ಬುಧವಾರ, ಜುಲೈ 30, 2014

ಕುವೆಂಪು

ಕುವೆಂಪು
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ಕುವೆಂಪು
ಜನನ:
ಡಿಸೆಂಬರ್ ೨೯, ೧೯೦೪
ಜನನ ಸ್ಥಳ:
ಕುಪ್ಪಳ್ಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
ನಿಧನ:
ನವೆಂಬರ್ ೧೧, ೧೯೯೪   ಮೈಸೂರು
ಕವಿ, ಲೇಖಕ, ಪ್ರಾಧ್ಯಾಪಕ, ಪ್ರಾಂಶುಪಾಲ, ಕುಲಪತಿ
ಭಾರತೀಯ
ಬರವಣಿಗೆಯ ಕಾಲ:
(ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ)
ಕಥೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮ ಚರಿತ್ರೆ, ಜೀವನ ಚರಿತ್ರೆ, ಮಹಾಕಾವ್ಯ, ವೈಚಾರಿಕ ಸಾಹಿತ್ಯ
ವಿಷಯಗಳು:
ಕರ್ನಾಟಕ, ರಾಮಾಯಣ, ಜೀವನ, ಶಿವಮೊಗ್ಗ
ಪ್ರಥಮ ಕೃತಿ:
(ಮೊದಲ ಪ್ರಕಟಿತ ಕೃತಿಗಳು)
ಪ್ರಭಾವಗಳು:
ಕುವೆಂಪು - ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪ - ನವೆಂಬರ್ ೧೧, ೧೯೯೪) - ಕನ್ನಡವು ಪಡೆದ ಅತ್ಯುತ್ತಮ ಕವಿ, ಎರಡನೆ ರಾಷ್ಟ್ರಕವಿ.ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಕನ್ನಡದಪ್ರ ಪ್ರಥಮ ವ್ಯಕ್ತಿ. 'ವಿಶ್ವ ಮಾನವ' ಪರಿಕಲ್ಪನೆಯನ್ನೂ ಸಾಹಿತ್ಯದ ಮೂಲಕ ಸಮಾಜಕ್ಕೆ ತಲುಪಿಸಿದವರು. ಕನ್ನಡ ಸಾಹಿತ್ಯಕ್ಕೆ ಇವರ ಕಾಣಿಕೆ ಅಪಾರ. ಕುವೆಂಪುರವರ ಮೊದಲ ಕಾವ್ಯನಾಮ-"ಕಿಶೋರ ಚಂದ್ರವಾಣಿ" -ನಂತರ ಅವರು ಕುವೆಂಪು ಕಾವ್ಯನಾಮ ಬಳಸಿ ಬರೆಯತೊಡಗಿದರು. ಡಿಸೆಂಬರ್ ೨೯, ೧೯೦೪,  ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೊಡಿಗೆಯಲ್ಲಿ ಜನಿಸಿದ ಇವರು, ಕುಪ್ಪಳ್ಳಿ (ಶಿವಮೊಗ್ಗ ಜಿಲ್ಲೆ,ತೀರ್ಥಹಳ್ಳಿ ತಾಲ್ಲೂಕು) ಹಾಗೂ ಮೈಸೂರಿನಲ್ಲಿ ಪರಪುಟ್ಟ ಹಕ್ಕಿಯಂತೆ ಬೆಳೆದರು. ಮೈಸೂರಿನ 'ಮಹಾರಾಜಾ' ಕಾಲೇಜಿನಲ್ಲಿ ಓದಿದ ಇವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಉಪ ಕುಲಪತಿಯಾಗಿ ನಿವೃತ್ತರಾದರು. ಇವರು ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ "ಉದಯರವಿ"ಯಲ್ಲಿ ವಾಸಿಸುತ್ತಿದ್ದರು. ಇವರ ಹೆಂಡತಿಯ ಹೆಸರು ಹೇಮಾವತಿ ಮತ್ತು ಇವರಿಗೆ ನಾಲ್ಕು ಜನ ಮಕ್ಕಳು(ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ, ತಾರಿಣಿ ಚಿದಾನಂದ).
ವಿಶ್ವ ಮಾನವ ಸಂದೇಶ
ಪ್ರತಿಯೊಂದು ಮಗುವೂ ಹುಟ್ಟುತ್ತಲೇ ವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನುವಿಶ್ವಮಾನವನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು.ಹುಟ್ಟುವಾಗವಿಶ್ವಮಾನವನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬಂಧಿಯನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನುಬುದ್ಧನನ್ನಾಗಿ, ಅಂದರೆ ವಿಶ್ವ ಮಾನವನನ್ನಾಗಿ ಪರಿವರ್ತಿಸುವುದೇ ನಮ್ಮ ವಿದ್ಯೆ, ಸಂಸ್ಕೃತಿ, ನಾಗರೀಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಪ್ರಪಂಚದ ಮಕ್ಕಳೆಲ್ಲಅನಿಕೇತನರಾಗಬೇಕು. ಲೋಕ ಉಳಿದು, ಬಾಳಿ ಬದುಕಬೇಕಾದರೆ! ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸಂಭವಿಸಿ ಹೋಗಿದ್ದಾ ರೆ. ಅವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊಂಡು ಕಡೆಗೆ ಮತವಾಗಿ ಪರಿಣಮಿಸಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆಂಬ ಉದ್ದೇಶದಿಂದ ಹುಟ್ಟಿ ಕೊಂಡ ಮಹಾತ್ಮರವಾಣಿ ಮತವಾಗಿ ಪರಿವರ್ತಿತವಾಯಿತು. ಒಂದು ಯುಗಕ್ಕೆ ಅಗತ್ಯವೆನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿಸಿ ಮತ್ತೊಂದು ಹೊಸ ಧರ್ಮಕ್ಕೆ ಎಡೆಗೊಟ್ಟುದೂ ಉಂಟು. ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗುಂಪು ಗುಂಪಾಗಿ ಒಡೆದಿವೆ. ಯುದ್ದಗಳನ್ನು ಹುಟ್ಟು ಹಾಕಿವೆ. ಜಗತ್ತಿನ ಕ್ಷೋಭೆ ಗಳಿಗೆಲ್ಲ ಮೂಲ ಕಾರಣವೆಂಬಂತೆ ! ವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನು ಮೇಲೆ ಮತ ಮೌಢ್ಯ ಒಪ್ಪಿಗೆಯಾಗದು. ವಿನೋಬಾ ಭಾವೆಯವರು ಹಿಂದೆ ಹೇಳಿದಂತೆಮತ ಮತ್ತು ರಾಜಕೀಯದ ಕಾಲ ಆಗಿಹೋಯಿತು. ಇನ್ನೇನಿದ್ದರೂ ಆಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ.’

·         ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ
ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ. ಅಂದರೆ, ನಮಗೆ ಇನ್ನು ಬೇಕಾದುದು ಮತ ಮತ ಅಲ್ಲ ; ಮನುಜ ಮತ. ಪಥ ಪಥ ಅಲ್ಲ ; ವಿಶ್ವಪಥ. ಒಬ್ಬರ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸಮಸ್ತರ ಉದಯ. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ ; ಸಮನ್ವಯಗೊಳ್ಳುವುದು. ಮಿತ ಮತದ ಆಂಶಿಕ ದೃಷ್ಟಿಯಿಂದ ಕಾಣುವ ಪೂರ್ಣದೃಷ್ಟಿ. ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೊ ಅಂತಹ ಭಾವನೆ ಅಂತಹ ದೃಷ್ಟಿ ಬರಿಯ ಯಾವುದೋ ಒಂದು ಜಾತಿಗೆ, ಮತಕ್ಕೆ, ಗುಂಪಿಗೆ, ಒಂದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲ ಮೌಲ್ಯಗಳು. ಮೌಲ್ಯಗಳು ಮಾನವರನ್ನು ಕೂಡಿಸಿ ಬಾಳಿಸುವತ್ತ ನಡೆದಾವು. ಗುಂಪುಗಾರಿಕೆಗೆಂದೂ ಇವು ತೊಡಗುವುದಿಲ್ಲ ; ಅದೇನಿದ್ದರೂ ರಾಜಕೀಯದ ಕರ್ಮ. ವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿಯೂ ಸಮಷ್ಟಿಯ ಉದ್ಧಾರದ ದೃಷ್ಟಿ ಇದರದು. ದೃಷ್ಟಿಗೆ ವ್ಯಕ್ತಿಗಳೆಷ್ಟೊ ಅಷ್ಟೂ ಸಂಖ್ಯೆಯ ಮತಗಳಿರುವುದು ಸಾಧ್ಯ ; ಅಷ್ಟೂ ವ್ಯಕ್ತಿಗಳು ಸಮಷ್ಟಿಯ ವಿಕಾಸಕ್ಕೆ ಸಾಧಕವಾಗುವುದೂ ಸಾಧ್ಯ. ದರ್ಶನವನ್ನೆವಿಶ್ವಮಾನವ ಗೀತೆಸಾರುತ್ತದೆ. ವಿಶ್ವಮಾನವರಾಗಲು ನಾವು ಸಾಧಿಸಲೇಬೇಕಾದ ಮೂಲಭೂತ ಸ್ವರೂಪದ ತತ್ತ್ವ ಪ್ರಣಾಳಿಕೆ:
ಸಪ್ತಸೂತ್ರ
1.    ಮನುಷ್ಯಜಾತಿ ತಾನೊಂದೆ ವಲಂಎ೦ಬುದನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು.
2.    ವರ್ಣಾಶ್ರಮವನ್ನು ತಿದ್ದುವುದಲ್ಲ, ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು. ಅಂದರೆ ಬ್ರಾಹ್ಮಣ, ಕ್ಷತ್ರಿಯ, ವ್ಯೆಶ್ಯ, ಶೂದ್ರ, ಅಂತ್ಯಜ,ಷಿಯಾ,ಸುನ್ನಿ, ಕ್ಯಾಥೊಲಿಕ್, ಪ್ರಾಟೊಸ್ಟಂಟ್, ಸಿಕ್, ನಿರಂಕಾರಿ ಇತ್ಯಾದಿ ವಿಭಜನೆಯನ್ನು ನಿರ್ನಾಮ ಮಾಡಬೇಕು.
3.    ಎಲ್ಲಾ ದೇಶಗಳಲ್ಲಿ ಮತ್ತು ಎಲ್ಲಾ ಮತಗಳಲ್ಲಿರುವ ಜಾತಿ ಪದ್ದತಿಯನ್ನು ಸಂಪೂರ್ಣವಾಗಿ ನಿರಾಕರಿಸಿ, ಸರ್ವನಾಶಗೊಳಿಸಬೇಕು.
4.    ಮತತೊಲಗಿಆಧ್ಯಾತ್ಮಮಾತ್ರ ವೈಜ್ಞಾನಿಕ ತತ್ವವಾಗಿ ಮಾನ್ಯತೆ ಪಡೆಯಬೇಕು.
5.    ಮತಮನುಜಮತವಾಗಬೇಕು; ಪಥವಿಶ್ವಪಥವಾಗಬೇಕು; ಮನುಷ್ಯವಿಶ್ವಮಾನವನಾಗಬೇಕು.
6.    ಮತ ಗುಂಪು ಕಟ್ಟುವ ವಿಷಯವಾಗಬಾರದು. ಯಾರೂ ಯಾವ ಒಂದು ಮತಕ್ಕೂ ಸೇರದೆ, ಪ್ರತಿಯೊಬ್ಬನೂ ತಾನು ಕಂಡು ಕೊಳ್ಳುವತನ್ನಮತಕ್ಕೆ ಮಾತ್ರ ಸೇರಬೇಕು. ಅಂದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸಂಖ್ಯೆಯ ಮತಗಳಿರುವಂತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗುಂಪುಕಟ್ಟಿ ಜಗಳ ಹಚ್ಚುವಂತಾಗಬಾರದು.
7.    ಯಾವ ಒಂದು ಗ್ರಂಥವೂಏಕೈಕ ಪರಮ ಪೂಜ್ಯಧರ್ಮಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನದರ್ಶನವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು
ಕೃತಿಗಳು: -    ಅಮಲನ ಕಥೆ (ಶಿಶುಸಾಹಿತ್ಯ) (೧೯೨೪)                        ಬೊಮ್ಮನಹಳ್ಳಿಯ ಕಿಂದರಿಜೋಗಿ (ಶಿಶುಸಾಹಿತ್ಯ) (೧೯೨೬)
·         ಹಾಳೂರು (೧೯೨೬)                  ಕೊಳಲು (೧೯೩೦)               ಪಾಂಚಜನ್ಯ (೧೯೩೩)
·         ಕಲಾಸುಂದರಿ (೧೯೩೪)              ನವಿಲು (೧೯೩೪)                ಚಿತ್ರಾಂಗದಾ (೧೯೩೬) (ಖಂಡಕಾವ್ಯ)
·         ಕಥನ ಕವನಗಳು (೧೯೩೬)                     ಕೋಗಿಲೆ ಮತ್ತು ಸೋವಿಯಟ್ ರಷ್ಯಾ (೧೯೪೪)
·         ಕೃತ್ತಿಕೆ (೧೯೪೬)          ಅಗ್ನಿಹಂಸ (೧೯೪೬)                       ಪಕ್ಷಿಕಾಶಿ (೧೯೪೬)              ಕಿಂಕಿಣಿ (೧೯೪೬)
·         ಪ್ರೇಮಕಾಶ್ಮೀರ (೧೯೪೬)                        ಷೋಡಶಿ (೧೯೪೭)             ನನ್ನ ಮನೆ (೧೯೪೭)                        ಜೇನಾಗುವ (೧೯೫೨)
·         ಚಂದ್ರಮಂಚಕೆ ಬಾ, ಚಕೋರಿ! (೧೯೫೪)                 ಇಕ್ಷು ಗಂಗೋತ್ರಿ (೧೯೫೭)        ಅನಿಕೇತನ (೧೯೬೩)
·         ಅನುತ್ತರಾ (೧೯೬೩)                  ಮಂತ್ರಾಕ್ಷತೆ (೧೯೬೬)                     ಕದರಡಕೆ (೧೯೬೭)             ಪ್ರೇತಕ್ಯೂ (೧೯೬೭)
·         ಕುಟೀಚಕ (೧೯೬೭)                    ಹೊನ್ನ ಹೊತ್ತಾರೆ (೧೯೭೬)                           ಸಮುದ್ರಲಂಘನ (೧೯೮೧)               
·         ಕೊನೆಯ ತೆನೆ ಮತ್ತು ವಿಶ್ವಮಾನವ ಗೀತೆ (೧೯೮೧)                ಮರಿವಿಜ್ಞಾನಿ (೧೯೪೭) (ಶಿಶುಸಾಹಿತ್ಯ)
·         ಮೇಘಪುರ (೧೯೪೭) (ಶಿಶುಸಾಹಿತ್ಯ)
ಶ್ರೀ ರಾಮಾಯಣ ದರ್ಶನ೦ (೧೯೪೯)   (ಮಹಾಕಾವ್ಯ)
ಇಂಗ್ಲಿಷ್ ಕವನಸಂಕಲನ-           1.ಬಿಗಿನರ್'ಸ್ ಮ್ಯೂಸ್ (೧೯೨೨)                      2.ಅಲಿಯನ್ ಹಾರ್ಪ್ (೧೯೭೩)
ನಾಟಕ:
ಮೋಡಣ್ಣನ ತಮ್ಮ (೧೯೨೬)(ಮಕ್ಕಳ ನಾಟಕ)                  ಜಲಗಾರ (೧೯೨೮)              ಯಮನ ಸೋಲು (೧೯೨೮)
ನನ್ನ ಗೋಪಾಲ (೧೯೩೦) (ಮಕ್ಕಳ ನಾಟಕ)                     ಬಿರುಗಾಳಿ (೧೯೩೦)              ಸ್ಮಶಾನ ಕುರುಕ್ಷೇತ್ರ (೧೯೩೧)
ಮಹಾರಾತ್ರಿ (೧೯೩೧)                       ವಾಲ್ಮೀಕಿಯ ಭಾಗ್ಯ (೧೯೩೧)               ರಕ್ತಾಕ್ಷಿ (೧೯೩೨)         ಶೂದ್ರ ತಪಸ್ವಿ (೧೯೪೪)
ಬೆರಳ್ಗೆ ಕೊರಳ್ (೧೯೪೭)                  ಬಲಿದಾನ (೧೯೪೮)             ಚಂದ್ರಹಾಸ (೧೯೬೩)           ಕಾನೀನ (೧೯೭೪)

ಕಾದಂಬರಿ:
ಕಥಾ ಸಂಕಲನ:
ಸಂನ್ಯಾಸಿ ಮತ್ತು ಇತರ ಕಥೆಗಳು (೧೯೩೬)                     ನನ್ನ ದೇವರು ಮತ್ತು ಇತರೆ ಕಥೆಗಳು (೧೯೪೦)
ಲಲಿತ ಪ್ರಬಂಧ-  ಮಲೆನಾಡಿನ ಚಿತ್ರಗಳು (೧೯೩೩)      
ಗದ್ಯ/ವಿಚಾರ/ವಿಮರ್ಶೆ/ಪ್ರಬಂಧ:
ತಪೋನಂದನ (೧೯೫೦)             ವಿಭೂತಿ ಪೂಜೆ (೧೯೫೩)                   ದ್ರೌಪದಿಯ ಶ್ರೀಮುಡಿ ೧೯೬೦)
ರಸೋವೈಸಃ (೧೯೬೨)               ಷಷ್ಠಿ ನಮನ (೧೯೬೪)                      ಇತ್ಯಾದಿ (೧೯೭೦)
ಆತ್ಮಚರಿತ್ರೆ: -   ನೆನಪಿನ ದೋಣಿಯಲ್ಲಿ
ಜೀವನ ಚರಿತ್ರೆ:- ಶ್ರೀ ರಾಮಕೃಷ್ಣ ಪರಮಹಂಸ (೧೯೩೪)                           ಸ್ವಾಮಿ ವಿವೇಕಾನಂದ (೧೯೩೪)
ರಾಮಕೃಷ್ಣ-ವಿವೇಕಾನಂದ ಸಾಹಿತ್ಯ
ವಿವೇಕವಾಣಿ (೧೯೩೩)                ಗುರುವಿನೊಡನೆ ದೇವರಡಿಗೆ (೧೯೫೪)
ವೇದಾಂತ ಸಾಹಿತ್ಯ
ಋಷಿವಾಣಿ (೧೯೩೪)             ವೇದಾಂತ (೧೯೩೪)                  ಮಂತ್ರ ಮಾಂಗಲ್ಯ (೧೯೬೬)
ಇತರೆ-         ಜನಪ್ರಿಯ ವಾಲ್ಮೀಕಿ ರಾಮಾಯಣ (೧೯೫೦)              ಪ್ರಸಾರಾಂಗ (೧೯೫೯)
ಪ್ರಶಸ್ತಿ ಪುರಸ್ಕಾರಗಳು ಕುಪ್ಪಳಿಯಲ್ಲಿ ಕುವೆಂಪು ಮನೆ (ಈಗ ವಸ್ತು ಸಂಗ್ರಹಾಲಯವಾಗಿದೆ)
 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - (ಶ್ರೀರಾಮಾಯಣ ದರ್ಶನಂ) (೧೯೫೫)
ಪದ್ಮಭೂಷಣ (೧೯೫೮)                        ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್.
'ರಾಷ್ಟ್ರಕವಿ' ಪುರಸ್ಕಾರ (೧೯೬೪)              ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. (೧೯೬೬)
ಜ್ಞಾನಪೀಠ ಪ್ರಶಸ್ತಿ (ಶ್ರೀ ರಾಮಾಯಣ ದರ್ಶನಂ) (೧೯೬೮)
ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. (೧೯೬೯)
ಪದ್ಮವಿಭೂಷಣ (೧೯೮೯)            ಕರ್ನಾಟಕ ರತ್ನ (೧೯೯೨)            ಪಂಪ ಪ್ರಶಸ್ತಿ(೧೯೮೮)
ಜಿ.ಎಸ್.ಶಿವರುದ್ರಪ್ಪ
ಕುವೆಂಪು ಅವರು ಮೂಲತಃ ಕ್ರಾಂತಿಕವಿ. ಸಾಮಾಜಿಕ ಅನ್ಯಾಯಗಳ ಬಗ್ಗೆ ಮೊದಲಿನಿಂದಲೂ ಇವರಷ್ಟು ನಿರ್ಭಯವಾಗಿ ಪ್ರತಿಭಟಿಸಿದ ಕನ್ನಡ ಕವಿ ಲೇಖಕರು ಇಲ್ಲವೇ ಇಲ್ಲ ಎಂದರೂ ಸಲ್ಲುತ್ತದೆ. ಉಚ್ಚ ವರ್ಣದ ಸಮಸ್ತ ಬೌದ್ಧಿಕ ಉಪಕರಣಗಳನ್ನು ಕೈವಶ ಮಾಡಿಕೊಂಡು, ಅವುಗಳನ್ನು ಉಪಯೋಗಿಸಿ ಉಚ್ಚವರ್ಣದ ಮೇಲೆ ಧಾಳಿ ಮಾಡಿದ್ದು, ಮತ್ತು ಅಪ್ರತಿಷ್ಠಿತ ವರ್ಗಕ್ಕೆ ಆತ್ಮಗೌರವನ್ನೂ, ಕೆಚ್ಚನ್ನೂ ತುಂಬುವುದರ ಜತೆಗೆ ಉಚ್ಚ ವರ್ಗದವರೊಂದಿಗೆ ಸಮಸ್ಪರ್ಧಿಯಾಗಿ ನಿಂತದ್ದು ಕುವೆಂಪು ಅವರ ಸಾಹಿತ್ಯಕ ಧೋರಣೆಯ ವಿಶೇಷತೆಯಾಗಿದೆ.
ಕುವೆಂಪುರವರ ಬಗ್ಗೆ ಇತರರು ಬರೆದ ಪುಸ್ತಕಗಳು
1.ಮಗಳು ಕಂಡ ಕುವೆಂಪು - ಲೇ: ತಾರಿಣಿ ಚಿದಾನಂದ ಪ್ರಕಾಶಕರು:ಪುಸ್ತಕ ಪ್ರಕಾಶನ       2.ಕುವೆಂಪು - ಲೇ: ದೇಜಗೌ
3.ಅಣ್ಣನ ನೆನಪು - ಲೇ: ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರಕಾಶಕರು:ಪುಸ್ತಕ ಪ್ರಕಾಶನ
4. ಯುಗದ ಕವಿ - ಲೇ: ಡಾ.ಕೆ.ಸಿ.ಶಿವಾರೆಡ್ಡಿ                           5.ಹೀಗಿದ್ದರು ಕುವೆಂಪು - ಲೇ: ಪ್ರಭುಶಂಕರ        
ಕೆಲವು ಮಾಹಿತಿಗಳು

"ಬೆರಳ್ ಗೆ ಕೊರಳ್" ನಾಟಕವು ಚಲನಚಿತ್ರವಾಗಿದೆ.                "ಕಾನೂರು ಹೆಗ್ಗಡಿತಿ" ಕಾದಂಬರಿ ಚಲನಚಿತ್ರವಾಗಿದೆ. "ಮಲೆಗಳಲ್ಲಿ ಮದುಮಗಳು" ಕಾದಂಬರಿ ಧಾರಾವಾಹಿಯಾಗಿದೆ ಹಾಗೂ ೯ ಗಂಟೆಗಳ ಅವಧಿಯ ನಾಟಕವಾಗಿಯೂ ಮೈಸೂರಿನ ರಂಗಾಯಣದಲ್ಲಿ ಪ್ರದರ್ಶನಗೊಂಡಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ