ಶನಿವಾರ, ನವೆಂಬರ್ 15, 2014

ಇತಿಹಾಸ ನೋಟ್ಸ್

EwºÁ¸À ಮಾದರಿ ಪ್ರಶ್ನೆಗಳು
1) ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು?             - ಮಲ್ಲಬೈರೆಗೌಡ.
2) ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು?          - ಟಿಪ್ಪು ಸುಲ್ತಾನ್.
3) ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು?            - ಚಿತ್ರದುರ್ಗ.
4) "ಕರ್ನಾಟಕ ರತ್ನ ರಮಾರಮಣ" ಎಂಬ ಬಿರುದು ಯಾರಿಗೆ ದೊರಕಿತ್ತು?           - ಕೃಷ್ಣದೇವರಾಯ.
5) ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು?                       - ಪಂಪಾನದಿ.
6) "ಸ್ಟೇಟ್ ಬ್ಯಾಂಕ್ ಆಫ್ ಮೈಸೂರು" ಇದರ ಸಂಸ್ಥಾಪಕರು ಯಾರು? - ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ.
7) ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ ಯಾರು?             - ಹೈದರಾಲಿ.
8) ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು?   - ಶ್ರೀರಂಗ ಪಟ್ಟಣದ ಪಾಲಹಳ್ಳಿ.
9) ಕೆಂಪೇಗೌಡರು ಕಟ್ಟಿಸಿದ ಬೆಂಗಳೂರುಕೋಟೆ ಯಾವ ಊರಿನಲ್ಲಿದೆ?       - ಕಲಾಸಿಪಾಳ್ಯ.
10) ವಿಧಾನ ಸೌದ"ವನ್ನು ಕಟ್ಟಿಸಿದವರು ಯಾರು?          - ಕೆಂಗಲ್ ಹನುಮಂತಯ್ಯ.
11) ಕನ್ನಡಕ್ಕೆ ಒಟ್ಟು ಎಷ್ಟು "ಜ್ಞಾನಪೀಠ" ಪ್ರಶಸ್ತಿ ದೊರೆತಿದೆ?          - 8
12) ಮೈಸೂರಿನಲ್ಲಿರುವ "ಬೃಂದಾವನ"ದ ವಿನ್ಯಾಸಗಾರ ಯಾರು?     - "ಸರ್. ಮಿರ್ಜಾ ಇಸ್ಮಾಯಿಲ್"
13) ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು? - ರಾಮಕೃಷ್ಣ ಹೆಗ್ಗಡೆ.
14) "ಯುಸುಫಾಬಾದ್" ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತಿದ್ದರು? - ದೇವನಹಳ್ಳಿ (ದೇವನದೊಡ್ಡಿ)
15) ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು?       - ವಿಜಯನಗರ ಸಾಮ್ರಾಜ್ಯ.
16)ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಮೂಲ ದೇಗುಲವನ್ನು ಯಾರು ಕಟ್ಟಿಸಿದರು?  -ತಿರುಮಲಯ್ಯ.
17"ಯದುರಾಯ ರಾಜ ನರಸ ಒಡೆಯರ್" ಕಟ್ಟಿಸಿದ ಕೋಟೆ ಯಾವುದು?     - ಶ್ರೀರಂಗ ಪಟ್ಟಣದ ಕೋಟೆ.
18) ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವ ಹಳ್ಳಿ ಯಾವುದು?
- ಶಿವಮೊಗ್ಗ ಜಿಲ್ಲೆಯ ಮತ್ತೂರ್.
19) ಕರ್ನಾಟಕದ ಅತಿ ದೊಡ್ಡ ಜಾತ್ರೆ ಯಾವುದು?          - ಶಿರಸಿಯ ಮಾರಿಕಾಂಬ ಜಾತ್ರೆ.
20) ಅಂಗ್ಲ ಭಾಷೆಯ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಪದಗಳಿಗೆ ಕನ್ನಡದ ತಂತ್ರಂಶ ಮತ್ತು ಯಂತ್ರಾಂಶ ಎನ್ನುವ ಪದಗಳನ್ನು ಕೊಟ್ಟವರು ಯಾರು?            - ಹೆಚ್.ಎಸ್.ಕೃಷ್ಣ ಸ್ವಾಮಿ ಅಯ್ಯಂಗಾರ್. (ಹೆಚ್.ಎಸ್.ಕೆ)
21) ರಾಯಚೂರಿನ ಮೊದಲ ಹೆಸರೇನು?         - ಮಾನ್ಯಖೇಟ.
22) ಕನ್ನಡದ ಮೊದಲ ಕೃತಿ ಯಾವುದು?         - ಕವಿರಾಜ ಮಾರ್ಗ
23) ಪಂಪಾಪುರ ಎಂದು ಯಾವ ಪ್ರದೇಶವನ್ನು ಕರೆಯುತ್ತಿದ್ದರು.     -ಹಂಪೆ.
24) ಜಗತ್ತಿನ ಎತ್ತರವಾದ ಏಕ ಶಿಲಾ ವಿಗ್ರಹ ಯಾವುದು?   - ಶ್ರಾವಣಬೆಳಗೊಳದ ಗೊಮ್ಮಟೇಶ್ವರ.
25) ಕರ್ನಾಟಕಕ್ಕೆ "ಪರಮವೀರ ಚಕ್ರ" ತಂದುಕೊಟ್ಟ ವೀರ ಕನ್ನಡಿಗ ಯಾರು? - ಕರ್ನಲ್ ವಸಂತ್.
26) ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು? - ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.
27) ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು?            - ಮುಳ್ಳಯ್ಯನ ಗಿರಿ.
28) ಮೈಸೂರು ಅರಮನೆಯ ಹೆಸರೇನು?        - ಅಂಬಾವಿಲಾಸ ಅರಮನೆ.
29) ಕರ್ನಾಟಕಕ್ಕೇ ಮೊದಲು ಕಾಫಿ ಬೀಜವನ್ನು ತಂದವರು ಯಾರು?   - ಬಾಬಾ ಬುಡನ್ ಸಾಹೇಬ.

30) "ಕರ್ಣಾಟಕದ ಮ್ಯಾಂಚೆಸ್ಟಾರ್ " ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?    - ದಾವಣಗೆರೆ.
31) ಕರ್ನಾಟಕದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?          - ಆಗುಂಬೆ.
32) ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು?           ಬೆಂಗಳೂರು ನಗರ ಜಿಲ್ಲೆ.
33) ಕರ್ನಾಟಕದ ಮೊದಲ ಉಪಲಬ್ದ ಶಾಸನ ಯಾವುದು?         - ಹಲ್ಮಿಡಿ ಶಾಸನ.
34) ಕರ್ನಾಟಕದ ರಾಜ್ಯ ಪಕ್ಷಿ ಯಾವುದು?              - ನೀಲಕಂಠ ಪಕ್ಷಿ.
35) ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?       - ಕೆ.ಸಿ.ರೆಡ್ಡಿ.
36) ಕರ್ನಾಟಕದ ಮೊದಲ ರಾಜ ಪ್ರಮುಖರು (ರಾಜ್ಯಪಾಲರು) ಯಾರು?     - ಶ್ರೀ ಜಯಚಾಮರಾಜ ಒಡೆಯರು.
37) ಕರ್ನಾಟಕದ ಮೊದಲ ಕವಯತ್ರಿ ಯಾರು?           - ಅಕ್ಕಮಹಾದೇವಿ.
38) ಕನ್ನಡದ ಮೊದಲ ಉಪಲಬ್ದ ಗದ್ಯಕೃತಿ ಯಾವುದು?                 - ವಡ್ಡರಾದನೆ.
39) ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ ಯಾವುದು?         - ಮೈಸೂರು ವಿಶ್ವವಿಧ್ಯಾನಿಲಯ.
40)ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು?ಬರೆದವರು ಯಾರು? -"ಕೇಶಿರಾಜ ವಿರಚಿತ" "ಶಬ್ದಮಣಿ ದರ್ಪಣಂ"
41) "ಕರ್ನಾಟಕ ಶಾಸ್ತ್ರೀಯಾ ಸಂಗೀತ"ದ ಪಿತಾಮಹ ಯಾರು?      - ಪುರಂದರ ದಾಸರು.
42) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರವಿದೆ?   - ರಾಯಚೂರು ಜಿಲ್ಲೆ.
43) ಕರ್ನಾಟಕದ ರೇಷ್ಮೆ ಜಿಲ್ಲೆ ಯಾವುದು?        - ರಾಮನಗರ.
44) ಕರ್ನಾಟಕದ ಸಕ್ಕರೆ ಜಿಲ್ಲೆ ಯಾವುದು?        - ಮಂಡ್ಯ ಜಿಲ್ಲೆ.
45) ಕಾವೇರಿ ನದಿಯು ತನ್ನ ಪಾತ್ರದಲ್ಲಿ ಎಷ್ಟು ಜಲಪಾತಗಳನ್ನು ಸೃಷ್ಟಿಸುತ್ತದೆ? ಅವು ಯಾವುದು?
- ಮೂರು ಜಲಪಾತಗಳು. (೧) ಚುಂಚನ ಕಟ್ಟೆ ಜಲಪಾತ, (೨) ಶಿವನ ಸಮುದ್ರ (೩) ಹೋಗನೆಕಲ್ ಜಲಪಾತ.
46) ಕರ್ನಾಟಕ ರಾಜ್ಯದ ಧ್ವಜದಲ್ಲಿರುವ ಬಣ್ಣಗಳ ಸಂಕೇತ ಏನು?-
ಹಳದಿ: ಶಾಂತಿಯ ಸಂಕೇತ.ಕೆಂಪು: ಕ್ರಾಂತಿಯ ಸಂಕೇತ
47) ರಾಷ್ಟ್ರ ಧ್ವಜವನ್ನು ನೇಯುವ ಏಕಮಾತ್ರ ಸ್ಥಳ ಕರ್ನಾಟಕದಲ್ಲಿದೆ. ಇದು ಯಾವ ಊರು?    - ಗರಗ,
48) ಕರ್ನಾಟಕದ ಯಾವ ಜಿಲ್ಲೆಗೆ ರೈಲ್ವೆ ಮಾರ್ಗವಿಲ್ಲ?             - ಕೊಡಗು.
49) ಕರ್ನಾಟಕದ ಅತಿದೊಡ್ಡ ಅಣೆಕಟ್ಟು ಯಾವುದು?       - ಲಿಂಗನಮಕ್ಕಿ ಅಣೆಕಟ್ಟು.
50) ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು ಯಾರು?       - ಕುವೆಂಪು.
51) ವಿಶ್ವದ ಅತಿ ದೊಡ್ಡ ನಗರ ಯಾವುದು?        ನ್ಯೂಯಾರ್ಕ್ ನಗರ.
52) ಲಿಬರ್ಟಿ ಪ್ರತಿಮೆ ಯಾವದ ದೇಶದಲ್ಲಿದೆ?             - ಅಮೇರಿಕಾ
53) ಭಾರತದ ದಕ್ಷಿಣ ಭಾಗದ ತುತ್ತ ತುದಿ ಯಾವುದು?           - ಇಂದಿರಾ ಪಾಯಿಂಟ್.
54) ಕರ್ನಾಟಕದ ಪಶ್ಚಿಮ ಘಟ್ಟದಲ್ಲಿರುವ ಅಣು ವಿಧ್ಯುತ್ ಸ್ಥಾವರ ಯಾವುದು? - ಕೈಗಾ ಅಣು ವಿಧ್ಯುತ್ ಸ್ಥಾವರ.
55) ಕರ್ನಾಟಕದ ಯಾವ ಜಿಲ್ಲೆಯಲ್ಲಿ ವಾಯು ವಿಧ್ಯುತ್ ಸ್ತಾವರವಿದೆ?       - ಚಿತ್ರ ದುರ್ಗಾ.
56) ಕರ್ನಾಟಕದಲ್ಲಿ ಗುಹಾಂತರ ದೇವಾಲಯಗಳನ್ನು ಯಾವ ಜಿಲ್ಲೆಯಲ್ಲಿ ಕಾಣಬಹುದು?  - ಬೆಳಗಾಂ.
57)ಮೈಸೂರು ಅರಮನೆಯ ವಿನ್ಯಾಸವನ್ನು ಹೋಲುವ ಕಟ್ಟಡ ಬೆಂಗಳೂರಿನಲ್ಲಿದೆಯಾವುದು? - ಲೀಲಾ ಪ್ಯಾಲೇಸ್.
58) "ಷೋ ಮೇಕರ್ ಲೆವಿ ೯" ಧೂಮಕೆತುವನ್ನು ಕಂಡು ಹಿಡಿದವರು ಯಾರು?  - ಷೋ ಮೇಕರ್ ಲೆವಿ ೯

.59) "ತಾಜ್ ಮಹಲ್" ಇರುವ ಸ್ಥಳದಲ್ಲಿ ಮೊದಲು ಒಂದು ದೇವಾಲಯವಿತ್ತು ಆ ದೇವಾಲಯ ಯಾವುದು?
- "ತೇಜೋ ಮಹಾಲಯ"
60) ಕರ್ನಾಟಕದ ಅತಿ ದೊಡ್ಡ ದ್ವೀಪ ಯಾವುದು?         - ಶ್ರೀ ರಂಗ ಪಟ್ಟಣ.
61) ಜಾನಪದ ಸಾಹಿತ್ಯದಲ್ಲಿ ಹೆಚ್ಚಾಗಿ ಬಳಸಿರುವ "ಮರುಗದ ಕೆರೆ" ಕರ್ನಾಟಕದ ಯಾವ ಊರಿನಲ್ಲಿದೆ.
- ಶಿಕಾರಿಪುರದ ಮರುಗದ ಗ್ರಾಮ.
62) ಕರ್ನಾಟಕದ ಹಿಂದುಳಿದ ಜಿಲ್ಲೆ ಯಾವುದು?          - ಚಾಮರಾಜ ನಗರ.
63) ವೈಧ್ಯಕೀಯ ಕ್ಷೇತ್ರದ ಪಿತಮಹಾಯ ಯಾರು?        - ಸುಶ್ರುತ.
64) ಅತಿ ವೇಗವಾಗಿ ಜನಸಂಖ್ಯಾ ಸ್ಪೋಟವಾಗುತ್ತಿರುವ ರಾಷ್ಟ್ರ ಯಾವುದು?          - ಭಾರತ.
65) ಭವಿಷ್ಯದ ವಿದ್ಯುತ್ತಿನ ಮೂಲ ಎಂದು ಯಾವುದನ್ನು ಕರೆಯುತ್ತಾರೆ?             - ಚಂದ್ರ.
66) ಭಾರತದಲ್ಲಿ ಮೊದಲು ಶಾಸ್ತ್ರೀಯ ಸ್ಥಾನ ಪಡೆದ ಭಾಷೆ ಯಾವುದು?             - ಸಂಸ್ಕೃತ.
67) "ಇಗೋ ಕನ್ನಡ" ಎನ್ನುವ ಕನ್ನಡದ ನಿಘಂಟನ್ನು ಬರೆದವರು ಯಾರು?   - ಪ್ರೊ. ಜಿ.ವೆಂಕಟಸುಬ್ಬಯ್ಯ.
68) ಮೈಸೂರು ದಸರಾ ಉತ್ಸವದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡುವ ಸಿಂಹಾಸನದ ಹೆಸರೇನು?
- "ಕರ್ನಾಟಕ ರತ್ನ ಸಿಂಹಾಸನ".
69) "ಗೆರಿಲ್ಲಾ" ಎನ್ನುವ ಯುದ್ದ ಕಲೆಯನ್ನು ಪರಿಚಯಿಸಿದ ವ್ಯಕ್ತಿ ಯಾರು?   - ಛತ್ರಪತಿ ಶಿವಾಜಿ.
70) ವಿಶ್ವದ ಅತಿ ಎತ್ತರವಾದ ಎರಡನೆಯ ಶಿಖರ ಯಾವುದು? - ಕೆ೨
71) ವಿಶ್ವದ ಅತಿ ಎತ್ತರವಾದ ೩ ನೆ ಶಿಖರ ಯಾವುದು?      - ಕಾಂಚನಚುಂಗ.
72) ಭಾರತದಲ್ಲಿ ಎರಡು ರಾಜಧಾನಿಯನ್ನು ಹೊಂದಿರುವ ರಾಜ್ಯ ಯಾವುದು?         - ಜಮ್ಮು-ಕಾಶ್ಮೀರ.
73) ಅಗಾಗ ಭೂಮಿಯಲ್ಲಿ ಗೋಚರಿಸುವ ಅನ್ಯಗ್ರಹ ಜೀವಿಗಳ ವಾಸಸ್ಥಳ ಭೂಮಿಯಿಂದ ಎಷ್ಟು ದೂರದಲ್ಲಿದೆ?
- 17 ಜ್ಯೋತಿರ್ವರ್ಷ.
74) ಭಾರತದಲ್ಲಿ ಹೆಚ್ಚಾಗಿ ಹವಳಗಳು ಎಲ್ಲಿ ದೊರೆಯುತ್ತದೆ?    - ಅಂಡಮಾನ್ ಮತ್ತು ನಿಕೊಬಾರ್.
75) "ಶಾಸ್ತ್ರೀಯ ಭಾಷೆ"ಗೆ ಕನ್ನಡದಲ್ಲಿ ಏನೆಂದು ಕರೆಯುತ್ತಾರೆ?        - ಚೆನ್ನುಡಿ"
76 ಅತಿ ಹೆಚ್ಚು ವೇಗವಾಗಿ ಓಡುವ ಪ್ರಾಣಿ ಯಾವುದು?            - ಚಿರತೆ.
77) ಭಾರತದ ರಾಷ್ಟ್ರೀಯ ಪಕ್ಷಿ ಯಾವುದು?              - ನವಿಲು.
78) ಭಾರತೀಯರು ಯಾವ ದೇಶಕ್ಕೆ ಪ್ರಯಾಣಿಸಲು "ಪಾಸ್ ಪೋರ್ಟ್ ಮತ್ತು ವೀಸಾ"ದ ಅಗತ್ಯವಿಲ್ಲ?  - ನೇಪಾಳ
79) ಕನ್ನಡದ ಮೊದಲ ವಾಕಿ ಚಿತ್ರ ಯಾವುದು?           - ಸತಿ ಸುಲೋಚನ.
80)ಕಂಪ್ಯೂಟರಿನ ಮೆದುಳು ಎಂದು ಯಾವುದನ್ನು ಕರೆಯುತ್ತಾರೆ?   -ಸಿಪಿಯು(ಸೆಂಟ್ರಲ್ ಪ್ರಾಸೆಸ್ಸಿಂಗ್ ಯುನಿಟ್)
81) ಭಾರತ ಷೇರು ಮಾರುಕಟ್ಟೆ ಯಾವ ರಾಜ್ಯದಲ್ಲಿದೆ.              - ಮಹಾರಾಷ್ಟ್ರ.
82) ಭಾರತದ ರಾಷ್ಟ್ರಧ್ವಜದ ವಿನ್ಯಾಸಗಾರ ಯಾರು?        -      ಶ್ರೀ ಪಿಂಗಲಿ ವೆಂಕಯ್ಯ.
83) ವಿಶ್ವದಲ್ಲೇ ಅತಿ ಉದ್ದವಾದ ನದಿ ಯಾವುದು?          - ನೈಲ್ ನದಿ.
84) ವಿಶ್ವದಲ್ಲೇ ಅತಿ ಉದ್ದವಾದ ಹೆದ್ದಾರಿ ಯಾವುದು?       - ಕೆನಡಾದ ಟ್ರಾನ್ಸ್ ಹೆದ್ದಾರಿ (8000 ಕಿ.ಮೀ.)
85) ಭಾರತದಲ್ಲಿರುವ ಮರುಭೂಮಿ ಯಾವುದು?          - ಥಾರ್ ಮರುಭೂಮಿ.

86) ವಿಶ್ವದ ಅತಿ ದೊಡ್ಡ ಮರುಭೂಮಿ ಯಾವುದು?         - ಸಹರ ಮರುಭೂಮಿ.
87) ಅತಿ ಹೆಚ್ಚು ಕಾಫಿ ಬೆಳೆಯುವ ದೇಶ ಯಾವುದು?             - ಬ್ರೆಜಿಲ
88) "ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನ"ವನ್ನು ಬೇರ್ಪಡಿಸುವ ಗಡಿ ಯಾವುದು?        - ಡುರಾಂಡ್ ಲೈನ್.
89) ಭೂಮಿಯಲ್ಲಿ ಅತಿಹೆಚ್ಚು ತಂಪು ವಾತಾವರಣವನ್ನು ಹೊಂದಿರುವ ಪ್ರದೇಶ ಯಾವುದು?
- ಸೈಬಿರಿಯಾದ ವೆರ್ಕೊಯನ್ಸ್ಕ್.
90) ಜಪಾನಿಯರು ತಮ್ಮ ದೇಶವನ್ನು ಏನೆಂದು ಕರೆಯುತ್ತಾರೆ?            - ನಿಪ್ಪೋನ್.
91) ಮೊಟ್ಟ ಮೊದಲು ಕೈಗಾರಿಕಾ ಕ್ರಾಂತಿಯನ್ನು ಕಂಡ ದೇಶ ಯಾವುದು?           - ಇಂಗ್ಲೆಂಡ್.
92) "ಭಾರತ ರತ್ನ" ಪ್ರಶಸ್ತಿ ಪಡೆದ ಮೊದಲ ವಿದೇಶಿ ವ್ಯಕ್ತಿ ಯಾರು?     - ನೆಲ್ಸನ್ ಮಂಡೇಲಾ.
93) ಬಿಳಿ ಆನೆಗಳ ಭೂಮಿ ಎಂದು ಗುರುತಿಸಿಕೊಂಡ ಮೊದಲ ದೇಶ ಯಾವುದು?     - ಥೈಲ್ಯಾಂಡ್.
94) ವಿಶ್ವದ ಅತಿ ಎತ್ತರವಾದ ಜಲಪಾತ ಯಾವುದು?       - ಸಲ್ತೋ ಏಂಜೆಲ್ ಜಲಪಾತ.
95) ವಿಶ್ವದ ಅತಿ ದೊಡ್ಡ ಗ್ರಂಥಾಲಯ ಯಾವುದು?  - ಯುನಟೆಡ್ ಸ್ಟೇಟ್ಸ್ ಲೈಬ್ರರಿ ಆಫ್ ಕಾಂಗ್ರೆಸ್.
96) ವಿಶ್ವದ ಅತಿ ದೊಡ್ಡ "ವಸ್ತುಸಂಗ್ರಹಾಲ"ಯ ಯಾವುದು?         - ಅಮೇರಿಕನ್ ಮ್ಯೂಸಿಯಮ್ ಆಫ್
ನ್ಯಾಷನಲ್ ಹಿಸ್ಟರಿ (ಅಮೆರಿಕಾದ ರಾಷ್ಟ್ರೀಯ ಐತಿಹಾಸಿಕ ವಸ್ತು ಸಂಗ್ರಹಾಲಯ)
97) ವಿಶ್ವದ ಅತಿ ದೊಡ್ಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಯಾವುದು?
- ಕಿಂಗ್ ಕಾಲಿದ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ (ಸೌದಿ ಅರೇಬಿಯಾ)
98) ವಿಶ್ವದ ಅತಿ ದೊಡ್ಡ ಚರ್ಚ್ ಯಾವುದು?      - ರೋಮ್ ನ ಬ್ಯಾಸಿಲಿಕಾ ಆಫ್ ಸೆಂಟ್ ಪೀಟರ್.
99) ವಿಶ್ವದ ಅತಿ ಉದ್ದವಾದ ರೈಲ್ವೆ ಮಾರ್ಗ ಯಾವುದು?            - ಒಶಿಂಜು ಟುನೆಲ್.
100) ವಿಶ್ವದ ಹಳೆಯ ರೈಲ್ವೆ ಸುರಂಗ ಮಾರ್ಗ ಇಂಗ್ಲೆಂಡಿನ ಯಾವ ಪ್ರದೇಶದಲ್ಲಿದೆ? - ಲಂಡನ್.
101) ಭಾರತದ ರಾಜಧಾನಿ ಯಾವುದು?           - ದೆಹಲಿ
102) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಅತಿಹೆಚ್ಚು ತರಕಾರಿಗಳನ್ನು ಬೆಳೆಯುತ್ತಾರೆ?            - ಹಾಸನ.
103) ಕರ್ನಾಟಕದ ಕವಿಗಳ ನಾಡು ಎಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ?      - ದಾರವಾಡ.
104) ವಿಶ್ವ ಪ್ರಸಿದ್ದ ಕಲ್ಲಿನ ರಥ ಯಾವ ಜಿಲ್ಲೆಯಲ್ಲಿದೆ? - ಬಳ್ಳಾರಿ.
105)ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ"ನವರ ಜನ್ಮ ಸ್ಥಳ ಯಾವುದು? -ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೆನಹಲ್ಲಿ.
106) ಕರ್ನಾಟಕ ಸರ್ಕಾರದ ಸುಪ್ರಸಿದ್ದ ಹೋಟೆಲ್ ಯಾವುದು?      - ದಿ ಗ್ರಾಂಡ್ ಅಶೋಕ.
107) ಮಂಡ್ಯ ಜಿಲ್ಲೆಯಲ್ಲಿರುವ ಪಕ್ಷಿಧಾಮ ಯಾವುದು?             - ರಂಗನತಿಟ್ಟು.
108) ಕರ್ನಾಟಕ ಆರಕ್ಷಕರ ಗಸ್ತು ವಾಹನಕ್ಕೆ ಏನೆಂದು ಕರೆಯುತ್ತಾರೆ?        - ಹೊಯ್ಸಳ.
107) ಕೆಂಪೇಗೌಡರು ನಿರ್ಮಿಸಿದ ಅವಳಿನಗರಗಳು ಯಾವುದು?      - ಬೆಂಗಳೂರು ಮತ್ತು ಯಲಹಂಕ.
108)ಭಾರತ ದೇಶದ ಯಾವ ರಾಜ್ಯದಲ್ಲಿ ಅತಿಹೆಚ್ಚು "ಶಿಲಾ ಶಾಸನ ಮತ್ತು ವೀರಗಲ್ಲು"ಗಳನ್ನೂ ಕಾಣಬಹುದು?-ಕರ್ನಾಟಕ.
109) "ಗೋಪಾಲರಾಯನ ಹೆಬ್ಬಾಗಿಲು" ಎಂದು ಪ್ರಸಿದ್ದವಾದ ಕಲ್ಲಿನ ಸ್ಮಾರಕ ಕರ್ನಾಟಕದ ಯಾವ ಊರಿನಲ್ಲಿದೆ?
- ಮೇಲುಕೋಟೆ.


110) ಮಂಡ್ಯ ಜಿಲ್ಲೆಯಲ್ಲಿರುವ ಜಲಾಶಯ ಯಾವುದು?             - ಕೃಷ್ಣರಾಜ ಸಾಗರ
111) ಪ್ರೆಂಚ್ ಮಾದರಿಯ ರಕ್ಷಣೆಯನ್ನು ಹೊಂದಿದ್ದ ಕೋಟೆ ಯಾವುದು? - ಶ್ರೀ ರಂಗಪಟ್ಟಣದ ಕೋಟೆ.
112) ಏಷ್ಯ ಖಂಡದಲ್ಲೇ ಅತಿ ಎತ್ತರವಾದ ಏಕಶಿಲಾ ಬೆಟ್ಟ ಯಾವ ಊರಿನಲ್ಲಿದೆ?        - ಮಧುಗಿರಿ.
113) ಕನ್ನಡಿಗರ ಬಲಿಷ್ಟ ಸಾಮ್ರಾಜ್ಯ ಯಾವುದು?           - ರಾಷ್ಟ್ರಕೂಟರ ಸಾಮ್ರಾಜ್ಯ.
114) ಯಾರ ಒಂದು ಆಳ್ವಿಕೆಯಲ್ಲಿ ಕರ್ನಾಟಕವ ವೈಭವದ ತುತ್ತ ತುದಿಯನ್ನು ಮುಟ್ಟಿತ್ತು? - ಶ್ರೀ ಕೃಷ್ಣ ದೇವಾರಾಯ.
115) ವಿಜಯನಗರ ಸಾಮ್ರಾಜ್ಯದ ಮೊದಲ ಚಕ್ರವರ್ತಿ ಯಾರು?      - ಒಂದನೇ ಹರಿಹರ (ಹಕ್ಕ ಮಹಾಶಯ)
116) ಕೆ.ಅರ್.ಎಸ್ ಜಲಾಶಯದಲ್ಲಿ ಮುಳುಗಿಹೋಗಿರುವ ದೇವಾಲಯ ಯಾವುದು? ಇದು ಯಾರ ಕಾಲದ್ದು?
- ವೇಣುಗೋಪಾಲ ಸ್ವಾಮಿ ದೇವಾಲಯ. ಇದು ಚೋಳರ ಕಾಲದ್ದು?
117) "ಕನ್ನಡ ಚಿತ್ರರಂಗದ ಬೀಷ್ಮ" ಎಂದು ಯಾರನ್ನು ಕರೆಯುತ್ತಾರೆ?    - ಹೊನ್ನಪ್ಪ ಭಾಗವತರ್.
118) ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಯಾರು?          - ಪ್ರತಿಭಾದೇವಿ ಸಿಂಗ್ ಪಾಟಿಲ್.
119) ಕರ್ನಾಟಕ ರಾಜ್ಯದಲ್ಲಿ ಎಷ್ಟು "ವಿಧಾನಸಭೆ" ಕ್ಷೇತ್ರಗಳಿವೆ        - ೨೨೪
120) ಕರ್ನಾಟಕ ರಾಜ್ಯದ ಅತಿದೊಡ್ಡ ಆನೆಗಳ ಬಿಡಾರ ಎಲ್ಲಿದೆ?             - ಸಕ್ರೆ ಬೈಲು.
121) ಮೈಸೂರು ಅರಮನೆಯ ವಿನ್ಯಾಸಕ ಯಾರು?         - ಹೆನ್ರಿ ಇರ್ವಿನ್.
122) ಭಾರತದಲ್ಲಿ ಮೊದಲು ಸಿಮೆಂಟ್ ಕಾರ್ಖಾನೆ ಎಲ್ಲಿ ಸ್ಥಾಪನೆ ಆಯಿತು?          - ಚೆನ್ನೈ.
123) "ಟಿಪ್ಪು ಸುಲ್ತಾನ"ನ ಅರಮನೆಯನ್ನು ಏನೆಂದು ಕರೆಯುತ್ತಾರೆ? - ಕೆಂಪು ಭವನ, (ಲಾಲ್ ಮಹಲ್)
124) ವಿಮಾನವನ್ನು ಕಂಡುಹಿಡಿದವರು ಯಾರು?   - ರೈಟಾ ಸಹೋದರರು.
125) ಭಾರತೀಯ ಅಂಚೆ ಕಛೇರಿ ಮತ್ತು ಸ್ಟಾಂಪುಗಳು ಅಧಿಕೃತವಾಗಿ ಯಾವಾಗ ಜಾರಿಗೆ ಬಂತು?
- ಅಕ್ಟೋಬರ್ ೧ನೇ 1854
126) ವೈದ್ಯಕೀಯ ಇತಿಹಾಸದಲ್ಲಿ ಸಿಜ್ಹಲ್ ಅಪರೇಷನ್ ಮೂಲಕ ಜನಿಸಿದ ಮೊದಲ ವ್ಯಕ್ತಿ ಯಾರು?
- ಜೂಲಿಯಸ್ ಸಿಜ್ಹಲ್.
127) ಮೊದಲ ಜೆಟ್ ವಿಮಾನವನ್ನು ಯಾರು? ಎಲ್ಲಿ? ಯಾವಾಗ? ಕಂಡುಹಿಡಿದರು?
- ಫ್ರಾಂಕ್ ವೈಟಿಲಫ್, ಇಂಗ್ಲೆಂಡ್, ೧೯೩೦
128) ಪ್ರಪಂಚದಲ್ಲಿ ಜನಸಂಖ್ಯಾನುಸಾರ ಹೆಚ್ಚು ಮಾತನಾಡುವ ಭಾಷೆಯಲ್ಲಿ ಕನ್ನಡವು ಎಷ್ಟನೆಯದಾಗಿದೆ?  - ೩೦
129) ಕನ್ನಡದ ಮೊದಲ ಸಾಹಿತಿ ಯಾರು? - ಗಂಗರ ಕಾಲದ "ಧ್ರುವನೀತ ಚಾವುಂಡರಾಯ".
1೩೦) ಕನ್ನಡದ (ಕನ್ನಡಿಗರ) ಮೊದಲ ಸಾಮ್ರಾಜ್ಯ ಯಾವುದು?              - ಕದಂಬ ಸಾಮ್ರಾಜ್ಯ.
131) ಬನವಾಸಿ ಎಂದು ಈಗಿನ ಯಾವ ಜಿಲ್ಲೆಯನ್ನು ಕರೆಯುತ್ತಿದ್ದರು.- ಉತ್ತರ ಕನ್ನಡ ಜಿಲ್ಲೆ.
132) ಹೊಯ್ಸಳರ ಸಮ್ರಾಜ್ಯದ ರಾಜಧಾನಿ ಯಾವುದು?      - ಹಳೇಬೀಡು.
133) ಕನ್ನಡವನ್ನು "ವಿಶ್ವ ಲಿಪಿಗಳ ರಾಣಿ" ಎಂದು ಯಾರು ವರ್ಣಿಸಿದ್ದಾರೆ?
- "ಭೂದಾನ ಚಳುವಳಿ ನೇತಾರ - ಶ್ರೀ ವಿನೋಭಾ ಭಾವೆ"
134) "ಕರ್ನಾಟಕ ಕುಲ ಪುರೋಹಿತ" ಎಂದು ಯಾರನ್ನು ಕರೆಯುತ್ತಾರೆ?  - ಆಲೂರು ವೆಂಕಟರಾಯರು.
135) "ಹಬಶಿಕೋಟೆ" ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?          - ಬೀದರ್.

136) ಚಂದ್ರನ್ನನ್ನು ಸ್ಪರ್ಶಿಸಿದ ಮೊದಲ ಮಾನವ ಯಾರು?          - ನೀಲ್ ಆರ್ಮ್ ಸ್ಟ್ರಾಂಗ್.
137) ದೂರವಾಣಿಯನ್ನು ಕಂಡುಹಿಡಿದವರು ಯಾರು?              - ಗ್ರಾಂಬೆಲ್
138) ವಿಧ್ಯುತ್ ಅನ್ನು ಕಂಡು ಹಿಡಿದವರು ಯಾರು?              - ಥಾಮಸ್ ಅಲ್ವ ಎಡಿಸನ್
139) ಬಾನುಲಿ (ರೇಡಿಯೋ) ಅನ್ನು ಕಂಡುಹಿಡಿದವರು ಯಾರು?            - ಮಾರ್ಕೋನಿ.
140) "ನಿತ್ಯೋತ್ಸವ"ವನ್ನು ಕರೆದವರು ಯಾರು?           - ಕೆ. ಎಸ್ ನಿಸಾರ್ ಅಹಮದ್.
141) ಹುಲಿ ಯಾವ ರಾಷ್ಟ್ರೀಯ ಪ್ರಾಣಿ?            - ಭಾರತ.
142) ಕನ್ನಡದ ಕೀಲೀ ಮಣೆಯನ್ನು ಕಂಡು ಹಿಡಿದವರು ಯಾರು?          - ಕೌಶಿಕ ಅನಂತಸುಬ್ಬರಾಯರು.
143) ಕ್ರಿ.ಶ.800 ರಲ್ಲಿ ಗಂಗ ಅರಸರ ಕಾಲದ ಸೈಗೊಟ್ಟ ಶಿವರಾಮ ಆನೆಗಳನ್ನು ಪಳಗಿಸಿ-ಉಪಯೋಗಿಸಿಕೊಳ್ಳುವ ತಾಂತ್ರಿಕ ಕಲೆಯನ್ನು ಪರಿಚಯಿಸುವ ಪುಸ್ತಕ ಬರೆದಿದ್ದರೆ. ಅದು ಯಾವುದು?             - ಗಜಶಾಸ್ತ್ರ.
144) ಕ್ರಿ.ಶ.942-1025 ರಲ್ಲಿ 2ನೇ ಚಾವುಂಡರಾಯ ಬಂಡೆಕಲ್ಲು ಒಡೆಯುವ ಕ್ರಮ, ಹಣ್ಣುಗಳಲ್ಲಿ ಬೀಜವಿಲ್ಲದಂತೆ ಮಾಡುವ ಕಲೆ, ಕ್ಷಯ ನಿವಾರಣೆ, ವಿಷವನ್ನು ಶಮನ ಮಾಡುವ ಬಗೆ, ಬುದ್ದಿವರ್ಧನೆಗೆ ಔಷಧೋಪಚಾರ ಹೇಗೆ ಎಂಬುದರ ಬಗ್ಗೆ ಯಾವ ಪುಸ್ತಕದಲ್ಲಿ ದಾಖಲಿಸಿದ್ದಾರೆ?- ಲೋಕೋಪಕಾರ.
145) ಕನ್ನಡದಲ್ಲಿ ಮೊದಲ ಜ್ಯೋತಿಷ್ಯ ಶಾಸ್ತ್ರ ಎಂದು ಪರಿಗಣಿಸಲ್ಪಡುವ ಜಾತಕ ತಿಲಕ ಎಂಬ ಕೃತಿಯನ್ನು ಯಾರು ರಚಿಸಿದ್ದರು?                 - ಕ್ರಿ.ಶ. 1049 ರಲ್ಲಿ ಶ್ರೀಧರಾಚಾರ್ಯ.
146) ಮೊದಲ ವೈದ್ಯ ಶಾಸ್ತ್ರ ಗ್ರಂಥ ಯಾವುದು? ಯಾವಾಗ? ಯಾರು ಬರೆದರು?
- ಕ್ರಿ.ಶ. 1150ರಲ್ಲಿ ಜಗದ್ಧಳ ಸೋಮನಾಥರ ಕಲ್ಯಾಣಕಾರವೆಂಬ.
147) ಕ್ರಿ.ಶ.1300 ರಲ್ಲಿ ಮಳೆ, ಬೆಳೆ ,ನೀರು ,ಹವಾಮಾನ, ವಾಯುಗುಣ, ಬಿತ್ತನೆ ಮತ್ತು ಅಂತರ್ಜಲ ಇರುವ ಸ್ಥಳವನ್ನು ಕರಾರುವಕ್ಕಾಗಿ ಕಂಡು ಹಿಡಿಯುವ ಬಗೆ ಇತ್ಯಾದಿಗಳನ್ನು ಕುರಿತ ವಿಷಯಗಳನ್ನು ರಟ್ಟಶಾಸ್ತ್ರ ಎಂಬ ಪುಸ್ತಕವನ್ನು ಬರೆದವರು ಯಾರು?                  - ರಟ್ಟಕವಿ ಎಂಬ ಕೃಷಿ ವಿಜ್ಞಾನಿ.
148)ಮಹಾರಾಷ್ಟ್ರದಲ್ಲಿ ಜಕಣಾಚಾರ್ಯರು ಕಟ್ಟಿದ ಕಟ್ಟಡಗಳನ್ನೂ ಏನೆಂದು ಕರೆಯುತಾರೆ?-"ಹೇಮಾಡಪಂತೀ "ಗುಡಿಗಳು
149. ಶ್ರೀ ಕೃಷ್ಣದೇವರಾಯ ಯಾವ ವಂಶಕ್ಕೆ ಸೇರಿದವನು ?                - ತುಳು
150. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಯಾವಾಗ ಜರುಗಿತು? -1857

1. 940ಕ್ಕೆ ಬಂದಿದೆ. ಅಂದರೆ ವ್ಯತ್ಯಾಸವು ಸಾವಿರಕ್ಕೆ 60.
2. ಉತ್ತರ ಪ್ರದೇಶ ಅತ್ಯಂತ ಹೆಚ್ಚು ಜನಸಾಂದ್ರತೆಯುಳ್ಳ ರಾಜ್ಯವಾಗಿದ್ದು, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಜನಸಂಖ್ಯೆಗಳನ್ನು ಸೇರಿಸಿದರೆ (31 ಕೋಟಿ),
3. ಜನಗಣತಿಯಲ್ಲಿ ಹೊರಬಿದ್ದ ಅಂಕಿ ಅಂಶಗಳಿಗೆ ಹೋಲಿಸಿದರೆ, 2001ರಲ್ಲಿ ಶೇ. 21.15ರಷ್ಟಿದ್ದ ಜನಸಂಖ್ಯಾ ವೃದ್ಧಿ ದರವು 2011ರ ಜನಗಣತಿ ಪ್ರಕಾರ ಶೇ.17.64ಕ್ಕೆ ಕುಸಿದಿದೆ.
4. ಭಾರತದ ಜನಸಂಖ್ಯೆ 121.02 ಕೋಟಿ. ಪುರುಷರು 62.37 ಕೋಟಿ ಹಾಗೂ ಮಹಿಳೆಯರು 58.65 ಕೋಟಿ.
5. ಒಟ್ಟಾರೆಯಾಗಿ, ಪುರುಷರ ಜನಸಂಖ್ಯೆಯಲ್ಲಿ ಶೇ.17 ಹಾಗೂ ಮಹಿಳೆಯರ ಜನಸಂಖ್ಯೆಯಲ್ಲಿ ಶೇ.18ರಷ್ಟು ವೃದ್ಧಿಯಾಗಿದೆ.


6. 10 ವರ್ಷಗಳಲ್ಲಿ ಭಾರತದಲ್ಲಿ ಹೆಚ್ಚಳವಾದ ಜನಸಂಖ್ಯೆ 18 ಕೋಟಿ. ಅಂದರೆ ಇದು ಬ್ರೆಜಿಲ್‌ನ ಜನಸಂಖ್ಯೆಗೆ ಸಮ.
7. ಜನಸಾಂದ್ರತೆಯು ಕೂಡ ಹೆಚ್ಚಾಗಿದೆ. ಅತೀ ಹೆಚ್ಚು ಜನಸಾಂದ್ರತೆಯಿರುವುದು ದೆಹಲಿಯ ಈಶಾನ್ಯ ಜಿಲ್ಲೆಯಲ್ಲಿ (ಚದರ ಕಿಲೋಮೀಟರಿಗೆ 37,346 ಮಂದಿ), ಅತಿ ಕನಿಷ್ಠ ಜನಸಾಂದ್ರತೆ ಇರುವುದು ಅರುಣಾಚಲ ಪ್ರದೇಶದ ದಿಬಾಂಗ್
       ಕಣಿವೆ ಜಿಲ್ಲೆಯಲ್ಲಿ - ಚದರ ಕಿಲೋಮೀಟರಿಗೆ 1 ಮಾತ್ರ!.
8. ಭಾರತದ ಜನಗಣತಿ 2011ನ್ನು 2 ಹಂತ ಗಳಲ್ಲಿ ಕೈಗೊಳ್ಳಲಾಗುವುದು. ಮೊದಲನೆ ಹಂತದಲ್ಲಿ ಮನೆಗಳ ಪಟ್ಟಿ ಮಾಡುವುದು ಮತ್ತು ಮನೆಗಣತಿ. ಎರಡನೆ ಹಂತ ಜನಗಣತಿ.
9. ಕರ್ನಾಟಕ ರಾಜ್ಯದಲ್ಲಿ ಮೊದಲ ಹಂತದ ಜನಗಣತಿ ಕಾರ್ಯವನ್ನು 2010 ಎಪ್ರಿಲ್ 15ರಿಂದ ಜೂನ್ 1ರವರೆಗೆ ನಡೆಸಲಾಗುತ್ತದೆ. 2ನೆ ಹಂತದ ಜನಗಣತಿ ಕೆಲಸ 2011 ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಜರಗಲಿದೆ.
10.ಕರ್ನಾಟಕ ರಾಜ್ಯದಲ್ಲಿ,ಜನಗಣತಿ ನಿರ್ದೇಶನಾಲಯ ಬೆಂ. ಇವರ ಮಾರ್ಗದರ್ಶನದಲ್ಲಿ ಜನಗಣತಿ ಕಾರ್ಯನಡೆಯಲಿದೆ
11. ಆಯಾಯ ಜಿಲ್ಲೆಯ ಜಿಲ್ಲಾಧಿಕಾರಿಯವರು ಪ್ರಿನ್ಸಿಪಲ್ ಸೆನ್ಸಸ್ ಆಫೀಸರ್ಸ್‌ ಆಗಿ ಕರ್ತವ್ಯ ನಿರ್ವಹಿಸುತ್ತಾರೆ. ಅಲ್ಲದೆ ರಾಜ್ಯದ ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ ಆಯಾಯ ನಗರ ಪಾಲಿಕೆಯ ಕಮೀಶನರ್‌ಗಳು ಪ್ರಿನ್ಸಿಪಲ್ ಸೆನ್ಸಸ್
       ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಾರೆ.
12. ಮನೆ ಮನೆ ಭೇಟಿ ನೀಡಿ ಮನೆ ಪಟ್ಟಿ ತಯಾರಿಸಲು ಸುಮಾರು 600 ರಿಂದ 700 ಜನಸಂಖ್ಯೆ ವ್ಯಾಪ್ತಿಗೆ ಒಬ್ಬರು ಗಣತಿದಾರರಂತೆ, 6 ಗಣತಿದಾರರಿಗೆ ಒಬ್ಬರು ಮೇಲ್ವಿಚಾರಕರಂತೆ ನೇಮಕ ಮಾಡಲಾಗಿದೆ.
13. ಪ್ರಸಕ್ತ ಭಾರಿಯ ಹಂಪಿ ಕನ್ನಡ ವಿವಿಯ ಪ್ರತಿಷ್ಠಿತ ನಾಡೋಜ ಗೌರವ ಪದವಿ ಎಸ್.ಎಲ್.ಬೈರಪ್ಪ ಸೇರಿದಂತೆ
        ಒಟ್ಟು ಆರು ಜನರಿಗೆ ದೊರಿತಿದೆ.
14. ತುಂಗಭದ್ರಾ ಜಲಾಶಯ ನಿರ್ಮಿಸಲು ಆಗಿನ ಹೈದರಾಬಾದ್ ಸರ್ಕಾರ 1950 ರಲ್ಲಿ ಭೂಸ್ವಾಧೀನ ನಡೆಸಿತು.
15. ತುಂಗಭದ್ರಾ ಜಲಾಶಯ ನಿರ್ಮಿಸಲು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸುಮಾರು 17 ಗ್ರಾಮಗಳು ಮುಳುಗಡೆಯಾದವು.
16. ಈ ಪೈಕಿ ರಾಂಪುರ ತಾಲ್ಲೂಕಿನ ಒಂದು ಗ್ರಾಮದ 17 ಕುಟುಂಗಳನ್ನು ಅಗಳಕೇರಾ ಗ್ರಾಮಕ್ಕೆ ಸ್ಥಳಾಂತರಿಸಲಾಗಿತ್ತು. ಪುನರ್ವಸತಿಗಾಗಿ ಹುಲಿಗಿಯ ಕುಬೇರಗೌಡರಿಂದ 48 ಎಕರೆ ಭೂಸ್ವಾಧೀನಪಡಿಸಿಕೊಂಡು 6,969 ರೂ
    ಪರಿಹಾರ ವಿತರಿಸಲಾಗಿತ್ತು.
17. ಈ ಸಂದರ್ಭದಲ್ಲಿ 5 ಎಕರೆಗಿಂತ ಹೆಚ್ಚು ಜಮೀನು ಪಡೆದ ಕುಟುಂಬದಿಂದ ಹೆಚ್ಚುವರಿಯಾಗಿ ಎಕರೆಗೆ 50 ರೂ ನಂತೆ ಸರ್ಕಾರ ವಸೂಲಿ ಮಾಡಿತ್ತು.5 ಎಕರೆಗಿಂತ ಕಡಿಮೆ ಜಮೀನು ಪಡೆದ ಸಂತ್ರಸ್ತರಿಗೆ ಉಚಿತವಾಗಿ ವಿತರಿಸಲಾಗಿತ್ತು
18. ಸಂತ್ರಸ್ತರಿಗೆ ಸರ್ಕಾರ ನೀಡಿದ ಜಮೀನಿನ ಮಾಲಿಕತ್ವ ಎತ್ತಿಹಿಡಿದಿರುವ ಇಲ್ಲಿನ ಒಂದನೇ ತ್ವವರಿತ ನ್ಯಾಯಾಲಯ , ಕೆಳ ನ್ಯಾಯಾಲಯ ನೀಡಿದ ಆದೇಶ ತಳ್ಳಿ ಹಾಕುವ ಮೂಲಕ 61 ವರ್ಷಗಳ ಸಂತ್ರಸ್ತರ ಹೋರಾಟಕ್ಕೆ ನ್ಯಾಯ ಒದಗಿಸಿದೆ.
19. ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ವರ ನಿವಾಸದ ಮತ್ತು ಕಛೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ 2.6 ಕೆ.ಜಿ. ಚಿನ್ನ , 17 ಲಕ್ಷ ರೂ. ನಗದು ವಶವಡಿಸಿಕೊಂಡಿದ್ದಾರೆ.
20. ರಷ್ಯಾದ ಸೈಬೀರಿಯಾದ ನ್ಯಾಯಾಲಯವೊಂದು ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯನ್ನು ನಿಷೇಧಿಸಲು ಹೊರಟಿದೆ.     21. ಮಾಸ್ಕೊ
ಇಸ್ಕಾನ್ ಭಗವದ್ಗೀತೆ ನಿಷೇಧ ಕುರಿತ ತೀರ್ಪನ್ನು ಅಮಾನತಿಲ್ಲಿ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 28 ಮುಂದೂಡಿದೆ.

22. ನರ್ಸ್ ಭಂವರಿ ದೇವಿ ಪಹರಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಮಹಿಪಾಲ್ ಮದೆರ್ನಾ ಅವರ ಪತ್ನಿ ಲೀಲಾ , ಶಾಸಕ ಮಲ್ಕನ್ ಸಿಂಗ್ ವರ ಇಬ್ಬರು ಪುತ್ರರನ್ನು ಸಿಬಿಐ ಸೋಮವಾರ ವಿಚಾರಣೆಗೊಳಪಡಿಸಿದೆ.
23. ಉತ್ತ ಕೋರಿಯಾ ಪರಮೊಚ್ಚ ನಾಯಕ ಎರಡನೇ ಕಿಮ್ ಜಾಂಗ್ ಇಲ್ ದಿನಾಂಕ/17/12/2011 ರಂದು ಹೃದಯಾಘಾತದಿಂದ ನಿಧನರಾದರು.
24. ಸ್ವಾತಂತ್ರ್ಯ ನಂತರವೂ ಗೋವಾ ಪ್ರದೇಶವು ಪೋರ್ಚುಗೀಸರ ಅಧೀನದಲ್ಲಿತ್ತು ಇದನ್ನು ವಶಪಡಿಸಲು ಭಾರತ ಸರ್ಕಾರ ಆಪರೇಷನ್ ವಿಜಯ್ ಹೆಸರಿನಲ್ಲಿ ಯುದ್ಧ ಸಾರಿತು. 1961 ಡಿಸೆಂಬರ್ 19 ರಂದು ಗೋವ ಭಾರತದ ವಶವಾಯಿತು.          25. ಪೋರ್ಚುಗೀಸರು ಭಾರತದ ಪಶ್ಚಿಮ ಕರಾವಳಿಗೆ ಕಾಲಿಟ್ಟಿದ್ದು 1510 ರಲ್ಲಿ .
26. ಸುಧಾರಣಾವಾಧಿ ಲೂಯಿಸ್ ದಿ ಮನೇಜಸ್ ಬ್ರಾಗಾಂಕಾ ಅವರು ಹೊರತರುತ್ತಿದ್ದ ಒ ಹೆರಾಲ್ಡೋ ಪತ್ರಿಕೆ ಪೋರ್ಚುಗೀಸರ ದುರಾಡಳಿತ ವಿರುದ್ಧದ ಹೋರಾಟಕ್ಕೆ ಬೆನ್ನೆಲುಬಾಗಿತ್ತು.
27. ಇದನ್ನು ಹತ್ತಿಕ್ಕಲು ಪೋರ್ಚುಗೀಸ್ ಸರ್ಕಾರವು ಗೋವಾದಲ್ಲಿ ಪ್ರೆಸ್ ಸೆನ್ಸಾರ್ ಶಿಪ್ ಜಾರಿಗೊಳಿಸಿತು.
28. ಗೋವಾ ವಿಮೋಚನಾ ಚಳವಳಿಗೆ ರಾಜಕೀಯ ಬಲ ನೀಡಲು ಟ್ರಿಸ್ಟಾವೋ ಡಿಬ್ರೆಗಾಂಜಾ ಕುನ್ಹಾ ವರು 1928 ರಲ್ಲಿ ಗೋವಾ ನ್ಯಾ,ನಲ್ ಕಾಂಗ್ರೇಸ್ ಸ್ಥಾಪಿಸಿದರು.
29. 1930 ರ ವೇಳೆಗೆ ಪೋರ್ಚುಗೀಸ್ ಸರ್ಕಾರವು ಆಕ್ಟೋ ಕಲೋನಿಯಲ್ ಕಾಯಿದೆ ಜಾರಿಗೊಳಿಸಿ ರಾಜಕೀಯ ಪಕ್ಷಗಳ ರ್ಯಾಲಿ ಹಾಗೂ ಸಭೆಗಳಿಗೆ ನಿಷೇಧ ಹೇರಿತು.
30. ಗೋವಾ ವಿಮೋಚನಾ ಚಳವಳಿಯ ಪಿತಾ ಎಂದು ಟ್ರಿಸ್ಟಾವೋ ಡಿಬ್ರೆಗಾಂಜಾ ಕುನ್ಹಾ ರನ್ನ ಕರೆದರು.
31. 1961 ಡಿಸೆಂಬರ್ 18 ಮತ್ತು 19 ರಂದು ಸತತ 33 ಗಂಟೆಗಳ ಸೇನೆ ದಾಳಿ ನಡೆಸುವ ಮೂಲಕ ಗೋವಾ ಮತ್ತು ಸುತ್ತಮುತ್ತಲಿನ ದ್ವೀಪಗಳು ವಿಮೋಚನೆಗೊಳಿಸಲಾಯಿತು.
32. ಪೋರ್ಚುಗೀಸರು ಭಾರತಕ್ಕೆ ಅಧಿಕೃತವಾಗಿ ಭಾರತಕ್ಕೆ ಶರಣಾಗಿದ್ದು 1974 ರಲ್ಲಿ ಗೋವಾ ವಿಮೋಚನೆಯನ್ನು ಒಪ್ಪಿಕೊಂಡಿತು.
33. ಗೋವಾ 1987 ರಲ್ಲಿ ಪ್ರತ್ಯೇಕ ರಾಜ್ಯವಾಗಿ ಗೋವಾ ಅಸ್ತಿತ್ವಕ್ಕೆ ಬಂತು.
34. ಪ್ರಸ್ತುತ ದಮನ್ ಮತ್ತು ದಿಯೂ , ದಾದ್ರಾ ಮತ್ತು ನಗರ್ ಹವೇಲಿ ದ್ವೀಪಗಳು ಕೇಂದ್ರಾಡಳಿತ ಪ್ರದೇಶವಾಗಿದೆ.
35. ಭಾರತದಲ್ಲಿ information technology ಕ್ಷೇತ್ರದಲ್ಲಿ 2012ನೇ ಸಾಲಿನಲ್ಲಿ ಸುಮಾರು 2.5 ಲಕ್ಷ ಮಂದಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದು ಐಟಿ ದಿಗ್ಗಜ ಇನ್ಫೋಸಿಸ್ ಕಂಪನಿಯ ಸಹ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್.
36. 34 ವರ್ಷಗಳ ಬಳಿಕ ರಣಜಿ ಪಂದ್ಯದ ಆತಿಥ್ಯ ವಹಿಸಲು ಶಿವಮೊಗ್ಗ ಸಜ್ಜಾಗಿದೆ.
37. 1995 ರಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಪಂದ್ಯ ನಡೆದಿತ್ತು.
38. ಆಸ್ಟ್ರೇಲಿಯ ಪ್ರವಾಸಕ್ಕೆ ತೆರಳಿದ ಭಾರತ ತಂಡದಲ್ಲಿ ಕುಮಟಾ ಮೂಲಕ 27 ವರ್ಷದ ಯುವಕನೂ ಸೇರಿದ್ದಾನೆ.
39. ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಅವರ ಅಚ್ಚುಮೆಚ್ಚಿನ ಈ ಯುವಕನ ಹೆಸರು ರಾಘವೇಂದ್ರ. ವಿಶೇಷವೆಂದರೆ ಈ ವರೆಗೆ ಪ್ರಥಮ ದರ್ಜೆ ಪಂದ್ಯವನ್ನು ಆಡದ ರಾಘವೇಂದ್ರ ಈ ಇಬ್ಬರು ಮಹಾನ್ ಆಟಗಾರರಿಗೆ ನೆಟ್ ಪ್ರಾಕ್ಟೀಸ್ ನಲ್ಲಿ ನೆರವು ನೀಡುತ್ತಿದ್ದಾನೆ.
40. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯ ಉದ್ಯೋಗಿಯಾಗಿರುವ ರಾಘವೇಂದ್ರ ಮೆಷಿನ್ ಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಸ್ವಿಂಗ್ ಮಾಡಿ ಬಾಲ್ ಎಸೆಯುವ ಕಲೆ ಹೊಂದಿದ್ದಾನೆ.

41. ಆಸೀಸ್ ವೇಗಿ ಪಾಟಿಸನ್ ಸ್ವಿಂಗ್ ಎದುರಿಸಲು ಸಜ್ಜಾಗುತ್ತಿರುವ ಸಚಿನ್ ಹಾಗೂ ದ್ರಾವಿಡ್ ಗೆ ಸದ್ಯಕ್ಕೆ ರಾಘವೇಂದ್ರನೇ ಉತ್ತಮ ಸಹಾಯಕರು .
42. ದೇಶದ ಅತ್ಯುನ್ನತ ನಾಗರೀಕ ಸನ್ಮಾನ ಇದ್ದ ಅಡ್ಡಿಯನ್ನು ಕೇಂದ್ರ ಸರ್ಕಾರ ಸರಿಪಡಿಸಿದೆ. ಪ್ರಶಸ್ತಿಯಲ್ಲಿ ಕ್ರೀಡಾ ವಿಭಾಗವನ್ನು ಸೇರ್ಪಡೆಗೊಳಿಸುವುದಕ್ಕೆ ಕೇಂದ್ರದ ಗೃಹಸಚಿವ ಪಿ.ಚಿದಂಬರಂ ಸಮ್ಮತಿ ಸೂಚಿಸಿ ಕಳಿಸಿದ ಪತ್ರಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಕೂಡಾ ಅಂಕಿತ ಹಾಕಿದ್ದಾರೆ.
43. ಹೀಗಾಗಿ ಮುಂದಿನ ದಿನಗಳಲ್ಲಿ ಹೀಗಾಗಿ ಕಲೆ, ವಿಜ್ಞಾನ, ಸಾಹಿತ್ಯ ಮತ್ತು ಸಾರ್ವಜನಿಕ ಸೇವೆಯಲ್ಲಿ ಅತ್ಯುನ್ನತ ಸಾಧನೆ ಮೆರೆದವರ ಸರಿ ಸಮನಾಗಿ ಕ್ರೀಡಾಪಟುಗಳು ನಿಲ್ಲಬಹುದಾಗಿದೆ. ಸಚಿನ್ ತೆಂಡೂಲ್ಕರ್ ಹಾಗೂ ಶ್ರೇಷ್ಠ ಹಾಕಿಪಟು ಧ್ಯಾನ್ ಚಂದ್ ಇಬ್ಬರೂ ಭಾರತ ರತ್ನ ಪಡೆಯಬಹುದಾಗಿದೆ.
44. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಜೀವನ ಚರಿತ್ರೆಯ ಮೊದಲ ಕಾಪಿ ದಾಖಲೆ ಮೊತ್ತಕ್ಕೆ ಹರಾಜಾಗಿರು ಸುದ್ದಿ ಬಂದಿದೆ.ಸುಮಾರು 37 ಕೆಜಿ ತೂಕದ, 852 ಪುಟಗಳ ಈ ಬೃಹತ್ ಪುಸ್ತಕಕ್ಕೆ ಸುಮಾರು 1.72 ಕೋಟಿ ರು ಮೊತ್ತದ ಬೆಲೆ ಹರಾಜಿನಲ್ಲಿ ಕೂಗಲಾಗಿದೆ.
45. ಸಚಿನ್ ಅವರ ರಕ್ತದ ಸಹಿಯುಳ್ಳ ವಿಶೇಷ ಕಾಪಿಗಳು ಕೂಡಾ ಲಭ್ಯವಿದ್ದು ಪ್ರತಿ ಪುಸ್ತಕಕ್ಕೆ 75,000 ಡಾಲರ್ ದುಡ್ಡು ತೆರಬೇಕಾಗುತ್ತದೆ.
46. ಜೀವನ ಚರಿತ್ರೆ ಪುಸ್ತಕದಲ್ಲಿ ಸಚಿನ್ ಅವರ ಅಪರೂಪದ 1,500 ಚಿತ್ರಗಳು ಇದ್ದು ಪುಸ್ತಕದ ಅಂಚಿಗೆ ಚಿನ್ನದ ಲೇಪನ ಇರುತ್ತದೆ ಎಂದು ಪ್ರಕಾಶಕರು ಹೇಳಿದ್ದಾರೆ.
47. ಅತ್ಯಂತ ಸಜ್ಜನ, ಸಂಭಾವಿತ ನ್ಯಾಯಮೂರ್ತಿ ಎಂದೇ ಹೆಸರಾಗಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾ. ವಿ.ಜಿ. ಸಭಾಹಿತ್ (56) ಅವರು ಕರ್ತವ್ಯ ನಿರ್ವಹಿಸುತ್ತಿರುವಾಗಲೇ ತೀವ್ರ ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ನಿಧನರಾದರು.
48. ಕೋರ್ಟ್ ಕೋಣೆ 3ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನ್ಯಾ. ಸಭಾಹಿತ್ ಅವರು ಕಚೇರಿಯಲ್ಲಿ ಹೃದಯ ಸ್ತಂಭನಕ್ಕೊಳಗಾಗಿದ್ದಾರೆ.
49. ಅವರನ್ನು ಫಾರ್ಟಿಸ್ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಅಸುನೀಗಿದರು.
50. ನವೆಂಬರ್ 26ರಂದು 56ನೇ ವರ್ಷಕ್ಕೆ ಕಾಲಿಟ್ಟಿದ್ದ ನ್ಯಾ. ಸಭಾಹಿತ್ ಅವರು 1979ರಲ್ಲಿ ವಕೀಲ ವೃತ್ತಿ ಸೇರಿ ಕರ್ನಾಟಕ ಹೈಕೋರ್ಟಿನಲ್ಲಿಯೇ ಪ್ರಾಕ್ಟೀಸ್ ಮಾಡಿದ್ದರು.
51. ಅವರ ತಂದೆ ನ್ಯಾ. ಜಿ.ಎಸ್ ಸಭಾಹಿತ್ ಕೂಡ ಕರ್ನಾಟಕ ಹೈಕೋರ್ಟಿನಲ್ಲಿ ನ್ಯಾಯಮೂರ್ತಿಗಳಾಗಿದ್ದರು.
52. 1988ರಲ್ಲಿ ನ್ಯಾಯಾಂಗ ಸೇವೆಯನ್ನು ಸೇರಿದ ಅವರನ್ನು, 2000ರಲ್ಲಿ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿತ್ತು. 2001 ಜುಲೈನಲ್ಲಿ ಖಾಯಂ ನ್ಯಾಯಾಮೂರ್ತಿಗಳಾಗಿ ನೇಮಕಗೊಂಡ ಅವರು 2017ರಲ್ಲಿ ನಿವೃತ್ತರಾಗುವವರಿದ್ದರು.
53. ಕಳೆದ ವರ್ಷ 11 ಭಿನ್ನಮತೀಯ ಶಾಸಕರು ದಂಗೆಯೆದ್ದಿದ್ದಾಗ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ವಿಭಿನ್ನ ತೀರ್ಪನ್ನು ನೀಡಿತ್ತು. ಆಗ ಆ ಪ್ರಕರಣವನ್ನು ನ್ಯಾ. ವಿ.ಜಿ. ಸಭಾಹಿತ್ ಅವರಿಗೆ ವರ್ಗಾಯಿಸಲಾಗಿತ್ತು. ಅ.29ರಂದು ನೀಡಿದ ತೀರ್ಪಿನಲ್ಲಿ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ಹೊರಡಿಸಿದ್ದ ಆದೇಶವನ್ನು 
ನ್ಯಾ.ಸಭಾಹಿತ್ ಎತ್ತಿಹಿಡಿದಿದ್ದರು.

54. ನ್ಯಾಯಮೂರ್ತಿ ವಿಜಿ ಸಭಾಹಿತ್ ಅವರು ಬಿಜೆಪಿ ಸ್ಪೀಕರ್ ಬೋಪಯ್ಯ ಅವರು 11 ಮಂದಿ ಶಾಸಕರನ್ನು ಅನರ್ಹಗೊಳಿಸಿದ ಕ್ರಮ ಸರಿ ಎಂದು ತೀರ್ಪು ನೀಡಿದ್ದಾರೆ.
55. ಕನ್ನಡಪ್ರಭ ದಿನಪತ್ರಿಕೆ ಮತ್ತು ಸುವರ್ಣ ನ್ಯೂಸ್ ಚಾನಲ್ ಸಂಪಾದಕ ವಿಶ್ವೇಶ್ವರ ಭಟ್ ಅವರ ಖಾಸಗಿ ಅಂತರ್ ಜಾಲ ತಾಣ 
http://vbhat.in/ ಮತ್ತೆ ಶುರುವಾಗಿದೆ.
56. ಅಧ್ಯಕ್ಷರು ಅಥವಾ ಮುಖ್ಯಸ್ಥರೂ ಸೇರಿದಂತೆ ಲೋಕಪಾಲದಲ್ಲಿ ಒಂಬತ್ತು ಸದಸ್ಯರಿರುತ್ತಾರೆ.
57.ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಥವಾ ಹಾಲಿ ನ್ಯಾಯಮೂರ್ತಿ ಸಂಸ್ಥೆ ಮುಖ್ಯಸ್ಥರಾಗಿರುತ್ತಾರೆ
58. ಲೋಕಸಭೆ ಸ್ಪೀಕರ್, ಪ್ರಧಾನಿ, ಲೋಕಸಭೆ ವಿರೋಧ ಪಕ್ಷದ ನಾಯಕರು ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ ನಾಲ್ವರ ಸಮಿತಿ ಅಧ್ಯಕ್ಷರನ್ನು ನೇಮಕ ಮಾಡಲಿದೆ.
59. ಅಧ್ಯಕ್ಷರು ಮತ್ತು ಸದಸ್ಯರ ಅವಧಿ ಐದು ವರ್ಷ. `ವಾಗ್ದಂಡನೆ ನಿರ್ಣಯ` (ಇಂಪೀಚ್‌ಮೆಂಟ್) ಮೂಲಕ ಲೋಕಪಾಲರನ್ನು ಅಧಿಕಾರದಿಂದ ಪದಚ್ಯುತಿಗೊಳಿಸಬಹುದಾಗಿದೆ.
60. `ವಾಗ್ದಂಡನೆ ನಿರ್ಣಯ` ಕ್ಕೆ ಇದಕ್ಕೆ 100 ಸಂಸದರ ಸಹಿ ಒಳಗೊಂಡ ದೂರು ಅಗತ್ಯ.
61. ಲೋಕಪಾಲದಲ್ಲಿ ಹಾಗೂ ಶೋಧನಾ ಸಮಿತಿಯಲ್ಲಿ ಶೇ. 50ರಷ್ಟು ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರು ಮತ್ತು ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗುತ್ತಿದೆ.
62.ಲೋಕಪಾಲ ಪೀಠದಲ್ಲಿ ಅರ್ಧದಷ್ಟು ಕಾನೂನು ಅಥವಾ ನ್ಯಾಯಾಂಗ ಹಿನ್ನೆಲೆಯಿಂದ ಬಂದವರು ಸದಸ್ಯರಾಗಿರುತ್ತಾರೆ
63. ಲೋಕಪಾಲಕ್ಕೆ ಸ್ವಯಂ ಪ್ರೇರಿತವಾಗಿ ತೀರ್ಮಾನ ಕೈಗೊಳ್ಳುವ ಅಧಿಕಾರ ಇರುವುದಿಲ್ಲ. ದೂರುಗಳ ಆಧಾರದ ಮೇಲೆ ನಿರ್ಧಾರ ಮಾಡಬೇಕು.
64. ಲೋಕಪಾಲದ ವಿಚಾರಣಾ ವಿಭಾಗವು ನಿರ್ದೇಶಕರು ಪ್ರಾಥಮಿಕ ವಿಚಾರಣೆ ಅವರನ್ನೊ ಗೊಂಡಿರುತ್ತದೆ.
65. ಲೋಕಪಾಲರು ದೂರು ಕುರಿತು ಪ್ರಾಥಮಿಕ ತನಿಖೆ ನಡೆಸುವಂತೆ ಸಿಬಿಐಗೂ ಕೇಳಬಹುದು. ಪ್ರಾಥಮಿಕ ತನಿಖೆ ಮೂರು ತಿಂಗಳಲ್ಲಿ ಪೂರ್ಣಗೊಳ್ಳಬೇಕು.
66.ಕಾಲಾವಕಾಶ ಅಗತ್ಯವಾದರೆ ಲಿಖಿತ ಮನವಿ ಸಲ್ಲಿಸಬೇಕು.6 ತಿಂಗಳವರೆಗೆ ವಿಸ್ತರಿಸಲು ಕಾಯ್ದೆಯಲ್ಲಿ ಅವಕಾಶವಿದೆ
67. ದೇಶದ ಅತ್ಯುನ್ನತ ತನಿಖಾ ಸಂಸ್ಥೆ `ಸಿಬಿಐ` ಅನ್ನು ಲೋಕಪಾಲ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
68. ಸಿಬಿಐ ಆಡಳಿತಾತ್ಮಕ ಅಧಿಕಾರವನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಯಲ್ಲೇ ಉಳಿಸಲಾಗಿದೆ.
69. ಲೋಕಪಾಲ ಶಿಫಾರಸು ಮಾಡಿದ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಮಾತ್ರ ಈ ಸಂಸ್ಥೆ ಅಧೀನದಲ್ಲೇ ನಡೆಸಲು ಮಸೂದೆ ಅವಕಾಶ ಕಲ್ಪಿಸಿದೆ.
70. ಸಿಬಿಐ ನಿರ್ದೇಶಕರನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಪ್ರಧಾನಿ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿ ನೇಮಕ ಮಾಡಲಿದೆ.
71. ಎಸ್‌ಪಿ ಹಾಗೂ ಅವರ ಮೇಲಿನ ಅಧಿಕಾರಿಗಳನ್ನು ಸಿವಿಸಿ, ಗೃಹ ಕಾರ್ಯದರ್ಶಿ, ಆಡಳಿತ ಮತ್ತು ಸಿಬ್ಬಂದಿ ಇಲಾಖೆ ಕಾರ್ಯದರ್ಶಿ ಒಳಗೊಂಡ ಸಮಿತಿ ನೇಮಿಸಲಿದೆ.
72. ಅಂತರರಾಷ್ಟ್ರೀಯ ವ್ಯವಹಾರ, ಪರಮಾಣು ಶಕ್ತಿ, ಬಾಹ್ಯಾಕಾಶ, ಆಂತರಿಕ ಮತ್ತು ಬಾಹ್ಯ ಭದ್ರತೆ ಮೊದಲಾದ ಮಹತ್ವದ ವಿಷಯಗಳನ್ನು ಮಸೂದೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

73. ಪ್ರಧಾನಿ ವಿರುದ್ಧದ ದೂರುಗಳ ತನಿಖೆ ಕುರಿತು ಲೋಕಪಾಲ ಪೂರ್ಣಪೀಠ ತೀರ್ಮಾನಿಸಬೇಕು. ಇದಕ್ಕೆ ಕನಿಷ್ಠ 2/3 ರಷ್ಟು ಸದಸ್ಯರ ಒಪ್ಪಿಗೆ ಇರಬೇಕು.
74. ಪ್ರಧಾನಿ ವಿಚಾರಣೆ ಸಾರ್ವಜನಿಕವಾಗಿ ನಡೆಯಬಾರದು. ಕೋಣೆಯೊಂದರಲ್ಲಿ ಗೌಪ್ಯವಾಗಿ ನಡೆಯಬೇಕು. ದೂರು ತಿರಸ್ಕೃತವಾದರೆ ದಾಖಲೆ ಬಹಿರಂಗ ಮಾಡಬಾರದು ಎಂದು ಮಸೂದೆ ವ್ಯಾಖ್ಯಾನಿಸಿದೆ.
75. ಲೋಕಪಾಲದಿಂದ ಶಿಫಾರಸು ಮಾಡಲಾದ ಪ್ರಕರಣಗಳ ತನಿಖಾ ವರದಿಯನ್ನು ಈ ಸಂಸ್ಥೆಗೇ ಸಲ್ಲಿಸಬೇಕು.
76. ಕನಿಷ್ಠ ಮೂವರು ಸದಸ್ಯರು ವರದಿಯನ್ನು ಪರಿಶೀಲಿಸಿ ದೋಷಾರೋಪ ಪಟ್ಟಿ ಸಲ್ಲಿಸಬೇಕೇ? ಪ್ರಕರಣ ಕೈಬಿಡಬೇಕೇ ಅಥವಾ ಇಲಾಖೆ ವಿಚಾರಣೆಗೆ ಆದೇಶಿಸಬೇಕೇ ಎಂಬ ತೀರ್ಮಾನ ಮಾಡಬಹುದು.
77. ಮೊಕದ್ದಮೆ ದಾಖಲಿಸಲು ಸರ್ಕಾರದ ಮುಖ್ಯಸ್ಥರ ಅಥವಾ ಇಲಾಖಾ ಮುಖ್ಯಸ್ಥರ ಮಂಜೂರಾತಿ ಅಗತ್ಯವಿಲ್ಲ.
78. ದೋಷಾರೋಪ ಪಟ್ಟಿ ಸಲ್ಲಿಕೆಯಾದರೆ ಲೋಕಪಾಲದ `ಪ್ರಾಸಿಕ್ಯೂಷನ್` ವಿಭಾಗ ವಿಶೇಷ ನ್ಯಾಯಾಲಯದಲ್ಲಿ ವಿಚಾರಣಾ ಪ್ರಕ್ರಿಯೆ ಆರಂಭಿಸಬಹುದು.
79. ಕರ್ನಾಟಕ, ಜಾರ್ಖಂಡ್ ಹಾಗೂ ಒಡಿಶಾ ಸೇರಿದಂತೆ ದೇಶದಾದ್ಯಂತ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಕಬ್ಬಿಣ ಹಾಗೂ ಮ್ಯಾಂಗನೀಸ್ ಅದಿರು ರಫ್ತು ನಿಷೇಧಿಸುವಂತೆ ನ್ಯಾಯಮೂರ್ತಿ ಷಾ ಸಮಿತಿ ನೀಡಿದ ಸಲಹೆಯನ್ನು ಗಣಿ ಸಚಿವಾಲಯ ಮಂಗಳವಾರ ತಿರಸ್ಕರಿಸಿದೆ.
80. ಅಕ್ರಮ ಗಣಿಗಾರಿಕೆಗೆ ಲಗಾಮು ಹಾಕುವ ಉದ್ದೇಶದಿಂದ ನ್ಯಾ.ಎಂ.ಬಿ.ಷಾ ತನಿಖಾ ಸಮಿತಿಯು ಕೋಟ್ಯಂತರ ರೂಪಾಯಿ ವಹಿವಾಟಿನ ಕಬ್ಬಿಣ ಹಾಗೂ ಮ್ಯಾಂಗನೀಸ್ ಅದಿರು ರಫ್ತನ್ನು ನಿಷೇಧಿಸಬೇಕೆಂದು ಪ್ರತಿಪಾದಿಸಿತ್ತು.
81. ಸುಖೋಯ್ ಯುದ್ಧ ನೌಕೆಯಲ್ಲಿ ಸಂಚರಿಸಿ ಮತ್ತು ನೌಕಾ ವಿಹಾರ ನಡೆಸುವ ಮೂಲಕ ಇತಿಹಾಸ ನಿರ್ಮಿಸಿದರು. ಈ ವಿಮಾನದಲ್ಲಿ ಸಂಚರಿಸಿದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
82. 77 ವರ್ಷದ ಪ್ರತಿಭಾ, 81 ನೌಕಾಪಡೆ ಹಡಗುಗಳು ಮತ್ತು 44 ವಾಯು ನೌಕೆಗಳಿಂದ ಗೌರವ ವಂದನೆ ಸ್ವೀಕರಿಸಿದರು.      
111.ಅಂತರರಾಷ್ಟ್ರೀಯ ವ್ಯಾಪರವನ್ನು ನೋಡಿಕೊಳ್ಳುವ ನಾಯಿ ಎಂದು WTO ಸಂಸ್ಥೆಗೆ ಕರೆಯುತ್ತಾರೆ
83. ರಾಷ್ಟ್ರಪತಿಗಳ ವೈಯಕ್ತಿಕ ಸಮುದ್ರ ವಾಯುವಿಹಾರ ನೌಕೆ ಐಎನ್‌ಎಸ್ ಸುಭದ್ರಾದಲ್ಲಿ ನೌಕಾಪಡೆಯ ಪರಿವೀಕ್ಷಣೆ ಮಾಡಿದ ಮೊದಲ ರಾಷ್ಟ್ರಪತಿ.
84. ನೌಕಾಪಡೆಗೆ ವಿಕ್ರಮಾದಿತ್ಯ ವಾಯುನೌಕೆ ಸೇರ್ಪಡೆಯಿಂದ ಹೊಸ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ.
85. ಪ್ರಸ್ತುತ ಭಾರತದ ಸೇನೆ 65,758 ಬಂದೂಕಗಳನ್ನು ಹೊಂದಿದೆ.
86. ಭಾರತದ ಸೇನೆಗೆ ಹೊಸದಾಗಿ 20 ಲಕ್ಷ ಬಂದೂಕಗಳ ಗತ್ಯವಿದೆ.
87. ಪ್ರಸ್ತುತ ಇನ್ಸಾನ್ ಬಂದೂಕಗಳ ಬದಲಾಗಿ 10 ಕೆ.ಜಿ. ಹೆಚ್ಚಿನ ತೂಕ ಹೊಂದಿರುವ ಹೊಸ ರೈಫಲ್ ಗಳನ್ನು ಪೂರೈಸಲು ಸೇನಾಧಿಕಾರಿಗಳು ಚಿಂತನೆ ನಡೆಸಿದ್ದಾರೆ.
88. ದಿಲ್ಲಿಯಲ್ಲಿ ದರ್ಬಾರು ನಡೆಸುತ್ತಿದ್ದ ಗೋರಾಗಳು ( ಬಿಳಿಯರು ) ತೊಲಗಿದರು , ಕಾಲಾಗಳು ( ಕರಿಯರು ) ಬಂದರು . ಆದರೆ ಸ್ವಾತಂತ್ರ್ಯ ಬಂದು 6 ದಶಕ ಸಂದರೂ ಭ್ರಷ್ಟಚಾರ ನಿಂತಿಲ್ಲ ಎಂದು ವಿಷಾಧಿಸಿದ್ದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ.
89. ನೊಬೆಲ್ ಪ್ರಶಸ್ತು ಪುರಸ್ಕೃತ ಸಾಹಿತಿ ರವೀಂದ್ರನಾಥ ಟ್ಯಾಗೋರ್ ಬರೆದದ್ದು 1911 ರಲ್ಲಿ
90. ಜನ ಗಣ ಮನ ಕವಿತೆಯುವ ಮೊದಲು ಪ್ರಕಟಗೊಂಡಿದ್ದು ಟ್ಯಾಗೋರ್ ಅವರು ಸಂಪಾದಕರಾಗಿದ್ದ ಬ್ರಹ್ಮ ಸಮಾಜ ಪತ್ರಿಕೆ , ತತ್ವ ಭೋಧ ಪತ್ರಿಕೆ.      109. 1911 ರ್ಲಲಿ ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ ಸ್ಥಾಪನೆ
91. ಜನ ಗಣ ಮನವನ್ನು ರಾಗಬದ್ದವಾಗಿ ಮೊದಲು ಹಾಡಿದ್ದು 1911 ರ ಡಿಸೆಂಬರ್ 27 ರಂದು ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಕೋಲ್ಕೋತಾಧಿವೇಶನದಲ್ಲಿ.
92. ಟ್ಯಾಗೋರ್ ರವರು ಜನ ಗಣ ಮನ ಗೀತೆಯನ್ನು ಬರೆದದ್ದು ಸಂಸ್ಕೃತ ಮಿಶ್ರಿತ ಬೆಂಗಾಲಿ ಬಾಷೆಯಲ್ಲಿ .
93. ಜನ ಗಣ ಮನವು ಭಾರತದ ವೈವಿಧ್ಯತೆಯನ್ನು ವರ್ಣಿಸುವ ಗೀತೆಯು ಸುದೀರ್ಘವಾದ 5 ನುಡಿಗಳನ್ನು ಹೊಂದಿತ್ತು. ನಂತರದ ದಿನಗಳಲ್ಲಿ ಚುಟುಕುಗೊಳಿಸುವ ಉದ್ದೇಶದಿಂದ ಕೆಲವು ನುಡಿಗಳನ್ನು ಕೈ ಬಿಡಲಾಯಿತು.
94. ಇಂದು ನಾವು ಹಾಡುತ್ತಿರುವುದು 52 ಸೆಕೆಂಡುಗಳ ರಾಷ್ಟ್ರಗೀತೆಯು ಚುಟುಕು ರೂಪದ್ದಾಗಿದೆ.
95.ಟ್ಯಾಗೋರ್ ರು 1919 ರಲ್ಲಿ ಐರಿಷ್ ಕವಿ ಜೇಮ್ಸ್ ಎಚ್. ಕ್ಯೂಸಿನ್ಸ್ ಅವರ ಆಹ್ವಾನದ ಮೇರೆಗೆ ಆಂದ್ರ ಪ್ರದೇಶದ ಮದನಪಲ್ಲಿಯಲ್ಲಿರುವ ಬೆಸೆಂಟ್ ಥಿಯೋಸಾಫಿಕಲ್ ಕಾಲೇಜಿನಲ್ಲಿ ಜನಗಣಮನ ಗೀತೆಯನ್ನು ರಾಗಬದ್ಧವಾಗಿ ಹಾಡಿದರು
96. ನಂತರದ ದಿನಗಳಲ್ಲಿ ಮದನಪಲ್ಲಿಯ ಪರಿಸರದಲ್ಲಿಲ ಈ ಗೀತೆಯನ್ನು ಇಂಗ್ಲೀಷ್ ಗೆ ಅನುವಾದಿಸಿದರು . ಅದಕ್ಕೆ ದಿ ಮಾರ್ನಿಂಗ್ ಸಾಂಗ್ ಆಫ್ ಇಂಡಿಯಾ ಎಂದು ಶಿರ್ಷಿಕೆ ನೀಡಿದರು.
97. ಸ್ವಾತಂತ್ರ್ಯ ನಂತರ ದೇಶದ ರಾಷ್ಟ್ರಗೀತೆಯನ್ನಾಗಿ ಬಂಕಿಮ್ ಚಂದ್ರ ಚಟರ್ಜಿ ಅವರ ವಂದೇ ಮಾತರಂ ಗೀತೆಯನ್ನು ಆಯ್ಕೆ ಮಾಡಬೇಕೆ ಅಥವಾ ಜನ ಗಣ ಮನ ಗೀತೆಯನ್ನೇ ಎಂಬ ಬಗ್ಗೆ ನಾಯಕರು ಹಲವು ಸುತ್ತಿನ ಚರ್ಚೆ ನಡೆಸಿದರು.
98. 1950 ರ ಜನವರಿ 24 ರಂದು ನಡೆದ ಶಾಸನ ಸಭೆಯಲ್ಲಿ ಜನ ಗಣ ಮನ ಗೀತೆಯನ್ನು ರಾಷ್ಟ್ರಗೀತೆಯಾಗಿ ಅಧಿಕೃತವಾಗಿ ಘೋಷಿಸಲಾಯಿತು.          110. ಏಯೇಜ್ ಟು ಇಂಡಿಯಾ ಕೃತಿಯ ಕರ್ತೃ
ನಿಕೇಟಿನ್
99. ಪ್ರಸಕ್ತ ಫುಟ್ಬಾಲ್ ವರ್ಷದಲ್ಲಿ ಉತ್ತಮ ಸಾಧನೆ ತೋರಿದ ಭಾರತ ಫುಟ್ಬಾಲ್ ತಂಡದ ಸ್ಟ್ರೈಕರ್ ಸುನೀಲ್ ಛೆಟ್ರಿ ಅವರಿಗೆ ಅಖಿಲ ಭಾರತ ಫುಟ್ಬಾಲ್ ಫೇಡರೇಷನ್ ( ಎಐಎಫ್.ಎಫ್ ) ವಾರ್ಷಿಕ ಪ್ರಶಸ್ತಿ ಪ್ರಕಟಿಸಿದೆ.
100. ಸುನೀಲ್ ಛೆಟ್ರಿ 17 ಅಂತರರಾಷ್ಟ್ರೀಯ ಪಂದ್ಯಗಳಿಂದ 13 ಗೋಲುಗಳನ್ನು ಗಳಿಸಿದ್ದಾರೆ.
101. 2011 ರ ವರ್ಷದಲ್ಲಿ ಭಾರತದ ಫುಟ್ಬಾಲ್ ಆಟಗಾರನೊಬ್ಬ ದಾಖಲಿಸಿದ ಗರಿಷ್ಠ ಗೋಲು ದಾಗಿದೆ.
102. 2011 ರಲ್ಲಿ 20 ಕ್ಲಬ್ ಪಂದ್ಯಗಳನ್ನಾಡಿದ ಛೆಟ್ರಿ 11 ಗೋಲುಗಳನ್ನು ಗಳಿಸಿದ್ದಾರೆ.
103. 2011 ರ ಅರ್ಜುನ್ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿರುವ ಛೆಟ್ರಿ ಇತ್ತಿಚೆಗೆ ಮುಕ್ತಾಯಗೊಂಡ ಸ್ಯಾಫ್ ಫುಟ್ಬಾಲ್ ಚಾಂಪಿಯನ್ ಷಿಪ್ ನಲ್ಲೂ ಶ್ರೇಷ್ಠ ಆಟಗಾರನೆಂಬ ಪ್ರಶಸ್ತಿ ಪಡೆದಿದ್ದಾರೆ.
104. ಇನ್ಪೋಸಿಸ್ ಬಿಪಿಒ , ಆಸ್ಟ್ರೇಲಿಯಾ ಮೂಲದ ಫೋರ್ಟ್ ಲ್ಯಾಂಡ್ ಗ್ರೂಪ್ ಕಂಪನಿ ಯನ್ನು ಖರೀದಿಸಿದೆ.
105. 1999 ರಲ್ಲಿ ಪೋರ್ಟ್ ಲ್ಯಾಂಡ್ ಗ್ರೂಪ್ ಸ್ಥಾಪನೆಯಾಗಿತ್ತು. ಇದರ ಮುಖ್ಯ ಕಛೇರಿ ಸಿಡ್ನಿಯಲ್ಲಿದೆ. ಮೆಲ್ಲೋರ್ನ್ , ಬ್ರಿಸ್ಬೇನ್ ಪರ್ತ್ ನಲ್ಲಿ ಕಛೇರಿಯನ್ನು ಹೊಂದಿದೆ.
106. ಫೋರ್ಡ್ ಇಂಡಿಯಾ ತನ್ನ ಎಸ್ ಯುವಿ ವಾಹನವನ್ನು ಜನಪ್ರಿಯಗೊಳಿಸಲು ದಿ ಗ್ರೇಟ್ ಫೋರ್ಡ್ ಎಂಡೋವೇರ್ ಡ್ರೈವ್ ಅಭಿಯಾನವನ್ನು ಬೆಂಗಳೂರಿನಲ್ಲಿ ಕೈಗೊಂಡಿದೆ.
107. ಐಎನ್.ಜಿ ವೈಶ್ಯ ಬ್ಯಾಂಕ್ ಇಂಧನ ದಕ್ಷತೆಗಾಗಿ ರಾಜ್ಯ ಸರ್ಕಾರದ ಪ್ರಶಸ್ತಿಗಳಿಸಿದೆ.
108. ಮುಲ್ಲಪೆರಿಯಾರ್ ಅಣೆಕಟ್ಟು ಕುರಿತು ಚಿತ್ರಿಸಲಾಗಿರುವ ಡ್ಯಾಮ್ 999 ಚಿತ್ರದ ಮೂರು ಹಾಡುಗಳು ಅತ್ಯುತ್ತಮ ಸೃಜನಶೀಲ ಗೀತೆಗಳ ವರ್ಗದಡಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಸ್ಪರ್ದಿಸಿದೆ.

3 ಕಾಮೆಂಟ್‌ಗಳು: