಪಂಜರ ಕನ್ನಡ ಚಲನಚಿತ್ರ ಇದು ಯಾವ ಕಾದಂಬರಿಯನ್ನಾಧರಿಸಿ ತೆಗೆದ ಚಿತ್ರವಾಗಿದೆ?                                                    ತ್ರಿವೇಣಿಯವರಶರಪಂಜರಕಾದಂಬರಿ
೧೨. ಕರ್ನಾಟಕದ ಅತ್ಯಂತ ದೊಡ್ಡ ಕೆರೆ ಯಾವುದು?           ಚನ್ನಗಿರಿ ಸಮೀಪದ ಶಾಂತಿನಗರ (ಸೂಳಿಕೆರೆ)
೧೩. ಯಾವ ಖನಿಜವನ್ನು ಕಪ್ಪು ವಜ್ರ ಎನ್ನುವರು?                     ಕಲ್ಲಿದ್ದಲು
೧೪. ಕರ್ನಾಟಕದ ಏಕೀಕರಣ ಸಭೆಯ ಮೊದಲ ಅಧ್ಯಕ್ಷರು ಯಾರು?       ಸರ್.ಸಿದ್ದಪ್ಪ ಕಂಬಳಿ
೧೫. ಪಾಮ್ ಎಣ್ಣೆ ಯಾವುದರಿಂದ ಆಗುತ್ತದೆ?                                     ತಾಳೆ ಸಸ್ಯ
೧೬. ಶಾರದಾ ಹಾನಗಲ್ ಯಾವ ಕ್ಷೇತ್ರದಲ್ಲಿ ಸುಪರಿಚಿತರು?                 ಹಿಂದೂಸ್ಥಾನಿ ಸಂಗೀತ
೧೭. ಕನ್ನಡ ವಿಶ್ವವಿದ್ಯಾನಿಲಯ ಎಲ್ಲಿ ಸ್ಥಾಪನೆಗೊಂಡಿದೆ?             ಹಂಪಿ (ಬಳ್ಳಾರಿ ಜಿಲ್ಲೆ)
೧೮. ಭಾರತದ ಹಾಕಿ ತಂಡದ ನಾಯಕರಾಗಿದ್ದ ಮೊದಲ ಕನ್ನಡಿಗ ಯಾರು?                      ಎಂ.ಪಿ.ಗಣೇಶ್
೧೯. ’ಪಿಸು ಮಾತಿನ ಗ್ಯಾಲರಿಕರ್ನಾಟಕದಲ್ಲಿ ಇರುವ ತಾಣ ಯಾವುದು?           ಬಿಜಾಪುರದ ಗೋಳಗುಮ್ಮಟ
೨೦. ಕನ್ನಡ ಇಂಗ್ಲೀಷ್ ನಿಘಂಟನ್ನು ಮೊದಲು ರಚಿಸಿದವರು ಯಾರು?                   ವಿಲಿಯಂ ರೀವ್ಸ್
೨೧. ಕರ್ನಾಟಕದಲ್ಲಿ 3 ಬಾರಿ ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಸೇವೆಸಲ್ಲಿಸಿದ ಮಹಾನ್ ವ್ಯಕ್ತಿ ಯಾರು?  ಎಸ್.ನಿಜಲಿಂಗಪ್ಪ
೨೨. ಕರ್ನಾಟಕದ ಅತೀ ಚಿಕ್ಕ ಜಿಲ್ಲೆ ಯಾವುದು?                     ಕೊಡಗು
೨೩. ಕೆ.ಆರ್.ಎಸ್.ನಲ್ಲಿ ಬೃಂದಾವನವನ್ನು ನಿರ್ಮಿಸಿದವರು ಯಾರು?      ಸರ್.ಮಿರ್ಜಾ ಇಸ್ಮಾಯಿಲ್
೨೪. ತಲಕಾಡಿನಲ್ಲಿರುವ ಪಂಚಲಿಂಗಗಳು ಯಾವುವು?
            ವೈಧ್ಯಾನಾಥೇಶ್ವರ, ಮರಳೇಶ್ವರ, ಪಾತಾಳೇಶ್ವರ, ಮಲ್ಲಿಕಾರ್ಜುಶೇಶ್ವರ, ಅರ್ಕೇಶ್ವರ
೨೫. ರಾಷ್ಟ್ರ ಪ್ರಶಸ್ತಿಗಳಿಸಿದ ಕನ್ನಡದ ಮೊದಲ ಚಿತ್ರ ಯಾವುದು?             ಬೇಡರಕಣ್ಣಪ್ಪ
೨೬. ಕನ್ನಡ ರತ್ನತ್ರಯರು ಯಾರು?          ರನ್ನ, ಪೊನ್ನ, ಪಾಪ
೨೭. ಕರ್ನಾಟಕದಲ್ಲಿ ರಾಜೀವ್ ಗಾಂಧಿ ಉದ್ಯಾನವನ ಎಲ್ಲಿದೆ?   ನಾಗರಹೊಳೆ
೨೮. ಟೇಬಲ್ ಟೆನ್ನಿಸ್ ಮೇಜಿನ ಉದ್ದವೆಷ್ಟು? 9 ಅಡಿ       ೨೯. ಪಿಲಿಕುಳ ನಿಸರ್ಗಧಾಮ ಎಲ್ಲಿದೆ?      ಮಂಗಳೂರು

ಪರೀಕ್ಷೆಗಳಿಗಾಗಿ ಬಹು ಆಯ್ಕೆಯ ಪ್ರಶ್ನೋತ್ತರಗಳು

46) ಸೂರ್ಯನಿಂದ ಬರುವ ನೇರಳಾತೀತ ಕಿರಣಗಳ (ಯುವಿ) ಕುರಿತು ಕೆಳಗಿನ ವಿವರಣೆಗಳನ್ನು ಪರಿಶೀಲಿಸಿ.
 (i)
ಓಜೋನ್ ಪದರ ನೇರಳಾತೀತ ಕಿರಣಗಳನ್ನು (ಯುವಿ) ಭೂಮಿಗೆ ಬರದಂತೆ ಪೂರ್ಣವಾಗಿ ತಡೆದಿಟ್ಟುಕೊಳ್ಳುತ್ತದೆ.
 (ii)
ಇವು ಮನುಷ್ಯನ ಚರ್ಮದ ಮೇಲೆ ಬಿದ್ದರೆ, ಅಲ್ಲಿನ ಜೀವಕೋಶ ಕಾರ್ಯ ನಿಲ್ಲಿಸಿಬಿಡುತ್ತದೆ ಅಥವಾ ಡಿಎನ್ಎ ಮಾಹಿತಿಯನ್ನು ಅಳಿಸಿಹಾಕಿಬಿಡುತ್ತದೆ.      (iii) ನೇರಳಾತೀತ ಕಿರಣಗಳು ಜಲಚರ ಏಕ ಕೋಶ ಜೀವಿಗಳಿಗೂ ಮಾರಕ.    (ಡಿ) ಮೇಲಿನೆಲ್ಲವೂ.
(iv)
ನೇರಳಾತೀತ ಕಿರಣದಿಂದ ಅನಾಹುತಕ್ಕೆ ಒಳಗಾದ ದೇಹದಲ್ಲಿರುವ ಕೋಶಗಳು ಚರ್ಮ ಕ್ಯಾನ್ಸರ್ ಆಗಿ ಮಾರ್ಪಡುತ್ತದೆ.
47) ಜಾಗತಿಕ ಅರ್ಥ ವ್ಯವಸ್ಥೆಯು ಮತ್ತೊಮ್ಮೆ 1930ರಲ್ಲಿ ಕಂಡಂತಹ ಆರ್ಥಿಕ ಕುಸಿತ ಪುನರಾವರ್ತನೆಯಾಗುವ ಸಾಧ್ಯತೆ ಕುರಿತು ರಿಸರ್ವ್ಬ್ಯಾಂಕ್ಗವರ್ನರ್ರಘುರಾಂ ರಾಜನ್ ಎಚ್ಚರಿಕೆ ನೀಡಲು ಪ್ರಮುಖ ಕಾರಣಗಳೆಂದರೆ...
(
iii) ಐರೋಪ್ಯ ರಾಷ್ಟ್ರಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಮೂಲ ಸೌಕರ್ಯಗಳಲ್ಲಿ ಅತಿಯಾದ ಹೂಡಿಕೆ ಮಾಡುತ್ತಿರುವುದು
48) ಭೂಮಿಯ ರಕ್ಷಾಕವಚ ಓಜೋನ್ ಕುರಿತು ವಿವರಣೆಗಳನ್ನು ಪರಿಶೀಲಿಸಿ
(i)
ಓಜೋನ್ ಮೂರು ಆಮ್ಲಜನಕ ಅಣುಗಳಿಂದ ಮಾಡಲ್ಪಟ್ಟಿದೆ. ಓಜೋನಿನ ಸಾಂದ್ರತೆ ಅತಿ ಹೆಚ್ಚಾಗಿರುತ್ತದೆ.
 (ii)
ಬಣ್ಣರಹಿತ ಅನಿಲ. ಆದರೆ ಸಾಂದ್ರೀಕರಿಸಿದರೆ ತೆಳು ನೀಲ ಬರುತ್ತದೆ.              (iii) ಸಿ.ಎಫ್.ಸಿ (ಕ್ಲೋರೋಫ್ಲೂರೋಕಾರ್ಬನ್) ಗಳ ಆಯಸ್ಸು 20 ರಿಂದ 100 ವರ್ಷಗಳು  (iv) ಓಜೋನ್ ಪ್ರಮಾಣವನ್ನು ಅಳೆಯುವ ಏಕಮಾನಕ್ಕೆ ಡಬ್ಸನ್ ಎಂದು ಹೆಸರಿಟ್ಟಿದ್ದಾರೆ.         (ಡಿ) ಮೇಲಿನೆಲ್ಲವೂ.
49) (i) ಲಂಡನ್ ನಗರವನ್ನು ' ಆಧುನಿಕ ಬ್ಯಾಬಿಲೋನ್' ಎಂದು ಕರೆಯುತ್ತಾರೆ.
(ii) '
ಜಗತ್ತಿನ ಶ್ರೀಮಂತ ಕರಾವಳಿ' ಎಂದು ಕೋಸ್ಟರಿಕ ಗೆ ಕರೆಯುತ್ತಾರೆ.                           (ಸಿ) ಎರಡೂ ಸರಿ.
50) ಗೌತಮ್ ಬುದ್ಧನನ್ನು ಶಕ್ಯಮುನಿ ಎಂದು ಕರೆಯಲಾಗುತ್ತದೆ.
51) ವಿಟಾಮಿನ್ (ಜೀವಸತ್ವಗಳು) ಕುರಿತು ಯಾವುದು ತಪ್ಪಾಗಿದೆ?
(i)
ನೀರಿನಲ್ಲಿ ಕರಗುವ ವಿಟಮಿನಗಳು ಬಿ        (ii) ಕೊಬ್ಬಿನಲ್ಲಿ ಕರಗುವ ವಿಟಾಮಿನ್ ಗಳು .ಡಿ..ಕೆ
(iii)
ವಿಟಾಮಿನ್ ಡಿ ಯನ್ನು ನೇರಳಾತೀತ ಕಿರಣಗಳಿಂದ ತಯಾರಿಸುತ್ತಾರೆ.                     (ಡಿ) ಯಾವುದೂ ಅಲ್ಲ.

52) ಹಣಕಾಸಿನ ವಹಿವಾಟಿಗೆ ಸಂಬಂಧಿಸಿದಂತೆ ರೆಪೋ ರೇಟ್ (Repo Rate) ಎಂದರೆ..
(i)
ಆರ್.ಬಿ.ಅಯ್.ನವರು ಬ್ಯಾಂಕುಗಳಿಗೆ ನೀಡುವ ಸಾಲದ ಬಡ್ಡಿ ದರ.
(ii)
ಒಂದು ವೇಳೆ ರೆಪೋ ದರ ಕಡಿಮೆ ಇದ್ದಲ್ಲಿ ಬ್ಯಾಂಕ್ ಗಳು ಹೆಚ್ಚಿನ ದುಡ್ಡನ್ನು ಆರ್.ಬಿ.ಅಯ್.ನಿಂದ ಪಡೆದು ಜನರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತವೆ.   (iii) ರೆಪೋ ದರ ಹೆಚ್ಚಾದಲ್ಲಿ ನಾವು ಬ್ಯಾಂಕ್ ನಲ್ಲಿ ಇಡುವ ಹಣಕ್ಕೆ ಕೊಡುವ ಬಡ್ಡಿಯ ದರವೂ ಹೆಚ್ಚುತ್ತದೆ.   (iv) ರೆಪೋ ದರ ಕಡಿಮೆ ಸಮಯದ ಅಂತರದಲ್ಲಿ ಹೆಚ್ಚು ಕಡಿಮೆಯಾಗುವುದರಿಂದ ಬ್ಯಾಂಕ್ ಗಳು ಇಂತಹ ನಿರ್ದಾರಗಳನ್ನು ಸಾಲದ ಮೇಲಿನ ಬಡ್ಡಿಏರಿಸುವಷ್ಟು ಬೇಗ ತೆಗೆದುಕೊಳುವುದಿಲ್ಲ.          (ಡಿ) ಮೇಲಿನೆಲ್ಲವೂ.
53) ಜೀವ ವೈವಿದ್ಯ ( biological diversity) ದಿನಾಚರಣೆ ಯಾವಾಗ ಆಚರಿಸುತ್ತಾರೆ?                   2. ಮೇ 22
54) ಕರ್ನಾಟಕದ ವಿಶ್ವವಿದ್ಯಾನಿಲಯಗಳು ಹಾಗೂ ಅವುಗಳ ಧ್ಯೇಯವಾಕ್ಯಗಳ ಕುರಿತ ಕೆಳಕಂಡ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
(i) ಮೈಸೂರು ವಿಶ್ವವಿದ್ಯಾನಿಲಯ -••••••(ಮೈಸೂರು) •••••••- ಹಿ ಜ್ಞಾನೇನ ಸದೃಶ್ಯಂ
(ii) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ -•••••• (ಮೈಸೂರು) ••••••-ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ .
(iii) ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯ -•••••• (ವಿಜಾಪುರ) ••••••-ಸ್ತೀ ಶಿಕ್ಷಣ ಸರ್ವಶಿಕ್ಷಣ
(iv) ಕನ್ನಡ ವಿಶ್ವವಿದ್ಯಾನಿಲಯ -••••••  (ಹಂಪಿ) ••••••-ಮಾತೆಂಬುದು ಜ್ಯೋತಿರ್ಲಿಂಗ     (ಡಿ) ಯಾವುದೂ ಅಲ್ಲ.
55) ಮೋಟಾರು ವಾಹನದಲ್ಲಿ ರೇಡಿಯೇಟರ್ ನ್ನು ತಂಪಾಗಿಸಲು ನೀರು ತಂಪುಕಾರಿ ಎಂದು ಆದ್ಯತೆ ಕೊಡಲಾಗುತ್ತದೆ ಏಕೆಂದರೆ..
2.ಹೆಚ್ಚು ಉಷ್ಣದಾರಕತೆ ಇರುವುದರಿಂದ.
56) ಸಂವಿಧಾನದ 20 ನೇ ವಿಧಿಯ ಪ್ರಾಮುಖ್ಯತೆ ಕುರಿತು ಕೆಳಗಿನ ವಿವರಣೆಗಳಲ್ಲಿ ಯಾವುದು ತಪ್ಪಾಗಿದೆ?.
(i) ವಿಧಿಯ ಪ್ರಕಾರ ಒಬ್ಬ ವ್ಯಕ್ತಿಗೆ ಒಂದೇ ಅಪರಾಧಕ್ಕಾಗಿ ಒಂದಕ್ಕಿಂತ ಹೆಚ್ಚು ಬಾರಿ ಶಿಕ್ಷೆ ವಿಧಿಸುವಂತಿಲ್ಲ.
(ii) ಒಂದು ಕೃತ್ಯವನ್ನು ಎಸಗುವ ಸಂದರ್ಭದಲ್ಲಿ ಜಾರಿಯಲ್ಲಿರುವ ಕಾನೂನನ್ನು ಉಲ್ಲಂಘಿಸಿದರೆ ಮಾತ್ರ ಶಿಕ್ಷೆ ನೀಡಬೇಕು. ಅಂದರೆ ಹಿಂದೆ ಜಾರಿಯಲ್ಲಿರುವ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಒಬ್ಬ ವ್ಯಕ್ತಿಯನ್ನು ಶಿಕ್ಷಿಸುವಂತಿಲ್ಲ
(iii) ಒಬ್ಬ ವ್ಯಕ್ತಿಯನ್ನು ತನ್ನ ವಿರುದ್ಧವೇ ಸಾಕ್ಷಿ ಹೇಳುವಂತೆ ಒತ್ತಾಯಿಸುವಂತಿಲ್ಲ.                                  (ಡಿ) ಯಾವುದೂ ಅಲ್ಲ.
57) ಔಷಧಿ ಭಾಗ್ಯ' ಕುರಿತು ಕೆಳಗಿನ ವಿವರಣೆಗಳಲ್ಲಿ ಯಾವುದು ತಪ್ಪಾಗಿದೆ?.
(i) ಸರ್ಕಾರಿ ಅಸ್ಪತ್ರೆಗಳಲ್ಲಿ ಬಡರೋಗಿಗಳಿಗೆ ಮಾರಣಾಂತಿಕ ಕಾಯಿಲೆಗಳಿಗೆ ಕಡಿಮೆ ವೆಚ್ಚದಲ್ಲಿ ಔಷಧಿಗಳನ್ನು ವಿತರಣೆ ಮಾಡುವುದು
 (ii) ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ.50ರಷ್ಟು ಅನುಪಾತದಲ್ಲಿ ಅನುದಾನ ಒದಗಿಸಲಿವೆ
 (iii) ಸರ್ಕಾರಿ ಒಡೆತನದ ಎಂಎಸ್ಐಎಲ್ ಸಂಸ್ಥೆ ಇದರ ನಿರ್ವಾಹಣೆ ಮಾಡಲಿದೆ.
(iv) ಯೋಜನೆ ಪ್ರಕಾರ ಔಷಧಿಗಳನ್ನು ಖರೀದಿ ಮಾಡುವ ರೋಗಿಗಳು ಶೇ.25ರಷ್ಟು ಹಣವನ್ನು ಪಾವತಿ ಮಾಡಿದರೆ ಸಾಕು, ಉಳಿದ ಶೇ.75ರಷ್ಟು ಹಣವನ್ನು ಸರ್ಕಾರವೇ ಭರಿಸುತ್ತದೆ.                                                        (ಡಿ) ಯಾವುದೂ ಅಲ್ಲ.
58) 2011 ರಾಜ್ಯ ಜನಗಣತಿ ನಿರ್ದೇಶನಾಲಯದ ಪ್ರಾಥಮಿಕ ವರದಿ ಪ್ರಕಾರ ಕೆಳಗಿನ ವಿವರಣೆಗಳಲ್ಲಿ ಯಾವುದು ತಪ್ಪಾಗಿದೆ?.
(i) ಕಳೆದ ಒಂದು ದಶಕದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದರೂ, ಜನಸಂಖ್ಯೆ ಏರಿಕೆ ದರದಲ್ಲಿ ಕುಸಿತ ಕಂಡಿದೆ.
(ii) ಲಿಂಗಾನುಪಾತ ಪ್ರಮಾಣದಲ್ಲಿ ಸುಧಾರಣೆ ಕಂಡು ಬಂದಿದ್ದು, ಸಾಕ್ಷರತೆ ಗಣನೀಯ ಚೇತರಿಕೆ ಕಂಡಿದೆ.
(iii) ಕೊಡುಗು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊತರು ಪಡಿಸಿ ರಾಜ್ಯದ ಉಳಿದ ಎಲ್ಲ ಜಿಲ್ಲೆಗಳು 10 ಲಕ್ಷ ಮೇಲ್ಪಟ್ಟ ಜನಸಂಖ್ಯೆ ಹೊಂದಿದೆ.                        (ಡಿ) ಯಾವುದೂ ಅಲ್ಲ.
59) ಪ್ರೌನ್ ಹೋಪರ್ (fraun hofer line) ರೇಖೆಗಳು ಎಲ್ಲಿ ಕಾಣಸಿಗುತ್ತವೆ?                   (ii). ಸೂರ್ಯನ ಕರೋನದಲ್ಲಿ.
60) ಕೆಳಗಿನವುಗಳಲ್ಲಿ ಯಾವುದು ಗಾಂಧಾರ ಕಲೆಯೊಂದಿಗೆ ಸಂಬಂಧ ಹೊಂದಿದೆ?             (iii) ಖಜುರಾಹೊ.

                                 ------------------------   ಕೆ.ಟಿ.ಆರ್.----------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ